ETV Bharat / sukhibhava

ಪ್ರಕೃತಿ ಮಾತೆ v/s ದುರ್ಗಾ ದೇವಿ: ಬಂಗಾಳದಲ್ಲಿ ನಡೆಯುತ್ತಿದೆ ಮೊಬೈಲ್​ ದುರ್ಗಾ ಪೂಜೆ

author img

By

Published : Sep 25, 2022, 5:40 PM IST

ಪಶ್ಚಿಮ ಬಂಗಾಳದ ಮಲ್ದಾ ಜಿಲ್ಲೆಯ ದರ್ಬರಿತೋಳ ಗ್ರಾಮದಲ್ಲಿ ಐದನೇ ಬಾರಿಗೆ ದುರ್ಗಾ ದೇವಿ ದೇವಸ್ಥಾನ ನಿರ್ಮಿಸಲಾಗಿದೆ. ಆದ್ರೆ ಈ ಬಾರಿಯೂ ಗಂಗಾ ನದಿ ಮತ್ತೆ ದುರ್ಗಾ ದೇವಸ್ಥಾನವನ್ನು ನುಂಗಿ ಹಾಕುತ್ತದೆಯೇ ಎಂಬುದು ಗ್ರಾಮಸ್ಥರಿಗೆ ಖಚಿತವಾಗಿಲ್ಲ.

ದುರ್ಗಾ ದೇವಿ ದೇವಸ್ಥಾನ
ದುರ್ಗಾ ದೇವಿ ದೇವಸ್ಥಾನ

ಮಾಲ್ಡಾ (ಪಶ್ಚಿಮ ಬಂಗಾಳ): ಪ್ರಕೃತಿ ಮಾತೆಯ ಕೋಪದಿಂದ ಮನುಷ್ಯ ತಪ್ಪಿಸಿಕೊಳ್ಳುವುದು ಅಸಾಧ್ಯವಾಗಿದೆ. ಆದರೆ ಇತ್ತೀಚೆಗೆ ದೇವರುಗಳು ಸಹ ಪ್ರಕೃತಿ ವಿಕೋಪಕ್ಕೆ ಬಲಿಯಾಗುತ್ತಿವೆ. ಇದಕ್ಕೆ ಸ್ಪಷ್ಟ ಉದಾಹರಣೆ ಎಂಬಂತೆ ಪಶ್ಚಿಮ ಬಂಗಾಳದ ದರ್ಬರಿತೋಳ ಗ್ರಾಮದಲ್ಲಿ ಶಕ್ತಿಶಾಲಿ ದೇವತೆಯಾದ ದುರ್ಗಾ ಮಾತೆಯೂ ಸಹ ಪ್ರಕೃತಿ ಕೋಪಕ್ಕೆ ನಲುಗಿ ಹೋಗಿದ್ದಾಳೆ.

ಗಂಗಾ ನದಿ ದಡದಲ್ಲಿ ದೇವಸ್ಥಾನ
ಗಂಗಾ ನದಿ ದಡದಲ್ಲಿ ದೇವಸ್ಥಾನ

ಗಂಗಾ ನದಿಯ ಪ್ರವಾಹದಿಂದಾಗಿ ದುರ್ಗಾ ಮಾತೆಯ ದೇವಸ್ಥಾನ ನಾಲ್ಕು ಬಾರಿ ನಶಿಸಿ ಹೋಗಿದೆ. ಈ ವರ್ಷ ಐದನೇ ಬಾರಿಗೆ ಮಾಲ್ದಾ ಜಿಲ್ಲೆಯ ದರ್ಬರಿತೋಳ ಗ್ರಾಮದ ಗಂಗಾನದಿಯ ದಡದಲ್ಲಿ ನೂತನ ದೇವಾಲಯ ನಿರ್ಮಾಣವಾಗಿದೆ. ಈಗಾಗಲೇ ದೇವಾಲಯದ ಆವರಣಕ್ಕೆ ನದಿ ನೀರು ಬರಲಾರಂಭಿಸಿದ್ದರಿಂದ, ಈ ಬಾರಿಯೂ ಗಂಗಾನದಿ ಮತ್ತೊಮ್ಮೆ ದೇವಸ್ಥಾನವನ್ನು ನುಂಗಲಿದೆಯಾ ಎಂಬ ಆತಂಕ ಮನೆಮಾಡಿದೆ.

ದುರ್ಗಾ ದೇವಿ ದೇವಸ್ಥಾನ
ದುರ್ಗಾ ದೇವಿ ದೇವಸ್ಥಾನ

ದಲ್ಲುತೋಳದ ದರ್ಬರಿತೋಳ ಗ್ರಾಮದಲ್ಲಿ ಮೊದಲು ದುರ್ಗಾ ಪೂಜೆ ಆರಂಭವಾಯಿತು. ದೇವಾಲಯವು ಗಂಗೆಯಿಂದ ಕೊಚ್ಚಿಹೋದ ನಂತರ, ಪೂಜೆಯನ್ನು ಬೆಚುಟೋಲಾಕ್ಕೆ ಸ್ಥಳಾಂತರಿಸಲಾಯಿತು. ಕೆಲವು ವರ್ಷಗಳ ನಂತರ, ಆ ದೇವಾಲಯವನ್ನೂ ಮತ್ತೆ ನದಿ ನುಂಗಿತು. ಹಾಗಾಗಿ ಮತ್ತೆ ಹದ್ದತೋಳ ಗ್ರಾಮದಲ್ಲಿ ಹೊಸ ದೇವಾಲಯವನ್ನು ನಿರ್ಮಿಸಲಾಯಿತು. ನಂತರ ಜೋತಪಟ್ಟದ ರಸ್ತೆಯ ಪಕ್ಕದಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸುವಂತೆ ಒತ್ತಾಯಿಸಿದರು. ಆದ್ದರಿಂದ ಈ ಪೂಜೆಯನ್ನು ಈಗ ಜಿಲ್ಲೆಯಲ್ಲಿ "ಮೊಬೈಲ್​ ದುರ್ಗಾ ಪೂಜೆ" ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಕಟಕ್.. ದೇವಿ ವಿಗ್ರಹದ ಅಲಂಕಾರಕ್ಕೆ ಬಳಸಿದ್ದು ಬರೋಬ್ಬರಿ ಇಷ್ಟು ಕೆಜಿ ಚಿನ್ನ..

ಜೋಟ್ಪಟ್ಟಾ ಗ್ರಾಮವು ಮಾಲ್ಡಾ ಜಿಲ್ಲೆಯ ಗಂಗಾ ನದಿ ದಡದ ಮಾಣಿಕ್ಚಾಕ್ ಬ್ಲಾಕ್​ನಲ್ಲಿದೆ. 1905 ರಲ್ಲಿ, ಜಮೀನ್ದಾರ ಭೂಪಾಲಚಂದ್ರ ರಾಯ್ ಚೌಧರಿ ಈ ಪೂಜೆಯನ್ನು ಪ್ರಾರಂಭಿಸಿದರು. ಸುಮಾರು 118 ವರ್ಷಗಳ ಹಿಂದೆ ಇಲ್ಲಿ ದುರ್ಗಾಪೂಜೆ ನಡೆಯುತ್ತಿರಲಿಲ್ಲ. 1997ರಲ್ಲಿ ಉಂಟಾದ ಪ್ರವಾಹದಲ್ಲಿ ಮನುಷ್ಯರು ಅಲ್ಲದೇ, ತಾಯಿ ದುರ್ಗಾ ಕೂಡ ನದಿಯ ಕೋಪಕ್ಕೆ ಸಿಲುಕಿದಳು. ರಸ್ತೆಬದಿಯಲ್ಲಿ ಹೊಸ ದುರ್ಗಾ ದೇವಸ್ಥಾನವನ್ನು ನಿರ್ಮಿಸುತ್ತಿದ್ದೇವೆ. ಆದರೆ ಅದು ಎಷ್ಟು ದಿನ ಉಳಿಯುತ್ತದೆ ಎಂಬುದು ಖಚಿತವಾಗಿಲ್ಲ ಎಂದು ನೃಪೇಂದ್ರಕೃಷ್ಣ ಮಂಡಲ್ 'ಈಟಿವಿ ಭಾರತ'ಕ್ಕೆ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.