ಹೈದರಾಬಾದ್: ಸಿಹಿ ಗೆಣೆಸು ಅಥವಾ ಸಿಹಿ ಆಲೂಗಡ್ಡೆಗಳು ಅತ್ಯಧಿಕ ಪೋಷಕಾಂಶಗಳಿಂದ ಕೂಡಿದೆ. ವೈಜ್ಞಾನಿಕ ಅಧ್ಯಯನಗಳಿಂದ ಸಾಬೀತಾಗಿರುವಂತೆ ಇದರಲ್ಲಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಇದು ಹೊಂದಿದೆ. ಇದರಲ್ಲಿ ಪ್ರಮುಖವಾಗಿ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಿದ್ದು, ಆರೋಗ್ಯದ ಜೊತೆಗೆ ರುಚಿ ಹೆಚ್ಚಿಸುತ್ತದೆ.
ಪೋಷಕಾಂಶಗಳು: ಜರ್ನಲ್ ಆಫ್ ಫುಡ್ ಕಂಪೋಸಿಷನ್ ಮತ್ತು ಅನಾಲೈಸ್ನಲ್ಲಿ ಪ್ರಕಟವಾದ ಸಂಶೋಧನೆ ಅನುಸಾರ, ಸಿಹಿ ಆಲೂಗಡ್ಡೆಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಕಣ್ಣಿನ ದೃಷ್ಟಿ ಮತ್ತು ಚರ್ಮದ ಆರೋಗ್ಯ ನಿರ್ವಹಣೆ ಮಾಡಲು ಸಿಹಿ ಆಲೂಗಡ್ಡೆ ಸಹಾಯ ಮಾಡುತ್ತದೆ.
ಜರ್ನಲ್ ಆಫ್ ದಿ ಅಕಾಡೆಮಿ ಆಫ್ ನ್ಯೂಟ್ರಿಷಿಯನ್ ಅಂಡ್ ಡಯಾಬೀಟಿಸ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಇದರಲ್ಲಿ ವಿಟಮಿನ್ ಸಿ, ಪೋಟಾಶಿಯಂ, ಫೈಬರ್, ಉತ್ಕರ್ಷಣ ನಿರೋಧಕ ಗುಣ ಇದ್ದು, ಇದು ಒಟ್ಟಾರೆ ಆರೋಗ್ಯ ನಿರ್ವಹಣೆಗೆ ಸಹಾಯ ಮಾಡುತ್ತದೆ.
ಆರೋಗ್ಯ ಪ್ರಯೋಜನಗಳು:- ಕಣ್ಣಿನ ದೃಷ್ಟಿ ಮತ್ತು ಚರ್ಮದ ಆರೋಗ್ಯ: ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷಿಯನ್ ಸೇರಿದಂತೆ ವಿಜ್ಞಾನಿಗಳ ಅಧ್ಯಯನ ಅನುಸಾರ, ಇದರಲ್ಲಿರುವ ವಿಟಮಿನ್ ಎ ಕಣ್ಣಿನ ದೃಷ್ಟಿ ಮತ್ತು ಚರ್ಮದ ಆರೋಗ್ಯಕ್ಕೆ ಹೆಚ್ಚು ಸಹಾಯಕಾರಿಯಾಗಿದೆ.
ರೋಗ ನಿರೋಧಕ ಶಕ್ತಿ ಅಭಿವೃದ್ಧಿ: ನ್ಯೂಟ್ರಿಷಿಯನ್ ಜರ್ನಲ್ ಪ್ರಸ್ತುತ ಪಡಿಸದಂತೆ ಇದರಲ್ಲಿನ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕ ಶಕ್ತಿಗಳು ದೇಹದ ರೋಘ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಅಲ್ಲದೇ ಇದು ಚಯಾಪಚಯ ಆರೋಗ್ಯ ಸುಧಾರಿಸಲಿದ್ದು, ಉಬ್ಬರವನ್ನು ಕಡಿಮೆ ಮಾಡುತ್ತದೆ.
ಹೃದಯದ ಆರೋಗ್ಯ: ಜರ್ನಲ್ ಆಫ್ ಹೈಪರ್ಟೆಷನ್ನಲ್ಲಿ ಪ್ರಕಟವಾದದಂತೆ ಇದರಲ್ಲಿನ ಪೋಟಾಶಿಯಂ ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸಿ, ಹೃದಯ ರಕ್ತನಾಳ ರೋಗದ ಅಪಾಯವನ್ನು ತಗ್ಗಿಸುತ್ತದೆ.
ಸಾಮರ್ಥ್ಯದಾಯಕ ಅಡ್ಡ ಪರಿಣಾಮ: ಸಂಶೋಧನಾ ಅಧ್ಯಯನಗಳ ಪ್ರಕಾರ, ಈ ಸಿಹಿ ಗೆಣಸುಗಳು ಕೆಲವು ಸಣ್ಣ ಅಡ್ಡ ಪರಿಣಾಮಗಳನ್ನು ಹೊಂದಿದೆ.
ಕಾರ್ಬೋಹೈಡ್ರೇಟ್ ಅಂಶ: ಜರ್ನಲ್ ಆಫ್ ಡಯಾಬೀಟಿಸ್ ರಿಸರ್ಚ್ ಅಧ್ಯಯನದ ಅನುಸಾರ ಮಧುಮೇಹಿಗಳು ಇದನ್ನು ಸೇವಿಸುವಾಗ ಎಚ್ಚರವಹಿಸಬೇಕು. ಇದರಲ್ಲಿ ಕಾರ್ಬೋಹೈಡ್ರೇಟ್ ಅಂಶ ರಕ್ತದ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ಸುಧಾರಿತ ಪ್ರಮಾಣದಲ್ಲಿ ಇದರ ಸೇವನೆ ಮಾಡುವುದು ಒಳ್ಳೆಯದು
ಒಕ್ಸಲೆಟ್ಸ್: ಜರ್ನಲ್ ಆಫ್ ದಿ ಅಮೆರಿಕನ್ ಸೊಸೈಟಿ ಆಫ್ ನೆಫ್ರಾಲಾಜಿಯ ಅಧ್ಯಯನ ಅನುಸಾರ, ಇದರಲ್ಲಿನ ಒಕ್ಸಲೆಟ್ಸ್ ಇದ್ದು, ಇದು ಕಿಡ್ನಿ ಕಲ್ಲಿಗೆ ಕಾರಣವಾಗಬಹುದು.
ಅಲರ್ಜಿ: ಜರ್ನಲ್ ಆಫ್ ಆಲರ್ಜಿ ಮತ್ತು ಕ್ಲಿನಿಕಲ್ ಇಮ್ಯೂನೊಲಾಜಿ ಅಧ್ಯಯನದ ಅನುಸಾರ, ಇದು ಕೆಲವರಲ್ಲಿ ಅಲರ್ಜಿ ಪ್ರತಿಕ್ರಿಯೆನ್ನು ಹೊಂದಿರಬಹುದು. ಈ ಲಕ್ಷಣ ಗಮನಿಸಿ ಸೇವಿಸುವುದು ಅಗತ್ಯವಾಗಿದೆ.
ಸಮತೋಲಿತ ಸೇವನೆ: ಸಿಹಿ ಗೆಣಸಿನಲ್ಲಿ ಸಿಹಿ ಅಂಶ ಇರುವ ಹಿನ್ನಲೆ ರಕ್ತದ ಸಕ್ಕರೆ ಮಟ್ಟ ಅಥವಾ ಕಾರ್ಬೋಹೈಡ್ರೇಟ್ ಗಮನಿಸಿ ಸುಧಾರಿತ ಪ್ರಮಾಣದಲ್ಲಿ ಸೇವನೆ ಮಾಡುವುದು ಉತ್ತಮ.
ಇದನ್ನೂ ಓದಿ: ಚಳಿಗಾಲದಲ್ಲಿ ಕಾಡುವ ಅಸ್ಥಿಸಂಧಿವಾತ ಸಮಸ್ಯೆಗೆ ಈ ಆಹಾರಗಳ ಸೇವನೆ ಅವಶ್ಯ