ETV Bharat / sukhibhava

ಶ್ವಾನಗಳ ಉತ್ತಮ ಆರೋಗ್ಯಕ್ಕೆ ಬೇಕು 'ವೀಗನ್‌' ಡಯಟ್‌ - ನಾಯಿಗಳ ಆಹಾರಕ್ಕೆ ಸಂಬಂಧಿಸಿದಂತೆ ಅಧ್ಯಯನ

ಶ್ವಾನಗಳಿಗೆ ಪೌಷ್ಟಿಕಾಂಶಯುಕ್ತ ಸಸ್ಯಾಹಾರಿ ಆಹಾರ, ಮಾಂಸಾಧಾರಿತ ಆಹಾರಗಳಿಗಿಂತ ಆರೋಗ್ಯಕರ ಮತ್ತು ಕಡಿಮೆ ಅಪಾಯಕಾರಿ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ನಾಯಿಗಳ ಆಹಾರಕ್ಕೆ ಸಂಬಂಧಿಸಿದಂತೆ ಅಧ್ಯಯನ
ನಾಯಿಗಳ ಆಹಾರಕ್ಕೆ ಸಂಬಂಧಿಸಿದಂತೆ ಅಧ್ಯಯನ
author img

By

Published : Apr 20, 2022, 5:24 PM IST

ವಿಂಚೆಸ್ಟರ್ ವಿಶ್ವವಿದ್ಯಾನಿಲಯವು ನಾಯಿಗಳ ಆಹಾರಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿದೆ. ಇದರ ಪ್ರಕಾರ, ಪೌಷ್ಟಿಕಾಂಶಯುಕ್ತ ಸಸ್ಯಾಹಾರಿ ಆಹಾರ ಕಚ್ಚಾ ಮಾಂಸಾಧಾರಿತ ಆಹಾರಕ್ಕಿಂತ ಉತ್ತಮ ಎಂದು ತಿಳಿದುಬಂದಿದೆ. ಈ ವಿಶ್ವವಿದ್ಯಾಲಯವು 2,500ಕ್ಕಿಂತ ಹೆಚ್ಚು ನಾಯಿಗಳನ್ನು ಬಳಸಿಕೊಂಡು ಈ ಅಧ್ಯಯನ ನಡೆಸಿದೆ.

ನಾಯಿಗಳು ಸೇವಿಸುವ ಆಹಾರ ಅವುಗಳ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡುಕೊಳ್ಳಲು ಈ ಅಧ್ಯಯನ ನಡೆಸಲಾಗಿದೆ. ಪೌಷ್ಟಿಕಾಂಶಯುಕ್ತ ಸಸ್ಯಾಹಾರಿ ಆಹಾರ ಮಾಂಸಾಧಾರಿತ ಆಹಾರಗಳಿಗಿಂತ ಆರೋಗ್ಯಕರ ಮತ್ತು ಕಡಿಮೆ ಅಪಾಯಕಾರಿ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಅಧ್ಯಯನದ ಆವಿಷ್ಕಾರಗಳನ್ನು ಮುಕ್ತ-ಪ್ರವೇಶ ಜರ್ನಲ್ 'PLOS ONE' ನಲ್ಲಿ ಪ್ರಕಟಿಸಲಾಗಿದೆ.

ಇದನ್ನೂ ಓದಿ: ಸಣ್ಣ ಮಕ್ಕಳಿಗೆ ಒಮಿಕ್ರಾನ್​ ಸೋಂಕು ಅಪಾಯಕಾರಿ: ಹೃದಯಾಘಾತಕ್ಕೂ ಕಾರಣ..

ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ನಾಯಿಯ ಆಹಾರಗಳು ಮತ್ತು ಅದರ ಮೇಲೆ ಉಂಟಾಗುವ ಆರೋಗ್ಯದ ಪರಿಣಾಮಕ್ಕೆ ಮಾತ್ರ ಸಂಶೋಧನೆ ಸೀಮಿತವಾಗಿದೆ. ಸಂಶೋಧಕರು ಹಸಿ ಮಾಂಸ ಅಥವಾ ಸಸ್ಯಾಹಾರಿ ಆಹಾರವನ್ನು ಸೇವಿಸಿದ 2,536 ನಾಯಿಗಳ ಸಮೀಕ್ಷೆಯ ದತ್ತಾಂಶವನ್ನು ಪರಿಗಣಿಸಿ ಈ ರೀತಿ ವಿಶ್ಲೇಷಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.