ETV Bharat / sukhibhava

ಮಕ್ಕಳ ಅತ್ಯುತ್ತಮ ರೋಗ ನಿರೋಧಕ ವ್ಯವಸ್ಥೆಗೆ ಪೋಷಕರ ಈ ಪ್ರಯತ್ನ ಅವಶ್ಯಕ

ಮಕ್ಕಳು ಪದೇ ಪದೇ ಸೋಂಕಿಗೆ ತುತ್ತಾಗಿ ದುರ್ಬಲ ರೋಗ ನಿರೋಧಕ ವ್ಯವಸ್ಥೆ ಹೊಂದುತ್ತಿದ್ದಾರೆ. ಈ ಬಗ್ಗೆ ಪೋಷಕರು ಕಾಳಜಿವಹಿಸಬೇಕಿದೆ.

This effort of parents is necessary for the immune system of children to be healthy

author img

By

Published : Apr 17, 2023, 3:23 PM IST

ಇತ್ತೀಚಿನ ದಿನಗಳಲ್ಲಿ ಎಲ್ಲ ವಯೋಮಾನದವರು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುವುದನ್ನು ಕಾಣಬಹುದು. ಆದರೆ ಮಕ್ಕಳ ಅನಾರೋಗ್ಯ ಚಿಂತೆ ಮೂಡಿಸುತ್ತದೆ. ಇದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ಕೋವಿಡ್​ ಹೊರತಾಗಿ ಕಳೆದ ಕೆಲವು ವರ್ಷಗಳಿಂದ ಜನರ ಜೀವನ ಶೈಲಿಯಿಂದಾಗಿಯೂ ಕೂಡ ಮಕ್ಕಳ ರೋಗ ನಿರೋಧಕ ಶಕ್ತಿಯಲ್ಲಿ ಇಳಿಕೆ ಕಾಣಬಹುದು. ಮಕ್ಕಳು ಪದೇ ಪದೇ ಸೋಂಕಿಗೆ ತುತ್ತಾಗಲು ಕಾರಣ ಕೂಡ ಇದೇ ದುರ್ಬಲ ರೋಗ ನಿರೋಧಕ ವ್ಯವಸ್ಥೆ.

ಇಂದೋರ್​ನ ಮಕ್ಕಳ ತಜ್ಞೆ ಡಾ. ಸೋನಾಲಿ ನವಲೆ ಪುರಂಡರೆ ಹೇಳುವ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ಮಕ್ಕಳ ಆಹಾರ ಶೈಲಿ ಮತ್ತು ದಿನಚರಿಗಳು ಆರೋಗ್ಯಕರವಾಗಿಲ್ಲ. ಇತ್ತೀಚಿನ ದಿನಗಳಲ್ಲಿ, ಹೊರಗಿನ ಆಹಾರವನ್ನು ಸೇವಿಸಲು ಇಷ್ಟಪಡುತ್ತಾರೆ. ಇದು ತುಂಬಾ ಎಣ್ಣೆ, ಖಾರದ ಜೊತೆಗೆ ಸರಿಯಾಗಿ ಬೇಯಿಸದ ಆಹಾರಗಳಾಗಿರುತ್ತವೆ. ಇಂದಿನ ಕಾಲಮಾನದಲ್ಲಿ ಮಕ್ಕಳು ಯಾವ ರೀತಿಯ ಆಹಾರ ಸೇವನೆ ಮಾಡುತ್ತಾರೆ ಎಂಬ ಕುರಿತು ಪೋಷಕರು ಕೂಡ ಕಾಳಜಿವಹಿಸಬೇಕು.

ಇತ್ತೀಚಿನ ಮಕ್ಕಳು ಹೊರಾಂಗಣ ಮತ್ತು ಒಳಾಂಗಣ ಚಟುವಟಿಕೆಯಲ್ಲಿ ಭಾಗಿಯಾಗುವುದು ಕಡಿಮೆ. ಇದರಿಂದ ದೇಹಕ್ಕೆ ಅಗತ್ಯ, ಆರೋಗ್ಯಕ್ಕೆ ಬೇಕಾದ ದೈಹಿಕ ಚಟುವಟಿಕೆಗಳು ಸಿಗದೇ ಹೋಗಬಹುದು. ಕೋವಿಡ್​ನಿಂದಾಗಿ ಮಕ್ಕಳ ಮಲಗುವ-ಏಳುವ ಸಮಯ ಜೊತೆಗೆ ದಿನಚರಿ, ದೈಹಿಕ ಚಟುವಟಿಕೆ ಸೇರಿದಂತೆ ಹಲವರಲ್ಲಿ ಗಮನಾರ್ಹ ಬದಲಾವಣೆ ಕಾಣಬಹುದು.

ಬಹುತೇಕ ಮಕ್ಕಳು ತಮ್ಮ ಸಮಯವನ್ನು ಓದು, ಜ್ಞಾನ ಗಳಿಕೆ ಅಥವಾ ಆಟವಾಡುವ ಬದಲು ಮೊಬೈಲ್​, ಟಿವಿಯಲ್ಲಿ ಕಳೆಯುತ್ತಿದ್ದಾರೆ. ಇದು ಅವರ ತಿನ್ನುವ ಮತ್ತು ಮಲಗುವ ಅಭ್ಯಾಸದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇದರಿಂದಾಗಿ ಮಕ್ಕಳ ದೃಷ್ಟಿ, ತಲೆನೋವು, ಬೊಜ್ಜು, ಜೀರ್ಣ ಕ್ರಿಯೆ ಸಮಸ್ಯೆ, ಬೇಗ ಅನಾರೋಗ್ಯಕ್ಕೆ ತುತ್ತಾಗುವುದು, ಏಕಾಗ್ರತೆ ಭಂಗ ಮತ್ತು ಇನ್ನಿತರ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಈ ಎಲ್ಲ ಸಮಸ್ಯೆಯಿಂದಾಗಿ ಮಕ್ಕಳು ನಿರಂತರ ಔಷಧಿ ತೆಗೆದುಕೊಳ್ಳಬೇಕಾಗಬಹುದು. ಇದರಿಂದ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.

ಮಕ್ಕಳ ದೇಹ ಮತ್ತು ಮಾನಸಿಕ ಬೆಳವಣಿಗೆ ವೇಳೆ ಅನೇಕ ಸಮಸ್ಯೆಗೆ ಒಳಗಾಗುವುದನ್ನು ತಡೆ ಹಿಡಿಯಬೇಕಿದೆ. ಆರೋಗ್ಯಕ್ಕೆ ದೇಹಕ್ಕೆ ರೋಗ ನಿರೋಧಕ ಶಕ್ತಿ ಕೂಡ ಸಾಧ್ಯವಾಗುತ್ತದೆ. ಮಕ್ಕಳ ಅರೋಗ್ಯಮ ಜೀವನಶೈಲಿ ಹಿನ್ನೆಲೆಯಲ್ಲಿ ಪೋಷಕರು ಕೂಡ ಕಾಳಜಿವಹಿಸುವುದು ಅಗತ್ಯ. ಮಕ್ಕಳು ಆರೋಗ್ಯಕಕ್ಕೆ ಕೆಲವು ಪ್ರಮುಖ ನಿಯಮಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.

ಆಹಾರ ಪದ್ಧತಿ: ಮಕ್ಕಳಲ್ಲಿ ಆಹಾರ ಪದ್ಧತಿಯ ಶಿಸ್ತು ಕಲಿಸುವುದು ಅತ್ಯವಶ್ಯಕ. ಅವರಿಗೆ ಮನೆ ಊಟ, ಪೋಷಕಾಂಶ ಮತ್ತು ಜೀರ್ಣವಾಗುವ ಆಹಾರಗಳಾದ ತರಕಾರಿ ಮತ್ತು ಹಣ್ಣಿನ ಮಹತ್ವವನ್ನು ತಿಳಿಸಬೇಕು. ವಾರದಲ್ಲಿ ಒಂದು ದಿನ ಬೇಕಾದಲ್ಲಿ ಅವರಿಗಿಷ್ಟವಾದ ಸ್ನಾಕ್ಸ್​​ ಮತ್ತು ಹಣ್ಣು ನೀಡಬಹುದು. ಆದರೆ, ಪ್ರತಿನಿತ್ಯ ಮೂರು ಹೊತ್ತಿನ ಊಟದಲ್ಲಿ ಸಮೃದ್ಧ ಪೋಷಕಾಂಶಭರಿತ ಆಹಾರ ಇರುವುದು ಅವಶ್ಯ.

ಇದರ ಹೊರತಾಗಿ ಕೆಲವು ಪ್ರಮುಖ ಅಂಶಗಳಿಗೆ ಗಮನ ನೀಡಬೇಕು. ಮಕ್ಕಳಿಗೆ ಚೆನ್ನಾಗಿ ನೀರು ಕುಡಿಯಲು ಹೇಳಬೇಕು. ಇದರಿಂದ ಅನೇಕ ಸಮಸ್ಯೆಗಳನ್ನು ತಡೆಗಟ್ಟಬಹುದು. ಇದು ದೇಹದ ಕಾರ್ಯವನ್ನು ಸುಗಮವಾಗುವಂತೆ ಮಾಡಿ ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಗೆ ಕಾರಣವಾಗುತ್ತದೆ.

ವ್ಯಾಯಾಮ: ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯ ಜೊತೆಗೆ ದೈಹಿಕ ಚಟುವಟಿಕೆ ಕೂಡ ಅವಶ್ಯಕ. ಹೊರಾಂಗಣ ಕ್ರೀಡೆಗಳಿಗಿಂತ ಉತ್ತಮ ದೈಹಿಕ ಚಟುವಟಿಕೆಗಳಿಲ್ಲ. ಆಟ ಮತ್ತು ಚಟುವಟಿಕೆಗಳು ಮಾನಸಿಕ ಮತ್ತು ದೈಹಿಕ ಆರೋಗ್ಯ ಬಲಗೊಳಿಸುತ್ತದೆ. ಇದರ ಹೊರತಾಗಿ ಯೋಗ ಮತ್ತಿತರ ಚಟುವಟಿಕೆಗಳು ಕೂಡ ಪ್ರಯೋಜನ ನೀಡುತ್ತದೆ.

ನಿದ್ರೆ: ಉತ್ತಮ ನಿದ್ದೆಯ ಚಕ್ರವನ್ನು ಅಳವಡಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಬಹುದು. ಇದು ಕೇವಲ ಮಕ್ಕಳಿಗೆ ಮಾತ್ರವಲ್ಲ, ದೊಡ್ಡವರಿಗೂ ಅನ್ವಯವಾಗುತ್ತದೆ. ಮಕ್ಕಳು ನಿದ್ರೆಯ ತೊಂದರೆ ಅನುಭವಿಸುತ್ತಿದ್ದರೆ ಅದಕ್ಕೆ ಕಾರಣ ಮೊಬೈಲ್​ ಫೋನ್​ ಆಗಿರುತ್ತದೆ. ಮಕ್ಕಳ ಉತ್ತಮ ನಿದ್ರೆ ರಾತ್ರಿ ಸಮಯ ಮೊಬೈಲ್​ನಿಂದ ದೂರವಿಡಿ.

ಶುಚಿತ್ವ: ಉತ್ತಮ ರೋಗ ನಿರೋಧಕ ಶಕ್ತಿಗೆ ದೈಹಿಕ ಶುಚಿತ್ವ ಮುಖ್ಯ. ಪ್ರತಿನಿತ್ಯ ಸ್ನಾನ, ಸುತ್ತಮುತ್ತ ಪ್ರದೇಶದ ಶುಚಿತ್ವ, ಬಟ್ಟೆ ಶುಚಿತ್ವ, ತಿನ್ನುವ, ಕುಡಿಯುವ ಮುನ್ನ ಹಾಗೇ ಹೊರಗಿನಿಂದ ಒಳಗೆ ಬಂದಾಗ ಕೈ ತೊಳೆಯುವುದು, ಶೌಚಾಲಯದ ಶುಚಿತ್ವ ಹೀಗೆ ಎಲ್ಲದರ ಬಗ್ಗೆ ಗಮನ ಹರಿಸುವುದು ಮುಖ್ಯವಾಗುತ್ತದೆ.

ಇದನ್ನೂ ಓದಿ: ನಿಮ್ಮ ಪುಟ್ಟ ಮಗುವಿನ ದೈನಂದಿನ ಕಾಳಜಿ-ಆರೈಕೆ ಹೀಗಿರಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.