ETV Bharat / sukhibhava

ಬೇಸಿಗೆ ದಾಹ ತೀರಿಸಲು ಎಳನೀರು ಬೆಸ್ಟ್​; ದೇಹ ನಿರ್ಜಲೀಕರಣದಿಂದ ಪಾರು ಮಾಡುತ್ತೆ ಈ ಪಾನೀಯ

ಬೇಸಿಗೆಯಲ್ಲಿ ಪ್ರತಿಯೊಬ್ಬರನ್ನು ಕಾಡುವ ಸಮಸ್ಯೆ ನಿರ್ಜಲೀಕರಣ, ಇದರಿಂದ ಪಾರಾಗಲು ಅತ್ಯುತ್ತಮ ನೈಸರ್ಗಿಕ ಪಾನೀಯ ಆಗಿದೆ.

tender coconut water is best for quenching summer thirst

author img

By

Published : Apr 1, 2023, 2:28 PM IST

ನವದೆಹಲಿ: ಬೇಸಿಗೆ ಆರಂಭವಾಗಿದ್ದು, ಈಗಾಗಲೇ ಬಿಸಿಲಿನ ಝಳಕ್ಕೆ ಜನರು ಪರಿತಪಿಸುತ್ತಿದ್ದಾರೆ. ಬಿಸಿ ಅಲೆಯಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುವ ಹಿನ್ನೆಲೆ ಈ ಸಂಬಂಧ ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೂಚಿಸಿದೆ. ಈ ಬೇಸಿಗೆಯ ಬಿಸಿಲಿನ ತಾಪ ಹಲವು ಪ್ರದೇಶದಲ್ಲಿ 40 ರಿಂದ 45 ಡಿಗ್ರಿ ಸೆಲ್ಸಿಯಸ್​ ವರೆಗೂ ದಾಖಲಾಗುತ್ತದೆ. ಭಾರತದಲ್ಲಿ ಅನೇಕ ಮಂದಿ ಈ ಬಿಸಿಲಿನ ಅಲೆಗೆ ಸಾವನ್ನಪ್ಪಿದ ದಾಖಲೆ ಕೂಡ ಇದೆ. ಈ ಹಿನ್ನೆಲೆ ಈಗಾಗಲೇ ಅಗತ್ಯ ಕ್ರಮಕ್ಕೆ ಮುಂದಾಗಲಾಗಿದೆ. ಇದರ ಜೊತೆಗೆ ಪ್ರತಿಯೊಬ್ಬರು ವೈಯಕ್ತಿಕವಾಗಿ ಕಾಳಜಿ ವಹಿಸುವ ಮೂಲಕ ಈ ಬೇಗೆಯಿಂದ ತಪ್ಪಿಸಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಬೇಸಿಗೆಯಲ್ಲಿ ಎಲ್ಲರನ್ನು ಕಾಡುವ ಸಮಸ್ಯೆಯೆಂದರೆ ನಿರ್ಜಲೀಕರಣ ಮತ್ತು ಶಾಖದ ಬಳಲಿಕೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಈ ಋತುಮಾನದಲ್ಲಿ ಗಾಳಿಯಾಡುವ ತೆಳುವಾದ ಬಟ್ಟೆ ಧರಿಸುವುದು, ಹೆಚ್ಚಿನ ನೀರು, ಎಳನೀರು ಮತ್ತಿತರ ಪಾನೀಯ ಸೇವನೆ ಅತ್ಯವಶ್ಯ. ಜೊತೆಗೆ ಸಾಧ್ಯವಾದಷ್ಟು ಮನೆಯೊಳಗೆ ಇರುವುದು ಉತ್ತಮ. ಬೇಸಿಗೆಯ ಬಳಲಿಕೆ ನಿವಾರಣೆಗೆ ಮತ್ತು ದೇಹವನ್ನು ನಿರ್ಜಲೀಕರಣಕ್ಕೆ ಒಳಗಾಗದಂತೆ ಕಾಪಾಡುವಲ್ಲಿ ಎಳನೀರು ಪ್ರಮುಖವಾಗಿದೆ. ಈ ಎಳನೀರು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಕುರಿತು ಕೃಷಿ ತಂತ್ರಜ್ಞಾನದ ಸ್ಟ್ರಾರ್ಟ್​ ಅಪ್​​ ಸಂಸ್ಥಾಪಕರು ಮತ್ತು ಸಿಇಒ ವರುಣ್​ ಖುರಾನ್​ ತಿಳಿಸಿದ್ದಾರೆ.

ಎಲೆಕ್ಟ್ರಾಲೈಟ್ಸ್​: ಎಳನೀರಿನಲ್ಲಿ ಪೋಷಾಶಿಯಂ, ಸೋಡಿಯಂ ಮತ್ತು ಮ್ಯಾಂಗನೀಸ್​ನಂತ ಎಲೆಕ್ಟ್ರಾಲೈಟ್ಸ್​ ಅನ್ನು ಕಾಣಬಹುದು. ಈ ಪಾನಿಯ ದೇಹದಲ್ಲಿನ ನೀರಿನ ಅಂಶವನ್ನು ಸಮತೋಲನ ಮಾಡುವುದರಿಂದ ದೇಹದಲ್ಲಿ ನೀರಿನ ಕೊರತೆ ಎದುರಾಗದಂತೆ ಮಾಡುತ್ತದೆ.

ಹೈಡ್ರೇಷನ್​: ದೇಹಕ್ಕೆ ಬೇಕಾದ ಜಲ ಸಂಚಯವನ್ನು ಈ ಏಳನೀರು ಮಾಡುತ್ತದೆ. ಜೊತೆಗೆ ಇದು ಬೆವರಿನಿಂದ ನಷ್ಟವಾಗುವ ನೀರಿನಾಂಶವನ್ನು ಮರು ಸ್ಥಾಪಿಸುತ್ತದೆ. ಜೊತೆಗೆ ನಿರ್ಜಲೀಕರಣ ಮಾಡುವ ಸಕ್ಕರೆ ಅಥವಾ ಹೈ ಕ್ಯಾಲೋರಿ ಪಾನೀಯದಂತೆ ಇದು ಅಲ್ಲ.

ದೇಹಕ್ಕೆ ತಂಪು: ಎಳನೀರು ಸದಾ ದೇಹವನ್ನು ತಂಪಾಗಿಡುತ್ತದೆ. ಇದು ತಾಪಮಾನ ಮತ್ತು ಶಾಖದ ಒತ್ತಡವನ್ನು ಇದು ಹೊಡೆದೋಡಿಸುತ್ತದೆ.

ಪೋಷಕಾಂಶ: ಎಳನೀರಿನಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್​ ಸಿ ನಂತಹ ಪೋಷಕಾಂಶಗಳಿವೆ. ಜೊತೆಗೆ ದೇಹಕ್ಕೆ ಉತ್ಕರ್ಷಣ ವ್ಯವಸ್ಥೆಯ ವೃದ್ಧಿ ಮಾಡುತ್ತದೆ. ದೇಹದ ಅಸಮತೋಲನವನ್ನು ನಿವಾರಣೆ ಮಾಡುತ್ತದೆ. ಅದರಲ್ಲೂ ಬಿಸಿಲಿನ ಅಲೆಯಲ್ಲಿ ಉಂಟಾಗುವ ಅಸ್ವಸ್ಥೆತೆ ಮತ್ತು ಸೋಂಕಿನ ವಿರುದ್ಧ ಹೋರಾಡುವಂತೆ ಮಾಡುತ್ತದೆ.

ಕಡಿಮೆ ಕ್ಯಾಲೋರಿ: ಎಳನೀರು ಕಡಿಮೆ ಕ್ಯಾಲೋರಿ ಪಾನೀಯವಾಗಿದೆ. ಇದು ದೇಹಕ್ಕೆ ಅನುಕೂಲ ನೀಡಲಿದೆ.

ಇತರೆ ಪಾನೀಯಗಳಿಗೆ ಹೋಲಿಕೆ ಮಾಡಿದರೆ ಆರೋಗ್ಯ ಮತ್ತು ಯೋಗಕ್ಷೇಮದ ದೃಷ್ಟಿಯಿಂದ ಏಳನೀರು ನೈಸರ್ಗಿಕ ಜೊತೆಗೆ ಪೋಷಕಾಂಶಯುಕ್ತ ಪಾನೀಯವಾಗಿದೆ. ಈ ಎಳನೀರನ್ನು ಅನೇಕ ವಿಧದಲ್ಲಿ ನೀವು ಸವಿಯಬಹುದು. ಸ್ಮೂಥಿ ಅಥವಾ ಮೊಜಿಟೊಸ್​ನಂತ ಕಾಕ್​ಟೈಲ್ ರೂಪವಾಗಿ ಇದನ್ನು ಸೇವಿಸಬಹುದು. ಬೇಸಿಗೆಯ ಬಿಸಿಯನ್ನು ಓಡಿಸಿ, ಆರೋಗ್ಯಕರ ಲಾಭ ಪಡೆಯಲು ಏಳನೀರು ಅತ್ಯುತ್ತಮ ಆಯ್ಕೆಯಾಗಿದೆ.

ಇದನ್ನೂ ಓದಿ: ಬೇಸಿಗೆಯ ದಾಹ ತಣಿಸುತ್ತವೆ ಈ ಸ್ಮೂಥಿಗಳು: ಒಮ್ಮೆ ಟ್ರೈ ಮಾಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.