ETV Bharat / sukhibhava

ಬೇಸಿಗೆಯಲ್ಲೂ ಮುಖದ ಅಂದ ಕಾಪಾಡಲು ಈ ಐದು ವಸ್ತು ಬಳಸಿ - ಕಾಳಜಿವಹಿಸುವುದು ಅತಿ ಮುಖ್ಯ

ಬೇಸಿಗೆಯಲ್ಲಿ ಚರ್ಮದ ಅಂದ ಬೇಗ ಹಾಳು ಗೆಡವದಂತೆ ಕಾಪಾಡುವಲ್ಲಿ ಸೌಂದರ್ಯ ವರ್ಧಕಗಳ ಪಾತ್ರ ಮಹತ್ವದ್ದಾಗಿದೆ

Use these five things to keep your face beautiful even in summer

author img

By

Published : Apr 21, 2023, 5:37 PM IST

ಹೈದರಾಬಾದ್​: ಬೇಸಿಗೆಯ ಬೇಗೆ ಏರತೊಡಗಿದಂತೆ ಮನೆಯಿಂದ ಹೊರಡುವುದೇ ಕಷ್ಟ ಎಂಬಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯಿಂದ ಹೊರಡುವ ಮುನ್ನ ಮುಖದ ಕಾಳಜಿವಹಿಸುವುದು ಈಗಿನ ಅತಿ ಮುಖ್ಯವಾದ ಕೆಲಸವಾಗಿದೆ. ಸೂರ್ಯನ ಸುಡು ಬಿಸಿಲು ನಿಮ್ಮ ಚರ್ಮದ ಮೇಲೆ ದೀರ್ಘಕಾಲದ ಪರಿಣಾಮ ಬೀರದಂತೆ ತ್ವಚೆಯನ್ನು ಕಾಯ್ದುಕೊಳ್ಳಬೇಕಾಗಿರುವುದಕ್ಕೆ ನಾವು- ನೀವೆಲ್ಲ ಮೊದಲ ಆದ್ಯತೆ ನೀಡಬೇಕಿದೆ. ಇದಕ್ಕಾಗಿ ಈ ಬೇಸಿಗೆಯಲ್ಲಿ ನಿಮ್ಮ ಅಂದವನ್ನು ಕಾಪಾಡಿಕೊಳ್ಳುವುದು ಅತ್ಯವಶ್ಯಕವೂ ಆಗಿದೆ.

ಸನ್​ ಸ್ಕ್ರೀನ್​
ಸನ್​ ಸ್ಕ್ರೀನ್​

ಬೇಸಿಗೆಯಲ್ಲಿ ಚರ್ಮದ ಅಂದ ಬೇಗ ಹಾಳು ಗೆಡದಂತೆ ಕಾಪಾಡುವಲ್ಲಿ ಸೌಂದರ್ಯ ವರ್ಧಕಗಳ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆ ಸೌಂದರ್ಯ ವರ್ಧಕಗಳು ನಿಮ್ಮ ಬ್ಯಾಗ್​ನಲ್ಲಿರುವಂತೆ ನೋಡಿಕೊಳ್ಳಿ ಇದರಿಂದ ಬಿಸಿಲಿನ ಬೆಗೆ ನಿಮ್ಮ ಸೌಂದರ್ಯ ಮಸುಕಾಗದಂತೆ ಕಾಪಾಡುತ್ತದೆ.

ಸನ್​ ಸ್ಕ್ರೀನ್​: ಬೇಸಿಗೆ ಇರಲಿ ಅಥವಾ ಚಳಿ ಇರಲಿ ಎಲ್ಲಾ ಋತುಮಾನದಲ್ಲೂ ಸನ್​ಸ್ಕ್ರೀನ್​ ಬಳಕೆ ಮಾಡುವುದು ಅತ್ಯವಶ್ಯಕ. ಅದರಲ್ಲೂ ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೋಗುವ ಮುನ್ನ ತಪ್ಪದೇ ಇದನ್ನು ಹಚ್ಚಿಕೊಳ್ಳಿ ಈ ಮೂಲಕ ಚರ್ಮದ ರಕ್ಷಣೆ ಮಾಡಿಕೊಳ್ಳಿ. ಸೂರ್ಯನ ಬಿಸಿಲಿನ ಕಿರಣಗಳು ನಿಮ್ಮ ತ್ವಚೆ ಮೇಲೆ ಗಾಢ ರೀತಿಯ ಪರಿಣಾಮ ಬೀರದಂತೆ ಇದು ತಡೆಯುತ್ತದೆ.

ಫೆಷಿಯಲ್​ ಮಿಸ್ಟ್
ಫೆಷಿಯಲ್​ ಮಿಸ್ಟ್

ಫೇಶಿಯಲ್​ ಮಿಸ್ಟ್​​: ಬಿಸಿಲಿನಿಂದ ತ್ವಚೆ ಹಾಳಾದರೆ ಹಾಗೂ ಸೂರ್ಯನ ಪ್ರಖರ ಶಾಖದಿಂದ ಬಳಲಿದಾಗ ಫೇಶಿಯಲ್​ ಮಿಸ್ಟ್ ಬಯಸುವ ಆಹ್ಲಾದಕರ ಅನುಭೂತಿಯನ್ನು ನೀಡುತ್ತದೆ. ಜೊತೆಗೆ ಇದು ನಿಮ್ಮನ್ನು ಪುನರ್​ಜೀವನ ಗೊಳಿಸುತ್ತದೆ. ಬಳಲಿದ ಮುಖಕ್ಕೆ ತಾಜಾತನ ನೀಡುವ ಜೊತೆಗೆ ಆತಂಕ ಮತ್ತು ಒತ್ತಡವನ್ನು ಫೇಶಿಯಲ್ ಮಿಸ್ಟ್​ ತೆಗೆದು ಹಾಕುತ್ತದೆ. ಯಾವಾಗ ನಿಮಗೆ ತಾಜಾತನದ ಅನುಭೂತಿ ಬೇಕಾಗುತ್ತದೆ ಆಗ ಇದನ್ನು ಮುಖಕ್ಕೆ ಸಿಂಪಡಿಸಿಕೊಳ್ಳಬಹುದು ಉತ್ತಮ.

ಮಾಶ್ಚರೈಸರ್​
ಮಾಶ್ಚರೈಸರ್​

ಮಾಶ್ವರೈಸರ್​: ಪರಿಸರದ ಮಾಲಿನ್ಯ, ಇನ್ನಿತರ ಕಾರಣಗಳಿಂದ ಆಗುವ ಹಾನಿಯನ್ನು ತಡೆಯಲು ಜೊತೆಗೆ ಚರ್ಮವನ್ನು ಹೈಡ್ರೇಟ್​ ಆಗಿಡಲು ಮಾಶ್ವರೈಸರ್​ ಅತಿ ಮುಖ್ಯ. ಮುಖಕ್ಕೆ ಸದಾ ಹಗುರವಾದ ಮಾಶ್ವರೈಸರ್​ ಕ್ರೀಂಗಳು ರಕ್ಷಣೆ ಒದಗಿಸುವ ಜೊತೆಗೆ ಸಮರ್ಥವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ನಿಯಮಿತವಾಗಿ ಆಗಾಗ ಮಾಶ್ಚರೈಸರ್​​ ಮಾಡುತ್ತಿರಿ.

ವೆಟ್​ವೈಪ್ಸ್​
ವೆಟ್​ವೈಪ್ಸ್​

ವೆಟ್​ವೈಪ್ಸ್​: ಬೇಸಿಗೆಯಲ್ಲಿ ಬೇಗ ಕಾಡುವ ಸಮಸ್ಯೆ ಬೆವರು ಮತ್ತು ತುರಿಕೆ, ಇದರಿಂದ ಚರ್ಮದಲ್ಲಿ ಕೊಳೆ, ಎಣ್ಣೆ, ಮಾಲಿನ್ಯ ಅಂಶಗಳು ಸಂಗ್ರಹವಾಗುತ್ತದೆ. ಇದರಿಂದ ಮುಕ್ತಿ ಪಡೆಯಲು ಮುಖವನ್ನು ಆಗ್ಗಿಂದಾಗ್ಗೆ ವೆಟ್​ ವೈಪ್ಸ್​ನಿಂದ ಶುಚಿ ಮಾಡುವುದು ಅವಶ್ಯ. ಇದರಿಂದ ತ್ವಚೆ ಸ್ಚಚ್ಛವಾಗಿ, ಹೈಡ್ರೇಟ್​ ಆಗಿ ಇರುತ್ತದೆ. ವೆಟ್​ವೈಪ್ಸ್​ ಮಾಡುವುದರಿಂದ ತುಸು ರಿಲೀಫ್​ ಕೂಡಾ ಸಿಗುತ್ತದೆ.

ಟೊನರ್​
ಟೊನರ್​

ಟೊನರ್​: ಮುಖದಲ್ಲಿ ತೆರೆದಿರುವ ಚರ್ಮದ ರಂಧ್ರಗಳನ್ನು ಮುಚ್ಚುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಜೊತೆಗೆ ಇದು ತ್ವಚೆಯನ್ನು ತಣ್ಣಗೆ ಮಾಡುತ್ತದೆ. ಚರ್ಮವನ್ನು ಎಣ್ಣೆಯುಕ್ತ ಗೊಳಿಸುವುದಿಲ್ಲ. ಚರ್ಮವನ್ನು ಬಿಗಿ ಗೊಳಿಸಿ, ಚರ್ಮದ ಆರೋಗ್ಯವನ್ನು ಕಾಪಾಡಲು ಇದು ಪ್ರಮುಖವಾಗುತ್ತದೆ. ಬೇಸಿಗೆಯಲ್ಲಿ ಹೀಗೆ ಕಾಲ ಕಾಲಕ್ಕೆ ಚರ್ಮ ಹಾಗೂ ಮುಖದ ಆರೈಕೆ ಮಾಡಿಕೊಳ್ಳುವ ಮೂಲಕ ನಿಮ್ಮ ತ್ವಚೆಯನ್ನು ತಾಜಾ ಇಟ್ಟುಕೊಳ್ಳಲು ಪ್ರಯತ್ನ ಮಾಡಿ.

ಇದನ್ನೂ ಓದಿ: ಬೇಸಿಗೆ ಟ್ಯಾನ್​ನಿಂದ ಮುಕ್ತಿ ಪಡೆಯಲು ಇಲ್ಲಿವೆ 10 ಸರಳ ಉಪಾಯಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.