ETV Bharat / sukhibhava

ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ಈ 10 ಅಂಶಗಳು ಕಾರಣ! ಪರಿಹಾರ ಹೀಗಿದೆ.. - ನಿದ್ರಾಹೀನತೆ ಲಕ್ಷಣವನ್ನು ಹೊಂದಿದ್ದು

ಮನುಷ್ಯನ ದೇಹಕ್ಕೆ ನಿದ್ರೆ ಅತ್ಯಗತ್ಯ. ಪ್ರತಿ ರಾತ್ರಿ ಕನಿಷ್ಠ 7-8 ಗಂಟೆಯಾದ್ರೂ ನಿದ್ರೆ ಬೇಕೇ ಬೇಕು. ಇಷ್ಟು ಪ್ರಮಾಣದ ನಿದ್ರೆಯಾಗದಿದ್ದರೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳು ಕಾಡಬಹುದು.

ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದಿರುವುದಕ್ಕೆ ಕಾರಣ ಈ 10 ಅಂಶಗಳು
these-10-factors-are-the-reasons-for-not-being-able-to-sleep-well-at-night
author img

By

Published : Jan 17, 2023, 11:00 AM IST

ಕೋವಿಡ್​ 19 ಸಾಂಕ್ರಾಮಿಕತೆ ಮತ್ತು ಒತ್ತಡ ಸೇರಿದಂತೆ ಇತರೆ ಕಾರಣಗಳಿಂದ ಕಳೆದೆರಡು ವರ್ಷಗಳಿಂದ ಹಲವು ಮಂದಿ ನಿದ್ರೆ ಸಮಸ್ಯೆ ಅನುಭವಿಸುತ್ತಿದ್ದಾರೆ. 2021ರ ನವೆಂಬರ್​ನಲ್ಲಿ ಪ್ರಕಟವಾದ ಸ್ಲಿಪ್​ ಮೆಡಿಸಿನ್​ ಅಧ್ಯಯನದಲ್ಲಿ 13 ದೇಶಗಳ 22, 330 ವಯಸ್ಕರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ ಮೂರನೇ ಒಂದರಷ್ಟು ಮಂದಿ ನಿದ್ರಾಹೀನತೆ ಲಕ್ಷಣವನ್ನು ಹೊಂದಿದ್ದು, ಇವರ ಸಂಖ್ಯೆ ಸರಿ ಸುಮಾರು ಶೇ 20ರಷ್ಟಿದೆ. ಸಾಂಕ್ರಾಮಿಕತೆಗೆ ಬಳಿಕ ಈ ಅಂಕಿ ಅಂಶ ದುಪ್ಪಟ್ಟಗಾಗಿದೆ ಎಂದು ಅಧ್ಯಯನ ತಿಳಿಸಿದೆ.

ಸಾಂಕ್ರಾಮಿಕತೆ ಬಳಿಕ ಗ್ಯಾಜೆಟ್​ ಮೇಲಿನ ಅವಲಂಬನೆ, ಆತಂಕ ಹಾಗೂ ಖಿನ್ನತೆಯಂತಹ ಮಾನಸಿಕ ಸಮಸ್ಯೆ ನಿದ್ರೆ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಮಾನಸಿಕ ಆರೋಗ್ಯಕ್ಕೆ ಉತ್ತಮ ನಿದ್ರೆ ಎಂಬುದು ಅವಶ್ಯಕವಾಗಿದ್ದು, ಪ್ರತಿ ರಾತ್ರಿ ದೇಹಕ್ಕೆ 7-8 ಗಂಟೆ ನಿದ್ರೆ ಅವಶ್ಯಕವಾಗಿದೆ. ನಿದ್ರೆಯ ಅಭಾವವು ಅರಿವಿನ ಮತ್ತು ಭಾವನಾತ್ಮಕ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುವುದರಿಂದ ನಿದ್ದೆ ಮಾಡಲು ಅಸಮರ್ಥತೆಯು ಚಿಂತೆಗೆ ಕಾರಣವಾಗಿದೆ. ಉತ್ತಮ ನಿದ್ರೆ ಆಗದಿದ್ದರೆ ಬಳಲಿಕೆ, ಕಿರಿಕಿರಿ, ಕೋಪ ಮತ್ತು ಏಕಾಗ್ರತೆ ಸಮಸ್ಯೆಗೆ ಕಾರಣವಾಗಲಿದೆ. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ರಾತ್ರಿ ವೇಳೆ ಉತ್ತಮ ನಿದ್ರೆಗೆ ತೊಡಕಾಗುವ ಸಮಾನ್ಯ ಕಾರಣಗಳು ಇಂತಿವೆ.

ಅತಿಹೆಚ್ಚಿನ ಗ್ಯಾಜೆಟ್​ ಬಳಕೆ: ಸಾಂಕ್ರಾಮಿಕ ಸೋಂಕಿನ ಬಳಿಕ ಗ್ಯಾಜೆಟ್​ ಎಂಬುದು ಅನೇಕರಿಗೆ ಮನೋರಂಜನೆ ಮತ್ತು ವಿಶ್ರಾಂತಿಯ ಮಾರ್ಗವಾಯಿತು. ಆದರೆ ಇದು ಅನೇಕರ ನಿದ್ರೆ ಸಮಸ್ಯೆಗೂ ಕೂಡ ಕಾರಣವಾಯಿತು. ಮಲಗುವ ಸಮಯದಲ್ಲಿ ಅತಿ ಹೆಚ್ಚಿನ ಗ್ಯಾಜೆಟ್​ ಬಳಕೆ ನಿಮ್ಮ ನಿದ್ರೆಯ ಸಮಯವನ್ನು ಕಸಿಯುತ್ತದೆ. ಮೊಬೈಲ್​ಗಳ ಬ್ಲೂ ಲೈಟ್​​ ನಿದ್ರೆ ಹಾರ್ಮೋನ್​ ಆದ ಮೆಲಟೊನಿನ್​ ಮೇಲೆ ಪರಿಣಾಮ ಬೀರುತ್ತದೆ. ಮಲಗುವ ಎರಡು ಗಂಟೆ ಮುಂಚೆ ದೇಹದಲ್ಲಿ ನಿದ್ರೆಯ ಈ ಮೆಲಟೊನಿನ್​ ಬಿಡುಗಡೆಯಾಗುತ್ತದೆ. ಮೊಬೈಲ್​ನ ಬ್ಲೂ ಲೈಟ್​​ಗಳು ಈ ನಿದ್ರೆ ಹಾರ್ಮೋನ್​ ಮೇಲೆ ಪರಿಣಾಮ ಬೀರಿ, ತೊಡಗಾಗುತ್ತದೆ.

ನಿದ್ರೆಗೆ ಕಡಿಮೆ ಮಹತ್ವ ನೀಡುವುದು: ಕೆಲಸ, ಸಾಮಾಜಿಕ ಮತ್ತು ಇತರೆ ಕಾರ್ಯಗಳಿಂದ ಅನೇಕರು ನಿದ್ರೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಹೋಗುತ್ತಾರೆ. ನಿದ್ರೆಯನ್ನು ಬಹುತೇಕರು ಅಗತ್ಯವಾದ ಅಂಶ ಎಂದು ಪರಿಗಣಿಸುವುದೇ ಇಲ್ಲ. ಅದರಲ್ಲೂ ಯುವ ಜನತೆಯಂತೂ ನಿದ್ರೆಯ ವಿಷಯದಲ್ಲಿ ಅನಿಯಂತ್ರಣವನ್ನು ಹೊಂದಿರುತ್ತಾರೆ. ದೀರ್ಘಾವಧಿಯಲ್ಲಿ ಇದು ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ಉತ್ತಮ ಕಾರ್ಯ ನಿರ್ವಹಣೆ ಮತ್ತು ಒತ್ತಡ ತಗ್ಗುವಿಕೆಗೆ ನಿಯಮಿತ ನಿದ್ರೆ ಅತ್ಯವಶ್ಯಕವಾಗಿದೆ.

ವಯಸ್ಸಿಗೆ ಸಂಬಂಧಿಸಿದ ಸಮಸ್ಯೆ: ವಯಸ್ಸಾದವರಲ್ಲಿ ವಯೋ ಸಹಜ ಕಾಯಿಲೆಯಿಂದಾಗಿ ನಿದ್ರೆಯ ಸಮಸ್ಯೆ ಕಾಡುತ್ತದೆ. ಅಲ್ಜೈಮರ್​, ದೀರ್ಘಾವಧಿ ಸಮಸ್ಯೆ, ಪದೇ ಪದೇ ಮೂತ್ರ ವಿಸರ್ಜನೆ ಸೇರಿದಂತೆ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ಕೂಡ ನಿದ್ರೆಗೆ ತೊಡಕಾಗುತ್ತದೆ. ಇನ್ನು ಕೆಲವು ಮಂದಿ ವಯಸ್ಸಾದಂತೆ ಉತ್ತಮ ನಿದ್ರೆ ಕೊರತೆಯನ್ನು ಅನುಭವಿಸುತ್ತಾರೆ. ಅನೇಕ ಮಂದಿ ನಿದ್ರೆ ಮಧ್ಯದಲ್ಲಿ ಎಚ್ಚರಗೊಳ್ಳುತ್ತಾರೆ ಅಥವಾ ಮುಂಜಾನೆಯೇ ಎದ್ದು ಬಿಡುವುದರಿಂದ ಉತ್ತಮ ನಿದ್ರೆಯನ್ನು ಅವರು ಹೊಂದುವುದಿಲ್ಲ. ಈ ಅಡಚಣೆಗಳಿಂದ ಅವರು ಬಳಲುತ್ತಾರೆ. ಇದರ ನಿವಾರಣೆಗೆ ಅವರು ಮಲಗುವ ಮುನ್ನ ಬೆಚ್ಚಗಿನ ಹಾಲು ಸೇವನೆ ಮತ್ತು ಕೆಫೆನ್​ ಕಡಿತವನ್ನು ರೂಢಿಸಿಕೊಳ್ಳುವುದು ಉತ್ತಮ.

ಕೆಫೆನ್​ ಮತ್ತು ಮದ್ಯದ ಪರಿಣಾಮ: ಮಲಗುವ ಮುನ್ನ ಅತಿಹೆಚ್ಚಿನ ಕೆಫೆನ್​ ಮತ್ತು ಮದ್ಯ ಸೇವನೆ ಉತ್ತಮವಲ್ಲ. ಮಲಗುವ ಆರು ಗಂಟೆ ಮುನ್ನ ಕೆಫೆನ್​ ಸೇವಿಸಬಾರದು. ಅತಿ ಹೆಚ್ಚಿನ ಮದ್ಯ ಸೇವನೆ ಕೂಡ ಉತ್ತಮ ನಿದ್ರೆಗೆ ಭಂಗ ಉಂಟು ಮಾಡುತ್ತದೆ. ಮಲಗುವ ಮುನ್ನ ಮದ್ಯ ಸೇವನೆ ನಿರ್ಜಲೀಕರಣದ ಸಮಸ್ಯೆಗೆ ಕೂಡ ಕಾರಣವಾಗುತ್ತದೆ.

ಮಾನಸಿಕ ಆರೋಗ್ಯ ಸಮಸ್ಯೆ, ಒತ್ತಡ: ಖಿನ್ನತೆ ಅಥವಾ ಆತಂಕದಂತಹ ಸಮಸ್ಯೆಗಳಿಂದ ಬಳಲುವಿಕೆ ಕೂಡ ಉತ್ತಮ ನಿದ್ರೆಗೆ ಸಮಸ್ಯೆಗೆ ಕಾರಣವಾಗಿದೆ. ಇಂತಹವರು ಹೆಚ್ಚು ನಿದ್ರೆ ಅಥವಾ ಕಡಿಮೆ ನಿದ್ರೆ ಮಾಡುತ್ತಾರೆ. ಒತ್ತಡ ನಿದ್ರೆಯೊಂದಿಗೆ ಸಂಬಂಧವನ್ನು ಹೊಂದಿದೆ. ಯಾವುದೇ ವಿಷಯದ ಬಗ್ಗೆ ಅತಿ ಹೆಚ್ಚಿನ ಚಿಂತೆ ನಿದ್ರೆಯನ್ನು ಕಸಿಯುತ್ತದೆ.

ಆರೋಗ್ಯ ಸಮಸ್ಯೆ, ಕುಟುಂಬ ಅಥವಾ ಕೆಲಸದ ಒತ್ತಡಗಳು ಕೂಡ ಉತ್ತಮ ನಿದ್ರೆ ಮೇಲೆ ಪರಿಣಾಮ ಬೀರುತ್ತದೆ. ಒತ್ತಡದಿಂದ ಬಿಡುಗಡೆಯಾಗುವ ರಾಸಾಯನಿಕ ನಿಮ್ಮ ಹೃದಯದ ಬಡಿತ ಹೆಚ್ಚಿಸುತ್ತದೆ. ಇದರಿಂದ ನಿಮ್ಮ ದೇಹ ಅಪಾಯದ ಕುರಿತು ಜಾಗೃತವಾಗಿರುವುದಂತೆ ಎಚ್ಚರಿಸುತ್ತದೆ. ಇದರಿಂದ ನೆಮ್ಮದಿ ನಿದ್ರೆ ಆಗುವುದಿಲ್ಲ.

ನಿದ್ರೆ ಸಮಸ್ಯೆ: ನಿದ್ರೆ ಸಮಸ್ಯೆಗಳಾದ ನಿದ್ರಾಹೀನತೆ, ಪ್ಯಾರಾಸೋಮ್ನಿಯಾಸ್ ಅಥವಾ ಸ್ಲೀಪ್ ಅಪ್ನಿಯ ಕೂಡ ಉತ್ತಮ ನಿದ್ರೆಗೆ ಭಂಗ ತರುತ್ತದೆ. ನಿದ್ರಾ ಹೀನತೆಯಿಂದ ಅಗತ್ಯವಾದ ನಿದ್ರೆ ಆಗುವುದಿಲ್ಲ. ಇದು ನಿದ್ರೆ ಮಧ್ಯೆ ಪದೇ ಪದೇ ಎಚ್ಚರವಾಗುವಂತೆ ಮಾಡುತ್ತದೆ. ನಿದ್ರಾಹೀನತೆ ಸಮಸ್ಯೆ ಆರೋಗ್ಯ ಸಮಸ್ಯೆಯಾದ ಆತಂಕ ಮತ್ತು ಖಿನ್ನತೆಯ ಲಕ್ಷಣವೂ ಆಗಿದೆ. ಪ್ಯಾರಾಸೋಮ್ನಿಯಾದಿಂದ ಬಳಲುತ್ತಿರುವವರಲ್ಲಿ ಪದೇ ಪದೇ ಎಚ್ಚರವಾಗುತ್ತಿರುತ್ತದೆ. ಸ್ನೀಪ್​​​ ಅಪ್ನಿಯಾ ದಿಂದ ಬಳಲುತ್ತಿರುವವರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವುರಿಂದ ನಿದ್ರೆ ಭಂಗವಾಗುತ್ತಿರುತ್ತದೆ.

ವ್ಯಾಯಾಮ: ಮಲಗುವ ಮುನ್ನ ಅತಿಹೆಚ್ಚಿನ ವ್ಯಾಯಾಮ ಕೂಡ ಒಳ್ಳೆಯದಲ್ಲ. ವ್ಯಾಯಾಮ ನಿಮ್ಮ ಹೃದಯದ ಬಡಿತವನ್ನು ಹೆಚ್ಚಿಸುತ್ತದೆ. ನರ ವ್ಯವಸ್ಥೆಯನ್ನು ಜಾಗೃತಗೊಳಿಸುತ್ತದೆ. ಈ ವೇಳೆ ಆರಾಮವಾಗಿ ನಿದ್ರೆ ಮಾಡುವುದು ಕಷ್ಟವಾಗುತ್ತದೆ.

ನಿದ್ರೆಗೆ ಪೂರಕವಲ್ಲದ ವಾತಾವರಣ: ಗದ್ದಲ ಅಥವಾ ಲೈಟ್​ಗಳು ಅನೇಕರಿಗೆ ನಿದ್ರೆಗೆ ಜಾರಲು ಅಡ್ಡಿಯಾಗುತ್ತದೆ. ಇದು ವಿಶ್ರಾಂತಿಯಿಂದ ಆರಾಮವಾಗಿ ಮಲಗಲು ಬಿಡುವುದಿಲ್ಲ.

ಅವ್ಯವಸ್ಥಿತ ಕೆಲಸದ ಸಮಯ: ಶಿಫ್ಟ್​ಗಳಲ್ಲಿ ಕೆಲಸ ಮಾಡುವುದು ಕೂಡ ನಿದ್ರೆ ತೊಡಕಿಗೆ ಕಾರಣವಾಗುತ್ತದೆ. ಬೆಳಗ್ಗಿನ ಹೊತ್ತು ಅಥವಾ ತಡರಾತ್ರಿ ಕೆಲಸಗಳು ಉತ್ತಮ ನಿದ್ರೆಯ ಸಮಯಕ್ಕೆ ಅಡ್ಡಿಯಾಗುತ್ತದೆ. ಪದೇ ಪದೇ ಶಿಫ್ಟ್​ಗಳ ಬದಲಾವಣೆಗಳು ನಿದ್ರೆಯ ಸಮಯದ ಮೇಲೆ ಪರಿಣಾಮ ಬೀರುತ್ತದೆ.

ಮಲಗುವ ವೇಳೆಯ ಆಹಾರ ಪದ್ಧತಿ: ಮಲಗುವ ಮುನ್ನ ಮಾಂಸದಂತಹ ಆಹಾರ ಸೇವನೆ ಉತ್ತಮ ನಿದ್ರೆಗೆ ತೊಡಗಾಗುತ್ತದೆ. ಕಾರಣ ಪ್ರೋಟಿನ್​ ಅಂಶಗಳು ಜೀರ್ಣವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಮಲಗುವ ಸಮಯದಲ್ಲಿ ಈ ಜೀರ್ಣ ಪ್ರಕ್ರಿಯೆ ನಿಧಾನವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಲಗುವ ಮುನ್ನ ಕಾರ್ಬೋ ಹೈಡ್ರೇಟ್​ ಸೇವನೆ ಆರೋಗ್ಯಕ್ಕೆ ಉತ್ತಮ.

ಮಲಗುವ ಮುನ್ನ ಈ ಅಭ್ಯಾಸ ಇರಲಿ: ಉತ್ತಮ ನಿದ್ರೆ ಆಗಬೇಕು ಎಂದರೆ, ಬೆಡ್​ ಟೈಮ್​ ವೇಳೆ ಗ್ಯಾಜೆಟ್​ಗಳಿಂದ ದೂರವಿರಿ, ಉತ್ತಮ ಒಣಗಿದ ಬಟ್ಟೆ, ಕೋಣೆಯ ತಾಪಮಾನ ಉತ್ತಮವಾಗಿರುವುದಂತೆ ನೋಡಿಕೊಳ್ಳಿ. ಅಲ್ಲದೆ, ಲೈಟ್​ ಬೆಳಕಿನ ಬಗ್ಗೆ ಗಮನವಿರಲಿ. ನಿದ್ರೆ ಮಾಡಲು ಸಾಧ್ಯವಾಗದಿದ್ದರೆ ಉಲ್ಟಾ ಸಂಖ್ಯೆಗಳನ್ನು ಎಣಿಸಿ. ಆತಂಕ, ಖಿನ್ನತೆ, ಇತರೆ ನಿದ್ರೆ ಸಮಸ್ಯೆಯಿಂದ ದೂರಾಗಿ ಮನಸ್ಸನ್ನು ಹಗುರವಾಗಿ ಇಟ್ಟುಕೊಳ್ಳಿ.

ಇದನ್ನೂ ಓದಿ: ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಕೈತೋಟ ಕೆಲಸ ಸಹಕಾರಿ; ಹೊಸ ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.