ETV Bharat / sukhibhava

ಭಾರತೀಯರ ಹೃದಯ ಸಮಸ್ಯೆಗೆ ಅಶುದ್ಧ ಇಂಧನ, ಫಾಸ್ಟ್​ ಫುಡ್ ಕಾರಣವಂತೆ​

author img

By

Published : Mar 30, 2023, 10:37 AM IST

ಇತ್ತೀಚಿನ ದಿನಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಭಾರತೀಯರಲ್ಲಿ ಹೃದಯ ಸಂಬಂಧಿ ರೋಗ ಬಾಧೆ ಹೆಚ್ಚಳವಾಗಿದೆ.

Unclean fuel and fast foods are behind the heart problem of Indians

ಅಡುಗೆಯಲ್ಲಿ ಅಶುದ್ದ ಇಂಧನ ಬಳಕೆ ಮತ್ತು ಬದಲಾದ ಆಹಾರ ಸಂಸ್ಕೃತಿಯಿಂದಾಗಿ ಭಾರತೀಯರಲ್ಲಿ ಹೃದ್ರೋಗ ಪ್ರಕರಣಗಳು ಹೆಚ್ಚುತ್ತಿದೆ ಎಂದು ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ತಿಳಿಸಿದೆ. ಈ ಸಂಬಂಧ ಅಧ್ಯಯನ ವರದಿ ಪ್ರಕಟಿಸಿರುವ ಐಐಟಿ, ಜಾಗತಿಕವಾಗಿ ಹೃದಯ ಸಂಬಂಧಿ ರೋಗಗಳಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ವಾರ್ಷಿಕವಾಗಿ 17.9 ಮಿಲಿಯನ್​ ಮಂದಿ ಈ ಸಮಸ್ಯೆಯಿಂದ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದೆ.

ಐಸಿಎಂಆರ್​ ಮತ್ತು ರಿಜಿಸ್ಟ್ರಾರ್​ ಜನರಲ್ ಆಫ್​ ಇಂಡಿಯಾ ದತ್ತಾಂಶದ ಅನುಸಾರ, ಜಾಗತಿಕವಾಗಿ ಶೇ 60ರಷ್ಟು ಮಂದಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದ 45 ವರ್ಷಕ್ಕೂ ಮೇಲ್ಪಟ್ಟ ಮಂದಿ ಹೃದಯ ರೋಗ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಸುಮಾರು 59 ಸಾವಿರ ದತ್ತಾಂಶವನ್ನು ವಿಶ್ಲೇಷಣೆ ನಡೆಸಲಾಗಿದೆ.

ಹೃದಯ ರೋಗಕ್ಕೆ ಇವೂ ಕಾರಣ: ಭಾರತದ ವಯಸ್ಕರು ಆನುವಂಶಿಕ ಪರಿಸರ ಮತ್ತು ನಡವಳಿಕೆಯಿಂದ ದೈಹಿಕ ಅಪಾಯಕ್ಕೆ ಗುರಿಯಾಗುತ್ತಾರೆ ಎಂದು ಅಧ್ಯಯನ ಹೇಳುತ್ತದೆ. ಜೊತೆಗೆ ಸಾಂಪ್ರದಾಯಿಕ ಅಪಾಯಗಳಾದ ಎಚ್​ಡಿಎಲ್​ ಕೊಲೆಸ್ಟ್ರಾಲ್​, ಬೊಜ್ಜು, ಅನಾರೋಗ್ಯಕರ ಆಹಾರ, ಕಳಪೆ ಪೌಷ್ಠಿಕಾಂಶ, ಕೌಟುಂಬಿಕ ಇತಿಹಾಸ, ಧೂಮಪಾನ ನಿಷ್ಕ್ರಿಯತೆ, ಮದ್ಯಪಾನಗಳನ್ನು ಒಳಗೊಂಡಿದೆ ಎಂದು ಡಾ.ರಾಮನಾ ಠಾಕೂರ್​ ತಿಳಿಸಿದ್ದಾರೆ.

ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದು ಕೂಡ ಮತ್ತೊಂದು ಅಪಾಯಕಾರಿ ಅಂಶ. ಈ ಅಪಾಯಕಾರಿ ಅಂಶಗಳಿಂದ ವಯಸ್ಕರಲ್ಲಿ ಹೃದಯ ಸಂಬಂಧಿ ರೋಗದ ಅಭಿವೃದ್ಧಿಗೆ ಕಾರಣವಾಗಿದೆ. ಭಾರತದ ಬಹುಪಾಲು ಜನಸಂಖ್ಯೆಯು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಡುಗೆ ಮತ್ತು ಇತರ ಉದ್ದೇಶಗಳಿಗಾಗಿ ಅಶುದ್ಧ ಇಂಧನಗಳನ್ನು ಬಳಸುತ್ತಾರೆ. ಅವು ಹೊರಸೂಸುವ ಹಾನಿಕಾರಕ ಹೊಗೆಯಿಂದ ಮತ್ತು ಪರೀಕ್ಷೆ ಧೂಮಪಾನದ ಹೊಗೆಯಿಂದ ಹೃದಯರಕ್ತನಾಳದ ಪರಿಣಾಮಕ್ಕೆ ಒಳಗಾಗುತ್ತಾರೆ. ದೈಹಿಕ ನಿಷ್ಕ್ರಿಯತೆ ಅಪಾಯದಿಂದಲೂ ಈ ಹೃದಯ ರೋಗ ಸಮಸ್ಯೆ ಕಾಣುತ್ತದೆ ಎಂದಿದ್ದಾರೆ.

ಬದಲಾದ ಜೀವನ ಶೈಲಿ: ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಖಿನ್ನತೆ ಮತ್ತು ಅಧಿಕ ತೂಕ ಅಥವಾ ಬೊಜ್ಜು ಗಂಭೀರವಾಗಿದೆ. ಜಡ ಜೀವನಶೈಲಿ, ತ್ವರಿತ ಆಹಾರ ಸಂಸ್ಕೃತಿಯ ಅಳವಡಿಕೆ ಮತ್ತು ನಗರೀಕರಣವು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು, ದ್ರವೀಕೃತ ಪೆಟ್ರೋಲಿಯಂ ಅನಿಲ, ಸೌರ, ವಿದ್ಯುತ್ ಮತ್ತು ಜೈವಿಕ ಅನಿಲದಂತಹ ಕ್ಲೀನ್ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸಲು ಅಧ್ಯಯನ ಶಿಫಾರಸು ಮಾಡುತ್ತದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಮಧ್ಯ ಅಥವಾ ಹಿರಿಯ ವಯಸ್ಸಿನಲ್ಲಿ ಲಘುವಾದ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಹೃದಯ ಸಂಬಂಧಿ ಸಮಸ್ಯೆ ಮತ್ತು ಅಕಾಲಿಕ ಸಾವಿನ ಅಪಾಯ ಕಡಿಮೆ ಮಾಡಬಹುದು. ಮದ್ಯ, ತಂಬಾಕು ಸೇವನೆ ಕುರಿತ ಜಾಗೃತಿಯಿಂದ ಹೃದಯ ಸಂಬಂಧಿ ರೋಗವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು ಎಂದು ಸಂಶೋಧಕರು ಹೇಳುತ್ತಾರೆ.

ಇದನ್ನೂ ಓದಿ: ಅಕಾಲಿಕ ಸಾವು ತಡೆಯುವಲ್ಲಿ ನಡಿಗೆ ಪ್ರಯೋಜನ; ವಾರದಲ್ಲಿ 8000 ಸ್ಟೆಪ್ಸ್​ ನಡೆಯಿರಿ ಸಾಕು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.