ನ್ಯೂಯಾರ್ಕ್: ಪ್ರತಿನಿತ್ಯ 7000 ನಡಿಗೆಗಳನ್ನು ನಡೆಯುವುದರಿಂದ ವಯಸ್ಕರಲ್ಲಿ ಅಧಿಕ ರಕ್ತದೊತ್ತಡ ಸಮಸ್ಯೆ ಕಡಿಮೆಯಾಗುತ್ತದೆ. ಈ ಅಧಿಕ ರಕ್ತದೊತ್ತಡ ಸಮಸ್ಯೆಯೂ ಹೃದಯಸ್ತಂಭನ, ಹೃದಯಾಘಾತ ಮತ್ತು ಪಾರ್ಶ್ವವಾಯುವಿನೊಂದಿಗೆ ಸಂಬಂಧ ಹೊಂದಿದೆ ಎಂದು ಅಧ್ಯಯನ ತಿಳಿಸಿದೆ.
ಈ ಅಧ್ಯಯನವನ್ನು ಜರ್ನಲ್ ಆಫ್ ಕಾರ್ಡಿಯೋವಸ್ಕ್ಯುಲರ್ ಡೆವೆಲಪ್ಮೆಂಟ್ ಅಂಡ್ ಡಿಸೀಸ್ನಲ್ಲಿ ಪ್ರಕಟಿಸಲಾಗಿದೆ. ಅಧಿಕ ರಕ್ತದೊತ್ತಡ ಹೊಂದಿರುವ ವಯಸ್ಕರು ತಮ್ಮ ದೈನಂದಿನ ನಡಿಗೆಗಳನ್ನು ಸುಧಾರಿತ ಪ್ರಮಾಣದಲ್ಲಿ ಹೆಚ್ಚಳ ಮಾಡುವುದರಿಂದ ಅವರು ಪ್ರಯೋಜನವನ್ನು ಪಡೆಯಹುದು. ಈ ಜನರಲ್ಲಿ ಅತಿ ಹೆಚ್ಚು ಸುಲಭ ಮತ್ತು ಪ್ರಖ್ಯಾತಿ ಹೊಂದಿರುವ ದೈಹಿಕ ಚಟುವಟಿಕೆ ಇದಾಗಿದೆ ಎಂದಿದ್ದಾರೆ.
ನಡಿಗೆಯು ಅತ್ಯಂತ ಸುಲಭದಾಯಕವಾಗಿದ್ದು, ಇದಕ್ಕೆ ಯಾವುದೇ ಸಾಧನಗಳ ಅವಶ್ಯಕತೆ ಇಲ್ಲ. ಅವರು ಯಾವುದೇ ಸಮಯದಲ್ಲಿ ಎಲ್ಲಿಯಾದರೂ ಮಾಡಬಹುದು ಎಂದು ಅಮೆರಿಕದ ಲೊವಾ ಸ್ಟೇಟ್ ಯುನಿವರ್ಸಿಟಿಯ ಡುಕ್ ಚುನ್ ಲೀ ತಿಳಿಸಿದ್ದಾರೆ.
ಇದೆ ವೇಳೆ ಸಂಶೋಧಕರು ನಡಿಗೆ ವೇಗ ಮತ್ತು ನಿರಂತರ ನಡಿಯಬೇಕಾ ಎಂಬುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿಲ್ಲ, ನಿಮ್ಮ ಒಟ್ಟಾರೆ ನಡಿಗೆಯ ಸಂಖ್ಯೆಯನ್ನು ಹೆಚ್ಚಿಸಿ ಎಂದಿದ್ದಾರೆ. ಈ ಅಧ್ಯಯನದಲ್ಲಿ 68 ರಿಂದ 78 ವರ್ಷದ ವಯಸ್ಕರ 21 ಜನರನ್ನು ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದು, ಇವರು ಸಾಮಾನ್ಯವಾಗಿ ದಿನಕ್ಕೆ 4 ಸಾವಿರ ನಡಿಗೆ ನಡೆಯುತ್ತಿದ್ದರು.
ಅಧ್ಯಯನದ ಸಂದರ್ಭದಲ್ಲಿ 3 ಸಾವಿರ ನಡಿಗೆಯನ್ನು ಹೆಚ್ಚಿಗೆ ಮಾಡಲಾಗಿದ್ದು, ಇದು ಆರೋಗ್ಯಕ್ಕೆ ಪ್ರಯೋಜನವನ್ನು ನೀಡಿದೆ. ಇದಕ್ಕೆ ಅಮೆರಿಕನ್ ಕಾಲೇಜ್ ಆಫ್ ಸ್ಪೋರ್ಟ್ ಮೆಡಿಸಿನ್ ಶಿಫಾರಸನ್ನು ಪರಿಗಣಿಸಲಾಗಿದೆ. ಸರಾಸರಿ ಫಲಿತಾಂಶವೂ ಭಾಗಿದಾರರಲ್ಲಿ ರಕ್ತದೊತ್ತಡವನ್ನು ಏಳರಿಂದ ನಾಲ್ಕು ಅಂಕಿಗೆ ಇಳಿಕೆಯಾಗಿರುವುದನ್ನು ಕಂಡಿದೆ.
ಈ ಹಿಂದಿನ ಅಧ್ಯಯನದಲ್ಲಿ ಈ ಇಳಿಕೆ ಪ್ರಮಾಣವೂ ಎಲ್ಲಾ ರೀತಿಯ ಸಾವಿನ ಅಪಾಯವನ್ನು ಕಡಿಮೆ ಮಾಡಿದೆ. ಇನ್ನು ಹೃದಯ ರಕ್ತನಾಳದ ಸಾವಿನ ಅಪಾಯವನ್ನು ಶೇ 11 ಮತ್ತು ಹೃದಯಾಘಾತದ ಅಪಾಯವನ್ನು ಶೇ 18ರಷ್ಟು ಮತ್ತು ಪಾರ್ಶ್ವವಾಯುವಿನ ಅಪಾಯವಿನ ಅಪಾಯವನ್ನು 36ರಷ್ಟು ಕಡಿಮೆ ಮಾಡಿದೆ.
ಹೊಸ ಅಧ್ಯಯನದಲ್ಲಿ 7 ಸಾವಿರ ನಡಿಗೆ ಅಧ್ಯಯನ ಗುರಿಯನ್ನು ಸಾಧಿಸುವಲ್ಲಿ ಸಫಲವಾಗಿದೆ. ಜೊತೆಗೆ ಆ್ಯಂಟಿ ಹೈಪರ್ಟೆನ್ಷನ್ ಔಷಧಿಯನ್ನು ಕಡಿಮೆ ಮಾಡಿದೆ.
21 ಭಾಗಿದಾರರಲ್ಲಿ 8 ಮಂದಿ ಆ್ಯಂಟಿ ಹೈಪರ್ಟೆನ್ಷನ್ ಔಷಧಿಯನ್ನು ಈಗಾಗಲೇ ಪಡೆಯುತ್ತಿದ್ದರು. ಈ ಭಾಗಿದಾರರಲ್ಲಿ ಕೂಡ ದೈನಂದಿನ ದೈಹಿಕ ಚಟುವಟಿಕೆ ಹೆಚ್ಚಿಸಿದ ಹಿನ್ನೆಲೆ ಸಿಸ್ಟೋಲಿಕ್ ರಕ್ತದ ಒತ್ತಡ ಕಡಿಮೆಯಾಗಿದೆ. ಈ ಹಿಂದಿನ ಅಧ್ಯಯನದಲ್ಲಿ ವ್ಯಾಯಾಮವನ್ನು ಔಷಧದ ಜೊತೆಗೆ ಸಂಯೋಜಿಸಿದಾಗ ವ್ಯಾಯಾಮವು ರಕ್ತದೊತ್ತಡದ ಔಷಧಿಗಳ ಪರಿಣಾಮಗಳನ್ನು ಮಾತ್ರ ಹೆಚ್ಚಿಸುತ್ತದೆ ಎಂದು ಪ್ರೊ ಲಿಂಡಾ ಪೆಸ್ಕ್ಯಾಟೆಲ್ಲೊ ತಿಳಿಸಿದ್ದರು.
ಇದು ಕೇವಲ ಆಂಟಿ-ಹೈಪರ್ಟೆನ್ಸಿವ್ ಚಿಕಿತ್ಸೆಯ ಭಾಗವಾಗಿ ವ್ಯಾಯಾಮದ ಮೌಲ್ಯವನ್ನು ತಿಳಿಸುತ್ತದೆ. ಹಾಗೆಂದ ಮಾತ್ರಕ್ಕೆ ಔಷಧಿಗಳ ಪರಿಣಾಮಗಳನ್ನು ನಿರಾಕರಿಸಲು ಸಾಧ್ಯವಾಗುವುದಿಲ್ಲ. ಇದು ಚಿಕಿತ್ಸೆಯ ಭಾಗವಾಗಿದೆ ಎಂದು ಅವರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಆಯುರ್ವೇದ ಮೂಲಕ ಸಂಧೀವಾತ ಉಪಶಮನ; ಬಿಎಚ್ಯು ವಿಜ್ಞಾನಿಗಳು