ETV Bharat / sukhibhava

ಪ್ರೇಮಿಗಳ ವಾರದಲ್ಲೊಂದು ಚಾಕೋಲೇಟ್​ ಡೇ: ಏನಿದರ ಗುಟ್ಟು? - Valentine Week

ವ್ಯಾಲೆಂಟೈನ್​ ವೀಕ್​ನಲ್ಲೊಂದು ಚಾಕೋಲೇಟ್​ ಡೇ. ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವ ಪ್ರೇಮಿಗಳು ಈ ದಿನ ಚಾಕಲೇಟ್​ ಅನ್ನೇ ಯಾಕೆ ಗಿಫ್ಟ್‌ ಮಾಡುತ್ತಾರೆ? ಇದರ ಹಿಂದಿನ ಕಥೆ ಇಲ್ಲಿದೆ..

Chocolate Day
ಚಾಕೋಲೇಟ್​ ಡೇ
author img

By

Published : Feb 9, 2023, 7:53 PM IST

ಪ್ರಪಂಚದಾದ್ಯಂತ ಫೆಬ್ರುವರಿ 7 ರಿಂದ ಫೆಬ್ರುವರಿ 14 ರವರೆಗೆ ವ್ಯಾಲಂಟೈನ್ಸ್​ ವೀಕ್‌ ಆಚರಿಸಲಾಗುತ್ತದೆ. ಈ ವಾರದ ಪ್ರತಿ ದಿನವನ್ನೂ ವಿಶೇಷ ದಿನವನ್ನಾಗಿ ಆಚರಿಸಲಾಗುತ್ತದೆ. ವ್ಯಾಲಂಟೈನ್​ ವೀಕ್​ನ ಮೂರನೇ ದಿನವನ್ನು ಅಂದರೆ ಇಂದು ಚಾಕೋಲೇಟ್​ ಡೇ ಎಂದು ಆಚರಿಸುತ್ತಾರೆ. ಈ ದಿನ ಪ್ರೇಮಿಗಳು ತಮ್ಮ ಪ್ರಿಯತಮೆಗೋ, ಪ್ರಿಯಕರನಿಗೋ ಪ್ರೀತಿಯ ಸಂಕೇತವಾಗಿ ಚಾಕೋಲೇಟ್​ ಗಿಫ್ಟ್​ ನೀಡುತ್ತಾರೆ. ಇನ್ನೂ ಕೆಲವರು ಚಾಕೋಲೇಟ್​ ನೀಡಿ ಪ್ರೀತಿ ನಿವೇದನೆ ಮಾಡಿಕೊಳ್ಳುವವರೂ ಇದ್ದಾರೆ.

ಇದು ನಿಮಗೆ ಗೊತ್ತೇ?: ಈ ವ್ಯಾಲಂಟೈನ್​ ವೀಕ್​ನ ಮೊದಲ ದಿನವನ್ನು ರೋಸ್​ ಡೇ, ಎರಡನೇ ದಿನವನ್ನು ಪ್ರೊಪೋಸ್​ ಡೇ, ಮೂರನೇ ದಿನವನ್ನು ಚಾಕೋಲೇಟ್​ ಡೇ, ನಾಲ್ಕನೇ ದಿನವನ್ನು ಟೆಡ್ಡಿ ಡೇ, ಐದನೇ ದಿನವನ್ನು ಪ್ರಾಮಿಸ್​ ಡೇ, ಆರನೇ ದಿನವನ್ನು ಹಗ್​ ಡೇ, ಏಳನೇ ದಿನವನ್ನು ಕಿಸ್​ ಡೇ ಎಂಟನೇ ದಿನವನ್ನು ವ್ಯಾಲಂಟೈನ್ಸ್​​ ಡೇ ಎಂದು ಆಚರಿಸಲಾಗುತ್ತದೆ.

ಇಂಟ್ರೆಸ್ಟಿಂಗ್‌ ಸ್ಟೋರಿ!: ಈ ಪ್ರೀತಿಯನ್ನು ಆಚರಿಸುವ ಒಂದು ವಾರದಲ್ಲಿ ಒಂದು ಇಡೀ ದಿನವನ್ನು ಚಾಕೊಲೇಟ್​ಗಾಗಿ ಯಾಕೆ ಮೀಸಲಿಡಬೇಕು? ಈ ಚಾಕೋಲೇಟ್​ ಗಿಫ್ಟ್​ ಕೊಡುವ ಪ್ರಮುಖ್ಯತೆ ಏನು? ಇದಕ್ಕೆ ಉತ್ತರ ಇಂದಿನ ಮೆಕ್ಸಿಕೋದಲ್ಲಿ ನೆಲೆಗೊಂಡಿದ್ದ ಪ್ರಾಚೀನ 'ಮಾಯನ್ ನಾಗರಿಕತೆಯ' ಸಂಪ್ರದಾಯಗಳಲ್ಲಿದೆ. ವ್ಯಾಲಂಟೈನ್ಸ್​​ ಡೇ ಆಚರಣೆ ಹಿಂದಿರುವಂತೆಯೇ ಚಾಕೋಲೇಟ್​ ಡೇಗೂ ಒಂದು ಪ್ರಾಚೀನ ಕಥೆಯಿದೆ. 4,000 ವರ್ಷಗಳ ಹಿಂದೆ, ಮಾಯನ್ ವಧುಗಳು ಮತ್ತು ವರರು ಚಾಕೋಲೇಟ್​ ಅನ್ನು ಉನ್ನತ ಸ್ಥಾನಮಾನದ ಸಂಕೇತವಾಗಿ ಹಾಗೂ ಬಹಳ ಅಮೂಲ್ಯವಾದ ವಸ್ತು ಎಂದು ಪರಿಗಣಿಸಿ ಪರಸ್ಪರ ಚಾಕೊಲೇಟ್​ಗಳನ್ನು ಹಂಚಿಕೊಳ್ಳುತ್ತಿದ್ದರು. ಅದಷ್ಟೇ ಅಲ್ಲ, ಇತಿಹಾಸದ ಒಂದು ಕಾಲದಲ್ಲಿ ಚಾಕೋಲೇಟ್​ ಅನ್ನು ಕರೆನ್ಸಿಯಾಗಿಯೂ ಬಳಸಲಾಗುತ್ತಿತ್ತಂತೆ.

ಚಾಕೊಲೇಟ್ ಅನ್ನು ಕಾಮೋತ್ತೇಜಕ ಎಂದು ಪರಿಗಣಿಸಲಾಗುತ್ತದೆ. ಆರಂಭದಲ್ಲಿ ಯುನೈಟೆಡ್ ಸ್ಟೇಟ್ಸ್​ನಲ್ಲಿ ಚಾಕೋಲೇಟ್​ ಅನ್ನು ಪಾನೀಯವಾಗಿ ಬಡಿಸಲಾಗುತ್ತದೆ. ಸ್ಪೇನ್ ಮೆಕ್ಸಿಕೋವನ್ನು ವಶಪಡಿಸಿಕೊಂಡ ನಂತರ ಕೋಕೋ ಬೀನ್ಸ್‌ನಿಂದ ಮಾಡಿದ ಕಹಿ ಪಾನೀಯಕ್ಕೆ ಸ್ಪ್ಯಾನಿಷ್​ನವರು 'ಚಾಕೊಲೇಟ್' ಎಂದು ಹೆಸರಿಟ್ಟರು. ಸ್ಪ್ಯಾನಿಷ್ ರಾಜನು ದೊಡ್ಡ ಪ್ರಮಾಣದಲ್ಲಿ ಕೋಕೋ ಬೀನ್ಸ್ ಮತ್ತು ಚಾಕೊಲೇಟ್ ಪಾನೀಯವನ್ನು ತಯಾರಿಸಲು ಬೇಕಾಗುವ ಉಪಕರಣಗಳನ್ನು ಸ್ಪೇನ್‌ಗೆ ತೆಗೆದುಕೊಂಡು ಹೋದನು. ಶೀಘ್ರದಲ್ಲೇ ಈ ಪಾನೀಯವು ಸ್ಪ್ಯಾನಿಷ್​ನಲ್ಲಿ ಪ್ರಸಿದ್ಧಿಯಾಯಿತು.

17 ನೇ ಶತಮಾನದಲ್ಲಿ ಫಿಸಿಶಿಯನ್​ ಸರ್ ಹ್ಯಾನ್ಸ್ ಸ್ಲೋನೆ ಎನ್ನುವವರು ಹಾಲು ಮತ್ತು ಸಕ್ಕರೆಯನ್ನು ಸೇರಿಸಿ ಕಹಿಯಾಗಿದ್ದ ಚಾಕೊಲೇಟ್ ಪಾನೀಯಕ್ಕೆ ಹೊಸ ರುಚಿಯನ್ನು ನೀಡಿದರು. ಸರ್ ಹ್ಯಾನ್ಸ್ ಸ್ಲೋನೆ ಮಾಡಿದ ಮಿಶ್ರಣವನ್ನು, ಅದರಲ್ಲಿದ್ದ ಆರೋಗ್ಯಕರ ಗುಣಲಕ್ಷಣಗಳಿಂದಾಗಿ ಔಷಧಕಾರರು ತೆಗೆದುಕೊಂಡು ಹೋಗಿ ಅದನ್ನು ಔಷಧವಾಗಿ ಮಾರಾಟ ಮಾಡುತ್ತಿದ್ದರು. ಎಲ್ಲಿಯವರೆಗೆ ಎಂದರೆ ಈ ಮಿಶ್ರಣಕ್ಕೆ ಕ್ಯಾಡ್ಬರಿ ಬ್ರದರ್ಸ್​ ಹೊಸ ರೂಪ ಕೊಡುವವರೆಗೆ, ಇಂದು ಚಾಕೋಲೇಟ್​ ಅಂದರೆ ನಮಗೇನು ಗೊತ್ತಿದೆಯೋ ಆ ರೂಪ ಬರುವವರೆಗೆ ಅದು ಔಷಧವಾಗಿ ಮಾರಾಟವಾಗುತ್ತಿತ್ತು.

ನಾವು ತಿನ್ನುತ್ತಿರುವ ಚಾಕೋಲೇಟ್​ ಯಾಕೆ ಅಷ್ಟೊಂದು ಸಿಹಿಯಾಗಿದೆ, ರುಚಿಕರವಾಗಿದೆ ಎನ್ನುವುದರ ಹಿಂದೆ ಸಾಕಷ್ಟು ವಿಜ್ಞಾನವಿದೆ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ. ಚಾಕೋಲೇಟ್​ನ ಶ್ರೀಮಂತ ಇತಿಹಾಸ ಮತ್ತು ಅದು ನಮ್ಮ ದೇಹದ ಮೇಲೆ ಬೀರುವ ವೈಜ್ಞಾನಿಕ ಪ್ರಭಾವವನ್ನು ಪರಿಗಣಿಸಿ, ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಪ್ರೀತಿಪಾತ್ರರ ನಡುವೆ ವಿನಿಮಯ ಮಾಡಿಕೊಳ್ಳುವ ಪ್ರಮುಖ ವಸ್ತುವಾಗಿ ಚಾಕೊಲೇಟ್ ಅನ್ನು ಪರಿಗಣಿಸಲಾಗಿದೆ. ಈ ರೀತಿ ಕಹಿಯಾಗಿದ್ದ ಚಾಕೋಲೇಟ್​ ಸಿಹಿಯಾದಂತೆ ಪ್ರೀತಿಯೂ ಸಿಹಿಯಾಗಿರಬೇಕು ಎಂದು ಸಿಹಿ ಹಾಗೂ ಪ್ರೀತಿಯ ಸಂಕೇತವಾಗಿ ಪ್ರೇಮಿಗಳು ಚಾಕೋಲೇಟ್​ ಗಿಫ್ಟ್ ಮಾಡುತ್ತಾರೆ.

ಇದನ್ನೂ ಓದಿ: ಇಂದು ಪ್ರಪೋಸ್​ ಡೇ: ಹೃದಯದಲ್ಲಿ ಬಚ್ಚಿಟ್ಟ ಪ್ರೀತಿ ವ್ಯಕ್ತಪಡಿಸಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.