ನವದೆಹಲಿ: ದೇಶದಲ್ಲಿ ಎಚ್3ಎನ್2 ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಮಾರ್ಚ್ 9ರವರೆಗೆ 3,038 ಇನ್ಫ್ಲುಯೆಂಜಾ ವೈರಸ್ ಎಚ್3ಎನ್2 ಸೇರಿದಂತೆ ಅನೇಕ ಉಪತಳಿಗಳು ಪತ್ತೆಯಾಗಿರುವುದನ್ನು ಪ್ರಯೋಗಾಲಯಗಳು ದೃಢಪಡಿಸಿವೆ ಎಂದು ಐಡಿಎಸ್ಪಿ-ಐಎಚ್ಐಪಿ ಮಾಹಿತಿ ನೀಡಿದೆ. ಇದರಲ್ಲಿ ಜನವರಿಯಲ್ಲಿ 1,245 ಮತ್ತು ಫೆಬ್ರವರಿಯಲ್ಲಿ 1307 ಮತ್ತು ಮಾರ್ಚ್ 9ರವರೆಗೆ 486 ಪ್ರಕರಣಗಳು ಸೇರಿವೆ.
ಹೊರ ರೋಗಿಗಳ ವಿಭಾಗ ಮತ್ತು ಒಪಿಡಿಗಳಲ್ಲಿ ದಾಖಲಾಗುತ್ತಿರುವ ಈ ಪ್ರಕರಣಗಳ ಸಂಬಂಧ ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ, ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಣ್ಗಾವಲಿರಿಸಿದೆ. ಎಚ್3ಎನ್2 ಸೋಂಕು ಹೊರತುಪಡಿಸಿ ಮತ್ತೆರಡು ಸೋಂಕುಗಳಾದ ಇನ್ಫ್ಲುಯೆಂಜಾ A H1N1, ಇನ್ಫ್ಲುಯೆಂಜಾ B ಕೂಡ ಹೆಚ್ಚು ಪ್ರಸರಣಗೊಳ್ಳುತ್ತಿದೆ.
ಈ ನಡುವೆ ಮತ್ತೊಂದು ಆತಂಕ ತಲೆದೋರಿದೆ. ಕೋವಿಡ್ ಪ್ರಕರಣಗಳಲ್ಲೂ ಕೂಡ ಏರಿಕೆ ಕಂಡು ಬಂದಿದೆ. ಕಳೆದ ನಾಲ್ಕು ತಿಂಗಳಲ್ಲೇ ಅಧಿಕ ಕೋವಿಡ್ ಪ್ರಕರಣ ಭಾನುವಾರ ದಾಖಲಾಗಿದೆ. ಭಾನುವಾರ ಒಂದೇ ದಿನ 524 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಹ್ಯೂಮನ್ ಇನ್‌ಫ್ಲುಯೆಜಾ ವೈರಸ್ ಮತ್ತು SARS-COV-2 ವೈರಸ್‌ನ ಪತ್ತೆಗಾಗಿ ಈಗಾಗಲೇ ತೀವ್ರ ಉಸಿರಾಟದ ಸಮಸ್ಯೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರ ಮೇಲೆ 28 ಸೈಟ್ಗಳ ಮೂಲಕ ಕಣ್ಗಾವಲು ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಣ್ಗಾವಲು ನೆಟ್ವರ್ಕ್ನಲ್ಲಿ 27 ಡಿಎಚ್ಆರ್-ಐಸಿಎಂಆರ್ನ ವೈರಸ್ ಸಂಶೋಧನೆ ಮತ್ತು ಪತ್ತೆ ಪ್ರಯೋಗಾಲ ಮತ್ತು ದೇಶದ ರಾಷ್ಟ್ರೀಯ ಇನ್ಫ್ಲಯೆಂಜ ಕೇಂದ್ರ (ಡಬ್ಲ್ಯೂಎಚ್ಒ-ಎನ್ಐಸಿ) ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಇರಿಸಲಾಗಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದ ಭಾಗವಾಗಿದೆ. ಪ್ರಸಕ್ತ ವರ್ಷಾರಂಭದ 9 ವಾರದ ಅವಧಿಯಲ್ಲಿ ಈ ಕಣ್ಗಾವಲು ನೆಟ್ವರ್ಕ್ಗಳು ಹ್ಯೂಮನ್ ಇನ್ಫ್ಲುಯೆಂಜ ಸೋಂಕು ಮತ್ತು ಸಾರ್ಸ್-ಕೋವ್-3 ಸೋಂಕು ಅನ್ನು ಅನಾರೋಗ್ಯ ಮತ್ತು ಉಸಿರಾಟದ ಸಮಸ್ಯೆ ಪ್ರಕರಣದಲ್ಲಿ ಪತ್ತೆ ಮಾಡಿದೆ.
2023 ಜನವರಿ ತಿಂಗಳದಲ್ಲಿ 397,814 ಪ್ರಕರಣಗಳಲ್ಲಿ ಈ ಉಸಿರಾಟದ ಸಮಸ್ಯೆ ಮತ್ತು ಅನಾರೋಗ್ಯ ವರದಿಯಾಗಿದೆ ಎಂದು ಐಡಿಎಸ್ಪಿ-ಐಎಚ್ಐಪಿ ವರದಿ ಮಾಡಿದೆ. ಜನವರಿಯಲ್ಲಿ 3,97,814 ಪ್ರಕರಣಗಳು, ಫೆಬ್ರವರಿಯಲ್ಲಿ 4,35,523 ಪ್ರಕರಣಗಳು ದಾಖಲಾಗಿದೆ, ಮಾರ್ಚ್ನಲ್ಲಿ 1,33,412 ಪ್ರಕರಣಗಳು ದಾಖಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವಾರಂತ್ಯ ದತ್ತಾಂಶದ ಪ್ರಕಾರ, ಕೋವಿಡ್ 19ಗೆ ಮೀರಿ ನಿಧಾನವಾಗಿ ಎಚ್3ಎನ್2 ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ಕಳೆದ ವರ್ಷದ ಎಚ್3ಎನ್2 ಸೋಂಕಿಗೆ ಹೋಲಿಕೆ ಮಾಡಿದರೆ, ಈ ಬಾರಿಯ ಎಚ್33ನ್2 ಜ್ವರ ಕೊಂಚ ವಿಭಿನ್ನ. ಈ ಸೀಸನಲ್ ಇನ್ಫ್ಲುಯಂಜಗಳಿಗೆ ಪೂರ್ವ ಏಷ್ಯಾ ಮತ್ತು ಆಗ್ನೇಯ ಏಷ್ಯಾದಿಂದ ಬಂದಿದ್ದು, ಜಗತ್ತಿನೆಲ್ಲೆಡೆ ಹರಡುತ್ತಿದೆ. ಈ ವೈರಸ್ ಮೂಲ ಪತ್ತೆ ಹಚ್ಚುವ ಮೂಲಕ ಮುಂದಿನ ವರ್ಷ ಯಾವ ವೈರಸ್ ಹೆಚ್ಚು ರೋಗ ಉಂಟು ಮಾಡಲಿದೆ ಎಂಬುದನ್ನು ತಿಳಿಯಲಿ ಜಾಗತಿಕ ಆರೋಗ್ಯ ಅಧಿಕಾರಿಗಳಿಗೆ ಸಹಾಯವಾಗಲಿದೆ.
ಎಚ್3ಎನ್2ಗೆ ಔಷಧವೇನು?: ಎಚ್3 ಎಚ್2 ಸೋಂಕಿಗೆ ವಿಶ್ವ ಆರೋಗ್ಯ ಸಂಸ್ಥೆ ಒಸೆಲ್ಟಾಮಿವಿರ್ ಔಷಧವನ್ನು ಶಿಫಾರಸು ಮಾಡಿದೆ. ಈ ಔಷಧ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳಲ್ಲಿ ಉಚಿತವಾಗಿ ಲಭ್ಯವಾಗಲಿದೆ. ಫೆಬ್ರವರಿ 2017ರಲ್ಲಿ ಡ್ರಗ್ ಮತ್ತು ಕಾಸ್ಮೆಟಿಕ್ ಆಕ್ಟ್ನ ಶೆಡ್ಯೂಲ್ H1 ಅಡಿಯಲ್ಲಿ ಒಸೆಲ್ಟಾಮಿವಿರ್ ಔಷಧ ಲಭ್ಯ ಮತ್ತು ಮಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಏರಿಕೆ ಕಂಡ ಎಚ್3ಎನ್2 ಸೋಂಕು: ವೈದ್ಯರು ನೀಡುವ ಸಲಹೆಗಳೇನು?