ಹೈದರಾಬಾದ್: ಫೆಬ್ರವರಿ ಮಾಸ ಆರಂಭವಾಯಿತು ಎಂದರೆ, ಪ್ರೇಮಿಗಳಿಗೆ ಎಲ್ಲಿಲ್ಲದ ಸಂತಸ. ಅದರಲ್ಲೂ ವ್ಯಾಲಂಟೈನ್ ಡೇಗೆ ವಾರಕ್ಕೆ ಮುಂಚೆಯೇ ಈ ವಿಶೇಷತೆ ಪ್ರಾರಂಭವಾಗುತ್ತದೆ. ಫೆ. 7ರಿಂದ ಫೆ. 14ರವರೆಗೆ ಪ್ರೇಮಿಗಳ ವಾರವನ್ನಾಗಿ ಇಡೀ ವಿಶ್ವದಲ್ಲಿ ಆಚರಿಸಲಾಗುವುದು. ಈ ಸಮಯದಲ್ಲಿ ಸಂಗಾತಿಗಳು ಪರಸ್ಪರ ಪ್ರೀತಿ ಹಂಚಿಕೊಳ್ಳುವ ಮೂಲಕ ಆಚರಣೆ ಮಾಡುತ್ತಾರೆ.

ಈ ವಾರದ ಎಲ್ಲ ದಿನಗಳಲ್ಲಿ ಒಂದೊಂದು ವಿಶೇಷತೆ ಹೊಂದಿದೆ. ಅಲ್ಲದೇ, ಈ ವಾರ ಅನೇಕ ಜೋಡಿಗಳು ಆ ದಿನದ ಅನುಸಾರವಾಗಿ ಉಡುಗೊರೆ ನೀಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿದರು. ಈ ಸಮಯದಲ್ಲಿ ಹೂವು, ಉಡುಗೊರೆ, ಚಾಕೋಲೆಟ್ ಮತ್ತು ಗೊಂಬೆಗಳ ವಿನಿಮಯ ಮಾಡಿಕೊಳ್ಳುವ ಮೂಲಕ ವಾರವಿಡೀ ಸಂಭ್ರಮಿಸುತ್ತಾರೆ. ಈ ಪ್ರೇಮ ಸಪ್ತಾಹದ ಆರನೇ ದಿನವಾದ ಇಂದು ಚುಂಬನಕ್ಕೆ ಮೀಸಲಾಗಿದೆ. ಪ್ರೇಮಿಗಳ ದಿನಕ್ಕೂ ಒಂದು ದಿನ ಮೊದಲು ಈ ಚುಂಬನ ದಿನವನ್ನಾಗಿ ಪ್ರೇಮಿಗಳು ಆಚರಿಸುತ್ತಾರೆ.

ಫ್ರಾನ್ಸ್ನಲ್ಲಿ ಆರನೇ ಶತಮಾನದಲ್ಲಿ ಫೆಬ್ರವರಿ 13ನ್ನು ಜೋಡಿಗಳು ರೋಮ್ಯಾಂಟಿಕ್ ಹಾಡಿಗೆ ನೃತ್ಯ ಹಾಕುವ ಜೊತೆಗೆ ಪರಸ್ಪರ ಚುಂಬಿಸುತ್ತಿದ್ದರಂತೆ. ರಷ್ಯಾದಲ್ಲಿ ಮದುವೆ ಸಮಯದಲ್ಲಿ ವಧು ಮತ್ತು ವರರು ಪರಸ್ಪರ ಚುಂಬಿಸುವ ಸಂಪ್ರಾದಯ ಆರಂಭವಾಯಿತು. ಚುಂಬನ ಎಂವುದು ಪ್ರೀತಿ ಮತ್ತು ಮೆಚ್ಚುಗೆ ಸಂಕೇತವಾಗಿದೆ. ಚುಂಬನದ ಮೂಲಕ ಹೇಳಲಾಗದ ವಿಷಯವನ್ನು ಪ್ರೀತಿ ಪಾತ್ರರಿಗೆ ತಿಳಿಸಬಹುದಾಗಿದೆ. ಚುಂಬನ ಪ್ರೀತಿಯ ಒಂದು ಸಂಕೇತವಾಗಿದೆ ಎನ್ನಲಾಗಿದೆ. ಹಾಗಾಗಿ, ವಿಭಿನ್ನ ಶೈಲಿಯ ಚುಂಬನ ಮೂಲಕ ಹಲವು ಭಾವನೆಗಳನ್ನು ವ್ಯಕ್ತಪಡಿಸಲಾಗುವುದು. ಅಂತಹ ವಿಧ ವಿಧ ಚುಂಬನಗಳು ಯಾವುದು, ಅದರ ವಿಶೇಷತೆ ಏನು ಎಂಬುದರ ಮಾಹಿತಿ ಇಲ್ಲಿದೆ

ಕೆನ್ನೆ ಚುಂಬನ: ಪರಿಚಯ ಮತ್ತು ಪ್ರೀತಿಯನ್ನು ಈ ಚುಂಬನ ತಿಳಿಸುತ್ತದೆ. ತುಂಬಾ ಆತ್ಮೀಯರಾಗಿರುವ ಜನರು ಪರಸ್ಪರ ಭೇಟಿಯಾದಾಗ ಕೆನ್ನೆಗೆ ಚುಂಬಿಸುವ ಮೂಲಕ ಅವರನ್ನು ಕುಶಲೋಪರಿ ವಿಚಾರಿಸುವುದು ಕಾಣಬಹುದು

ಹಣೆಗೆ ಚುಂಬನ: ಹಣೆಗೆ ಚುಂಬಿಸುವುದು ಒಂದು ರೀತಿಯ ಸುರಕ್ಷಣಾ ಭಾವನೆಯನ್ನು ತೋರ್ಪಡಿಸುತ್ತದೆ. ಸಂಗಾತಿ ಬಗ್ಗೆ ಹೊಂದಿರುವ ಕಾಳಜಿ, ರಕ್ಷಣೆಯನ್ನು ತಿಳಿಸುತ್ತದೆ ಈ ಚುಂಬನ. ಜೊತೆಗೆ ಈ ಮೂಲಕ ಆತ್ಮವಿಶ್ವಾಸ ಮತ್ತು ಮೆಚ್ಚುಗೆ ವ್ಯಕ್ತಪಡಿಸುತ್ತದೆ. ಮೌನದಲ್ಲಿಯೇ ನೀವು ಚುಂಬಿಸುತ್ತಿರುವ ವ್ಯಕ್ತಿಯನ್ನು ರಕ್ಷಣೆ ಮಾಡುವ ವಾಗ್ದಾನ ನೀಡುತ್ತೀರಾ. ಸಂಬಂಧದಲ್ಲಿ ನಂಬಿಕೆ ಇದ್ದಾಗ ಇದು ವ್ಯಕ್ತವಾಗುತ್ತದೆ. ವ್ಯಕ್ತಿಯ ಬಗ್ಗೆ ಹೊಂದಿರುವ ಕಾಳಜಿ ತೋರ್ಪಡಿಸುತ್ತದೆ.

ಕೈಗೆ ಚುಂಬನ: ಸಂಗಾತಿಯ ಬಗ್ಗೆಗಿನ ಗೌರವದ ಜೊತೆಗೆ ಅವರ ಮೌಲ್ಯ ಹಾಗೂ ವಿಶೇಷತೆಯನ್ನು ತಿಳಿಸುತ್ತದೆ ಈ ಚುಂಬನ

ಮೂಗಿನ ಮೇಲೆ ಚುಂಬನ: ಸಂಗಾತಿಯನ್ನು ಆಳವಾಗಿ ಪ್ರೀತಿಸುತ್ತಿರುವುದನ್ನು ತೋರ್ಪಿಡಿಸುತ್ತದೆ. ಮೃದುವಾದ ಈ ಚುಂಬನ, ಪ್ರೀತಿ, ಕಾಳಜಿ ಮತ್ತು ನಿಮ್ಮ ಸಂಗಾತಿಯ ಬಗೆಗಿನ ಆಕರ್ಷಣೆ ತಿಳಿಸುತ್ತದೆ.

ಕುತ್ತಿಗೆ ಚುಂಬನ: ಈ ಚುಂಬನಗಳನ್ನು ಸಾಮಾನ್ಯವಾಗಿ ಪ್ರೇಮಿಗಳು ಹಂಚಿಕೊಳ್ಳುತ್ತಾರೆ, ಅವರು ಪರಸ್ಪರರ ಬಗ್ಗೆ ಅತ್ಯಂತ ಉತ್ಸಾಹದಿಂದ ಮತ್ತು ಲೈಂಗಿಕ ಉದ್ದೇಶವನ್ನು ಹೊಂದಿರುತ್ತಾರೆ ಎಂಬುದನ್ನು ತಿಳಿಸುತ್ತದೆ.

ಫ್ರೆಂಚ್ ಚುಂಬನ: ಭಾವೋದ್ರಿಕ್ತ ಚುಂಬನವು ಒಬ್ಬರಿಗೊಬ್ಬರು ನಿಜವಾಗಿಯೂ ಆಕರ್ಷಿತರಾದ ಅಥವಾ ಪ್ರೀತಿಸುವ ವ್ಯಕ್ತಿಗಳು ಹಂಚಿಕೊಳ್ಳುತ್ತಾರೆ.
ಇದನ್ನೂ ಓದಿ: ವ್ಯಾಲಂಟೈನ್ ವೀಕ್: ಪ್ರೀತಿಗೆ ಭರವಸೆಯೇ ಜೀವಾಳ.. ಸಂಗಾತಿಗೆ ಸದಾ ಜೊತೆಗಿರುವ ಪ್ರಾಮಿಸ್ ಮಾಡಿ