ಲಂಡನ್: ಸ್ಥೂಲಕಾಯ ಹೊಂದಿರುವ ಮಂದಿ ತಮ್ಮ ದೇಹ ತೂಕವನ್ನು ಸರ್ಜರಿ ಮೂಲಕ ಇಳಿಕೆ ಮಾಡಿಕೊಂಡವರು ಸರ್ಜರಿಗಿಂತಲೂ ಅಧಿಕ ಮಟ್ಟದಲ್ಲಿ ದಂತಕ್ಷಯದ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ ಎಂದು ಅಧ್ಯಯನಯೊಂದು ತಿಳಿಸಿದೆ. ಸ್ವೀಡನ್ನ ಗುಟ್ಟನ್ಬರ್ಗ್ ಯುನಿವರ್ಸಿಟಿ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ತೂಕ ಇಳಿಕೆಯ ಸರ್ಜರಿಗಗಳು ಬಾಯಿ ಆರೋಗ್ಯ ಕ್ಷೀಣಿಸುವಿಕೆಗೆ ಕಾರಣವಾಗುತ್ತದೆ ಎಂದಿದ್ದಾರೆ.
ಸರ್ಜಿಕಲ್ ಸ್ಥೂಲಕಾಯದ ಚಿಕಿತ್ಸೆಗಳ ಅನುಭವಕ್ಕೆ ಒಳಗಾದವರಲ್ಲಿ ಅನೇಕ ಬಗೆಯ ಬಾಯಿ ಸಮಸ್ಯೆ ಲಕ್ಷಣಗಳು ಕಂಡು ಬರುತ್ತದೆ. ಇದು ಅವರ ಬಾಯಿಯ ಆರೋಗ್ಯದ ಗುಣಮಟ್ಟದ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಗುಟ್ಟೆನ್ಬರ್ಗ್ ಯುನಿವರ್ಸಿಟಿಯ ಸಂಶೋಧಕ ನೆಗಿನ್ ತಗ್ಹಟ್ ತಿಳಿಸಿದ್ದಾರೆ.
ಇನ್ನು ಈ ರೀತಿಯ ವೈಯಕ್ತಿಕ ಸರ್ಜರಿಗೆ ಒಳಗಾದವರಲ್ಲಿ ಅರ್ಧದಷ್ಟು ಮಂದಿ ಕಳಪೆ ಆರೋಗ್ಯವನ್ನು ಹೊಂದಿದ್ದಾರೆ. ಈ ಸಂಶೋಧನೆಗಾಗಿ 118 ಮಂದಿ ಸ್ಥೂಲಕಾಯದವರ ಗುಂಪನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರಲ್ಲಿ ಅಧಿಕ ದೇಹ ಸೂಚ್ಯಂಕ (ಬಿಎಂಐ) ಹೊಂದಿರುವವರಲ್ಲಿ ಅಧಿಕ ದಂತಕ್ಷಯದ ಅಪಾಯವನ್ನು ಹೊಂದಿದ್ದಾರೆ. ಅಧಿಕ ಬಿಎಂಐ ಮೌಲ್ಯಗಳು ಕ್ಷಯದ ದುಪ್ಪಟ್ಟು ಅಪಾಯವನ್ನು ಹೊಂದಿದೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಈ ಗುಂಪಿನ ಮಂದಿ ಸ್ಥೂಲಕಾಯದ ಸರ್ಜರಿ ಅಥವಾ ಮೆಡಿಕಲ್ ಚಿಕಿತ್ಸೆಗೆ ಒಳಗಾದ ಎರಡು ವರ್ಷದ ಬಳಿಕ ಅವರಲ್ಲಿ ಕ್ಷಯದ ಸಮಸ್ಯೆ ಉದ್ಬವವಾಗುವ ಸಾಧ್ಯತೆ ಇದೆ. ಸರ್ಜರಿಗೆ ಒಳಗಾದವರಲ್ಲಿ ಸರಿಸುಯಮಾರು 15.0 ಕ್ಷಯ ಮತ್ತು 19.1 ರಷ್ಟು ಹಲ್ಲಿನ ಎನೋಮಲ್ ನಷ್ಟ ಕಂಡು ಬಂದಿದೆ. ಅಧ್ಯಯನಕ್ಕೆ ಒಳಗಾದ ವೈದ್ಯಕೀಯ ಚಿಕಿತ್ಸೆ ಪಡೆದ ಗುಂಪಿನಲ್ಲಿ ಎನೋಮಲ್ ನಷ್ಟ ಗೋಚರಿಸಿದೆ.
ದಂತದಲ್ಲಿ ಆಳವಾದ ಕ್ಷಯದ ಗಾಯಗಳಿಗೆ ಸಂಬಂಧಿಸಿದೆ, ಸರಾಸರಿ ಪೂರ್ವಚಿಕಿತ್ಸೆಯ ಆರಂಭಿಕ ಮೌಲ್ಯವು 4.3 ಗಾಯಗಳಾಗಿರುತ್ತದೆ. ಚಿಕಿತ್ಸೆಯ ಎರಡಯ ವರ್ಷದ ಬಳಿಕ ಸರ್ಜರಿಗೆ ಒಳಗಾದ ಗುಂಪುಗಳಲ್ಲಿ ದಂತ ಕ್ಷಯ 6.4ರಷ್ಟು ಕಂಡು ಬಂದಿದ್ದರೆ, ಮೆಡಿಕಲ್ ಚಿಕಿತ್ಸೆ ಗುಂಪಿನಲ್ಲಿ 4.9ರಷ್ಟು ಕಂಡು ಬಂದಿದೆ. ಇವರಲ್ಲಿ ಹೈಪರ್ಸೆನ್ಸಿಟಿವ್ ಮತ್ತು ಜಗಿಯುವಿಕೆ ಸಮಸ್ಯೆಗಳ ಸಾಮಾನ್ಯ ಲಕ್ಷಣಗಳು ಕಂಡು ಬಂದಿದೆ. ಇದು ಸಾಮಾಜಿಕ ಅನಾನುಕೂಲತೆಗೂ ಕೂಡ ಕಾರಣವಾಗುತ್ತದೆ.
ಆರೋಗ್ಯ ವೃತ್ತಿಪರರು ಮತ್ತು ದಂತ ವೃತ್ತಿಪರರು ಈ ರೋಗಿಗಳ ಗುಂಪನ್ನು ಪ್ರತಿನಿತ್ಯ ಕೆಲಸದಲ್ಲಿ ಭೇಟಿಯಾಗುತ್ತಿದ್ದಾರೆ. ಸ್ಥೂಲಕಾಯತೆ ಮತ್ತು ಸ್ಥೂಲಕಾಯತೆಯ ಚಿಕಿತ್ಸೆಯಿಂದ ಬಾಯಿಯ ಆರೋಗ್ಯವು ಪರಿಣಾಮ ಬೀರಬಹುದು ಎಂದು ಸಿಬ್ಬಂದಿಗೆ ತಿಳಿದಿರುವುದು ಬಹಳ ಮುಖ್ಯ, ಆದ್ದರಿಂದ ತಡೆಗಟ್ಟುವ ಕ್ರಮಗಳನ್ನು ಯೋಜಿಸಬಹುದು ಎಂದು ತಿಳಿಸಿದರು. (ಐಎಎನ್ಎಸ್)
ಇದನ್ನೂ ಓದಿ: ಮಲೇರಿಯಾ ಅಪಾಯ ಹೆಚ್ಚಿಸುವ ಕರುಳಿನ ಬ್ಯಾಕ್ಟೀರಿಯಾಗಳು: ಅಧ್ಯಯನ ವರದಿ