ETV Bharat / sukhibhava

World Food Day: ಹಸಿವನ್ನು ಎದುರಿಸುವೆಡೆ ಹೆಜ್ಜೆ ಇಡಿ..

author img

By

Published : Oct 16, 2021, 2:12 PM IST

ಜಗತ್ತಿನಲ್ಲಿ 79.5 ಕೋಟಿ ಜನರು ಇನ್ನೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಸಾವನ್ನಪ್ಪುವ ಮಕ್ಕಳಲ್ಲಿ ಶೇ.50 ರಷ್ಟು ಚಿಣ್ಣರ ಸಾವಿಗೆ ಅಪೌಷ್ಟಿಕತೆ ಕಾರಣವಾಗಿರುತ್ತದೆ ಎಂದು ಅಂಕಿ-ಅಂಶಗಳು ಹೇಳುತ್ತಿವೆ.

ವಿಶ್ವ ಆಹಾರ ದಿನ
ವಿಶ್ವ ಆಹಾರ ದಿನ

ವಿಶ್ವಸಂಸ್ಥೆಯ ಪ್ರಕಾರ, ಪ್ರಪಂಚದಾದ್ಯಂತದ ಜನರ ಅಗತ್ಯಗಳನ್ನು ಪೂರೈಸುವ ಎಲ್ಲಾ ಆಹಾರ ಪದಾರ್ಥ ಲಭ್ಯವಿದ್ದರೂ, ಪ್ರತಿ ಒಂಬತ್ತು ಜನರಲ್ಲಿ ಒಬ್ಬರು ತಮ್ಮ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಏಷ್ಯಾದಲ್ಲಿ ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗ ಅಂತವರು ವಾಸಿಸುತ್ತಿದ್ದಾರೆ. ಪ್ರಪಂಚದ ಆಹಾರ ಮತ್ತು ಕೃಷಿ ವ್ಯವಸ್ಥೆಗಳ ಅಭಿವೃದ್ಧಿಗೆ ಹೆಚ್ಚಿನ ಪ್ರಯತ್ನಗಳನ್ನು ಮಾಡದಿದ್ದರೆ, 2050ರ ವೇಳೆಗೆ, ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಎರಡು ಶತಕೋಟಿಗೆ ತಲುಪುತ್ತದೆ ಎಂದು ಹೇಳಲಾಗಿದೆ.

ವಿಶ್ವ ಆಹಾರ ದಿನ

ಜಗತ್ತಿನಾದ್ಯಂತ ಹಸಿವಿನ ಸಮಸ್ಯೆಗಳನ್ನು ಎದುರಿಸಲು ಮತ್ತು ಎಲ್ಲರಿಗೂ ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಪ್ರತಿ ವರ್ಷ ಅಕ್ಟೋಬರ್ 16 ರಂದು 'ವಿಶ್ವ ಆಹಾರ ದಿನ'ವನ್ನು ಆಚರಿಸಲಾಗುತ್ತದೆ. ಅಷ್ಟೇ ಅಲ್ಲ, ಈ ದಿನವು ಆಹಾರ ಮತ್ತು ಕೃಷಿ ಸಂಸ್ಥೆ (FAO) ವಾರ್ಷಿಕೋತ್ಸವಕ್ಕೂ ಸಾಕ್ಷಿಯಾಗುವುದರಿಂದ ಹೆಚ್ಚು ಮಹತ್ವ ಪಡೆದುಕೊಂಡಿದೆ.

1979 ರಲ್ಲಿ ವಿಶ್ವ ಆಹಾರ ದಿನವನ್ನು ಮೊದಲು ಹಂಗೇರಿಯನ್ ಮಾಜಿ ಕೃಷಿ ಮತ್ತು ಆಹಾರ ಸಚಿವ ಡಾ. ಪಾಲ್ ರೋಮಾನಿ ಆಚರಿಸಿದರು. ಇದೀಗ ವಿಶ್ವದ 150ಕ್ಕೂ ಹೆಚ್ಚು ದೇಶಗಳು ಆಚರಿಸುತ್ತವೆ. 1945ರ ಅಕ್ಟೋಬರ್​ 16ರಂದು ಆಹಾರ ಮತ್ತು ಕೃಷಿ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. "ಬೆಳೆಯಿರಿ, ಪೋಷಿಸಿ, ಉಳಿಸಿಕೊಳ್ಳಿ. ಒಂದು ಗೂಡಿ. ನಮ್ಮ ಇಂದಿನ ಕಾರ್ಯಗಳೇ ನಮ್ಮ ಭವಿಷ್ಯ" ಎಂಬುದು ಈ ಬಾರಿಯ ವಿಶ್ವ ಆಹಾರ ದಿನದ ಘೋಷ ವಾಕ್ಯವಾಗಿದೆ.

ಅಂಕಿ-ಅಂಶಗಳು ಏನ್​ ಹೇಳುತ್ತವೆ?

ವಿಶ್ವಸಂಸ್ಥೆಯ ಪ್ರಕಾರ, 1990ರ ನಂತರ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶದಲ್ಲಿ ಅಪೌಷ್ಟಿಕ ಜನರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ. 1990-1992ರಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ಸಂಖ್ಯೆ ಶೇ.23.3ರಷ್ಟು ಇತ್ತು. 2014-2016ರಲ್ಲಿ ಈ ಪ್ರಮಾಣ ಶೇ.12.9ಕ್ಕೆ ಇಳಿದಿದೆ. ಆದರೆ ವಿಶ್ವದಲ್ಲಿ 79.5 ಕೋಟಿ ಜನರು ಇನ್ನೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಪೈಕಿ ಶೇ.99ರಷ್ಟು ಮಂದಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಈ ಪೈಕಿ ಶೇ.60ರಷ್ಟು ಮಂದಿ ಮಹಿಳೆಯರಾಗಿದ್ದಾರೆಂಬುದು ಮತ್ತೊಂದು ಗಮನಿಸಬೇಕಾದ ಅಂಶವಾಗಿದೆ.

ಇದನ್ನೂ ಓದಿ: ಜಾಗತಿಕ ಹಸಿವು ಸೂಚ್ಯಂಕದಲ್ಲಿ 101ನೇ ಸ್ಥಾನ.. ಅವೈಜ್ಞಾನಿಕ ವರದಿ ಎಂದು ಆಕ್ಷೇಪ ವ್ಯಕ್ತಪಡಿಸಿದ ಭಾರತ

ಅಲ್ಲದೇ, ಪ್ರತಿ ವರ್ಷ, ಸುಮಾರು 20 ಮಿಲಿಯನ್ ಮಕ್ಕಳು ಕಡಿಮೆ ತೂಕದೊಂದಿಗೆ ಜನಿಸುತ್ತಾರೆ. ಏಕೆಂದರೆ ಮಹಿಳೆಯರು ಗರ್ಭಿಣಿಯಾಗಿರುವ ವೇಳೆ ಅವರು ಪೌಷ್ಟಿಕಾಂಶದ ಕೊರತೆ ಎದುರಿಸಿರುತ್ತಾರೆ. 5 ಕ್ಕಿಂತ ಕಡಿಮೆ ವಯಸ್ಸಿನಲ್ಲಿ ಸಾವನ್ನಪ್ಪುವ ಮಕ್ಕಳಲ್ಲಿ ಶೇ.50 ರಷ್ಟು ಮಕ್ಕಳ ಸಾವಿಗೆ ಅಪೌಷ್ಟಿಕತೆ ಕಾರಣವಾಗಿರುತ್ತದೆ ಎಂದರೆ ನೀವು ನಂಬಲೇಬೇಕಿದೆ.

ಭಾರತದಲ್ಲಿ 9.2 ಲಕ್ಷ ಮಕ್ಕಳಿಗೆ ಅಪೌಷ್ಟಿಕತೆ

ಇತ್ತೀಚೆಗೆ, ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ, ಅಪೌಷ್ಟಿಕತೆಗೆ ಸಂಬಂಧಿಸಿದಂತೆ ಭಾರತದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ಕೇಳಲಾಯಿತು. ಮಾಹಿತಿಯ ಪ್ರಕಾರ, ನವೆಂಬರ್ 2020 ರವರೆಗೆ, ಭಾರತದಲ್ಲಿ ಆರು ತಿಂಗಳಿಂದ ಆರು ವರ್ಷದೊಳಗಿನ ಸುಮಾರು 9,27,606 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಆಹಾರ ಮತ್ತು ಕೃಷಿ ಸಂಸ್ಥೆ (FAO) ಅಂಕಿ-ಅಂಶಗಳ ಪ್ರಕಾರ, 3 ಶತಕೋಟಿಗೂ ಹೆಚ್ಚು ಜನರು, ಅಂದರೆ ವಿಶ್ವದ ಜನಸಂಖ್ಯೆಯ ಸುಮಾರು ಶೇ.40ರಷ್ಟು ಜನರು ಆರೋಗ್ಯಕರ ಆಹಾರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಇತ್ತ ಎರಡು ಶತಕೋಟಿ ಜನರು ಕಳಪೆ ಆಹಾರ ಮತ್ತು ಜಡ ಜೀವನಶೈಲಿಯಿಂದಾಗಿ ಬೊಜ್ಜು ಅಥವಾ ಅಧಿಕ ತೂಕ ಹೊಂದಿದ್ದಾರೆ.

ಜಾಗತಿಕ ಹಸಿವು ಸೂಚ್ಯಂಕ-2021

ನಿನ್ನೆಯಷ್ಟೇ ಜಾಗತಿಕ ಹಸಿವು ಸೂಚ್ಯಂಕ (GHI-Global Hunger Index) ಪ್ರಕಟವಾಗಿದೆ. ಇಲ್ಲಿ ಜಗತ್ತಿನ ಸುಮಾರು 116 ರಾಷ್ಟ್ರಗಳಲ್ಲಿರುವ ಹಸಿವಿನ ಬಗ್ಗೆ ಅಂಕಿ-ಅಂಶಗಳನ್ನು ಸಂಗ್ರಹಿಸಿ ಶ್ರೇಯಾಂಕವನ್ನು ನೀಡಲಾಗಿದೆ. 2021ರ ಹಸಿವು ಸೂಚ್ಯಂಕದ ಪ್ರಕಾರ ಹಸಿವಿನ ವಿಚಾರದಲ್ಲಿ ಭಾರತದ ಸ್ಥಿತಿ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳಿಗಿಂತ ಹೀನಾಯವಾಗಿದೆ. ಭಾರತಕ್ಕೆ 101ನೇ ಸ್ಥಾನ ನೀಡಲಾಗಿದ್ದು, ಇದು ಅವೈಜ್ಞಾನಿಕ ವರದಿ ಎಂದು ಭಾರತ ಆಕ್ಷೇಪ ವ್ಯಕ್ತಪಡಿಸಿದೆ.

ಆದ್ದರಿಂದ, ನಾವು ವಿಶ್ವ ಆಹಾರ ದಿನವನ್ನು ಆಚರಿಸುವಾಗ, ನಮಗೆ ತಿನ್ನಲು ಸಿಗುವ ತುತ್ತು ಅನ್ನಕ್ಕಾಗಿ ಕೃತಜ್ಞರಾಗಿರುವುದಾಗಿ ಹಾಗೂ ಆಹಾರ ವ್ಯರ್ಥ ಮಾಡದಂತೆ ಪ್ರತಿಜ್ಞೆ ಮಾಡೋಣ. ಅಗತ್ಯವಿರುವವರಿಗೆ ಆಹಾರವನ್ನು ನೀಡಲು, ಹಸಿವನ್ನು ಹೋಗಲಾಡಿಸಲು ನಾವು ಕೂಡ ನಮ್ಮ ಕೈಗಳನ್ನು ಸೇರಿಸೋಣ. ಹಸಿವನ್ನು ಎದುರಿಸುವೆಡೆ ಒಂದು ಹೆಜ್ಜೆ ಇಡೋಣ. ಅಪೌಷ್ಟಿಕತೆಯಿಂದ ಯಾರೂ ಬಳಲದಂತೆ, ಯಾರೂ ಸಾಯದಂತೆ ಮಾಡಲು ನಮ್ಮ ಕೈಲಾದಷ್ಟು ಸಹಾಯ ಮಾಡೋಣ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.