ETV Bharat / sukhibhava

ಜಿಂಗೈವಿಟಿಸ್​ ಎಂಬ ಸದ್ದಿಲ್ಲದ ಸಮಸ್ಯೆ! ವಸಡಿನ ಆರೋಗ್ಯದ ಬಗ್ಗೆಯೂ ಇರಲಿ ಕಾಳಜಿ

author img

By ETV Bharat Karnataka Team

Published : Sep 13, 2023, 12:11 PM IST

ಸೌಮ್ಯ ಲಕ್ಷಣದೊಂದಿಗೆ ಕಾಣಿಸಿಕೊಳ್ಳುವ ವಸಡಿನ ಸಮಸ್ಯೆಗೆ ಸೂಕ್ತ ಚಿಕಿತ್ಸೆ ನೀಡದೇ ಹೋದರೆ, ಹಲ್ಲು ಮತ್ತು ವಸಡಿನ ಮೇಲೆ ಗಂಭೀರ ಪರಿಣಾಮ ಬೀರಬಹುದು.

all should know Gingivitis a gum related problem

ಬೆಂಗಳೂರು: ಬಾಲ್ಯದಿಂದಲೇ ಹಲ್ಲು ಶುಚಿಗೊಳಿಸುವ ನಿಯಮಿತ ಅಭ್ಯಾಸದ ಮೂಲಕ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಒಂದು ವೇಳೆ, ಬಾಯಿ ಶುಚಿತ್ವವನ್ನು ನಿರ್ಲಕ್ಷಿಸಿದರೆ ಇದು ಹಲ್ಲಿನ ಸಮಸ್ಯೆಗೆ ಕಾರಣವಾಗುತ್ತದೆ. ಹಲ್ಲಿನ ಸಮಸ್ಯೆಯ ಹೊರತಾಗಿ ಇತರೆ ದಂತ ಸಮಸ್ಯೆಗಳೂ ಬಾಧಿಸುತ್ತವೆ. ಈ ಪೈಕಿ ಒಂದು ಜಿಂಗೈವಿಟಿಸ್​ ಎಂಬ ವಸಡಿನ ಸಮಸ್ಯೆ. ವಸಡಿನ ಉರಿಯೂತ ತಡೆಯಬಹುದಾದ ಸಮಸ್ಯೆಯಾಗಿದ್ದು, ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಲಾಗಿದೆ. ಸೌಮ್ಯ ಲಕ್ಷಣದೊಂದಿಗೆ ಕಾಣಿಸಿಕೊಳ್ಳುವ ಸಮಸ್ಯೆಗೆ ಸೂಕ್ತ ಚಿಕಿತ್ಸೆ ನೀಡದೇ ಹೋದರೂ ಅದು ಹಲ್ಲು ಮತ್ತು ವಸಡಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಜಿಂಗೈವಿಟಿಸ್​ಗೆ ಕಾರಣವೇನು?: ಬಾಯಿ ಸ್ವಚ್ಛತೆಯನ್ನು ಕಾಪಾಡದೇ ಇರುವುದು ಇದಕ್ಕೆ ಪ್ರಮುಖ ಕಾರಣ. ಆದಾಗ್ಯೂ ವೈದ್ಯಕೀಯ ವೃತ್ತಿಪರರು ಹೇಳುವಂತೆ, ಇತರೆ ಅನೇಕ ವೈದ್ಯಕೀಯ ಪರಿಸ್ಥಿತಿ ಮತ್ತು ಅಂಶಗಳು ಇದಕ್ಕೆ ಕಾರಣವಾಗುತ್ತವೆ. ಜಿಂಗೈವಿಟಿಸ್​ ಎಂಬುದು ಸದ್ದಿಲ್ಲದ ಸಮಸ್ಯೆ. ಆರಂಭಿಕ ಹಂತದಲ್ಲಿ ಇದು ಯಾವುದೇ ಲಕ್ಷಣ ತೋರಿಸದೇ ಇರುವುದ ಇದಕ್ಕೆ ಕಾರಣ.

ಔಷಧಗಳ ಅಡ್ಡ ಪರಿಣಾಮ: ಕೆಲವು ಔಷಧಗಳು ಬಾಯಿಯ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತವೆ.

ಬಾಯಿ ರೋಗ: ಈಗಾಗಲೇ ಇರುವ ಬಾಯಿಯ ರೋಗ ಅಥವಾ ಚಿಕಿತ್ಸೆಗಳ ಪರಿಣಾಮದಿಂದಲೂ ಇದು ಉಂಟಾಗಬಹುದು.

ಲಾಲಾರಸ ಉತ್ಪಾದನೆ ಕಡಿಮೆ: ಜಿಂಗೈವಿಟಿಸ್​ ಉರಿಯೂತದಿಂದ ಬಾಯಿಯಲ್ಲಿ ಲಾಲಾರಸದ ಉತ್ಪಾದನೆ ಕಡಿಮೆಯಾಗುತ್ತದೆ.

ಆನುವಂಶಿಕ ಅಂಶ: ಕೆಲವು ಆನುವಂಶಿಕ ಸಮಸ್ಯೆ ಮತ್ತು ಪರಿಸ್ಥಿತಿಗಳಿಂದಲೂ ಈ ಸಂಕಷ್ಟ ಎದುರಾಗಬಹುದು.

ವಿಟಮಿನ್​ ಸಿ ಕೊರತೆ: ವಸಡಿಗೆ ಬೇಕಾದ ಪ್ರಮಾಣದ ವಿಟಮಿನ್​ ಸಿ ಲಭ್ಯವಾಗದೇ ಹೋದಾಗಲೂ ಕೂಡಾ ಈ ಸಮಸ್ಯೆ ಉದ್ಭವಿಸಬಹುದು.

ಆಹಾರ ಪದ್ಧತಿ: ಕಳಪೆ ಆಹಾರ ಆಯ್ಕೆ, ಹೆಚ್ಚಿನ ಕಾರ್ಬೋಹೈಡ್ರೇಟ್​​, ಸಕ್ಕರೆ, ಉಪ್ಪು ಮತ್ತು ಎಣ್ಣೆ ಸೇವನೆ ಕೂಡ ವಸಡಿನ ಮೇಲೆ ಪರಿಣಾಮ ಬೀರಬಲ್ಲದು.

ಹಾರ್ಮೋನ್​ ಅಸಮಾತೋಲನ: ಹಾರ್ಮೋನ್​ಗಳ ಏರಿಳಿತ, ಋತುಚಕ್ರ ಅಥವಾ ಗರ್ಭಾವಸ್ಥೆಗಳು ಕೂಡ ಇದನ್ನು ಪ್ರೇರೇಪಿಸಬಹುದು.

ಲಕ್ಷಣ ಪತ್ತೆ ಹೇಗೆ?: ಜಿಂಗೈವಿಟಿಸ್​ ಸೌಮ್ಯ ಲಕ್ಷಣದೊಂದಿಗೆ ಆರಂಭವಾಗುತ್ತದೆ. ಸಾಮಾನ್ಯವಾಗಿ ವಸಡಿನ ಊತ, ರೆಡ್ನೆಸ್​, ರಕ್ತಸ್ರಾವ ಅಥವಾ ಕೆಟ್ಟ ವಾಸನೆ ಕಂಡುಬರುತ್ತದೆ.

ಸಾಮಾನ್ಯ ಲಕ್ಷಣ, ಪರಿಣಾಮ: ಜಿಂಗೈವಿಟಿಸ್​ ಸಮಸ್ಯೆ ವಸಡು ಕೆಂಪಾಗುವುದು ಅಥವಾ ಊತದಿಂದ ಪ್ರಾರಂಭವಾಗುತ್ತದೆ. ಮತ್ತೆ ಕೆಲವರು ಕೆಟ್ಟ ವಾಸನೆ ಅನುಭವಿಸಬಹುದು. ಕೆಲವರಲ್ಲಿ ಏನಾದರೂ ತಿಂದಾಗ ಅಥವಾ ಬ್ರಶ್​ ಮಾಡಿದಾಗ ರಕ್ತಸ್ರಾವ ಕಂಡುಬರುತ್ತದೆ. ಏನಾದರೂ ತಿಂದಾಗ ಅಥವಾ ಜಗಿದಾಗ ನೋವು. ಮತ್ತೆ ಕೆಲವರಲ್ಲಿ ಹಲ್ಲು ಬೀಳುವುದು ಕಂಡುಬರುತ್ತದೆ.

ಪರಿಣಾಮಕಾರಿ ಚಿಕಿತ್ಸೆ, ಮುನ್ನೆಚ್ಚರಿಕೆ: ಮುಂಬೈನ ಥಾಣೆಯಲ್ಲಿನ ಹಲ್ಲಿನ ವೈದ್ಯ ಡಾ.ಸೂರಜ್​ ಭರತಾದ್ರಿ ಹೇಳುವಂತೆ, ಜಿಂಗೈವಿಟಿಸ್​​ ತಡೆಗಟ್ಟುವಿಕೆ ಮಾತ್ರವಲ್ಲದೆ ಇನ್ನಿತರ ಕಾರಣಗಳಿಗೂ ಬಾಯಿಯ ಸ್ವಚ್ಛತೆ ಕಾಪಾಡುವುದು ಅತ್ಯವಶ್ಯಕ. ಸಮಸ್ಯೆ ಬಂದಾಗ ತಕ್ಷಣಕ್ಕೆ ವೈದ್ಯರ ಸಂಪರ್ಕಕ್ಕೊಳಗಾಗಿ ಅಗತ್ಯ ವೈದ್ಯಕೀಯ ಸಲಹೆ ಪಡೆಯುವುದರಿಂದ ಪರಿಣಾಮಕಾರಿಯಾಗಿ ರೋಗ ನಿಯಂತ್ರಿಸಬಹುದು.

ಜಿಂಗೈವಿಟಿಸ್​ ಚಿಕಿತ್ಸೆ: ಜಿಂಗೈವಿಟಿಸ್​ ಪತ್ತೆ ಬಳಿಕ ಅಥವಾ ಮುನ್ನವೇ ಇದರ ನಿರ್ವಹಣೆಗೆ ನಿಯಮಿತವಾಗಿ ತಪಾಸಣೆಗೆ ಒಳಗಾಗಬೇಕು. ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ/ ಊಟದ ಬಳಿಕ ಅಥವಾ ಏನಾದರೂ ಸೇವನೆ ಮಾಡಿದ ಬಳಿಕ ಸಾಧ್ಯವಾದಲ್ಲಿ ಬ್ರಶ್​ ಮಾಡಿ. ದಂತ ವೈದ್ಯರು ತಿಳಿಸಿದ ಟೂಥ್​ಪೇಸ್ಟ್​ ಬಳಕೆ ಮಾಡುವುದು, ನಿಯಮಿತವಾಗಿ ವೈದ್ಯರ ಮಾರ್ಗದರ್ಶನ ಪಡೆಯುವುದನ್ನು ನಡೆಸಬೇಕು.

ಸಮತೋಲಿತ ಆಹಾರ ಅಭ್ಯಾಸ ರೂಢಿಸಿಕೊಳ್ಳುವುದು. ತಾಜಾ ಮತ್ತು ಪೋಷಕಾಂಶಭರಿತ ಆಹಾರಗಳ ಆಯ್ಕೆಯೊಂದಿಗೆ ಸಾಕಷ್ಟು ಪ್ರಮಾಣದ ನೀರು ಸೇವನೆ ಅವಶ್ಯಕ. ಬಾಯಿಯ ಆರೋಗ್ಯವನ್ನು ಕಾಪಾಡುವುದು ಅಗತ್ಯವಾಗಿದ್ದು, ಸಮಸ್ಯೆ ಕಂಡು ಬಂದಾಗ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆಯುವುದು ಕೂಡ ನಿರ್ಣಾಯಕ. ವೈದ್ಯರು ನಿಯಮಿತ ಚೆಕ್​ಅಪ್​ ನಡೆಸುವುದರ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸುತ್ತಾರೆ.

ಇದನ್ನೂ ಓದಿ: ಬೆಳಗಿನ ಹೊತ್ತು ತಿಂಡಿ ತಪ್ಪಿಸುವುದು ಅನಾರೋಗ್ಯಕ್ಕೆ ಆಹ್ವಾನ ನೀಡಿದಂತೆ.. ಈ ಬಗ್ಗೆ ಇರಲಿ ಎಚ್ಚರ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.