ETV Bharat / sukhibhava

ನೀವು ಪಿಸಿಒಎಸ್ ಸಮಸ್ಯೆಯಿಂದ ಬಳಲುತ್ತಿದ್ದೀರಾ?: ಇಲ್ಲಿದೆ ನೋಡಿ ಪರಿಹಾರ ಮಾರ್ಗಗಳು

author img

By

Published : Jan 23, 2021, 12:43 PM IST

ಪಿಸಿಓಎಸ್ ಸಮಸ್ಯೆ ಕುರಿತು ನೀವು ತಿಳಿದುಕೊಳ್ಳಬೇಕಾದ ಅಗತ್ಯ ಮಾಹಿತಿ ಇಲ್ಲಿದೆ.

PCOS
PCOS

ಇತ್ತೀಚಿನ ದಿನಗಳಲ್ಲಿ ಪಿಸಿಒಎಸ್ ಸಮಸ್ಯೆ ಹೆಣ್ಣುಮಕ್ಕಳಲ್ಲಿ ಕಂಡು ಬರುವ ಒಂದು ಸಾಮಾನ್ಯ ಸಮಸ್ಯೆಯಾಗಿ ಗೋಚರವಾಗುತ್ತಿದೆ. ಇದು ಮಹಿಳೆಯರ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ ನೋಡಿ,

ಪಿಸಿಒಎಸ್ ಅಥವಾ " ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ " ಒಂದು ಸಾಮಾನ್ಯವಾದ ಎಂಡೋಕ್ರೈನ್ ಅಸ್ವಸ್ಥತೆಯಾಗಿದ್ದು, ಮಹಿಳೆಯರ ಹಾರ್ಮೋನಿನ ಮಟ್ಟಗಳಿಗೆ ಪರಿಣಾಮ ಬೀರಿ ಆಕೆಯ ಅಂಡಾಶಯಗಳ ಕಾರ್ಯ ಚಟುವಟಿಕೆಗಳ ಮೇಲೆ ಸಹ ಪರಿಣಾಮ ಬೀರುತ್ತದೆ. ಪಿಸಿಓಎಸ್ ಸಮಸ್ಯೆ ಮಹಿಳೆಯರ ದೇಹದಲ್ಲಿ ಪುರುಷರಿಗೆ ಸಂಬಂಧಪಟ್ಟ ಹಾರ್ಮೋನುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುವಂತೆ ಮಾಡುತ್ತದೆ. ಜೊತೆಗೆ ತಲೆ ಕೂದಲು, ಚರ್ಮ, ಋತುಚಕ್ರ ಮೇಲೆ ಪ್ರಭಾವ ಬೀರುತ್ತದೆ.

ಪಿಸಿಒಎಸ್​ ಲಕ್ಷಣಗಳು:

ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ಯುಕೆ ಹೇಳಿರುವಂತೆ ಪಿಸಿಒಎಸ್‌ನ ಕೆಲವು ಲಕ್ಷಣಗಳು ಇಲ್ಲಿವೆ:

  • ದೇಹದ ತೂಕ ಅನಿರೀಕ್ಷಿತವಾಗಿ ಏರಿಕೆಯಾಗುವುದು
  • ಹಾರ್ಮೋನ್‌ಗಳ ವ್ಯತ್ಯಾಸದಿಂದ ಮುಖದಲ್ಲಿ ಮೊಡವೆಗಳು ಮೂಡಿ ಬರುವುದು
  • ಅನಿಯಮಿತ ಮತ್ತು ನೋವುಳ್ಳ ಋತುಚಕ್ರ
  • ಗರ್ಭ ಧರಿಸಲು ಸಮಸ್ಯೆಯಾಗುತ್ತಿರುವುದು
  • ಮುಖ, ಎದೆ, ಬೆನ್ನು ಮೇಲೆ ಅತಿಯಾದ ಕೂದಲು ಬೆಳೆಯುವುದು
  • ತಲೆ ಕೂದಲು ಉದುರುವುದು

ಇದಕ್ಕೆ ಕಾರಣವೇನು?

ಪಿಸಿಒಎಸ್​ಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ, ಆದರೆ, ತಜ್ಞರು ಇದು ಆನುವಂಶಿಕವಾಗಿರಬಹುದು ಎಂದು ಸೂಚಿಸಿದ್ದಾರೆ. ಜೊತೆಗೆ ಹಾರ್ಮೋನ್​ಗಳಲ್ಲಿ ಬದಲಾವಣೆಯಾದಾಗ ಈ ರೀತಿಯಾ ಸಮಸ್ಯೆ ಉಂಟಾಗುತ್ತದೆ. ಹಾರ್ಮೋನುಗಳಲ್ಲಾಗುವ ಅಸಮತೋಲನ ಇದರ ಲಕ್ಷಣ. ಆಂಡ್ರೋಜನ್ಸ್ ಅಥವಾ ಪುರುಷ ಹಾರ್ಮೋನುಗಳು ಅತ್ಯಧಿಕ ಮಟ್ಟಗಳಲ್ಲಿ ಇದ್ದು, ಅಂಡಾಶಯಗಳಲ್ಲಿ ಸಣ್ಣ ಸಣ್ಣ ಗುಳ್ಳೆ (ಸಿಸ್ಟ್) ಗಳು ಏರ್ಪಡುತ್ತವೆ. ಇದರಿಂದ ಅಸಮರ್ಪಕ ಋತುಸ್ರಾವ, ಗರ್ಭಪಾತ ಅಥವಾ ಮಕ್ಕಳಾಗಲು ಸಮಸ್ಯೆಯಾಗುವುದು, ಮೊಡವೆಗಳು, ಅನಗತ್ಯ ಕೂದಲು ಬೆಳವಣಿಗೆ, ಸ್ಥೂಲಕಾಯ, ಅಂಡಾಶಯದಲ್ಲಿ ಗುಳ್ಳೆಗಳು ಇತ್ಯಾದಿ ಸಮಸ್ಯೆಗಳಾಗುತ್ತದೆ.

ಪಿಸಿಒಎಸ್ ಚಿಕಿತ್ಸೆ:

ಪಿಸಿಓಎಸ್​ಗೆ ಯಾವುದೇ ಚಿಕಿತ್ಸೆ ಇಲ್ಲ. ಆದರೂ ಮಹಿಳೆಯರಲ್ಲಿ ಪಿಸಿಒಎಸ್ ಸಮಸ್ಯೆ ಇದ್ದರೆ ಆಗ ಅವರು ಈ ಕೆಳಗಿನ ಕ್ರಮಗಳನ್ನು ತಪ್ಪದೆ ಪಾಲಿಸಿಕೊಂಡು ಹೋಗಬೇಕು.

ನಿಮ್ಮ ಜೀವನಶೈಲಿಯನ್ನು ಬದಲಾಯಿಸುವುದು: ಯಾವುದೇ ವೈದ್ಯರು ಶಿಫಾರಸು ಮಾಡುವ ಮೊದಲ ವಿಷಯವಿದು. ಇದು ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವುದು ಮತ್ತು ನಿಮ್ಮ ದೈನಂದಿನ ದಿನಚರಿಗೆ ದೈಹಿಕ ಚಟುವಟಿಕೆಗಳನ್ನು ಸೇರಿಕೊಳ್ಳುವುದು.

​ಹೆಚ್ಚಿನ ಪ್ರಮಾಣದ ಪ್ರೋಟೀನ್ ಸೇವನೆ: ಆಹಾರದಲ್ಲಿ ಪ್ರೋಟೀನ್ ಪ್ರಮಾಣವನ್ನು ಹೆಚ್ಚು ಸೇವನೆ ಮಾಡಿದರೆ ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿ ಇಡುವುದು ಮತ್ತು ಊಟವಾದ ಬಳಿಕ ಹೊಟ್ಟೆಯು ತುಂಬಿರುವಂತೆ ಮಾಡುತ್ತದೆ. ಆರೋಗ್ಯಕರ ಮತ್ತು ಸಮತೋಲನದ ಆಹಾರ ಸೇವನೆ ಅತ್ಯಗತ್ಯ.

ಸಂಸ್ಕರಿತ ಆಹಾರ ಮತ್ತು ಸಕ್ಕರೆ ಕಡಿಮೆ ಮಾಡಿ: ಆಹಾರದಲ್ಲಿ ಸಕ್ಕರೆ ಪ್ರಮಾಣವು ಅತಿಯಾಗಿದ್ದರೆ ಅದು ಒಳ್ಳೆಯದಲ್ಲ. ಅದರಲ್ಲೂ ಪಿಸಿಒಎಸ್ ಸಮಸ್ಯೆ ಇರುವ ಮಹಿಳೆಯರು ತಮ್ಮ ಆಹಾರ ಕ್ರಮದಲ್ಲಿ ಸಕ್ಕರೆ ಮತ್ತು ಸಂಸ್ಕರಿತ ಆಹಾರವನ್ನು ಕಡಿಮೆ ಮಾಡಬೇಕು. ಜೊತೆಗೆ ಜಂಕ್ ಫುಡ್ಸ್ ತಿನ್ನುವುದನ್ನು ಕಡಿಮೆಮಾಡಿಕೊಳ್ಳಬೇಕು.

ಪ್ರತಿದಿನ ಕನಿಷ್ಠ 30-45 ನಿಮಿಷಗಳ ಕಾಲ ವ್ಯಾಯಾಮ: ಪಿಸಿಒಎಸ್ ಲಕ್ಷಣಗಳನ್ನು ಕಡಿಮೆ ಮಾಡಲು ತೂಕ ಇಳಿಸುವುದು ಅತೀ ಅಗತ್ಯವಾಗಿರುವುದು. ಹಾಗಾಗಿ ಪ್ರತಿ ನಿತ್ಯ 30-45 ನಿಮಿಷಗಳ ಕಾಲ ವ್ಯಾಯಾಮ ಅಥವಾ ಯೋಗ ಮಾಡುವುದು ಉತ್ತಮ.

ವಿಶೇಷವಾಗಿ ನೀವು ಅನಿಯಮಿತ ಅವಧಿ ಋತುಚಕ್ರಗಳನ್ನು ಹೊಂದಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಈ ಮೇಲಿನ ಒಂದು ಅಥವಾ ಹೆಚ್ಚಿನ ಗುಣ ಲಕ್ಷಣಗಳು ನಿಮಗೆ ಕಂಡು ಬಂದಿದ್ದರೆ ತಕ್ಷಣವೇ ಅದು ಪಿಸಿಒಎಸ್ ಇರಬಹುದು ಎಂಬ ನಿರ್ಧಾರಕ್ಕೆ ಬರುವ ಅಗತ್ಯವಿಲ್ಲ. ಒಮ್ಮೆ ವೈದ್ಯರನ್ನು ಭೇಟಿ ಮಾಡಿ ಪರೀಕ್ಷೆ ಮಾಡಿಸಿಕೊಂಡು ಮಾಹಿತಿ ಕಲೆ ಹಾಕುವುದು ಉತ್ತಮ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.