ETV Bharat / sukhibhava

ಮೈಗ್ರೇನ್​ ನಿವಾರಣೆಗೆ ಬಂತು ಧರಿಸಬಹುದಾದ ಸಾಧನ: ಕಾಡುವ ತಲೆನೋವಿಗೆ ಔಷಧ ರಹಿತ ಚಿಕಿತ್ಸೆ

ಮೈಗ್ರೇನ್​ ಎಂಬುದು ಜಾಗತಿಕ ಆರೋಗ್ಯ ಸವಾಲಾಗಿದ್ದು, ಶೇ 30 ರಷ್ಟು ಮಂದಿ ತಿಂಗಳಲ್ಲಿ 15 ಮತ್ತು ಅದಕ್ಕೂ ಹೆಚ್ಚು ದಿನಗಳ ಕಾಲ ಇದರ ಪರಿಣಾಮಕ್ಕೆ ಒಳಗಾಗುತ್ತಾರೆ.

author img

By ETV Bharat Karnataka Team

Published : Nov 17, 2023, 4:04 PM IST

wearable therapy device for drug free management of migraine

ಹೈದರಾಬಾದ್​: ಮೈಗ್ರೇನ್​ಗೆ ಔಷಧ ರಹಿತ ಚಿಕಿತ್ಸೆ ನಿರ್ವಹಣೆಗೆ ಕೈಗೆ ಧರಿಸಬಹುದಾದ ಚಿಕಿತ್ಸಾ ಥೆರಪಿ ಸಾಧನ ನೆರಿವಿಯೊ ಬಿಡುಗಡೆ ಮಾಡುವುದಾಗಿ ಡಾ ರೆಡ್ಡಿಸ್​​ ಲ್ಯಾಬೋರೆಟರಿ ತಿಳಿಸಿದೆ. ಈ ಸಾಧನಕ್ಕೆ ಯುಎಸ್​ ಫುಡ್​ ಅಂಡ್​ ಡ್ರಗ್​ ಆಡ್ಮನಿಸ್ಟ್ರೇಷನ್​ (ಯುಎಸ್​ ಎಫ್​ಡಿಎ) ಅನುಮೋದನೆ ನೀಡಿದೆ.

ಮೈಗ್ರೇನ್​ ಎಂಬುದು ಜಾಗತಿಕ ಆರೋಗ್ಯದ ಸವಾಲಾಗಿದ್ದು, ಶೇ 30 ರಷ್ಟು ಮಂದಿ ತಿಂಗಳಲ್ಲಿ 15 ಮತ್ತು ಅದಕ್ಕೂ ಹೆಚ್ಚು ದಿನಗಳ ಕಾಲ ಇದರ ಪರಿಣಾಮಕ್ಕೆ ಒಳಗಾಗುತ್ತಾರೆ. ಮೈಗ್ರೇನ್​​​ ಮಹಿಳೆಯರಲ್ಲಿ ಹೆಚ್ಚಿನ ಪರಿಣಾಮವನ್ನು ಹೊಂದಿದೆ. ಭಾರತದಲ್ಲಿ ಸರಿಸುಮಾರು ಶೇ 60ರಷ್ಟು ಅಂದರೆ 213 ಮಿಲಿಯನ್​ ಮಂದಿ ಈ ಮೈಗ್ರೇನ್​ನಿಂದ ಬಳಲುತ್ತಿದ್ದಾರೆ.

12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರು ಮೈಗ್ರೇನ್​ ನೋವು ತಡೆಗಟ್ಟಲು ಈ ಪ್ರಿಸ್ಕ್ರಿಪ್ಷನ್ ಆಧಾರಿಸಿದ​ ಸಾಧನವನ್ನು ಬಳಕೆ ಮಾಡಬಹುದಾಗಿದೆ. ಈ ಸಾಧನವನ್ನು ತೋಳಲ್ಲಿ ಧರಿಸಬಹುದಾಗಿದೆ. ಮೈಗ್ರೇನ್​ ತಲೆ ನೋವು ಶುರುವಾದ 60 ನಿಮಿಷದೊಳಗೆ ಇದನ್ನು ಧರಿಸಬಹುದು ಮೈಗ್ರೇನ್​ ಹೆಚ್ಚಿನ ಚಿಕಿತ್ಸೆಗೆ ಅಥವಾ ಮೈಗ್ರೇನ್​ ತಡೆಗಟ್ಟಲು ದಿನ ಬಿಟ್ಟು ದಿನ ಇದನ್ನು ಧರಿಸಬಹುದು.

ಈ ಸಾಧನವೂ ರಿಮೋಟ್​​ ಎಲೆಕ್ಟ್ರಿಕಲ್​ ನ್ಯೋರೋಮೊಡ್ಯೂಲೇಷನ್​ (ಆರ್​ಇಎನ್​)ನಂತೆ ಕೆಲಸ ಮಾಡಲಿದ್ದು, ನರದಲ್ಲಿ ಉಂಟಾಗುವ ನೋವಿನ ಪರಿಸ್ಥಿತಿಯನ್ನು ನಿರ್ದಿಷ್ಟ ಪರಿಸ್ಥಿತಿ ಚಿಕಿತ್ಸೆಗೆ ಕ್ರಿಯೆ ನಡೆಸುವಂತೆ ರೂಪಿಸಲಾಗಿದೆ. ಇದು ಮೆದುಳಿನ ಕಾಂಡದಲ್ಲಿ ನೈಸರ್ಗಿಕ ನೋವು ನಿವಾರಕ ಪ್ರಕ್ರಿಯೆ ಪ್ರಾರಂಭಿಸುತ್ತದೆ. ಇದು ತಲೆಯಲ್ಲಿ ಮೈಗ್ರೇನ್ ನೋವಿನ ಮೂಲದ ಮೇಲೆ ಪರಿಣಾಮ ಬೀರುವ ಮೂಲಕ ನೋವಿನ ತಡೆಯುವಲ್ಲಿ ಸಹಾಯ ಮಾಡುತ್ತದೆ.

ನೆರಿವಿಯೊ ಯುಎಸ್​ಎಫ್​ಡಿಯ ಅನುಮೋದಿತ ಔಷಧ ಮುಕ್ತ ಭಾರತದಲ್ಲಿ ಮೈಗ್ರೇನ್​ ವಿರುದ್ದ ಹೋರಾಡಬಲ್ಲ ಮೊದಲ ಉತ್ಪನ್ನವಾಗಿದೆ. ಈ ಉತ್ಪನ್ನವೂ ಮೈಗ್ರೇನ್​ ರೋಗಿಗಳ ಅಗತ್ಯವನ್ನು ಪೂರೈಕೆ ಮಾಡುತ್ತದೆ ಎಂದು ಡಾ ರೆಡ್ಡಿಯ ಬ್ರಾಂಡೆಡ್​ ಮಾರ್ಕೆಟ್​ ಅ​ನ್ನು ಮುಖ್ಯ ಕಾರ್ಯಕಾರಿ ಅಧಿಕಾರಿ ವಿ ರಮಣ ತಿಳಿಸಿದ್ದಾರೆ.

ನೆರಿವಿಯೊ ಡಿಜಿಟಲ್​ ಚಿಕಿತ್ಸಾ ವಿಧಾನವಾಗಿದೆ. ಇದು ಮಾತ್ರೆಗಳ ಹೊರೆಯನ್ನು ಕಡಿಮೆ ಮಾಡುವ ಮತ್ತು ದೀರ್ಘಕಾಲದ ಅಥವಾ ಚಿಕಿತ್ಸೆ ನೀಡಲು ಕಷ್ಟಕರವಾದ ಕಾಯಿಲೆಗಳಲ್ಲಿ ಔಷಧಗಳ ಮೇಲಿನ ಅವಲಂಬನೆ ಕಡಿಮೆ ಮಾಡುತ್ತದೆ.

ನೆರಿವಿಯೊ ಬಳಕೆ ಸುರಕ್ಷಾದಾಯಕವಾಗಿದೆ ಎಂಬುದು ಸಾಬೀತಾಗಿದ್ದು, ಇದನ್ನು ಔಷಧ ರಹಿತ ಚಿಕಿತ್ಸೆ ಆದ್ಯತೆ ನೀಡುವ ಹೆಚ್ಚಿನ ರೋಗಿಗಳನ್ನು ತಲುಪಲು ಸಾಧ್ಯವಾಗಿದೆ. ಅಧ್ಯಯನ ಕೂಡ ನೆರಿವಿಯೊ ಸುರಕ್ಷತೆ ಮತ್ತು ಯಾವುದೇ ಅಡ್ಡ ಪರಿಣಾಮವನ್ನು ಹೊಂದಿರದ ಸಾಧನವಾಗಿದೆ ಎಂದು ತೋರಿಸಿದೆ. ತಲೆ ಸುತ್ತುವಿಕೆ, ವಾಂತಿಯಂತಹ ಹಲವು ಚಿಕಿತ್ಸೆಗೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ತೋರಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಮೈಗ್ರೇನ್​ನಿಂದ ಬಳಲುತ್ತಿದ್ದೀರಾ? ನೋವು ಕಡಿಮೆ ಮಾಡಲು ಈ ಮುನ್ನೆಚ್ಚರಿಕೆ ವಹಿಸಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.