ETV Bharat / sukhibhava

ಸಾರ್ವತ್ರಿಕ ಮಕ್ಕಳ ದಿನ: ಮಕ್ಕಳ ರಕ್ಷಣೆಯಲ್ಲಿ ನಮ್ಮ- ನಿಮ್ಮ ಪಾತ್ರವೇನು? - ಭಾರತದಲ್ಲಿ ಮಕ್ಕಳ ಹಕ್ಕುಗಳು

Universal Children's Day: ಹಲವು ಕಾನೂನುಗಳ ಹೊರತಾಗಿಯೂ ಇಂದಿಗೂ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಆ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆಗೆ ಅವಶ್ಯ ನಿಲುವುಗಳ ಅಗತ್ಯವಿದೆ.

universal childrens day 2023
ಸಾರ್ವತ್ರಿಕ ಮಕ್ಕಳ ದಿನ
author img

By ETV Bharat Karnataka Team

Published : Nov 20, 2023, 4:29 PM IST

ನವೆಂಬರ್​ 14 ರಂದು ಭಾರತದಲ್ಲಿ ಮಕ್ಕಳ ದಿನವನ್ನು ಆಚರಿಸಿದರೆ, ನವೆಂಬರ್​ 20 ರಂದು ಪ್ರಪಂಚದ ಮೂಲೆ ಮೂಲೆಯಲ್ಲಿ ಸಾರ್ವತ್ರಿಕ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ 'ಪ್ರತಿ ಮಗುವಿಗೆ ಪ್ರತಿ ಹಕ್ಕು' ಥೀಮ್​ ಹಾಗೂ ರಾಷ್ಟ್ರಗಳಾದ್ಯಂತ ಮಕ್ಕಳ ಹಕ್ಕುಗಳನ್ನು ಬೆಂಬಲಿಸುವ ಧ್ಯೇಯದೊಂದಿಗೆ ಸಾರ್ವತ್ರಿಕ ಮಕ್ಕಳ ದಿನವನ್ನು ಆಚರಿಸಲಾಗುತ್ತಿದೆ.

ಪ್ರತಿ ಮಗುವಿಗೆ ಅದರ ಹಕ್ಕುಗಳನ್ನು ಒದಗಿಸುವ ಹಾಗೂ ರಕ್ಷಿಸುವ ಗುರಿಯ ಜೊತೆಗೆ ವಿಶ್ವಸಂಸ್ಥೆ ಈ ದಿನವನ್ನು ಸಾರ್ವತ್ರಿಕ ಮಕ್ಕಳ ದಿನವಾಗಿ ಆಚರಿಸಿಕೊಂಡು ಬರುತ್ತಿದೆ. ರಾಷ್ಟ್ರ ಹಾಗೂ ವಿಶ್ವ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೆ ಈ ಕಾನೂನಿನ ಚೌಕಟ್ಟುಗಳ ಹೊರತಾಗಿಯೂ ಭಾರತದಲ್ಲಿ ಮಕ್ಕಳ ಹಕ್ಕುಗಳ ಉಲ್ಲಘನೆಯಾಗುತ್ತಲೇ ಇದೆ. ಎಲ್ಲ ಮಕ್ಕಳು ಪಶ್ಚಿಮ ತಂಗಾಳಿಯಂತೆ ತಮ್ಮ ಹಕ್ಕುಗಳನ್ನು ಅನುಭವಿಸುತ್ತಿಲ್ಲ ಎನ್ನುವುದಕ್ಕೆ ಪ್ರತಿದಿನ ಒಂದಲ್ಲ ಒಂದು ಮಕ್ಕಳ ಮೇಲಿನ ದೌರ್ಜನ್ಯದ ಸುದ್ದಿಗಳು ವರದಿಯಾಗುತ್ತಿರುವುದೇ ಸಾಕ್ಷಿ.

ಸಾರ್ವತ್ರಿಕ ಮಕ್ಕಳ ದಿನ ಹುಟ್ಟಿದ್ದು ಹೇಗೆ- ಇತಿಹಾಸ: ಸಾರ್ವತ್ರಿಕ ಮಕ್ಕಳ ದಿನವನ್ನು 1954ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಆದರೆ 1959 ನವೆಂಬರ್​ 20 ರಂದು ವಿಶ್ವಸಂಸ್ಥೆ ಸಾಮಾನ್ಯಸಭೆಯಲ್ಲಿ ಮಕ್ಕಳ ಹಕ್ಕುಗಳನ್ನು ಘೋಷಣೆ ಮಾಡಿದ ನಂತರ ಈ ಸಾರ್ವತ್ರಿಕ ಮಕ್ಕಳ ದಿನ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿತ್ತು. ಅದೇ ಸಮಯಕ್ಕೆ ಯುಎನ್​ಜಿಎ ಮಕ್ಕಳ ಹಕ್ಕುಗಳ ಮೇಲಿನ ಒಪ್ಪಂದವನ್ನು ಅಂಗೀಕರಿಸಿತು. ಈ ದಿನಾಂಕ ಯುಎನ್​ಜಿಎ ಮಕ್ಕಳ ಹಕ್ಕುಗಳ ಘೋಷಣೆ ಹಾಗೂ ಒಪ್ಪಂದ ಎರಡನ್ನೂ ಅಂಗೀಕರಿಸಿದ ದಿನದ ವಾರ್ಷಿಕೋತ್ಸವವನ್ನು ಸಹ ಪ್ರತಿನಿಧಿಸುತ್ತದೆ.

ಮಹತ್ವವೇನು?: ಸಾರ್ವತ್ರಿಕ ಮಕ್ಕಳ ದಿನ, ವಿವಿಧ ವೃತ್ತಿಗಳಲ್ಲಿರುವವರಿಗೆ ಮಕ್ಕಳ ಹಕ್ಕುಗಳು ಹಾಗೂ ಕಲ್ಯಾಣದ ಬಗ್ಗೆ ಜಾಗೃತಿ ಮೂಡಿಸಲು ಅವಕಾಶ ನೀಡುವ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಹಳೆಯ ತಲೆಮಾರುಗಳು ಹಾಗೂ ಹಿರಿಯರು ಮಕ್ಕಳಿಗಾಗಿ ಮಾಡಬಹುದಾದ, ಮಕ್ಕಳ ಮೇಲೆ ಬಹುದೊಡ್ಡ ಪರಿಣಾಮ ಬೀರಬಹುದಾದ ಸಣ್ಣ ಬದಲಾವಣೆಗಳನ್ನು ದೊಡ್ಡ ಮಟ್ಟದಲ್ಲಿ ಮಾಡಲು ಇದೊಂದು ಅವಕಾಶ.

ಭಾರತದಲ್ಲಿ ಮಕ್ಕಳ ಹಕ್ಕುಗಳು: ಭಾರತದ ಸಂವಿಧಾನ ಮಕ್ಕಳ ಯೋಗಕ್ಷೇಮ ಹಾಗೂ ಭವಿಷ್ಯ ಕಾಪಾಡುವ ನಿಟ್ಟಿನಲ್ಲಿ ವಿವಿಧ ಹಕ್ಕುಗಳನ್ನು ಒದಗಿಸಿವೆ.

  • ಸಮಾನತೆಯ ಹಕ್ಕು- ಎಲ್ಲ ನಾಗರಿಕರಿಗೆ ಸಮಾನ ರಕ್ಷಣೆ ಹಾಗೂ ಹಕ್ಕುಗಳನ್ನು ಖಾತರಿಪಡಿಸುವುದು.
  • ತಾರತಮ್ಯದ ವಿರುದ್ಧ ಹಕ್ಕು- ಜನಾಂಗ, ಜಾತಿ ಅಥವಾ ಇತರ ಅಂಶಗಳ ಆಧಾರದ ಮೇಲೆ ಆಗುವ ತಾರತಮ್ಯವನ್ನು ವಿರೋಧಿಸುವ ಹಕ್ಕು
  • ಜೀವನ ಮತ್ತು ಆರೋಗ್ಯದ ಹಕ್ಕು- ವೈಯಕ್ತಿಕ ಸ್ವಾತಂತ್ರ್ಯ ಮತ್ತು ಆರೋಗ್ಯಕರ ಜೀವನ ಹೊಂದುವ ಹಕ್ಕು
  • ಶಿಕ್ಷಣದ ಹಕ್ಕು- ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣ ಪಡೆಯುವ ಹಕ್ಕು
  • ಶೋಷಣೆ ವಿರುದ್ಧ ರಕ್ಷಣೆ ಹಕ್ಕು- ಕಳ್ಳಸಾಗಣೆ, ಬಲವಂತದ ಕೆಲಸ ಹಾಗೂ ಅಪಾಯಕಾರಿ ಕೆಲಸಗಳ ವಿರುದ್ಧ ರಕ್ಷಣೆ ಹಕ್ಕು
  • ನಿಂದನೆ ಹಾಗೂ ಸಾಮಾಜಿಕ ಅನ್ಯಾದಿಂದ ರಕ್ಷಣೆ ಹಕ್ಕು- ಸಮಾಜದಲ್ಲಿ ಅಸುರಕ್ಷಿತರಿಗೆ ರಕ್ಷಣೆ ಹಾಗೂ ನ್ಯಾಯ ಪಡೆಯುವ ಹಕ್ಕು
  • ಗುರುತಿನ ಹಕ್ಕು- ವ್ಯಕ್ತಿಯ ಗುರುತಿನ ಪ್ರಾಮುಖ್ಯತೆ ಹಾಗೂ ಅದಕ್ಕೆ ಸಂಬಂಧಿಸಿದ ಹಕ್ಕುಗಳನ್ನು ಪಡೆಯುವುದು

ಮಕ್ಕಳ ಮೇಲಿನ ದೌರ್ಜನ್ಯದ ಅಪರಾಧಗಳು: ಹಲವು ಕಾನೂನುಗಳ ಚೌಕಟ್ಟು ಹೊಂದಿದ್ದರೂ ಭಾರತದಲ್ಲಿ ಮಕ್ಕಳು ಇನ್ನು ದೌರ್ಜನ್ಯಕ್ಕೆ ಒಳಪಟ್ಟು, ತಮ್ಮ ಹಕ್ಕುಗಳಿಂದ ಇಂದಿಗೂ ವಂಚಿತರಾಗುತ್ತಿದ್ದಾರೆ.

  • ಬಾಲ್ಯ ವಿವಾಹ- ಬಾಲ್ಯವಿವಾಹ ಮೂಲಭೂತ ಹಕ್ಕಗಳ ಉಲ್ಲಂಘನೆಯಾಗಿದ್ದು, ಇದರಿಂದ ಮಕ್ಕಳು ಶಿಕ್ಷಣ ಪಡೆಯಲು ಅಡ್ಡಿಯಾಗುತ್ತದೆ. ಇದು ಮಗುವಿನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
  • ಬಾಲ ಕಾರ್ಮಿಕತೆ - ಬಡತನ ಹಾಗೂ ಸಾಮಾಜಿಕ ಸಮಸ್ಯೆಗಳು ಮಕ್ಕಳನ್ನು ಬಾಲಕಾರ್ಮಿಕತೆಗೆ ದೂಡಿದರೆ, ಇದರಿಂದ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗುತ್ತದೆ.
  • ಬಲವಂತದ ಭಿಕ್ಷಾಟನೆ - ಅಕ್ರಮವಾಗಿ ಮಕ್ಕಳನ್ನು ಭಿಕ್ಷೆ ಬೇಡುವಂತೆ ಒತ್ತಾಯಿಸುವುದು ಅವರ ಹಕ್ಕುಗಳು ಹಾಗೂ ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘನೆ ಮಾಡಿದಂತೆ.

ಪ್ರತೀ ವರ್ಷ ಪ್ರಪಂಚದಾದ್ಯಂತ ಆಚರಿಸಲಾಗುವ ಸಾರ್ವತ್ರಿಕ ಮಕ್ಕಳ ದಿನದಿಂದ ಮಕ್ಕಳ ಅಭಿವೃದ್ಧಿ, ರಕ್ಷಣೆ ಬಗ್ಗೆ ಇರುವ ಅಗತ್ಯವನ್ನು ನೆನಪಿಸುವ ಕೆಲಸವಾಗುತ್ತದೆ. ಈಗಾಗಲೇ ಮಕ್ಕಳ ಸರ್ವತೋಮುಖ ರಕ್ಷಣೆಗಾಗಿ ಕಾನೂನುಗಳು ಹಾಗೂ ನಿಬಂಧನೆಗಳು ಇದ್ದರೂ, ಅವುಗಳ ಹೊರತಾಗಿಯೂ ಅನೇಕ ಸವಾಲುಗಳು ನಮ್ಮ ಮುಂದಿವೆ. ಆದ್ದರಿಂದ ಪ್ರತಿ ಮಗುವಿನ ಹಕ್ಕುಗಳನ್ನು ಉತ್ತೇಜಿಸಲು ಮತ್ತು ರಕ್ಷಿಸಲು ಸಾಮೂಹಿಕ ಜವಾಬ್ದಾರಿಯನ್ನು ಹೈಲೈಟ್​ ಮಾಡುವ ತುರ್ತು ಅವಶ್ಯಕತೆಯಿದೆ.

ಮಕ್ಕಳ ರಕ್ಷಣೆಯಲ್ಲಿ ನಮ್ಮ ಪಾತ್ರವೇನು?: ಎಲ್ಲಿಯಾದರು ಆರೈಕೆ ಹಾಗೂ ರಕ್ಷಣೆಯ ಅಗತ್ಯವಿರುವ ಮಕ್ಕಳನ್ನು ಕಂಡಲ್ಲಿ ತಕ್ಷಣ ಮಕ್ಕಳಿಗಾಗಿ ಇರುವ 24 ಗಂಟೆಗಳು ಲಭ್ಯವಿರುವ 1098 ಟೋಲ್​ ಫ್ರೀ ಸಂಖ್ಯೆಗೆ ಕರೆ ಮಾಡಬಹುದು. ಈ ಬಗ್ಗೆ ನಿಮ್ಮ ಅರಿವಿಗೆ ಬರುವ ಮಕ್ಕಳಿಗೆ ಶಿಕ್ಷಣ ನೀಡಿ, ಆಗ ಮಕ್ಕಳೇ ಅವರ ರಕ್ಷಣೆಗೆ ಈ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನೀಡಿರುವ ಈ ಸಹಾಯವಾಣಿಯನ್ನು ಮಕ್ಕಳು ಅಥವಾ ಮಗುವಿಗೆ ಸಂಬಂಧಪಟ್ಟ ವಯಸ್ಕರು ಸಂಪರ್ಕಿಸಬಹುದು.

ಇದನ್ನೂ ಓದಿ: 2022ರಲ್ಲಿ ಭಾರತದ 1.1 ಮಿಲಿಯನ್​ ಮಕ್ಕಳು ದಡಾರ ಲಸಿಕೆ ಪಡೆದಿಲ್ಲ; ಡಬ್ಲ್ಯೂಎಚ್​ಒ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.