ETV Bharat / sports

ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಅಧ್ಯಕ್ಷರಾಗಿ ರಣಧೀರ್ ಸಿಂಗ್ ನೇಮಕ - OCA president

author img

By PTI

Published : Sep 8, 2024, 1:29 PM IST

ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ)ದ ಅಧ್ಯಕ್ಷರಾಗಿ ರಣಧೀರ್ ಸಿಂಗ್ ನೇಮಕಗೊಂಡಿದ್ದಾರೆ.

ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಅಧ್ಯಕ್ಷರಾಗಿ ಆಯ್ಕೆಯಾದ ರಣಧೀರ್ ಸಿಂಗ್
ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಅಧ್ಯಕ್ಷರಾಗಿ ಆಯ್ಕೆಯಾದ ರಣಧೀರ್ ಸಿಂಗ್ (IANS)

ನವದೆಹಲಿ: ಹಿರಿಯ ಕ್ರೀಡಾ ಆಡಳಿತಗಾರ ರಣಧೀರ್ ಸಿಂಗ್ ಅವರು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ)ದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹುದ್ದೆಗೇರಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ರವಿವಾರ ಇಲ್ಲಿ ನಡೆದ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ)ದ 44ನೇ ಸಾಮಾನ್ಯ ಸಭೆಯಲ್ಲಿ ರಣಧೀರ್ ಸಿಂಗ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಐದು ಬಾರಿ ಒಲಿಂಪಿಕ್ ಶೂಟರ್ ಆಗಿರುವ ರಣಧೀರ್ ಸಿಂಗ್ ಅವರು ಒಸಿಎ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಅರ್ಹ ಅಭ್ಯರ್ಥಿಯಾಗಿದ್ದರು. ಸರ್ವಾನುಮತದಿಂದ ಆಯ್ಕೆಯಾಗಿರುವ ಇವರ ಅಧಿಕಾರಾವಧಿ 2024 ರಿಂದ 2028 ರವರೆಗೆ ಇರಲಿದೆ. 77 ವರ್ಷದ ರಣಧೀರ್ 2021 ರಿಂದ ಒಸಿಎ ಹಂಗಾಮಿ ಅಧ್ಯಕ್ಷರಾಗಿದ್ದರು.

ಇದಕ್ಕೂ ಮುನ್ನ ಕುವೈತ್​ನ ಶೇಖ್ ಅಹ್ಮದ್ ಅಲ್-ಫಹಾದ್ ಅಲ್-ಸಬಾಹ್ ಒಸಿಎ ಅಧ್ಯಕ್ಷರಾಗಿದ್ದರು. ಆದರೆ ನೈತಿಕ ನಿಯಮಗಳ ಉಲ್ಲಂಘನೆಯ ಆರೋಪದ ಮೇಲೆ ಇವರು ಮುಂದಿನ 15 ವರ್ಷಗಳ ಕಾಲ ಯಾವುದೇ ಕ್ರೀಡಾ ಆಡಳಿತದ ಹುದ್ದೆಯನ್ನು ವಹಿಸಿಕೊಳ್ಳದಂತೆ ಈ ವರ್ಷದ ಮೇ ತಿಂಗಳಲ್ಲಿ ಇವರ ಮೇಲೆ ನಿಷೇಧ ವಿಧಿಸಲಾಗಿದೆ.

ಭಾರತೀಯ ಮತ್ತು ಏಷ್ಯನ್ ಕ್ರೀಡಾ ಸಂಸ್ಥೆಗಳಲ್ಲಿ ವಿವಿಧ ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿರುವ ರಣಧೀರ್ ಅವರನ್ನು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಏಷ್ಯಾದ ಎಲ್ಲಾ 45 ದೇಶಗಳ ಉನ್ನತ ಕ್ರೀಡಾ ನಾಯಕರ ಸಮ್ಮುಖದಲ್ಲಿ ಅಧಿಕೃತವಾಗಿ ಒಸಿಎ ಅಧ್ಯಕ್ಷರಾಗಿ ನೇಮಿಸಲಾಯಿತು.

ಪಂಜಾಬಿನ ಪಟಿಯಾಲ ಮೂಲದ ರಣಧೀರ್ ಕ್ರೀಡಾಪಟುಗಳ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅವರ ಚಿಕ್ಕಪ್ಪ, ಮಹಾರಾಜ ಯಾದವೀಂದ್ರ ಸಿಂಗ್, ಭಾರತಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡಿದ್ದರು ಮತ್ತು ಐಒಸಿ ಸದಸ್ಯರಾಗಿದ್ದರು. ಅವರ ತಂದೆ ಭಲೀಂದ್ರ ಸಿಂಗ್ ಕೂಡ ಪ್ರಥಮ ದರ್ಜೆ ಕ್ರಿಕೆಟಿಗರಾಗಿದ್ದು, 1947 ಮತ್ತು 1992 ರ ನಡುವೆ ಐಒಸಿ ಸದಸ್ಯರಾಗಿದ್ದರು. ರಣಧೀರ್ 2001 ಮತ್ತು 2014 ರ ನಡುವೆ ಐಒಸಿ ಸದಸ್ಯರಾಗಿದ್ದರು. ನಂತರ ಅವರು ಐಒಸಿಯ ಗೌರವ ಸದಸ್ಯರಾಗಿ ಮುಂದುವರೆದರು.

ದೆಹಲಿ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಪದವಿ ಪಡೆದ ನಂತರ, ರಾಜಾ ರಣಧೀರ್ ಸಿಂಗ್ ಕ್ರೀಡೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಿದರು. ತಮ್ಮ ಆರಂಭಿಕ ವರ್ಷಗಳಲ್ಲಿ ಶೂಟಿಂಗ್, ಗಾಲ್ಫ್, ಈಜು, ಸ್ಕ್ವಾಷ್ ಮತ್ತು ಕ್ರಿಕೆಟ್ ಸೇರಿದಂತೆ ಹಲವಾರು ಕ್ರೀಡೆಗಳಲ್ಲಿ ಪಾಲ್ಗೊಂಡ ನಂತರ, ಅವರು ಶೂಟಿಂಗ್ ಅನ್ನು ತಮ್ಮ ವೃತ್ತಿಜೀವನದ ಮಾರ್ಗವಾಗಿ ಆರಿಸಿಕೊಂಡರು. 1968 ಮತ್ತು 1984 ರ ನಡುವೆ, ಅವರು ಒಲಿಂಪಿಕ್ಸ್​ನ ಐದು ಆವೃತ್ತಿಗಳಲ್ಲಿ ಸ್ಪರ್ಧಿಸಿದರು ಮತ್ತು ಈ ಸಾಧನೆ ಮಾಡಿದ ಎರಡನೇ ಭಾರತೀಯರಾದರು.

ಅವರು 1978 ಮತ್ತು 1994 ರ ನಡುವೆ ಏಷ್ಯನ್ ಕ್ರೀಡಾಕೂಟದ ನಾಲ್ಕು ಆವೃತ್ತಿಗಳಲ್ಲಿ ಸ್ಪರ್ಧಿಸಿದರು. 1978 ರಲ್ಲಿ ಟ್ರ್ಯಾಪ್ ಶೂಟಿಂಗ್​​ನಲ್ಲಿ ವೈಯಕ್ತಿಕ ಚಿನ್ನದ ಪದಕ, 1982 ರಲ್ಲಿ ಟ್ರ್ಯಾಪ್ ಶೂಟಿಂಗ್​​ನಲ್ಲಿ ವೈಯಕ್ತಿಕ ಕಂಚಿನ ಪದಕ ಮತ್ತು 1986 ರಲ್ಲಿ ಟ್ರ್ಯಾಪ್ ಶೂಟಿಂಗ್​​ನಲ್ಲಿ ತಂಡ ಬೆಳ್ಳಿ ಗೆದ್ದರು. ಕೆನಡಾದ ಎಡ್ಮಂಟನ್ ನಲ್ಲಿ ನಡೆದ 1978 ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಅವರು ಸ್ಪರ್ಧಿಸಿದ್ದರು.

1979 ರಲ್ಲಿ, ರಣಧೀರ್ ಸಿಂಗ್ ಅವರಿಗೆ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಮತ್ತು ಐತಿಹಾಸಿಕ ಕ್ರೀಡಾ ವೃತ್ತಿಜೀವನಕ್ಕಾಗಿ ಮಹಾರಾಜ ರಂಜಿತ್ ಸಿಂಗ್ ಪ್ರಶಸ್ತಿಯನ್ನು ನೀಡಲಾಯಿತು.

1987 ರಲ್ಲಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್​ನ ಗೌರವ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ಅವರು ಕ್ರೀಡಾ ಆಡಳಿತಕ್ಕೆ ಕಾಲಿಟ್ಟರು. ಅವರು 2012 ರವರೆಗೆ ಈ ಹುದ್ದೆಯಲ್ಲಿದ್ದರು. 1987 ರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಆಡಳಿತ ಮಂಡಳಿಯ ಸದಸ್ಯರಾದರು ಮತ್ತು 2010 ರವರೆಗೆ ಈ ಪಾತ್ರವನ್ನು ನಿರ್ವಹಿಸಿದರು. 2010 ರ ದೆಹಲಿ ಕಾಮನ್ವೆಲ್ತ್ ಕ್ರೀಡಾಕೂಟದ ಸಂಘಟನಾ ಸಮಿತಿಯ ಉಪಾಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದರು.

ಅವರು 1991 ರಲ್ಲಿ ಒಸಿಎಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು ಮತ್ತು 2015 ರವರೆಗೆ ಈ ಹುದ್ದೆಯಲ್ಲಿದ್ದರು. ನಂತರ ಅವರು 2021 ರವರೆಗೆ ಆಜೀವ ಉಪಾಧ್ಯಕ್ಷರ ಹುದ್ದೆಯನ್ನು ವಹಿಸಿಕೊಂಡರು. ನಂತರ ಅವರನ್ನು ಸಂಸ್ಥೆಯ ಹಂಗಾಮಿ ಅಧ್ಯಕ್ಷರಾಗಿ ನೇಮಿಸಲಾಯಿತು. 1998 ರಲ್ಲಿ, ರಣಧೀರ್ ಸಿಂಗ್ ಅವರನ್ನು ಆಫ್ರೋ-ಏಷ್ಯನ್ ಗೇಮ್ಸ್ ಕೌನ್ಸಿಲ್​ನ ಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು ಮತ್ತು 2007 ರವರೆಗೆ ಅವರು ಈ ಹುದ್ದೆಯಲ್ಲಿದ್ದರು.

ಇದನ್ನೂ ಓದಿ : ವಿರಾಟ್​ ಕೊಹ್ಲಿ, ಸಚಿನ್​ ತೆಂಡೂಲ್ಕರ್ ಅಲ್ಲವೇ ಅಲ್ಲ; 27 ವರ್ಷದ ಈ ಆಟಗಾರನೇ ವಿಶ್ವದ ಶ್ರೀಮಂತ ಕ್ರಿಕೆಟರ್​, ಯಾರೆಂದು ಗೊ್ತಾ? - Richest Cricketer In World

ETV Bharat Logo

Copyright © 2024 Ushodaya Enterprises Pvt. Ltd., All Rights Reserved.