ETV Bharat / sukhibhava

World Brain Day 2023: ಮೆದುಳಿನ ಆರೋಗ್ಯದ ಬಗ್ಗೆಯೂ ಇರಲಿ ಕಾಳಜಿ..

author img

By

Published : Jul 22, 2023, 10:21 AM IST

ಇತ್ತೀಚಿನ ದಿನದಲ್ಲಿ ಜನರಲ್ಲಿ ಮೆದುಳಿನ ಸಮಸ್ಯೆ ಹೆಚ್ಚಾಗಿದ್ದು, ಮೆದುಳಿನ ಆರೋಗ್ಯವನ್ನು ಹತೋಟಿಯಲ್ಲಿಡಲು ಮತ್ತು ಮೆದುಳಿಗೆ ಸಂಬಂಧಿಸಿದ ವಿವಿಧ ರೋಗಗಳ ಆಕ್ರಮಣವನ್ನು ತಡೆಯುವುದು ಅವಶ್ಯವಾಗಿದೆ.

Take Care Of your Brain Health too
Take Care Of your Brain Health too

ಬೆಂಗಳೂರು: ಮೆದುಳು ಸಂಬಂಧಿ ಸಮಸ್ಯೆ ಮತ್ತು ಮೆದುಳಿನ ಆರೋಗ್ಯ ಕುರಿತು ಶಿಕ್ಷಣ ನೀಡುವ ಉದ್ದೇಶದಿಂದ ಜುಲೈ 22 ಅನ್ನು ಜಾಗತಿಕವಾಗಿ ವಿಶ್ವ ಮೆದುಳು ದಿನವಾಗಿ ಆಚರಿಸಲಾಗುವುದು. 2014ರಿಂದ ಈ ದಿನಾಚರಣೆ ಚಾಲ್ತಿಗೆ ಬಂದಿದ್ದು, ಪ್ರತಿ ವರ್ಷ ವಿವಿಧ ಧ್ಯೇಯಗಳೊಂದಿಗೆ ಆಚರಣೆ ಮಾಡಲಾಗುವುದು. ಮೆದುಳಿನ ಸಂಬಂಧಿ ಸಮಸ್ಯೆ ಕುರಿತು ಅನೇಕ ವಿವಿದ ಸಂಘಟನೆಗಳು ಹಲವು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಈ ಸಂಬಂಧ ಅರಿವು ಮೂಡಿಸುವ ಪ್ರಯತ್ನವನ್ನು ನಡೆಸುತ್ತವೆ.

2013ರಲ್ಲಿ ವರ್ಲ್ಡ್​ ಕಾಂಗ್ರೆಸ್​​ ಆಫ್​ ನ್ಯೂರಾಲಜಿಯ ಸಾರ್ವಜನಿಕ ಜಾಗೃತಿ ಮತ್ತು ಸಲಹಾ ಸಮಿತಿ ವಿಶ್ವ ಮೆದುಳು ದಿನವನ್ನು ಆಚರಣೆ ಮಾಡುವ ಪ್ರಸ್ತಾವವನ್ನು ಮಾಡಿತು. ಕಾರಣ ಜಾಗತಿಕವಾಗಿ ಮೆದುಳು ಸಂಬಂಧ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿತು. ಇದಾದ ಬಳಿಕ ಮೊದಲ ಬಾರಿಗೆ 2014ರಲ್ಲಿ ವಿಶ್ವ ಮಿದುಳು ದಿನವನ್ನು ಆಚರಣೆಗೆ ತರಲಾಯಿತು. ಈ ವರ್ಷ ವಿಶ್ವ ಫೆಡರೇಷನ್​​ ಆಫ್​ ನ್ಯೂರೋಲಾಜಿ ಮತ್ತು ಇಂಟರ್​ನ್ಯಾಷನಲ್​ ಹೆಡ್​ಹೆಕ್​ ಸೊಸೈಟಿ ಮಿದುಳಿನ ಅಪಸ್ಮಾರ (ಎಪಿಲೆಪ್ಸೆ) ಧ್ಯೇಯದ ಅಡಿ ದಿನಾಚರಣೆ ನಡೆಸಿತು.

ಈ ವರ್ಷ ಅಂದರೆ 2023ರಲ್ಲಿ ವಿಶ್ವ ಮೆದುಳು ದಿನವನ್ನು 'ಮೆದುಳಿನ ಆರೋಗ್ಯ ಮತ್ತು ವೈಕಲ್ಯತೆ: ಯಾರನ್ನು ಹಿಂದೆ ಬಿಡುವುದಿಲ್ಲ' (Brain Health and Disability: Leave No One Behind) ಎಂಬ ಘೋಷವಾಕ್ಯದ ಅಡಿ ಆಚರಿಸಲಾಗುತ್ತಿದೆ. ನಿಮ್ಮ ಮೆದುಳಿನ ಆರೋಗ್ಯವನ್ನು ಹತೋಟಿಯಲ್ಲಿಡಲು ಮತ್ತು ಮೆದುಳಿಗೆ ಸಂಬಂಧಿಸಿದ ವಿವಿಧ ರೋಗಗಳ ಆಕ್ರಮಣವನ್ನು ತಡೆಯುವ ಕೆಲವು ವಿಧಾನಗಳು ಈ ಕೆಳಗಿನಂತಿವೆ.

ನಿಮ್ಮ ಪ್ರತಿರಕ್ಷಣೆ ಪರೀಕ್ಷಿಸಿ: ಮೆದುಳಿನ ಆರೋಗ್ಯ ಕಾಪಾಡುವಲ್ಲಿ ಪ್ರತಿರಕ್ಷಣೆ ಅತ್ಯವಶ್ಯಕವಾಗಿದೆ. ಈ ಹಿನ್ನಲೆ ನಿಮ್ಮ ದೇಹ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಅವಶ್ಯ. ಪದೇ ಪದೇ ನಮ್ಮ ದೇಹ ಅನಾರೋಗ್ಯಕ್ಕೆ ಒಳಗಾಗುವುದರಿಂದ ಮೆದುಳು ಕೂಡ ಗಂಭೀರವಾಗಿ ಹಾನಿಯಾಗುತ್ತದೆ. ಇಂತಹ ಪರಿಸ್ಥಿತಿ ಮೆದುಳಿನ ಸಾಮರ್ಥ್ಯ ಮತ್ತು ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ನಿಮ್ಮ ದೇಹವನ್ನು ಉತ್ತಮ ಆಹಾರ ಪದ್ಧತಿ ಮೂಲಕ ಆರೋಗ್ಯವಾಗಿರಿಸಿಕೊಳ್ಳಬೇಕು.

ಯೋಗ ಮತ್ತು ಧ್ಯಾನ ಅಭ್ಯಾಸ: ಒತ್ತಡಗಳಿಂದ ಮುಕ್ತವಾಗಿ ನಿಮ್ಮ ಮನಸಿನ ಆರೋಗ್ಯವನ್ನು ಕಾಪಾಡುವುದು ಅವಶ್ಯಕವಾಗುತ್ತದೆ. ಇದನ್ನು ಮಾಡಲು ಯೋಗ ಮತ್ತು ಧ್ಯಾನವನ್ನು ಅಭ್ಯಾಸವನ್ನು ನಿಯಮಿತವಾಗಿ ರೂಢಿಮಾಡಿಕೊಳ್ಳುವುದು ಉತ್ತಮ. ಯೋಗ ನಿಮ್ಮ ದೇಹವನ್ನು ಫಿಟ್​ ಆಗಿ ಇರಿಸಿದರೆ, ಧ್ಯಾನ ನಿಮ್ಮ ಮನಸಿನ ದುಗುಡಗಳನ್ನು ದೂರ ಮಾಡುತ್ತದೆ. ದೈನಂದಿನ ನಡಿಗೆ ಅಭ್ಯಾಸ ಕೂಡ ನಿಮಗೆ ಸಹಾಯ ಮಾಡುತ್ತದೆ.

ಉತ್ತಮ ನಿದ್ದೆ: ನಿದ್ದೆಯ ಕೊರತೆ ಕೂಡ ಮೆದುಳಿಗೆ ಹಾನಿ ಮಾಡುತ್ತದೆ. ಈ ಹಿನ್ನೆಲೆ ನಿದ್ರೆಯ ದಿನಚರಿಯನ್ನು ಉತ್ತಮವಾಗಿ ರೂಢಿಸಿಕೊಳ್ಳಬೇಕು. ಕನಿಷ್ಠ 8 ಗಂಟೆಯ ನಿದ್ದೆಯನ್ನು ಮಾಡುವುದು ಅತ್ಯವಶ್ಯಕವಾಗಿದೆ.

ಈ ಆಹಾರದಿಂದ ದೂರವಿರಿ: ಆಹಾರಗಳು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ಆಲ್ಕೋಹಾಲ್​, ಸಿಗರೇಟ್​, ತಂಬಾಕು, ಫಾಸ್ಟ್​ ಫುಡ್​, ಜಂಕ್​ ಫುಡ್​ ನಂತಹ ಆಹಾರದಿಂದ ದೂರವಿರಿ, ಇದರ ಬದಲು ವಾಲ್ನಟ್​, ಬಾದಾಮಿ, ಫ್ಲೇಕ್ಸ್​ ಸಿಡ್ಸ್​, ಕುಂಬಳಕಾಯಿ ಬೀಜ, ಮುಂತಾದವುಗಳ ಸೇವನೆಗೆ ಒತ್ತು ನೀಡಿ.

ಇದನ್ನೂ ಓದಿ: ಪಾರ್ಕಿನ್ಸನ್​ ಕಾಯಿಲೆ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿ ಇದು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.