ETV Bharat / sukhibhava

ಓಮ್ರಿಕಾನ್​ XBB 1.5 ತಳಿಯು ಹೆಚ್ಚು ರೂಪಾಂತರ ಹೊಂದಿದ್ದು, ಬಲು ಬೇಗ ಹರಡುತ್ತೆ! - ಹೆಚ್ಚು ರೂಪಾಂತರ

ದೇಶದಲ್ಲಿ ಏರಿಕೆಯಾಗಿರುವ ಕೋವಿಡ್​ ಸೋಂಕುಗಳಲ್ಲಿ ಈ XBB 1.5 ತಳಿ ಪತ್ತೆಯಾಗಿದ್ದು, ಇದು ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

the-omricon-xbb-1-dot-5-strain-is-highly-variable-and-spreads-very-quickly

author img

By

Published : Mar 16, 2023, 3:19 PM IST

ಟೋಕಿಯೋ( ಜಪಾನ್​): ಕಳೆದ ನಾಲ್ಕು ತಿಂಗಳವರೆಗೆ ಕಡಿಮೆ ಪ್ರಮಾಣದಲ್ಲಿದ್ದ ಕೋವಿಡ್​ ಸೋಂಕು ಇದೀಗ ದೇಶದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ದಾಖಲೆಯ ಕೋವಿಡ್​ ಪ್ರಕರಣದ ರೋಗಿಗಳಲ್ಲಿ ಈ ಹಿಂದೆ ಕಂಡು ಬಂದಿದ್ದ ಸೋಂಕಿನ ಲಕ್ಷಣಗಳು ಗೋಚರವಾಗುವುದರ ಜೊತೆಗೆ ಹೊಸ ಕೋವಿಡ್​​ ಉಪತಳಿ ಪತ್ತೆಯಾಗಿದೆ. ಸದ್ಯ ಈ XBB.1.5 ವೈರಾಣು ಹೆಚ್ಚಿನ ಸೋಂಕು ಹರಡಿವಿಕೆಗೆ ಕಾರಣವಾಗುತ್ತಿದೆ ಎಂಬುದು ವರದಿ ಆಗಿದೆ. ಈ XBB ಸೋಂಕು ಭಾರತದಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿದೆ. ಇತ್ತೀಚೆಗೆ ಏರಿಕೆಯಾದ ಪ್ರಕಾರದಲ್ಲಿ XBB.1.5 ಮತ್ತು XBB.1.6 ಕಾರಣವಾಗಿದೆ. ಇನ್​ಫ್ಲುಯೆಂಜ ವೈರಸ್​ ಜೊತೆಗೆ ಋತುಮಾನದ ವೈರಸ್​ಗಳು ಕೂಡ ಬಂದಿವೆ.

ಹೆಚ್ಚು ಪ್ರಸರಣ ಹೊಂದಿರುವ ಸೋಂಕು: ಇತ್ತೀಚಿನ ದಿನದಲ್ಲಿ ಕೋವಿಡ್​ ಸೋಂಕು ಏರಿಕೆಗೆ ಈ XBB.1.5 ಸೋಂಕು ಕಾರಣವಾಗಿದೆ. SARS-CoV-2 ಓಮ್ರಿಕಾನ್​ನ ಉಪತಳಿ XBB.1.5 ವೈರಸ್​​ ಹೆಚ್ಚು ರೂಪಾಂತರ ಹೊಂದಿದ್ದು, ಹೆಚ್ಚು ಸೋಂಕನ್ನು ತಗುಲಿಸುವ ಸಾಧ್ಯತೆ ಇದೆ ಎಂದು ಲ್ಯಾನ್ಸೆಟ್ ಇನ್​​ಫೆಕ್ಷುಸ್​ ಡಿಸೀಸ್​​ ಜರ್ನಲ್​ ತಿಳಿಸಿದೆ. ಜಪಾನ್​ನ ಯುನಿವರ್ಸಿಟಿ ಆಫ್​ ಟೋಕಿಯೋದ ಸಂಶೋಧಕರು, ಈ ಅಧ್ಯಯನ ನಡೆಸಿದ್ದು, XBB.1.5 ಹೆಚ್ಚು ಉತ್ಪಾದನಾ ಸಂಖ್ಯೆ ಹೊಂದಿದ್ದು, XBB.1 ಗಿಂತ 1.2 ಹೆಚ್ಚಿದೆ ಎಂದು ತಿಳಿಸಿದ್ದಾರೆ.

XBB.1 ಪೋಷಕ ತಳಿಯು XBB.1.5 ತಳಿಯು ಅತಿ ಹೆಚ್ಚು ಸೋಂಕು ಜನರಿಗೆ ಪ್ರಸರಣ ಮಾಡುವ ಸಾಮರ್ಥ್ಯ ಹೊಂದಿದೆ. XBB.1.5 ಜಗತ್ತಿನಾದ್ಯಂತ ವೇಗವಾಗಿ ಭವಿಷ್ಯದಲ್ಲಿ ಹರಡಬಲ್ಲದು ಎಂಬುದನ್ನು ನಮ್ಮ ದತ್ತಾಂಶ ತೋರಿಸುತ್ತದೆ ಎಂದು ವರ್ಸಿಟಿಯ ಡಿವಿಷನ್​ ಆಫ್​ ಸಿಸ್ಟಮ್ಸ್​ ವೈರಾಲಾಜಿ ಜುಪೈ ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಅವಶ್ಯ: XBB.1.5 ತಳಿಯು ಮುಂದಿನ ಸಾಂಕ್ರಾಮಿಕತೆಗೆ ಕಾರಣವಾಗುವ ಸಾಮರ್ಥ್ಯ ಹೊಂದಿದೆ ಎಂದು ಡಿವಿಷನ್​ ಆಫ್​ ಸಿಸ್ಟಮ್ಸ್​ ವೈರಾಲಾಜಿಯ ಪ್ರೊ. ಕೈ ಸಾಟೊ ತಿಳಿಸಿದ್ದಾರೆ. ಕೊರೊನಾ ವೈರಸ್ ಬಳಿಕ XBB.1.5 ಸೋಂಕು ಹೆಚ್ಚುವ ಹಿನ್ನೆಲೆ ಸಾರ್ವಜನಿಕರು ಆರೋಗ್ಯದ ಮುನ್ನೆಚ್ಚರಿಕೆ ವಹಿಸುವುದು ಅವಶ್ಯ. ಈ ಸಂಬಂದ ಸಾರ್ವಜನಿಕ ಆರೋಗ್ಯದ ನಿರ್ವಹಣೆ ವಿಚಾರದಲ್ಲಿ ಎಚ್ಚರಿಕೆ ಹೊಂದಬೇಕು ಎಂದು ಸಲಹೆ ನೀಡಿದೆ.

XBB.1.5 ತಳಿಯು ಸ್ಪೈಕ್​ (ಎಸ್​)ಪ್ರೊಟೀನ್​-ನಲ್ಲಿ ನೊವೆಲ್​ ರೂಪಾಂತರ ಹೊಂದಿದೆ. ಈ ಪ್ರೋಟಿನ್​ ಸೋಂಕ್​ ಮಾನವನ ಉಸಿರಾಟ ವ್ಯವಸ್ಥೆ ಮೇಲೆ ಹಾನಿ ಮಾಡಬಹುದು. ಮಾನವ ಜೀವ ಕೋಶಗಳಿಗೆ ಆಕ್ರಮಣ ಮಾಡುವುದನ್ನು ಸುಲಭಗೊಳಿಸುತ್ತದೆ ಎಂದಿದ್ದಾರೆ. ಸ್ಯೂಡೋವೈರಸ್‌ಗಳನ್ನು ಬಳಸಿಕೊಂಡು ಹೆಚ್ಚಿನ ಪ್ರಯೋಗಗಳು XBB.1.5 XBB.1 ಗಿಂತ ಸರಿಸುಮಾರು 3 ಪಟ್ಟು ಹೆಚ್ಚಿನ ಸೋಂಕನ್ನು ಹೊಂದಿದೆ. XBB.1.5 S ಪ್ರೊಟೀನ್ BA.2, BA.5 ಉಪ ರೂಪಾಂತರಗಳೊಂದಿಗೆ ಸೋಂಕು ತಟಸ್ಥಗೊಳಿಸುವ ಪ್ರತಿಕಾಯಗಳಿಗೆ ಹೆಚ್ಚು ನಿರೋಧಕವಾಗಿದೆ. BA.2, BA.5 ಉಪತಳಿಗಳು ಸೋಂಕು ಹೊಂದಿರುವ ರೋಗಿಗಳು XBB.1.5 ವಿರುದ್ಧ ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಬಹುದು. ಇದರಿಂದ ಸೋಂಕು ಮತ್ತು ರೋಗದ ಸಾಧ್ಯತೆ ಹೆಚ್ಚಲಿದೆ.

ಈ ಹಿಂದಿನ ಸೋಂಕುಗಳಿಗೆ ಹೋಲಿಕೆ ಮಾಡಿದರೆ XBB.1.5 ಉಪತಳಿಗಳು ಹೆಚ್ಚು ಪ್ರಸರಣವನ್ನು ಹೊಂದಿವೆ. ಈ ತಳಿಗಳ ಮಾನವನ ACE2 ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೆಚ್ಚಿರುತ್ತದೆ.

ಇದನ್ನೂ ಓದಿ: ಸೋಂಕು ಹೆಚ್ಚಿಸುವ ಉಪತಳಿ ಹೊಂದಿದೆ H3N2

ETV Bharat Logo

Copyright © 2024 Ushodaya Enterprises Pvt. Ltd., All Rights Reserved.