ನಿದ್ರಾಹೀನತೆ ಅನೇಕರನ್ನು ಕಾಡುವ ಸಮಸ್ಯೆ. ಶೇ 50ರಷ್ಟು ವಯಸ್ಕರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ವಿಷಯದಲ್ಲಿ ಅನೇಕ ತಪ್ಪು ತಿಳಿವಳಿಕೆ ಕೂಡ ಇದೆ. ವಯಸ್ಕರಿಗೆ ಹೆಚ್ಚಿನ ನಿದ್ದೆಯ ಅಗತ್ಯವಿಲ್ಲ ಎಂದು ಅನೇಕ ಮಂದಿ ತಿಳಿದಿರುತ್ತಾರೆ. ಆದರೆ, ಇದು ತಪ್ಪು. ಪ್ರತಿಯೊಬ್ಬರಿಗೂ 7-9ಗಂಟೆಗಳ ಕಾಲ ನಿದ್ದೆ ಅವಶ್ಯಕ. ಅವರು ನಿದ್ದೆ ಸರಿಯಾಗಿ ಮಾಡಿಲ್ಲ ಎಂದರೆ, ಅವರಲ್ಲಿ ಅರಿವಿನ ಕ್ಷೀಣತೆ ಎದುರಾಗುವ ಸಾಧ್ಯತೆ ಇದೆ. ಈ ನಿದ್ದೆಗೆ ಸಮಸ್ಯೆ ನಿವಾರಣೆಯಲ್ಲಿ ಉತ್ತಮ ಆರೋಗ್ಯ ಆಹಾರ ಪದ್ದತಿ ರೂಢಿಸಿಕೊಳ್ಳುವುದು ಉತ್ತಮ ಪರಿಣಾಮ ಬೀರುತ್ತದೆ.
ಒಮೆಗಾ 3 ಫ್ಯಾಟಿ ಆ್ಯಸಿಡ್: ನಿದ್ರೆ ಮತ್ತು ಆಹಾರದ ವಿಷಯದಲ್ಲಿ ಚರ್ಚೆಯಾಗುವ ಮೊದಲ ಅಂಶ ಒಮೆಗಾ 3 ಫ್ಯಾಟ್ಸ್. ಈ ಹೆಸರು ಕೇಳಿದಾಕ್ಷಣ ಹೃದಯದ ಆರೋಗ್ಯ ನೆನಪಿಗೆ ಬರುತ್ತದೆ. ಆದರೆ, ಅಧ್ಯಯನ ಅನುಸಾರ ಇದು ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ. ಒಮೆಗಾ 3 ಫ್ಯಾಟಿ ಆ್ಯಸಿಡ್ನಲ್ಲಿ ಎರಡು ರೀತಿಯಾಗಿದೆ. ಒಂದು ಐಕೋಸಾಪೆಂಟೆನೊಯಿಕ್ ಆಮ್ಲ (ಇಪಿಎ) ಮತ್ತು ಡೊಕೊಸಾಹೆಕ್ಸೆನೊಯಿಕ್ ಆಮ್ಲ (ಡಿಎಚ್‌ಎ). ಇದು ಮೀನಿನಲ್ಲಿ ಸಿಗುತ್ತದೆ. ಇದರ ಮತ್ತೊಂದು ಮೂಲ ಅಲ್ಫಾ ಲಿನೊಲೆನಿಕ್ ಆಮ್ಲ (ಎಎಲ್ಎ) ಇದನ್ನು ತರಕಾರಿಗಳಲ್ಲಿ ಕಾಣಬಹುದು
ಒಮೆಗಾ-3 ಫ್ಯಾಟಿ ಆಮ್ಲಗಳು ಬಹುಬರ್ಯಾಪ್ತ ಫ್ಯಾಟ್ ವರ್ಗಕ್ಕೆ ಸೇರಿದೆ. ಇದು ಹಾರ್ಮೋನ್ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಕೋಶಗಳ ಕಾರ್ಯದಲ್ಲಿ ಪ್ರಮುಖವಾಗಿದೆ. ಇದು ಅಗತ್ಯವಾದ ಆಮ್ಲವಾಗಿದ್ದು, ಇದು ದೇಹದಿಂದ ಉತ್ಪಾದನೆಯಾಗುತ್ತಿಲ್ಲ. ಈ ಹಿನ್ನೆಲೆ ಈ ಆಮ್ಲ ಹೊಂದಿರುವ ಆಹಾರವನ್ನು ಆಯ್ಕೆ ಮಾಡಿಕೊಳ್ಳಬೇಕು. ಫ್ಯಾಟಿ ಮೀನುಗಳಾದ ಸಲಮೊನ್, ವಾಲ್ನಟ್, ಫ್ಲಾಕ್ಸ್ ಮತ್ತು ಕಾಮ ಕಸ್ತೂರಿ ಬೀಜಗಳಲ್ಲಿ ಸಮೃದ್ಧವಾಗಿ ಒಮೆಗಾ- 3 ಫ್ಯಾಟಿ ಆಮ್ಲ ಇರುತ್ತದೆ.
ಅನೇಕ ವಯಸ್ಕರು ಈ ಆಮ್ಲವನ್ನು ಸರಿಯಾದ ಪ್ರಮಾಣದಲ್ಲಿ ಪಡೆಯುವುದಿಲ್ಲ. ಎರಡು ವಾರಕ್ಕೆ ಒಮ್ಮೆ ಮೀನು ಸೇವನೆಯಿಂದ ಇದರ ಕೊರತೆ ನೀಗಿಸಬಹುದು. ಮೀನು ಇಷ್ಟವಿಲ್ಲದವರು, ಸಸ್ಯಹಾರಿಗಳು ಇದನ್ನು ವಾಲ್ನಟ್ನಲ್ಲಿ ಪಡೆಯಬಹುದು. ಅದನ್ನು ಬೆಳಗಿನ ಸ್ನಾಕ್ಸ್ ಆಗಿ ಬಳಕೆ ಮಾಡುವ ಮೂಲದ ಒಮೆಗಾ ಫ್ಯಾಟ್ಸ್ ಪಡೆಯಬಹುದು. ಗಾಢ ನಿದ್ರೆ ಒಂದೇ ಗುರಿಯಲ್ಲ. ಇದರ ಜೊತೆಗೆ ಉತ್ತಮ ಸಮಯದ ನಿದ್ದೆಯೂ ಅತ್ಯವಶ್ಯಕ. ಕಡಿಮೆ ಅವಧಿಯ ನಿದ್ರೆ, ದೀರ್ಘಾವಧಿಗಳು ಆರೋಗ್ಯಕ್ಕೆ ಅಪಾಯ. ಈ ರೀತಿಯ ಜನರು ಹೃದಯ ಸಮಸ್ಯೆ, ಪ್ಯಾರಲಿಸಿಸ್ ಮತ್ತು ಮಧುಮೇಹ ಸಮಸ್ಯೆಗೆ ತುತ್ತಾಗುವ ಸಂಭವ ಇರುತ್ತದೆ. ಆದರೆ, ಈ ರೀತಿಯ ಅಪಾಯ ಹೊಂದಿರುವವರು ಒಮೆಗಾ 3 ಫ್ಯಾಟ್ ಅನ್ನು ಆಹಾರದ ಮೂಲಕ ಪಡೆಯುತ್ತಾರಾ ಎಂಬುದನ್ನು ಗಮನಿಸಬೇಕಿದೆ.
ಏನಿದರ ಸಂಬಂಧ: ನಿದ್ದೆ ಮತ್ತು ಒಮೆಗಾ 3 ಫ್ಯಾಟಿ ಆ್ಯಸಿಡ್ ನಡುವಿನ ನಿರ್ದಿಷ್ಟ ಸಂಬಂಧ ಪತ್ತೆಯಾಗಿಲ್ಲ. ಆದರೆ, ಹಾರ್ಮೋನ್‌ಗಳ ಉತ್ಪಾದನೆಯಲ್ಲಿ ಹಾಲು ಸೇವನೆಯಂತಹ ಆರೋಗ್ಯ ಸುಧಾರಣಾ ಅಂಶಗಳು ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತಾರೆ ಎಂದು ನಂಬಲಾಗಿದೆ. ಮೆಲೊಟೊನಿನ್ ಹಾರ್ಮೋನ್ ಕೂಡ ನಿದ್ರೆಗೆ ಸಹಾಯ ಮಾಡುತ್ತದೆ. ಒಮೆಗಾ 3 ಫ್ಯಾಟಿ ಆಮ್ಲ ಈ ಉತ್ಪನ್ನಕ್ಕೆ ಅವಶ್ಯಕವಾಗಿದೆ. ಡಯಟ್ ಸಮೃದ್ದಿ ಆಹಾರ ಸೇವನೆ ಮಾಡುವವರಲ್ಲಿ ಈ ಮೆಲಟೊನಿನ್ ಮಟ್ಟ ಹೆಚ್ಚಿರುತ್ತದೆ. ಇದು ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ. ಸ್ಥೂಲಕಾಯ ಹೊಂದಿರುವ ಜನರಲ್ಲಿ ನಿದ್ದೆ ವೇಳೆ ಉಸಿರಾಟ ಸಮಸ್ಯೆ ಎದುರಾಗುತ್ತದೆ. ಇದನ್ನು ಡಿಎಚ್‌ಎ ಮೂಲಕ ಕಡಿಮೆ ಮಾಡಬಹುದಾಗಿದೆ. ಜೊತೆಗೆ ಮೀನಿನ ಎಣ್ಣೆ ಕೂಡ ನಿದ್ದೆಗೆ ಸಹಾಯ ಮಾಡುತ್ತದೆ ಎಂದು ಮತ್ತೊಂದು ಅಧ್ಯಯನ ತಿಳಿಸಿದೆ.
ಇದರ ಹೊರತಾಗಿ ಸಹಾಯ ಮಾಡುವ ಪೋಷಕಾಂಶಗಳು: ಫ್ಯಾಟಿ ಫಿಶ್ನಲ್ಲಿನ ಟ್ರೈಪ್ಟೊಫೋನ್, ಮೊಟ್ಟೆ ಮತ್ತು ಒಣಹಣ್ಣುಗಳು. ಅದರಲ್ಲೂ ವಾಲ್ನಟ್, ಗೋಡುಂಬಿ ಮತ್ತು ಪಿಸ್ತಾಗಳಲ್ಲಿ ಮೆಲಟೊನಿನ್, ಮೆಗ್ನಿಶಿಯಂ ಮತ್ತು ಜಿಂಕ್ ಹೆಚ್ಚಿರುತ್ತದೆ. ಇದು ವಯಸ್ಕರಲ್ಲಿ ನಿದ್ರಾಹೀನತೆ ಹೋಗಲಾಡಿಸುತ್ತದೆ. ಕೆಂಪು ದ್ರಾಕ್ಷಿ ಹೆಚ್ಚಿನ ಮೆಲಟೊನಿನ್ ಇರುತ್ತದೆ.
ಹಸಿರು ತರಕಾರಿಗಳಲ್ಲಿನ ನೈಟ್ರೇಟ್ಗಳು ದೇಹಕ್ಕೆ ನೈಟ್ರಿಕ್ ಆಕ್ಸೆಡ್ಗಳನ್ನು ಬಿಡುಗಡೆ ಮಾಡುತ್ತದೆ. ಇದು ರಕ್ತದ ಪರಿಚಲನೆ ಮತ್ತು ಹೃದಯ ಕಾರ್ಯವನ್ನು ಅಭಿವೃದ್ಧಿ ಮಾಡುತ್ತದೆ. ಇದು ಪರೋಕ್ಷವಾಗಿ ಗಾಢ ನಿದ್ರೆಗೆ ಸಹಾಯ ಮಾಡುತ್ತದೆ.
ಕಿವಿ ಹಣ್ಣಗಳಲ್ಲಿ ಫೊಲೆಟ್ ಮತ್ತು ಪೊಟಾಶಿಯಂನಂತರ ವಿಟಮಿನ್ ಮತ್ತು ಮಿನರಲ್ಗಳು ಸಮೃದ್ಧವಾಗಿರುತ್ತದೆ. ಇವು ಕೂಡ ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ. ಮಲಗುವ ಮುನ್ನ ಎರಡು ಕಿವಿ ಹಣ್ಣು ತಿನ್ನುವವರು ಬೇಗ ಗಾಢ ನಿದ್ರೆಗೆ ಜಾರುತ್ತಾರೆ.
ಕರಳಿನಲ್ಲಿರುವ ವೈವಿದ್ಯಮಯ ಬ್ಯಾಕ್ಟೀರಿಯಾಗಳು ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಇದು ನಿದ್ದೆಗೂ ಸಹಾಯ ಮಾಡುತ್ತದೆ. ಕರುಳಿನಲ್ಲಿರುವ ಕಡಿಮೆ ವೈವಿದ್ಯಮಯ ಬ್ಯಾಕ್ಟೀರಿಯಾಗಳು ಕೂಡ ನಿದ್ದೆಯ ತೊಡಕಿನೊಂದಿಗೆ ಸಮಸ್ಯೆ ಹೊಂದಿದೆ. ಮೆಡಿಟೇರಿಯನ್ ಡಯಲ್ನಲ್ಲಿ ಹೆಚ್ಚಿನ ಆಲಿವ್ ಎಣ್ಣೆ, ತರಕಾರಿ, ಹಣ್ಣು , ಧಾನ್ಯ, ನಟ್ಸ್, ಮೀನು, ಚಿಕನ್, ಮೊಟ್ಟೆ, ಮಾಂಸ, ಕಡಿಮೆ ಸಕ್ಕೆ, ಇದ್ದು ಇದು ಚಯಪಚಯನ ಮತ್ತು ಬ್ಯಾಕ್ಟೀರಿಯಾಗಳ ಅಭಿವೃದ್ಧಿ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ನಿದ್ರಾಹೀನತೆಯಿಂದ ಗಂಭೀರ ಆರೋಗ್ಯ ಸಮಸ್ಯೆ.. ಸುಖ ನಿದ್ರೆಗೆ ಇಲ್ಲಿದೆ ಸಲಹೆ