ನ್ಯೂಯಾರ್ಕ್: ಅಮೆರಿಕದ ನ್ಯಾಷನಲ್ ಇನ್ಸುಟಿಟ್ಯೂಟ್ ಆಫ್ ಹೆಲ್ತ್ (ಎನ್ಐಎಚ್) ಎಚ್ಐವಿ ತಡೆ ಲಸಿಕೆಯ ಮೊದಲ ಹಂತದ ಪ್ರಯೋಗವನ್ನು ಆರಂಭಿಸಿದೆ ಎಂದು ಘೋಷಿಸಿದೆ.
ವಿಐಆರ್-1388 ಎಂದು ಹೆಸರಾಗಿರುವ ಈ ಲಸಿಕೆ ನಿರ್ದಿಷ್ಟ ಪ್ರತಿರಕ್ಷಣೆ ಹೊಂದಿರುವ ಜನರಲ್ಲಿ ಸುರಕ್ಷಿತ ಮತ್ತು ಸಾಮರ್ಥ್ಯದಾಯಕವಾಗಿ ಸೇರಿಸಬಹುದಾಗಿದೆ. ವಿಐಆರ್-1388 ಅನ್ನು ಪ್ರತಿ ರಕ್ಷಣ ವ್ಯವಸ್ಥೆಯಿಂದ ಉತ್ಪಾದನೆಯಯಾಗುವ ಟಿ ಕೋಶಗಳನ್ನು ಗುರಿಯಾಗಿಸಿ ವಿನ್ಯಾಸ ಮಾಡಲಾಗಿದೆ. ಈ ಟಿ ಕೋಶಗಳು ಪ್ರತಿರಕ್ಷಣೆಗೆ ಸ್ಪಂದಿಸಿ, ವೈರಸ್ ತಡೆಯುತ್ತದೆ
ಅಮೆರಿಕದ ಎನ್ಐಎಚ್ ವಿಜ್ಞಾನಿಗಳು 2030ರ ಹೊತ್ತಿಗೆ ಎಚ್ಐವಿಯನ್ನು ಕೊನೆಗಾಣಿಸುವ ಉದ್ದೇಶದಿಂದ ಈ ಪ್ರಯತ್ನ ನಡೆಸಿದ್ದಾರೆ ಎಂದು ಆರೋಗ್ಯ ಸಹಾಯಕ ಕಾರ್ಯದರ್ಶಿ ರಚೆಲ್ ಲೆವಿನ್ ತಿಳಿಸಿದ್ದಾರೆ. ಎಚ್ಐವಿ ಲಸಿಕೆ ಪ್ರಯೋಗ ದಿಟ್ಟ ಜಗತ್ತಿನೆಡೆಗೆ ಮತ್ತೊಂದು ಹೆಜ್ಜೆಯಾಗಿದೆ ಎಂದಿದ್ದಾರೆ.
ಲಸಿಕೆಯಲ್ಲಿ ಸೈಟೊಮೆಗಲೊವೈರಸ್ (ಸಿಎಂಬಿ) ವೆಕ್ಟರ್ ಅನ್ನು ಬಳಕೆ ಮಾಡಲಾಗಿದೆ. ಅಧ್ಯಯನದಲ್ಲಿ ಭಾಗವಹಿಸುವವರಲ್ಲಿ ರೋಗವನ್ನು ಉಂಟುಮಾಡದೆ ಪ್ರತಿರಕ್ಷಣಾ ವ್ಯವಸ್ಥೆಗೆ ಎಚ್ಐವಿ ಲಸಿಕೆ ವಸ್ತುವನ್ನು ತಲುಪಿಸಲು ಸಿಎಂವಿ ಯ ದುರ್ಬಲ ಆವೃತ್ತಿಯಾಗಿದೆ.
ಸಿಎಂವಿ ದೇಹದಲ್ಲಿ ಜೀವಿತಾವಧಿಯಲ್ಲಿ ಪತ್ತೆಹಚ್ಚಲು ಸಾಧ್ಯವಾಗುತ್ತದೆ, ಇದು ದೇಹವು ದೀರ್ಘಕಾಲದವರೆಗೆ ಎಚ್ಐವಿ ಲಸಿಕೆ ವಸ್ತುಗಳನ್ನು ಉಳಿಸಿಕೊಳ್ಳಲು ಮತ್ತು ಸುರಕ್ಷಿತವಾಗಿ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ, ಹೆಚ್ಚು ಅಲ್ಪಾವಧಿಯ ಲಸಿಕೆ ವಾಹಕಗಳೊಂದಿಗೆ ಗಮನಿಸಲಾದ ಕ್ಷೀಣಿಸುತ್ತಿರುವ ಪ್ರತಿರಕ್ಷೆಯನ್ನು ಸಮರ್ಥವಾಗಿ ನಿವಾರಿಸುತ್ತದೆ.
ಈ ಪ್ರಯೋಗಕ್ಕೆ ಸ್ಯಾನ್ ಪ್ರಾನ್ಸಿಸ್ಕೋ ಮೂಲದ ವಿರ್ ಬಯೋಟೆಕ್ನಲಾಜಿ ಪ್ರಾಯೋಜಕತ್ವ ನೀಡಿದ್ದು, ಅಮೆರಿಕದ ಆರು ಮತ್ತು ದಕ್ಷಿಣ ಆಫ್ರಿಕಾದ ನಾಲ್ಕು ಕಡೆ ನಡೆಯಲಿದೆ. 96 ಎಚ್ಐವಿ ನೆಗೆಟಿವ್ ರೋಗಿಗಳು ಇದರಲ್ಲಿ ಭಾಗಿಯಾಗಲಿದ್ದಾರೆ.
ಭಾಗಿದಾರರು ಯಾದೃಚ್ಚಿಕವಾಗಿ ನಾಲ್ಕು ಡೋಸ್ ಲಸಿಕೆ ನೀಡಲಾಗುವುದು. ಮೂರು ಡೋಸ್ನಲ್ಲಿ ವಿಭಿನ್ನ ಡೋಸ್ ಮತ್ತು ಒಂದು ಡೋಸ್ನಲ್ಲಿ ಪ್ಲಸೆಬೊ ನೀಡಲಾಗುವುದು. ಭಾಗಿದಾರರ ಸುಕ್ಷತೆ ನಡೆಸಲಾಗಿದ್ದು, ಸಿಎಂವಿ ಲಕ್ಷಣರಹಿತರು ಮಾತ್ರ ಈ ರೋಗಕ್ಕೆ ಒಳಗಾಗಲಿದ್ದಾರೆ.
ಆರಂಭಿಕ ಫಲಿತಾಂಶವನ್ನು 2024ರಲ್ಲಿ ನಿರೀಕ್ಷಿಸಲಾಗಿದೆ. ಇದರ ದೀರ್ಘ ಅವಧಿಯ ಉಪ ಅಧ್ಯಯನವನ್ನು ಮೂರು ವರ್ಷಗಳ ಕಾಲ ನಡೆಸಲಾಗುವುದು ಎಂದು ಎನ್ಐಎಚ್ ತಿಳಿಸಿದೆ.
ಎಚ್ಐವಿ ಲಸಿಕೆಗೆ ಪ್ರಯೋಗಿಕ ಪರೀಕ್ಷೆಯನ್ನು ಎಂಆರ್ಎನ್ಎ ತಂತ್ರಜ್ಞಾನದ ಮೂಲಕ ನಡೆಸಲಾಗುವುದು ಎಂದು 2022ರ ಮಾರ್ಚ್ನಲ್ಲಿಯೇ ಎನ್ಐಎಚ್ ಘೋಷಿಸಿತು.
ವಿಶ್ವ ಆರೋಗ್ಯ ಸಂಸ್ಥೆಯ ವರದಿ ಅನುಸಾರ, 2022ರ ಅಂತ್ಯದ ವೇಳೆಗೆ 1.5 ಮಿಲಿಯನ್ ಮಂದಿ ಮಕ್ಕಳು ಸೇರಿದಂತೆ 39 ಮಿಲಿಯನ್ ಮಂದಿಯಲ್ಲಿ ಎಚ್ಐವಿ ಸೋಂಕು ಕಂಡು ಬಂದಿದೆ. ಈ ಎಚ್ಐವಿಯಿಂದ 40 ಮಿಲಿಯನ್ ಮಂದಿ ಸಾವನ್ನಪ್ಪಿದ್ದು, ಈ ಸೋಂಕು 40 ವರ್ಷದ ಹಿಂದೆ ಮೊದಲು ಪತ್ತೆಯಾಯಿತು. (ಐಎಎನ್ಎಸ್)
ಇದನ್ನೂ ಓದಿ: ಕೋವಿಡ್ ಪರೀಕ್ಷೆ ಉತ್ಪನ್ನಗಳಿಗೆ $600 ಮಿಲಿಯನ್; ಅಮೆರಿಕದ ಪ್ರತಿ ಮನೆ ತಲುಪಲಿದೆ ಕೋವಿಡ್ ಕಿಟ್