ETV Bharat / entertainment

ದೀಪ್​ ವೀರ್​ ಕುಟುಂಬಕ್ಕೆ ಹೊಸ ಅತಿಥಿ; ಬಂದೇ ಬಿಟ್ಲು ಮಹಾಲಕ್ಷ್ಮಿ - ranveer Deepika baby girl - RANVEER DEEPIKA BABY GIRL

ಶನಿವಾರದಂದು ಆಸ್ಪತ್ರೆಗೆ ದಾಖಲಾಗಿದ್ದ ನಟಿ ದೀಪಿಕಾ ಪಡುಕೋಣೆ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವರದಿ ಪ್ರಕಾರ ಇದೇ ತಿಂಗಳ 28ಕ್ಕೆ ಡೆಲಿವರಿ ಡೇಟ್​ ನೀಡಲಾಗಿತ್ತು, ಆದರೆ 20 ದಿನಕ್ಕಿಂತ ಮುಂಚೆಯೆ ಮಗುವಿನ ಜನನವಾಗಿದೆ.

ಹೆಣ್ಣು ಮಗುವಿಗೆ ಜನ್ಮವಿತ್ತ ದೀಪಿಕಾ ಪಡುಕೋಣೆ
ಹೆಣ್ಣು ಮಗುವಿಗೆ ಜನ್ಮವಿತ್ತ ದೀಪಿಕಾ ಪಡುಕೋಣೆ (ANI)
author img

By ETV Bharat Karnataka Team

Published : Sep 8, 2024, 1:32 PM IST

Updated : Sep 8, 2024, 2:18 PM IST

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ದೀಪಿಕಾ ಪಡುಕೋಣೆ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಕಾತುರದಲ್ಲಿದ್ದ ದೀಪ್​ವೀರ್​ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದ್ದಾರೆ. ಪತಿ ರಣವೀರ್ ಸಿಂಗ್ ತಂದೆಯಾದ ಸಂಭ್ರಮದಲ್ಲಿದ್ದಾರೆ.

ಶನಿವಾರ ದೀಪಿಕಾ ಪಡುಕೋಣೆ ಮುಂಬೈನ ರಿಲಯನ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. ಜೊತೆಗೆ ಇವರ ಕುಟುಂಬಸ್ಥರು ಕಾಣಿಸಿಕೊಂಡಿದ್ದರು. ವರದಿಗಳ ಪ್ರಕಾರ ಇದೇ ಸೆಪ್ಟೆಂಬರ್ 28ಕ್ಕೆ ಹೆರಿಗೆಗೆ ಡೇಟ್​ ಕೊಡಲಾಗಿತ್ತು. ಆದರೆ ಸೆಪ್ಟೆಂಬರ್​ 8ಕ್ಕೆ ಅಂದರೆ ಇಂದು ಹೆಣ್ಣು ಮಗುವಿನ ಜನನವಾಗಿದೆ.

ಇನ್ನು ನಿನ್ನೆ ಆಸ್ಪತ್ರೆಗೆ ದಾಖಲಾಗುವ ಮುನ್ನ ಶುಕ್ರವಾರ ದೀಪ್​ವೀರ್​ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಸ್ಟಾರ್ ದಂಪತಿಯು ಗಣೇಶ ಹಬ್ಬದಲ್ಲಿ ಹೊಸ ಅತಿಥಿ ಆಗಮನದ ನಿರೀಕ್ಷೆಯಲ್ಲಿದ್ದರು.

ದೀಪಿಕಾ, ರಣವೀರ್ ಸಿಂಗ್ ಇನ್​​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿ ಖುಷಿ ಸುದ್ದಿ ನೀಡಿದ್ದಾರೆ. ಸ್ಟಾರ್ ದಂಪತಿ 'Welcome Baby Girl' ಎಂದು ಬರೆದಿರುವ ಪೋಸ್ಟ್ ವೈರಲ್ ಆಗಿದ್ದು, ಚಿತ್ರರಂಗದ ನಟ ನಟಿಯರು ಮತ್ತು ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಬಾಲಿವುಡ್ ಸ್ಟಾರ್​ ನಟಿಯರಾದ ಅಲಿಯಾ ಭಟ್, ಸೋನಂ ಕಪೂರ್, ಕೃತಿ ಸನೂನ್, ಪೂಜಾ ಹೆಗ್ಡೆ ಮತ್ತು ನಟರಾದ ಅರ್ಜುನ್ ಕಪೂರ್ ಸೇರಿದಂತೆ ಹಲವರು ಶುಭಾಶಯ ತಿಳಿಸಿ ಪೋಸ್ಟ್ ಮಾಡಿದ್ದಾರೆ. 'ಲಕ್ಷ್ಮಿ ಬಂದಿದ್ದಾಳೆ. ದಿ ಕ್ವಿನ್ ಇಸ್ ಹಿಯರ್'! ಎಂದು ಅರ್ಜುನ್ ಕಪೂರ್ ಪೋಸ್ಟ್ ಮಾಡಿದ್ದಾರೆ.

ದೀಪಿಕಾ ಪಡುಕೋಣೆ ಕೊನೆಯದಾಗಿ ಕಲ್ಕಿ ಸಿನಿಮಾದಲ್ಲಿ ನಟಿಸಿದ್ದು, ಆ ಸಮಯದಲ್ಲಿ ಅವರು ಗರ್ಭಿಣಿಯಾಗಿದ್ದರು. 2018ರಲ್ಲಿ ವಿವಾಹವಾಗಿದ್ದ ರಣ್​​ವೀರ್​​ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ತಮ್ಮ ಮೊದಲ ಮಗುವಿನ ಆಗಮನದ ಬಗ್ಗೆ ಘೋಷಿಸಿದ್ದರು.

ಪೋಷಕರಾದ ಖುಷಿಯಲ್ಲಿ ದೀಪ್​ವೀರ್​
ಪೋಷಕರಾದ ಖುಷಿಯಲ್ಲಿ ದೀಪ್​ವೀರ್​ (ANI)

ಕೆಲ ದಿನಗಳ ಹಿಂದೆಯಷ್ಟೇ ದೀಪಿಕಾ ಪಡುಕೋಣೆ ಬೋಲ್ಡ್​​ ಬೇಬಿ ಬಂಪ್​​ ಫೋಟೋಶೂಟ್​ ಮಾಡಿಸಿ ಗಮನ ಸೆಳೆದಿದ್ದರು. ದೀಪ್​ವೀರ್​ ಸರಣಿ ಚಿತ್ರಗಳನ್ನು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಶೇರ್ ಮಾಡಿರುವ 14 ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡಿದ್ದವು.

ಇದನ್ನೂ ಓದಿ: Watch.. ಆಸ್ಪತ್ರೆ ತಲುಪಿದ ತುಂಬುಗರ್ಭಿಣಿ ದೀಪಿಕಾ ಪಡುಕೋಣೆ: ಹಾಸ್ಪಿಟಲ್​ನಲ್ಲಿದೆ ಕಂಪ್ಲೀಟ್​​ ಫ್ಯಾಮಿಲಿ - Deepika Padukone Reach Hospital

Last Updated : Sep 8, 2024, 2:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.