ಬೆಳಗ್ಗಿನ ಹೊತ್ತು ಹಾಗೇ ಒಂದು ಜೋಂಪು ನಿದ್ದೆ ಹೊಡೆಯುವುದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ, ಗಾಢವಾದ ನಿದ್ದೆಯೂ ರಾತ್ರಿಯ ನಿದ್ದೆ ಮೇಲೆ ಭಂಗ ಉಂಟು ಮಾಡುತ್ತದೆ. ಇದರಿಂದ ರಾತ್ರಿ ನಿದ್ದೆ ಅವಧಿಗೆ ತೊಂದರೆಯಾಗಿ ಜೈವಿಕ ಗಡಿಯಾರದ ಮೇಲೆ ಪರಿಣಾಮ ಬೀರುತ್ತದೆ.
ನಮ್ಮ ಜೀವನದ ಅರ್ಧ ಆಯುಷ್ಯವನ್ನು ನಾವು ನಿದ್ದೆಯಲ್ಲಿ ಕಳೆಯುತ್ತೇವೆ. ಇದು ಆರೋಗ್ಯಕ್ಕೆ ಅತ್ಯಗತ್ಯ ಕೂಡ. ಸರಿಯಾಗಿ ನಿದ್ದೆ ಮಾಡಲಿಲ್ಲ ಎಂದರೆ ಕಿರಿಕಿರಿ, ಸುಸ್ತು ಮತ್ತು ಬೇಸರದ ಅನುಭವ ಆಗುತ್ತದೆ. ಜೊತೆಗೆ ದೈಹಿಕ ಪ್ರಕ್ರಿಯೆಯ ವೇಗ ಕೂಡ ಇಳಿಕೆ ಆಗುತ್ತದೆ. ತಲೆ ನೋವು, ಮಾನಸಿಕ ಒತ್ತಡದಂತಹ ಅನೇಕ ಸಮಸ್ಯೆಗಳು ಕಾಡುತ್ತದೆ. ದೀರ್ಘಕಾಲದ ಕಡಿಮೆ ನಿದ್ದೆಯಿಂದ ನಿದ್ರಾಹೀನತೆ ಕೂಡ ಆವರಿಸಿಕೊಳ್ಳುತ್ತದೆ. ಇದಕ್ಕೆ ಅನೇಕ ಕೊಡುಗೆಗಳು ಇದ್ದು, ಸರಿಯಾದ ಕಾರಣ ಪತ್ತೆಯಾದರೆ, ಇದನ್ನು ಸರಿಪಡಿಸಬಹುದು.
ಬೆಳಗಿನ ನಿದ್ದೆ: ಬೆಳಗಿನ ಹೊತ್ತು ಸಣ್ಣ ನಿದ್ದೆ ಮಾಡುವುದರಿಂದ ಸಮಸ್ಯೆ ಇಲ್ಲ. ಆದರೆ, ಈ ನಿದ್ದೆ ನಿಮ್ಮ ರಾತ್ರಿ ನಿದ್ದೆ ಮೇಲೆ ಪರಿಣಾಮ ಬೀರಬಾರದು. ಇದರಿಂದಾಗಿ ದೇಹಕ ಜೈವಿಕ ಗಡಿಯಾರ ತಪ್ಪುತ್ತದೆ. ಇದು ಹಗಲಿನಲ್ಲಿ ಸಕ್ರಿಯವಾಗಿರುವಂತೆ ಮಾಡಿ ರಾತ್ರಿಯಲ್ಲಿ ಮಲಗುವ ಪ್ರಕ್ರಿಯೆ ಮೇಲೆ ಅಡ್ಡಿಪಡಿಸುತ್ತದೆ. ಈ ಹಿನ್ನಲೆ ರಾತ್ರಿ ನಿದ್ದೆಯಿಂದ ಬಳಲುವವರು ಬೆಳಗಿನ ಹೊತ್ತಿನ ನಿದ್ದೆಯನ್ನು ತಪ್ಪಿಸುವುದು ಉತ್ತಮ.
ದೀರ್ಘ ರಾತ್ರಿ ಕೆಲಸ: ಎಲ್ಲ ದಿನವೂ ಕೆಲಸ ಮಾಡಲು ನಾವು ಮೆಷಿನ್ಗಳಲ್ಲ. ಮನಸು, ದೇಹ ಮತ್ತು ಸ್ನಾಯುಗಳಿಗೆ ಕೆಲಸದಿಂದ ವಿಶ್ರಾಂತಿ ಬೇಕಾಗುತ್ತದೆ. ನಾವು ಕ್ರಿಯಾಶೀಲವಾಗಿರುವರೆಗೂ ಅಡ್ರಿನಾಲಿನ್ ಹಾರ್ಮೋನ್‌ಗಳ ಪ್ರಮಾಣ ಕಡಿಮೆಯಾಗುವಂತೆ ನೋಡಿಕೊಳ್ಳಬೇಕು. ಅಂದರೆ, ಮಲಗುವು ಕೆಲವು ಗಂಟೆಗಳ ಮೊದಲು ದೇಹವನ್ನು ನಿದ್ರೆಗಾಗಿ ಸಿದ್ಧಪಡಿಸುವುದು. ಹಾಗಾಗಿ ಮಲಗುವ ಮುನ್ನ ಕೆಲಸದಲ್ಲಿ ತೊಡಗಬಾರದು. ಈ ಸಮಯದಲ್ಲಿ ಇಷ್ಟವಾದ ಪುಸ್ತಕವನ್ನು ಓದುವುದು. ಸಂಗೀತವನ್ನು ಕೇಳುವುದು ಮತ್ತು ಧ್ಯಾನ ಮಾಡುವ ಮೂಲಕ ಮನಸ್ಸನ್ನು ವಿಶ್ರಾಂತಗೊಳಿಸಬೇಕು
ಕಡಿಮೆ ವ್ಯಾಯಾಮ: ದೈಹಿಕ ಚಟುವಟಿಕೆಗಳು ಕೂಡ ಉತ್ತಮ ನಿದ್ದೆಗೆ ಸಹಾಯ ಮಾಡುತ್ತದೆ. ಹೀಗಾಗಿ ಬೆಳಗಿನ ಜಾವ ವ್ಯಾಯಾಮ ಅಭ್ಯಾಸ ರೂಢಿಸಿಕೊಳ್ಳುವುದು ಉತ್ತಮ. ವಾಕಿಂಗ್, ರನ್ನಿಂಗ್ ಅಥವಾ ಸೈಕಲಿಂಗ್ನಂತಹ ಹೊರಾಂಗಣ ಚಟುವಟಿಕೆಯಲ್ಲಿ ದೇಹ ಮತ್ತು ಮನಸನ್ನು ತಲ್ಲೀನ ಮಾಡಿ. ರಾತ್ರಿ ಗಾಢ ನಿದ್ದೆ ಮಾಡಿ.
ರಾತ್ರಿ ಸಮಯ ತಪ್ಪಿದಾಗ: ಶಿಫ್ಟ್ ಕೆಲಸಗಳ ಹೊರತಾಗಿ ಪ್ರತಿ ನಿತ್ಯ ರಾತ್ರಿ ನಿರ್ದಿಷ್ಟ ಸಮಯದಲ್ಲಿ ಮಲಗುವ ಅಭ್ಯಾಸ ಉತ್ತಮ. ರಾತ್ರಿ ಮಲಗುವುದು ಬೆಳಗ್ಗೆ ಏಳುವುದಕ್ಕೆ ಒಂದು ಸಮಯ ನಿಗದಿಸುವುದು ಅತ್ಯಗತ್ಯ. ಇದು ನಿಮ್ಮ ನಿದ್ದೆಯ ಅವಧಿಯನ್ನು ನಿಯಮಿತಗೊಳಿಸುತ್ತದೆ. ಸಂಜೆ ಸಮಯ ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ, ಒಂದು ಲೋಟ ಹಾಲು ಕುಡಿಯಿರಿ, ಮಂದ ಬೆಳಕಿನ ಮೂಲಕ ನಿದ್ದೆಗೆ ಬೇಗ ಜಾರುವಂತಹ ಅಭ್ಯಾಸ ರೂಢಿಸಿಕೊಳ್ಳಿ.
ತಡ ಊಟ: ತಡವಾಗಿ ಊಟ ಮಾಡುವುದರಿಂದ ಆಹಾರವನ್ನು ಜೀರ್ಣ ತಡವಾಗಿ, ಹೃದಯ ಬಡಿತ ಮತ್ತು ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದು ನಿದ್ರೆಯ ಮೇಲೆ ಅಡ್ಡಿ ಮಾಡುತ್ತದೆ. ಈ ಹಿನ್ನೆಲೆ ರಾತ್ರಿ ಮಲಗುವುದಕ್ಕಿಂತ ಎರಡು-ಮೂರು ಗಂಟೆ ಮುಂಚೆ ಊಟ ಮುಗಿಸಬೇಕು. ಕೊಬ್ಬಿನ ಆಹಾರಕ್ಕಿಂತ ಸುಲಭವಾಗಿ ಜೀರ್ಣವಾಗುವ ಆಹಾರ ಸೇವಿಸಿ.
ಹೆಚ್ಚಿನ ಕಾಫಿ- ಟೀ: ಸಂಜೆ ಸಮಯದಲ್ಲಿ ಜನರು ಅಧಿಕವಾಗಿ ಕಾಫಿ- ಟೀ ಸೇವನೆ ಮಾಡಿದರೂ ಇದು ನಿದ್ದೆಗೆ ತೊಂದರೆ ಮಾಡುತ್ತದೆ. ಕೂಲ್ ಡ್ರಿಂಕ್ಸ್, ರೆಡ್ ವೈನ್, ಚಾಕೊಲೇಟ್, ಚೀಸ್ ಮುಂತಾದವುಗಳು ನಿದ್ದೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಭಾರತದಲ್ಲಿ ನಿರಂತರವಾಗಿ ಹೆಚ್ತಿದೆ ಬ್ರೈನ್ ಟ್ಯೂಮರ್; ಶೇ 20ರಷ್ಟು ಪ್ರಕರಣ ಮಕ್ಕಳಲ್ಲಿ ಪತ್ತೆ