ETV Bharat / sukhibhava

ಪ್ರಸವ ಪೂರ್ವ ಖಿನ್ನತೆಯ ಚಿಕಿತ್ಸೆಗೆ ಮಾತ್ರೆ; ಅಮೆರಿಕದ ಎಫ್​ಡಿಎನಿಂದ ಅನುಮೋದನೆ - ಅಮೆರಿಕ ಫುಡ್​ ಅಂಡ್​ ಡ್ರಗ್​ ಆಡ್ಮಿನಿಸ್ಟ್ರೇಷನ್​

ಈ ಪ್ರಸವ ಪೂರ್ವ ಖಿನ್ನತೆಯಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ಹದಗೆಡುತ್ತದೆ. ಇದು ಮಗುವಿನ ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಗೆ ತಡೆಯಾಗುತ್ತದೆ.

US FDA approves 1st oral pill for postpartum depression

author img

By

Published : Aug 5, 2023, 5:15 PM IST

Updated : Aug 5, 2023, 5:25 PM IST

ಪ್ರಸವ ಪೂರ್ವ ಖಿನ್ನತೆಗೆ (ಪಿಪಿಡಿ) ಇದೇ ಮೊಲದ ಬಾರಿಗೆ ಓರಲ್​ (ಬಾಯಿಯಿಂದ ಸೇವಿಸುವ) ಔಷಧ ಅಂದರೆ ಮಾತ್ರೆಗೆ ಅಮೆರಿಕ ಫುಡ್​ ಅಂಡ್​ ಡ್ರಗ್​ ಆಡ್ಮಿನಿಸ್ಟ್ರೇಷನ್​ ಅನುಮೋದನೆ ನೀಡಿದೆ. ಸೇಜ್​ ಥೆರಾಪ್ಯುಟಿಕ್ಸ್ಸ್​ ಮತ್ತು ಬಯೊಜೆನ್​, ಜುರ್ಜುವೆ ಇದನ್ನು ಉತ್ಪಾದನೆ ಮಾಡಿದ್ದು, 14 ದಿನಗಳ ಕಾಲ ದಿನಕ್ಕೆ 50 ಎಂಜಿಯಂತೆ ದಿನಕ್ಕೆ ಒಂದು ಮಾತ್ರೆ ಸೇವನೆಗೆ ಅನುಮೋದನೆ ನೀಡಿದೆ. ಮಗು ಜನಿಸಿದ ಬಳಿಕ ಈ ಪಿಪಿಡಿ ಸಾಮಾನ್ಯವಾಗಿ ಕಾಡುತ್ತದೆ. ಕೆಲವೊಮ್ಮೆ ಗರ್ಭಾವಸ್ಥೆಯ ಆರಂಭಿಕ ಹಂತದಲ್ಲೇ ಇದು ಆರಂಭವಾಗುತ್ತದೆ. ಕೆಲವು ನಿರ್ದಿಷ್ಟ ಆರೋಗ್ಯ ಕಾಳಜಿ ಸೌಲಭ್ಯದೊಂದಿಗೆ ಹೆಲ್ತ್​​ಕೇರ್​ಗಳು ಪಿಪಿಡಿಗೆ ಐವಿ ಇಂಜೆಕ್ಷನ್​ ಅನ್ನು ನೀಡುತ್ತಿವೆ.

ಪ್ರಸವಪೂರ್ವ ಖಿನ್ನತೆ ಗಂಭೀರವಾಗಿದ್ದು, ಜೀವ ಅಪಾಯದ ಸ್ಥಿತಿಯಾಗಿದೆ. ಈ ಸಮಯದಲ್ಲಿ ಮಹಿಳೆ ಬೇಸರ, ದೋಷಿ, ಪ್ರಯೋಜನಕಾರಿಯಲ್ಲದಂತಹ ನಕಾರಾತ್ಮಕ ಅಂಶಗಳನ್ನು ಎದುರಿಸುತ್ತಾರೆ. ಅಷ್ಟೇ ಅಲ್ಲದೇ, ಈ ಸಮಯದಲ್ಲಿ ಮಹಿಳೆಯರು ತಮಗೆ ಮತ್ತು ಅಥವಾ ಮಗುವಿಗೆ ಹಾನಿಯಾಗುವಂತ ಚಿಂತನೆಗಳನ್ನು ಹೊಂದಿರುತ್ತಾರೆ ಎಂದು ಟಿಫಾನಿ ಆರ್​ ಫಾರ್ಚಿಯೋನ್ ತಿಳಿಸಿದ್ದಾರೆ.

ಈ ಪ್ರಸವ ಪೂರ್ವ ಖಿನ್ನತೆಯಿಂದ ತಾಯಿ ಮತ್ತು ಮಗುವಿನ ಬಾಂಧವ್ಯ ಹದಗೆಡುತ್ತದೆ. ಇದು ಮಗುವಿನ ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಗೆ ತಡೆಯಾಗುತ್ತದೆ. ಇದೀಗ ಓರಲ್​ ಔಷಧ ಲಭ್ಯವಿದ್ದು, ಇದು ಮಹಿಳೆಯನ್ನು ಕೆಲವು ಅಪಾಯಗಳಿಂದ ತಪ್ಪಿಸುತ್ತದೆ.

ಇತರೆ ರೀತಿಯ ಖಿನ್ನತೆಗಿಂತ ಪಿಪಿಡಿಯನ್ನು ವಿಭಿನ್ನ ಲಕ್ಷಣಗಳನ್ನು ಹೊಂದಿದೆ. ಈ ಸಂದರ್ಭದಲ್ಲಿ ಮಹಿಳೆ ಯಾವುದೇ ಚಟುವಟಿಕೆಯಲ್ಲಿ ಆಸಕ್ತಿಯನ್ನು ಹೊಂದಿರುವುದಿಲ್ಲ. ಆಕೆ ಖುಷಿ ಅನುಭವಿಸುತ್ತಿದ್ದ ಚಟುವಟಿಕೆಗಳಲ್ಲೂ ಬೇಸರ ವ್ಯಕ್ತಪಡಿಸುತ್ತಾರೆ. ಅದರ ಆನಂದದ ಉತ್ಸಾಹವನ್ನು ಕಳೆದುಕೊಳ್ಳುತ್ತಾಳೆ. ಇದರ ಪ್ರಸ್ತುತ ಲಕ್ಷಣದಲ್ಲಿ ಒಂದು ಮರೆವು ಆಗಿರುತ್ತದೆ. ಸದಾ ಬೇಸರ, ಶಕ್ತಿ ಇಲ್ಲದಿರುವುದು ಅಥವಾ ಆತ್ಮಹತ್ಯೆ ಮನೋಭಾವವನ್ನು ಅನುಭವಿಸುತ್ತಾರೆ. ವಯಸ್ಕರಲ್ಲಿ ಪಿಪಿಡಿ ಚಿಕಿತ್ಸೆಗಾಗಿ ಜುರ್ಜುವೆ ಎರಡು ಯಾದೃಚ್ಛಿಕ, ಡಬಲ್​ ಬ್ಲೈಂಡ್​, ಪ್ಲಸೀಬೊ ನಿಯಂತ್ರಿತ, ಮಲ್ಟಿಸೆಂಟರ್ ಮೂಲಕ ಅಧ್ಯಯನ ನಡೆಸಲಾಗಿದೆ

ಮೊದಲ ಅಧ್ಯಯನದಲ್ಲಿ ರೋಗಿಗಳು 50 ಎಂಜಿ ಜುರ್ಜುವೆ ಅಥವಾ ಪ್ಲಸೀಬೊವನ್ನು ದಿನಕ್ಕೆ ಒಂದರಂತೆ 14 ದಿನಗಳ ಕಾಲ ನೀಡಲಾಗಿದೆ. ಎರಡನೇ ಅಧ್ಯಯನದಲ್ಲಿ ಜುರನೊಲೊನ್​ ಉತ್ಪನ್ನವನ್ನು ಜರ್ಜುವೆ ಅಥವಾ ಪ್ಲಸೀಬೊಗೆ ಸಮವಾಗಿ 14 ದಿನ 40 ಎಂಜಿ ನೀಡಲಾಗಿದೆ. ಜುರ್ಜುವೆ ಗುಂಪು ಇತರೆ ಪ್ಲೆಸೆಬೊ ಗುಂಪಿಗೆ ಹೋಲಿಕೆ ಮಾಡಿದಾಗ ಗಮನಾರ್ಹ ಅಭಿವೃದ್ಧಿಯ ಲಕ್ಷಣವನ್ನು ತೋರಿಸಿದೆ. ಜುರ್ಜುವೆ ಡೋಸ್‌ನ ನಾಲ್ಕು ವಾರಗಳ ನಂತರ ಚಿಕಿತ್ಸೆಯ ಪರಿಣಾಮವನ್ನು 42 ನೇ ದಿನದಂದು ನಿರ್ವಹಿಸಲಾಯಿತು.

ಜುರ್ಜುವೆ ವ್ಯಕ್ತಿಯ ಸಾಮರ್ಥ್ಯ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಕೆಯನ್ನು ಔಷಧಗಳ ಮೇಲೆ ಲೇಬಲ್​ ಮೇಲೆ ನಮೂದಿಸಬೇಕಿದೆ. ಈ ಔಷಧ ಸೇವನೆಯಿಂದ ಮಂಪರು, ಅತಿಸಾರ, ಆಯಾಸ, ಸಾಮಾನ್ಯ ಶೀತ ಮತ್ತು ಮೂತ್ರ ಸೋಂಕಿನಂಹ ಸಾಮಾನ್ಯ ಅಡ್ಡ ಪರಿಣಾಮಗಳು ಆಗುವ ಸಾಧ್ಯತೆ ಇದೆ ಎಂದು ಎಫ್​ಡಿಎ ಕೂಡ ಎಚ್ಚರಿಸಿದೆ. ಇನ್ನು ಈ ಮಾತ್ರೆ ಸೇವನೆ ಬಳಿಕ ರೋಗಿಗಳು ಕೂಡ ಕನಿಷ್ಠ 12 ಗಂಟೆಗಳ ಕಾಲ ಅಧಿಕ ಚಟುವಟಿಕೆ ಕಾರ್ಯದಲ್ಲಿ ತೊಡಗಬಾರದು ಎಂದು ಏಜೆನ್ಸಿ ತಿಳಿಸಿದೆ.

ಸೂಚನೆ: ಇದು ಅಧ್ಯಯನ ವರದಿಯಿಂದ ಬಂದಿರುವ ಅಂಶಗಳನ್ನು ಆಧರಿಸಿ ಪ್ರಕಟಿತವಾದ ವರದಿ. ಈ ಮೇಲಿನ ಸಮಸ್ಯೆ ಇರುವವರು ವೈದ್ಯರನ್ನು ಸಂಪರ್ಕಿಸಿದ ಬಳಿಕವೇ ಔಷಧಿಯನ್ನು ಪಡೆಯಬೇಕು.

ಇದನ್ನೂ ಓದಿ: ಬೊಜ್ಜು ವಿರೋಧಿ ಔಷಧ ಬಳಕೆಯಿಂದ ಹೊಟ್ಟೆ ಸಮಸ್ಯೆ; ಕಾನೂನು ಮೊಕದ್ದಮೆ ಹೂಡಿದ ರೋಗಿ

Last Updated : Aug 5, 2023, 5:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.