ETV Bharat / sukhibhava

ನಿಮಗೆ ನಿದ್ರಾಹೀನತೆಯೇ... ಹಾಗಾದರೆ ಈ ಸಾಂಪ್ರದಾಯಿಕ ತೈಲ ಚಿಕಿತ್ಸೆಗಳನ್ನು ಪಡೆದುಕೊಳ್ಳಿ..! - ತೈಲಗಳಿಂದ ಮಸಾಜ್​

ಮಾನವನ ಆರೋಗ್ಯಕ್ಕೆ ನಿದ್ರೆ ತುಂಬಾ ಮುಖ್ಯವಾಗಿದೆ. ದಿನಕ್ಕೆ ಕನಿಷ್ಠ ಏಳು ಗಂಟೆಗಳ ನಿದ್ದೆ ಆರೋಗ್ಯಕ್ಕೆ ಒಳ್ಳೆಯದು ಎಂದು ಅಧ್ಯಯನಗಳು ತೋರಿಸುತ್ತವೆ. ಹಾಗಾಗಿ ಉತ್ತಮ ನಿದ್ರೆ ಪಡೆಯಲು ನೀವು ಈ ಕೆಳಗಿನ ತೈಲಗಳನ್ನು ಬಳಸಬಹುದಾಗಿದೆ.

ತೈಲ ಚಿಕಿತ್ಸೆಗಳು
ತೈಲ ಚಿಕಿತ್ಸೆಗಳು
author img

By

Published : Sep 23, 2022, 6:14 PM IST

ಹೈದರಾಬಾದ್: ಮನುಷ್ಯ ಆರೋಗ್ಯವಾಗಿರಬೇಕು ಎಂದರೆ ನಿದ್ರೆ ತುಂಬಾ ಅತ್ಯಗತ್ಯವಾಗಿದೆ. ನಮ್ಮ ದೈನಂದಿನ ಕೆಲಸವನ್ನು ಮುಗಿಸಿ, ಮನೆಗೆ ಬಂದ ನಂತರ ನಾವು ಉತ್ತಮವಾದ ನಿದ್ರೆಯನ್ನು ಮಾಡಬೇಕು. ಇದು ನಮಗೆ ಹೊಸತನವನ್ನು ನೀಡುವುದರ ಜೊತೆಗೆ ನಮ್ಮ ಆಯಾಸ ಕಡಿಮೆ ಮಾಡುತ್ತದೆ. ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಅಥವಾ ಬೇಗ ಮಲಗಲು ಸಾಧ್ಯವಾಗದಿದ್ದರೆ ಈ ಕೆಳಗಿನ ತೈಲಗಳಿಂದ ಮಸಾಜ್​ ಮಾಡುವುದು ಸೂಕ್ತವಾಗಿದೆ.

ಚಂಪಕ್ ಎಣ್ಣೆ: ಚಂಪಕ್ ಎಣ್ಣೆಯನ್ನು ಭಾರತೀಯರು ಉತ್ತಮ ನಿದ್ರೆ ಪಡೆಯಲು ಬಳಸುತ್ತಾರೆ. ಬೆಚ್ಚಗಿನ ನೀರಿನಿಂದ ತಲೆ ತೊಳೆದ ನಂತರ, ಚಂಪಕ್ ಎಣ್ಣೆಯಿಂದ ತಲೆ ಮಸಾಜ್ ಮಾಡಲು ತಜ್ಞರು ಶಿಫಾರಸು ಮಾಡುತ್ತಾರೆ. ಸುಗಂಧವು ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ.

ಸುಗಂಧ ದ್ರವ್ಯ: ಈ ತೈಲವು ಮೆದುಳಿಗೆ ವಿಶ್ರಾಂತಿ, ಒತ್ತಡ ಹಾಗೂ ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸಣ್ಣ ಬಟ್ಟಲಿನಲ್ಲಿ ನಾಲ್ಕೈದು ಹನಿ ಎಣ್ಣೆಯನ್ನು ಹಾಕಿ ಮಲಗುವ ಕೋಣೆಯಲ್ಲಿ ಇಡಿ. ಇದು ಮನಸ್ಸು ಶಾಂತಗೊಳಿಸುತ್ತದೆ ಮತ್ತು ನಿದ್ರಾಹೀನತೆಗೆ ಚಿಕಿತ್ಸೆ ನೀಡುತ್ತದೆ ಎಂದು ಹೇಳಲಾಗುತ್ತದೆ.

ಬೆಂಜೊಯಿನ್ ಎಸೆನ್ಷಿಯಲ್: ಬೆಂಜೊಯಿನ್‌ನಿಂದ ತಯಾರಿಸಿದ ಈ ತೈಲವು ಉಸಿರಾಟವನ್ನು ಸರಾಗಗೊಳಿಸಿ, ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಮಲಗುವ ಮುನ್ನ ಇದರ ವಾಸನೆಯನ್ನು ಪಡೆಯಿರಿ. ಇದು ಒತ್ತಡ ಮತ್ತು ಶ್ವಾಸನಾಳದ ಉರಿಯೂತದಿಂದ ಉಂಟಾಗುವ ನಿದ್ರಾಹೀನತೆಗೆ ಚಿಕಿತ್ಸೆ ನೀಡುತ್ತದೆ ಎಂದು ಹೇಳಲಾಗುತ್ತದೆ.

ಶ್ರೀಗಂಧದ ಎಣ್ಣೆಯು ಅಧಿಕ ರಕ್ತದೊತ್ತಡ ಹೊಂದಿರುವ ನಿದ್ರಾಹೀನತೆಗೆ ಔಷಧಿಯಾಗಿ ಕೆಲಸ ಮಾಡುತ್ತದೆ ಎಂದು ನಂಬಲಾಗಿದೆ. ರಾತ್ರಿಯಲ್ಲಿ ಪದೇ ಪದೇ ಏಳುವವರಿಗೆ ಒಂದು ಬಟ್ಟಲಿನಲ್ಲಿ ಮೂರರಿಂದ ನಾಲ್ಕು ಹನಿ ವಲೇರಿಯನ್ ಬೇರಿನ ಎಣ್ಣೆಯನ್ನು ಸೇರಿಸಿ ಮಲಗುವ ಕೋಣೆಯಲ್ಲಿ ಇರಿಸಿದರೆ ಸಹಾಯವಾಗುತ್ತದೆ.

ಇದನ್ನು ಓದಿ:ಲಾಂಗ್ವಿಟಿ ಡಯಟ್ ಮನುಷ್ಯನ ಜೀವಿತಾವಧಿ ಹೆಚ್ಚಿಸಲು ಸಹಕಾರಿ: ಡಯಟ್ ಕ್ರಿಯೇಟರ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.