ETV Bharat / sukhibhava

ಅಮೆರಿಕದಲ್ಲಿ ಕೋವಿಡ್ ಸೋಂಕು​ ಏರಿಕೆ; ಹೊಸ ಲಸಿಕೆಗೆ ಎಫ್​ಡಿಎ ಅನುಮತಿ

ಅಮೆರಿಕದಲ್ಲಿ ಮತ್ತೊಮ್ಮೆ ಕೋವಿಡ್​ 19 ಪ್ರಕರಣಗಳು ಏರಿಕೆ ಕಂಡಿವೆ. ಹೊಸ ರೂಪಾಂತರ ತಳಿಗೆ ಅನುಗುಣವಾಗಿ ಲಸಿಕೆ ತಯಾರಿಸಲಾಗಿದೆ.

US FDA has given permission for new covid vaccine

author img

By ETV Bharat Karnataka Team

Published : Sep 12, 2023, 11:37 AM IST

ವಾಷಿಂಗ್ಟನ್​: ಅಮೆರಿಕದ ಫುಡ್​ ಆ್ಯಂಡ್​ ಡ್ರಗ್​ ಆಡ್ಮಿನಿಸ್ಟ್ರೇಷನ್ (ಎಫ್​ಡಿಎ) ಹೊಸ ಕೋವಿಡ್​ ಲಸಿಕೆಗೆ ಅನುಮತಿಸಿದೆ. ಕೋವಿಡ್​​ನ ಹೊಸ ರೂಪಾಂತಗಳನ್ನು ಗುರಿಯಾಗಿಸಿ ಈ ಲಸಿಕೆಯನ್ನು ಫೈಜರ್​ ಮತ್ತು ಮೊರ್ಡನಾ ಕಂಪನಿ ಅಭಿವೃದ್ಧಿಪಡಿಸಿದೆ.

ಈ ಲಸಿಕೆಯು ಎಕ್​​ಬಿಬಿ 1.5 ತಳಿಯನ್ನು ಗುರಿಯಾಗಿಸಿಕೊಂಡಿದೆ. ಪ್ರಸ್ತುತ ಈ ತಳಿ ಅಮೆರಿಕನ್ನರನ್ನು ಹೆಚ್ಚಾಗಿ ಕಾಡುತ್ತಿದೆ. ಇದರ ವಿರುದ್ಧ ಹೊಸ ಲಸಿಕೆಯನ್ನು ತಯಾರಿಸುವ ಜವಾಬ್ದಾರಿಯನ್ನು ಉತ್ಪಾದಕರಿಗೆ ನೀಡಲಾಗಿತ್ತು. ಇವು ಮೊನೊವಲೆಂಟ್​ ಆಗಿದ್ದು, ಈ ಹಿಂದಿನ ಬೂಸ್ಟರ್​ ಲಸಿಕೆಗಳಿಗಿಂತ ವಿಭಿನ್ನ. ಮೂರು ವರ್ಷದ ಹಿಂದೆ ಸೋಂಕಿಗೆ ಕಾರಣವಾದ ಮೂಲ ವೈರಸ್​ನ ವಿರುದ್ಧದ ರಕ್ಷಣೆ ಹೊಂದಿಲ್ಲ ಎಂದು ನ್ಯೂಯಾರ್ಕ್​ ಟೈಮ್ಸ್​ ವರದಿ ಮಾಡಿದೆ.

ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ, ಹೊಸ ಲಸಿಕೆಯನ್ನು ಯಾರು ಪಡೆಯಬೇಕು ಎಂಬ ಕುರಿತು ಸಲಹಾ ಸಭೆ ನಡೆಸುವ ಸಾಧ್ಯತೆ ಇದೆ. ಇದಾದ ಬಳಿಕ ಸಿಡಿಸಿ ನಿರ್ದೇಶಕರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಆ ಬಳಿಕ ದೇಶಾದ್ಯಂತ ಲಸಿಕೆಗಳು ಔಷಧಾಲಯ, ಕ್ಲಿನಿಕ್​ ಮತ್ತು ಆರೋಗ್ಯ ವಲಯಕ್ಕೆ ಕೆಲವೇ ದಿನಗಳಲ್ಲಿ ತಲುಪಲಿವೆ ಎಂದು ಮಾಧ್ಯಮ ವರದಿ ಮಾಡಿದೆ.

ಕೋವಿಡ್​ ಪ್ರಸ್ತುತ ಅಮೆರಿಕದಲ್ಲಿ ಹೆಚ್ಚು ಜನರ ಸಾವಿಗೆ ಕಾರಣವಾಗುತ್ತಿದೆ. ಇದು ದುರ್ಬಲ ವರ್ಗದ ಜನಸಂಖ್ಯೆಯ ಮೇಲೆ ಗಮನಾರ್ಹ ಅಪಾಯ ಹೊಂದಿದೆ. ಅದರಲ್ಲೂ ಉಸಿರಾಟದ ವೈರಸ್​ ಋತುಮಾನದಲ್ಲಿ ಇದರ ಪ್ರವೇಶ ಗರಿಷ್ಠ. ಈ ಋತುವಿನಲ್ಲಿ ಜನರನ್ನು ರಕ್ಷಿಸಲು ನವೀಕರಿಸಿದ ಲಸಿಕೆಗಳು ನಿರ್ಣಾಯಕ ಎಂದು ಮಾಡರ್ನಾ ಕಂಪನಿಯ ಸಿಇಒ ಸ್ಟೇಫನ್​ ಬನ್ಸೆಲ್​ ತಿಳಿಸಿದ್ದಾರೆ.

ಎಫ್​ಡಿಎ ಸಮಯೋಚಿತ ನಿರ್ಧಾರವನ್ನು ನಾವು ಪ್ರಶಂಸಿಸುತ್ತೇವೆ. ಕೋವಿಡ್​ ಲಸಿಕೆ ಪಡೆಯುವ ಉದ್ದೇಶ ಹೊಂದಿರುವ ಮಂದಿ ಇದೇ ಸಮಯದಲ್ಲಿ ಹೊಸ ಕೋವಿಡ್​ ಲಸಿಕೆ ಪಡೆಯುವಂತೆ ನಾವು ಸಲಹೆ ನೀಡುತ್ತೇವೆ ಎಂದು ಹೇಳಿದ್ದಾರೆ.

ಅಭಿವೃದ್ಧಿ ಹೊಂದಿರುವ​ ಕೋವಿಡ್​ ಲಸಿಕೆಯಲ್ಲಿ ಸಾರ್ಸ್​ ಕೋವ್​​2ನ ಎಕ್ಸ್​ಬಿಬಿ 1.5 ತಳಿಯ ವಿರುದ್ಧ ಹೋರಾಡುವ ಸ್ಪೈಕ್​ ಪ್ರೋಟಿನ್​ ಇದ್ದು, ಇದು 6 ತಿಂಗಳ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಲ್ಲಿ ಕೋವಿಡ್ ತಡೆಗಟ್ಟಲು ಸಹಾಯ ಮಾಡುತ್ತದೆ ಎಂದಿದ್ದಾರೆ.

ಕೋವಿಡ್​ ಪ್ರಕರಣಗಳು ಮತ್ತೊಮ್ಮೆ ಏರಿಕೆ ಕಾಣುತ್ತಿರುವ ಸಮಯದಲ್ಲಿ ಈ ನಿರ್ಧಾರ ಹೊರಬಂದಿದೆ. ಈ ಹಿಂದೆ ಕೋವಿಡ್​ ಲಸಿಕೆ ಪಡೆಯದವರು, ಇದೀಗ ಆರು ತಿಂಗಳ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅಮೆರಿಕ ಜನರು ಲಸಿಕೆ ಪಡೆಲು ಅರ್ಹರು ಎಂದು ಫೈಜರ್​ ಸಿಇಒ ಅಲ್ಬರ್ಟ್​ ಬೌರಿಯಾ ಮಾಹಿತಿ ನೀಡಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಕೋವಿಡ್​ ಸೋಂಕಿತ ವ್ಯಕ್ತಿ ವಾಸನೆ, ರುಚಿ ಕಳೆದುಕೊಳ್ಳುವುದೇಕೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.