ETV Bharat / sukhibhava

ಫಿಟ್ನೆಸ್​ಗಾಗಿ ನಿಮ್ಮ ನಿರ್ಣಯ ಸಾಧಿಸಲು ವರ್ಷಪೂರ್ತಿ ಪ್ರೇರೇಪಿಸುವ ಸಲಹೆಗಳು - ಮಾನಸಿಕ ಆರೋಗ್ಯಕ್ಕೆ ಸಲಹೆಗಳು

ಕಡಿಮೆ ಅವಧಿಯಲ್ಲಿ ಫಲಿತಾಂಶ ನೀಡುವ ಗುರಿಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಮ್ಮ ಮಿದುಳುಗಳು ಸ್ವಲ್ಪ ಮಟ್ಟಿಗೆ ಪೂರಕವಾಗಿ ಕೆಲಸ ಮಾಡುತ್ತವೆ. 'ಒಂದು ತಿಂಗಳಲ್ಲಿ' ಅಥವಾ 'ಎರಡು ತಿಂಗಳಲ್ಲಿ' ಎಂಬ ಗುರಿಗಳನ್ನು ಹೊಂದುವ ಮೂಲಕ ಯಾವಾಗಲೂ ಚೈತನ್ಯಶೀಲರಾಗಿರಬಹುದು. ಈ ಅಲ್ಪಾವಧಿಯ ಗುರಿಗಳೇ ದೀರ್ಘಾವಧಿಯ ಸಾಧನೆಗೂ ಪೂರಕವಾಗಿರುತ್ತವೆ..

Three tips to help you stay motivated to keep exercising all year long
ಫಿಟ್ನೆಸ್​ಗಾಗಿ ನಿಮ್ಮ ನಿರ್ಣಯ ಸಾಧಿಸಲು ವರ್ಷಪೂರ್ತಿ ಪ್ರೇರೇಪಿಸುವ ಸಲಹೆಗಳು
author img

By

Published : Feb 2, 2022, 7:23 PM IST

ಜೀವಿಸುವುದು ಸುಲಭ ಎಂದುಕೊಂಡರೆ ಸುಲಭ, ಕಠಿಣ ಎಂದುಕೊಂಡರೆ ಕಠಿಣ. 2022ರ ಹೊಸ ವರ್ಷ ಮುಗಿದು ಒಂದು ತಿಂಗಳಾಗಿದೆ. ಹೊಸ ವರ್ಷಕ್ಕೆ ನಿರ್ಣಯಗಳನ್ನು ತೆಗೆದುಕೊಳ್ಳುವವರ ಪೈಕಿ ಶೇಕಡಾ 80ರಷ್ಟು ಮಂದಿ ತಮ್ಮ ನಿರ್ಣಯಗಳಿಗೆ ಅನುಗುಣವಾಗಿ ನಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಅಧ್ಯಯನಗಳು ಹೇಳುತ್ತವೆ. ನಿಮ್ಮ ನಿರ್ಣಯಗಳು ದಿನದಿಂದ ದಿನಕ್ಕೆ ಕುಗ್ಗಲು ಕಾರಣಗಳಿರುತ್ತದೆ. ಒಂದು ವೇಳೆ ನೀವು ಫಿಟ್ನೆಸ್ ಕಾಪಾಡಿಕೊಳ್ಳುವ ವಿಚಾರದಲ್ಲಿ ನಿರ್ಣಯವನ್ನು ಹೊಂದಿದ್ದರೆ, ಕೆಲವೊಂದು ಬಾರಿ ನಿರಾಶೆಯಾಗುವ ಸಾಧ್ಯತೆ ಇರುತ್ತದೆ.

ಅದರಲ್ಲಿ ನೀವು ಆರಿಸಿಕೊಂಡಿರುವುದು ತಪ್ಪು ಗುರಿಯಾದ ಕಾರಣ ಕೆಲವೇ ದಿನಗಳಲ್ಲಿ ನಿಮ್ಮ ನಿರ್ಣಯ ಕುಗ್ಗುತ್ತದೆ. ನೀವು ಯಾವ ಗುರಿಯನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂಬುದು ನಿಮ್ಮ ಹೊಸ ವರ್ಷದ ನಿರ್ಣಯಗಳ ಮೇಲೆ ಪ್ರಭಾವ ಬೀರುತ್ತದೆ ಎಂಬುದು ಸುಳ್ಳಲ್ಲ. ಆದ್ದರಿಂದ ನಿಮ್ಮ ಗುರಿಯನ್ನು ಸಾಧಿಸಬೇಕಾದರೆ, ನೀವು ಅತ್ಯಂತ ಪ್ರಮುಖವಾಗಿ ಮೂರು ಸಲಹೆಗಳನ್ನು ಪಾಲಿಸಬೇಕಾಗುತ್ತದೆ.

ಸಣ್ಣ ಪ್ರಯತ್ನಗಳನ್ನು ಆರಿಸಿಕೊಳ್ಳಿ: ಆರೋಗ್ಯಕರ ಜೀವನಕ್ಕೆ ಸಂತೋಷದಿಂದಿರಿರುವುದು, ಕೆಲಸ ಮಾಡುವುದು ಅತ್ಯಂತ ಮುಖ್ಯ ಎಂದು ಹೇಳಲಾಗುತ್ತಿದೆ. ಆದ್ದರಿಂದ ನಮ್ಮ ನಮ್ಮ ಗುರಿಗಳನ್ನು ತಲುಪಲು ನಾವು ಸಾಕಷ್ಟು ಕಷ್ಟ ಪಟ್ಟು ಕೆಲಸ ಮಾಡುತ್ತೇವೆ. ಆದರೆ, ದುರದೃಷ್ಟವಶಾತ್, ನಮ್ಮ ಮೆದುಳು ನಾವು ಶ್ರಮ ಹಾಕುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿರುತ್ತದೆ.

ಆದ್ದರಿಂದ ಜನವರಿಯಲ್ಲಿ ತೆಗೆದುಕೊಂಡ ನಿರ್ಣಯಗಳು ಮೆದುಳು ಅಥವಾ ಮನಸ್ಸಿನ ಪ್ರಭಾವಕ್ಕೆ ಒಳಗಾಗಿ ಫೆಬ್ರವರಿಯಲ್ಲಿ ಕ್ಷೀಣಿಸುತ್ತವೆ. ಯಾವುದೇ ಬದಲಾವಣೆಯನ್ನು ಮನಸ್ಸು ಗ್ರಹಿಸುವ ಕಾರಣದಿಂದಾಗಿ ನಾವು ಇಡುವ ಪ್ರತಿ ಹೆಜ್ಜೆಯಲ್ಲೂ ಅದರ ಪ್ರಭಾವ ಇದ್ದೇ ಇರುತ್ತದೆ. ಆದ್ದರಿಂದ ಕಡಿಮೆ ಪ್ರಯತ್ನವಿರುವ ನಿರ್ಣಯಗಳನ್ನು ನೀವು ಮೊದಲಿಗೆ ಆಯ್ಕೆ ಮಾಡಿಕೊಳ್ಳಬೇಕು.

ಉದಾಹರಣೆಗೆ.. ನೀವು 15 ನಿಮಿಷಗಳ ಓಡಬೇಕೆಂದು ಅಂದುಕೊಂಡು, ಓಡಲು ಸಾಧ್ಯವಾಗದಿದ್ದರೆ ಕೇವಲ 5 ನಿಮಿಷ ಓಡಿ.. ಅಥವಾ ಓಡುವುದೇ ಬೇಡ ಎಂದುಕೊಂಡರೆ,ಬೇರೊಂದು ಕಸರತ್ತನ್ನು ನೀವು ಮಾಡಬಹುದು. ಒಟ್ಟಿನಲ್ಲಿ ನಿಮ್ಮ ಆರೋಗ್ಯವನ್ನು ಉತ್ತಮವಾಗಿಡಲು ಸಹಕಾರಿಯಾಗುವ ಯಾವುದಾದರೊಂದು ಚಟುವಟಿಕೆಯಲ್ಲಿ ನೀವು ನಿರತರಾಗಿರಬೇಕಷ್ಟೇ.

ಹೊಸ ಸಂಶೋಧನೆಯೊಂದರ ಪ್ರಕಾರ ಕಡಿಮೆ ಪ್ರಯತ್ನಗಳಿರುವ ಚಟುವಟಿಕೆಗಳು ಏನಾದರೊಂದನ್ನು ಸಾಧಿಸಲು ಸಹಕಾರಿಯಾಗುತ್ತವೆ. ಇದೇ ತತ್ವವನ್ನು ಮನಸ್ಸಿಗೆ ಅನ್ವಯ ಮಾಡಲಾಗುತ್ತದೆ. ಕಡಿಮೆ ಪ್ರಯತ್ನಗಳಿರುವ ನಿರ್ಣಯ ಕೊನೆಯವರೆಗೆ ಉಳಿದು ಏನಾದರೊಂದನ್ನು ಸಾಧಿಸಲು ಸಾಧ್ಯವಾಗುತ್ತದೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಹೊಸ ನಿರ್ಣಯದ ವಿಚಾರಕ್ಕೆ ಬಂದಾಗ ಹೊಸ ವೇಳಾಪಟ್ಟಿಯನ್ನು ನಾವು ಅಳವಡಿಸಿಕೊಳ್ಳಬೇಕಾಗುತ್ತದೆ. ಇದರ ಜೊತೆಗೆ ಎಂದಿಗಿಂತ ಒಂದು ಗಂಟೆ ಮುಂಚಿತವಾಗಿ ಹಾಸಿಗೆಯಿಂದ ಏಳಬೇಕಾಗುತ್ತದೆ. ಇದಕ್ಕೆ ಮಾನಸಿಕವಾಗಿ ಸಜ್ಜಾಗುವುದು ಅತ್ಯಗತ್ಯ. ಅನಗತ್ಯ ನಿರ್ಧಾರವನ್ನು ತೆಗೆದುಕೊಳ್ಳುವುದನ್ನು ಕಡಿಮೆ ಮಾಡಬೇಕಾಗುತ್ತದೆ. ಸಣ್ಣ ಪ್ರಯತ್ನಗಳು ಇದ್ದಾಗ ಅವುಗಳನ್ನು ಸಾಧಿಸುವವರ ಪ್ರಮಾಣವೂ ಹೆಚ್ಚಾಗಿರುತ್ತದೆ ಎಂಬುದನ್ನು ಮರೆಯಬಾರದು.

ಅಲ್ಪಕಾಲದ ಗುರಿಗಳು ಇರಲಿ : ಫಿಟ್ನೆಸ್​ ವಿಚಾರದಲ್ಲಿ ಸಾಮಾನ್ಯವಾಗಿ ಜನರು ತಾವು ಜನವರಿಯಲ್ಲಿ ತೆಗೆದುಕೊಂಡ ನಿರ್ಣಯ 'ಈ ವರ್ಷದೊಳಗೆ' ಅಥವಾ 'ಮುಂದಿನ ವರ್ಷದೊಳಗೆ' ಅಥವಾ 'ಎರಡು ವರ್ಷದೊಳಗೆ' ಅಂತಾ ನಿರ್ಣಯ ತೆಗೆದುಕೊಳ್ಳುತ್ತಾರೆ. ಆ ರೀತಿಯಾಗಿ ನಿರ್ಣಯ ತೆಗೆದುಕೊಳ್ಳುವುದು ತಪ್ಪು. ಅಷ್ಟು 'ದೂರ ಕ್ರಮಿಸುವ' ವೇಳೆಗೆ ಒಂದು ರೀತಿಯ ತಾತ್ಸಾರ ಅಥವಾ ಬೇಸರ ಕಾಡುವ ಸಾಧ್ಯತೆ ಇರುತ್ತದೆ.

ಅದರ ಜೊತೆಗೆ ದೂರದ ಗುರಿಯಾಗಿರುವ ಕಾರಣ ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎನ್ನಿಸುವುದಿಲ್ಲ. ಆದ್ದರಿಂದ ಗುರಿಗಳು ಅಲ್ಪಕಾಲದ್ದಾಗಿದ್ದರೆ, ಜವಾಬ್ದಾರಿ ಹೆಚ್ಚಾಗುತ್ತದೆ. ಆದ್ದರಿಂದ ಅಲ್ಪಕಾಲದ ಗುರಿಗಳನ್ನು ಆಯ್ದುಕೊಂಡರೆ ಒಳ್ಳೆಯದು.

ಕಡಿಮೆ ಅವಧಿಯಲ್ಲಿ ಫಲಿತಾಂಶ ನೀಡುವ ಗುರಿಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ನಮ್ಮ ಮಿದುಳು ಸ್ವಲ್ಪ ಮಟ್ಟಿಗೆ ಪೂರಕವಾಗಿ ಕೆಲಸ ಮಾಡುತ್ತವೆ. 'ಒಂದು ತಿಂಗಳಲ್ಲಿ' ಅಥವಾ 'ಎರಡು ತಿಂಗಳಲ್ಲಿ' ಎಂಬ ಗುರಿಗಳನ್ನು ಹೊಂದುವ ಮೂಲಕ ಯಾವಾಗಲೂ ಚೈತನ್ಯಶೀಲರಾಗಿರಬಹುದು. ಈ ಅಲ್ಪಾವಧಿಯ ಗುರಿಗಳೇ ದೀರ್ಘಾವಧಿಯ ಸಾಧನೆಗೂ ಪೂರಕವಾಗಿರುತ್ತವೆ.

ಇರುವುದರ ಮೇಲೆ ಗಮನ ಕೇಂದ್ರೀಕರಿಸಿ : ಯಾವುದಾದರೂ ಒಂದು ಗುರಿಯನ್ನು ಹೊಂದಿದರೆ, ಅದು ನಿಮ್ಮ ಬಳಿ ಇರುವ ಸವಲತ್ತುಗಳನ್ನು ಆಧರಿಸಿ ಇದ್ದರೆ ಉತ್ತಮವಾಗಿರುತ್ತದೆ. ಆದ್ದರಿಂದ ಯಾವುದಾದರೂ ಒಂದು ಗುರಿಯನ್ನು ಮಾತ್ರ ಹೊಂದಬೇಕಾಗುತ್ತದೆ. ಹಾಗೆಯೇ ನಿಮ್ಮ ದೇಹವನ್ನು ಉತ್ತಮವಾಗಿಟ್ಟುಕೊಳ್ಳುವ ಗುರಿಯನ್ನು ಮೆದುಳು ಅತ್ಯಂತ ಕಡಿಮೆ ಪ್ರಾಮುಖ್ಯತೆ ಎಂದು ಪರಿಗಣಿಸುತ್ತದೆ. ಅದರ ಜೊತೆಗೆ 'ಗುರಿಗಳನ್ನು ಹೊಂದುವುದು' ಅಥವಾ 'ಗುರಿಯನ್ನು ಹೊಂದುವುದು' ಎಂಬ ವಿಚಾರಗಳನ್ನು ಅವಲೋಕಿಸುವುದಾದರೆ, ಒಂದೇ ಗುರಿ ಸಾಕಷ್ಟು ಪ್ರಭಾವಶಾಲಿಯಾಗಿರುತ್ತದೆ. ಆದ್ದರಿಂದ ಇರುವ ಸೌಲಭ್ಯಗಳ ಆಧಾರದ ಮೇಲೆ ಒಂದೇ ಗುರಿಯನ್ನು ಹೊಂದುವ ಮೂಲಕ ನಾವು ಗುರಿಗಳನ್ನು ಸಾಧಿಸಬಹುದಾಗಿದೆ.

ಇದನ್ನೂ ಓದಿ: ಈ ವಯಸ್ಸಿನವರು ನಿತ್ಯ ದೈಹಿಕ ಚಟುವಟಿಕೆ ಮಾಡುವುದರಿಂದ ಮೆದುಳಿಗೂ ಶಕ್ತಿ - ಅಧ್ಯಯನ

(ಐಯಾನ್ ಟೇಲರ್​​, ಲೌಬರೋ ವಿಶ್ವವಿದ್ಯಾಲಯ, ಇಂಗ್ಲೆಂಡ್)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.