ವಾಷಿಂಗ್ಟನ್ (ಯುಎಸ್): ಹೆಚ್ಚು ವ್ಯಾಯಾಮ ಮಾಡುವುದು, ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ಮತ್ತು ಹೊಸ ಹೊಸ ಜನರನ್ನು ಭೇಟಿಯಾಗುವುದು ಇವೆಲ್ಲವೂ ಒಳ್ಳೆಯ ಅಭ್ಯಾಸಗಳಾಗಿವೆ. ಹೊಸ ಸಿಯು ಬೌಲ್ಡರ್ ಸಂಶೋಧನೆಯು ಕೈತೋಟದ ಕೆಲಸ ಮನುಷ್ಯರ ಆರೋಗ್ಯದ ಮೇಲೆ ಗಮನಾರ್ಹ ಪ್ರಭಾವವನ್ನು ಬಿರುತ್ತದೆ ಎಂದು ತಿಳಿಸಿದೆ. ಅಮೆರಿಕನ್ ಕ್ಯಾನ್ಸರ್ ಸೊಸೈಟಿಯಿಂದ ಧನಸಹಾಯ ಪಡೆದ, ಸಮುದಾಯ ಕೈತೋಟಗಾರಿಕೆಯ ಮೊದಲ ನಿಯಂತ್ರಿತ ಪ್ರಯೋಗವು ಕೈತೋಟವನ್ನು ಪ್ರಾರಂಭಿಸಿದವರು ಹೆಚ್ಚು ಫೈಬರ್ ಯುಕ್ತ ಆಹಾರವನ್ನು ತಿನ್ನುತ್ತಾರೆ ಮತ್ತು ಹೆಚ್ಚು ದೈಹಿಕ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ ಎಂದು ತಿಳಿಸಿದೆ.
ಈ ಎರಡು ಮಾರ್ಗಗಳಿಂದ ಕ್ಯಾನ್ಸರ್ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ ಮತ್ತು ಇದರಿಂದ ಒತ್ತಡ ಮತ್ತು ಆತಂಕದ ಮಟ್ಟ ಕಡಿಮೆಯಾಗುವುದನ್ನು ಸಂಶೋಧಕರು ನಿರಂತರ ಅಧ್ಯಯನದಿಂದ ಕಂಡುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತ ಸಂಶೋಧನೆಗಳು ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾಗಿವೆ. ಕ್ಯಾನ್ಸರ್, ದೀರ್ಘಕಾಲದ ಕಾಯಿಲೆಗಳು ಮತ್ತು ಮಾನಸಿಕ ಆರೋಗ್ಯ ಅಸ್ವಸ್ಥತೆಗಳನ್ನು ತಡೆಗಟ್ಟುವಲ್ಲಿ ಸಮುದಾಯ ಕೈತೋಟ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದಕ್ಕೆ ಈ ಸಂಶೋಧನೆಗಳು ದೃಢವಾದ ಪುರಾವೆಗಳನ್ನು ಒದಗಿಸುತ್ತವೆ ಎಂದು ಸಿಯು ಬೌಲ್ಡರ್‌ನಲ್ಲಿನ ಪರಿಸರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಹಾಗೂ ಹಿರಿಯ ಲೇಖಕ ಜಿಲ್ ಲಿಟ್ ತಿಳಿಸಿದ್ದಾರೆ.
ಲಿಟ್ ತಮ್ಮ ವೃತ್ತಿಜೀವನದಲ್ಲಿ ಬಹುಪಾಲು ಕಾಯಿಲೆಗಳಿಂದ ಉಟಾಗುವ ಅಪಾಯಗಳನ್ನು ಕಡಿಮೆ ಮಾಡಲು ಹಾಗೂ ವಿಶೇಷವಾಗಿ ಕಡಿಮೆ ಆದಾಯದ ಸಮುದಾಯಗಳಿಗಾಗಿ, ಕೈಗೆಟುಕುವ, ಸ್ಕೇಲೆಬಲ್ ಮತ್ತು ಸುಸ್ಥಿರ ಮಾರ್ಗಗಳನ್ನು ಗುರುತಿಸಲು ಪ್ರಯತ್ನಿಸಿದ್ದಾರೆ.
ತೋಟದ ಕೆಲಸ ಮಾಡುವ ಜನರು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುತ್ತಾರೆ : ಬಾರ್ಸಿಲೋನಾ ಇನ್‌ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್‌ನ ಸಂಶೋಧಕರೂ ಆಗಿರುವ ಲಿಟ್, ನೀವು ಎಲ್ಲಿಗೆ ಹೋದರೂ, ಜನರು ಕೈತೋಟದ ಬಗ್ಗೆ ಉತ್ತಮ ಭಾವನೆಯನ್ನು ವ್ಯಕ್ತಪಡಿಸುತ್ತಾರೆ ಎಂದು ಹೇಳುತ್ತಾರೆ. ಆದರೆ, ಅದರ ಪ್ರಯೋಜನಗಳ ಬಗ್ಗೆ ಸ್ಪಷ್ಟವಾದ ವಿಜ್ಞಾನಕ್ಕೆ ಬರುವುದು ಕಷ್ಟ. ಪುರಾವೆಗಳಿಲ್ಲದೆ, ಹೊಸ ಕಾರ್ಯಕ್ರಮಗಳಿಗೆ ಬೆಂಬಲ ಪಡೆಯುವುದು ಕಷ್ಟ ಎಂದು ಅವರು ಹೇಳುತ್ತಾರೆ.
ಕೆಲವು ಸಣ್ಣ ಅವಲೋಕನದ ಅಧ್ಯಯನಗಳು ತೋಟದಲ್ಲಿ ಕೆಲಸ ಮಾಡುವ ಜನರು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುತ್ತಾರೆ ಮತ್ತು ಆರೋಗ್ಯಕರವಾದ ದೇಹದ ತೂಕವನ್ನು ಹೊಂದಿರುತ್ತಾರೆ ಎಂದು ಅಧ್ಯಯನದಲ್ಲಿ ಕಂಡುಹಿಡಿದಿವೆ. ಆದರೆ, ಆರೋಗ್ಯಕರ ಜನರು ಕೇವಲ ಉದ್ಯಾನಕ್ಕೆ ಒಲವು ತೋರುತ್ತಾರೆಯೇ ಅಥವಾ ತೋಟಗಾರಿಕೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆಯೇ ಎಂಬುದು ಅಸ್ಪಷ್ಟವಾಗಿಯೇ ಉಳಿದಿದೆ.
ಕೇವಲ ಮೂರು ಅಧ್ಯಯನಗಳು ಗುಣಮಟ್ಟದ ವೈಜ್ಞಾನಿಕ ಸಂಶೋಧನೆಯ ಮಾಡಿವೆ. ಯಾದೃಚ್ಛಿಕ ನಿಯಂತ್ರಿತ ಪ್ರಯೋಗವನ್ನು ಕಾಲಕ್ಷೇಪಕ್ಕೆ ಅನ್ವಯಿಸಿವೆ. ಯಾರೂ ನಿರ್ದಿಷ್ಟವಾಗಿ ಸಮುದಾಯ ಕೈತೋಟಗಾರಿಕೆ ಮಾಡಿರುವುದಿಲ್ಲ ಅಂತಹವರನ್ನು ಆಯ್ಕೆ ಮಾಡಿ ಸರಾಸರಿ 41 ವರ್ಷ ವಯಸ್ಸಿನ 291 ವಯಸ್ಕರನ್ನು ಅಧ್ಯಯನಕ್ಕಾಗಿ ನೇಮಿಸಿಕೊಳ್ಳಲಾಗಿತ್ತು ಮೂರನೇ ಒಂದು ಭಾಗದಷ್ಟು ಹಿಸ್ಪಾನಿಕ್ ಮತ್ತು ಅರ್ಧಕ್ಕಿಂತ ಹೆಚ್ಚು ಜನರು ಕಡಿಮೆ ಆದಾಯದ ಕುಟುಂಬಗಳಿಂದ ಬಂದವರಾಗಿದ್ದರು. ಕಳೆದ ವಸಂತಕಾಲದ ಹಿಮದ ನಂತರ, ಅರ್ಧದಷ್ಟು ಸಮುದಾಯ ಕೈತೋಟಗಾರಿಕೆ ಗುಂಪಿಗೆ ಮತ್ತು ಉಳಿದರ್ಧವನ್ನು ಪ್ರಾಯೋಗಿಕ ಗುಂಪಿಗೆ ನಿಯೋಜಿಸಲಾಗಿತ್ತು, ನಂತರ ಅವರಿಗೆ ಕೈತೋಟಗಾರಿಕೆಯನ್ನು ಪ್ರಾರಂಭಿಸಲು ಒಂದು ವರ್ಷ ಕಾಯುವಂತೆ ತಿಳಿಸಲಾಗಿತ್ತು.
ಕೈತೋಟಗಾರಿಕೆ ಗುಂಪಿಗೆ ಉಚಿತ ಸಮುದಾಯ ಉದ್ಯಾನದ ಪ್ಲಾಟ್, ಕೆಲವು ಬೀಜಗಳು, ಮೊಳಕೆ ಸಸಿಗಳು ಸೇರಿದಂತೆ ಅಧ್ಯಯನ ಪಾಲುದಾರರ ಮೂಲಕ ಪರಿಚಯಾತ್ಮಕ ತೋಟಗಾರಿಕೆ ಕೋರ್ಸ್ ಅನ್ನು ನೀಡಲಾಗಿತ್ತು. ಎರಡೂ ಗುಂಪುಗಳ ನಡುವೆ ಪೌಷ್ಠಿಕಾಂಶದ ಸೇವನೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಆವರ್ತಕ ಸಮೀಕ್ಷೆಗಳನ್ನು ನಡೆಸಲಾಗಿತ್ತು. ಚಳಿಗಾಲದ ಹೊತ್ತಿಗೆ, ತೋಟಗಾರಿಕೆ ಗುಂಪಿನಲ್ಲಿರುವವರು ಪ್ರಾಯೋಗಿಕ ಗುಂಪಿಗಿಂತ ದಿನಕ್ಕೆ ಸರಾಸರಿ 1.4 ಗ್ರಾಂ ಹೆಚ್ಚು ಫೈಬರ್ ಯುಕ್ತ ಆಹಾರವನ್ನು ತಿನ್ನುತ್ತಿದ್ದರು ಎಂದು ಸಂಶೋಧಕರ ಅಧ್ಯಯನದಲ್ಲಿ ಕಂಡುಬಂತು. ಇದು ಪ್ರಾಯೋಗಿಕ ಗುಂಪಿಗಿಂತ ಸುಮಾರು 7 ಪ್ರತಿಶತದಷ್ಟು ಹೆಚ್ಚಾಗಿತ್ತು ಎಂಬುದು ಗಮನಾರ್ಹ.
ದಿನಕ್ಕೆ ಸುಮಾರು 25 ರಿಂದ 38 ಗ್ರಾಂ ಫೈಬರ್ ಯುಕ್ತ ಆಹಾರವನ್ನು ಸೇವಿಸಬೇಕು:ಫೈಬರ್ ಯುಕ್ತ ಆಹಾರ ಉರಿಯೂತ ಮತ್ತು ರೋಗನಿರೋಧಕ ಪ್ರತಿಕ್ರಿಯೆಗಳ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತದೆ ಎಂದು ಲೇಖಕರು ಗಮನಿಸಿದ್ದರು, ಆಹಾರವನ್ನು ಹೇಗೆ ಚಯಾಪಚಯಗೊಳಿಸುತ್ತೇವೆ ಎಂಬುದರಿಂದ ಹಿಡಿದು ನಮ್ಮ ಕರುಳಿನ ಸೂಕ್ಷ್ಮಜೀವಿ ಎಷ್ಟು ಆರೋಗ್ಯಕರವಾಗಿದೆ ಎಂಬುದರವರೆಗೆ ಹಾಗೂ ನಾವು ಮಧುಮೇಹ ಮತ್ತು ಕ್ಯಾನ್ಸರ್ಗಳಿಗೆ ಎಷ್ಟು ಒಳಗಾಗುತ್ತೇವೆ ಎಂಬುದರವರೆಗೆ ಎಲ್ಲವನ್ನೂ ಪ್ರಭಾವಿಸುತ್ತದೆ.
ವೈದ್ಯರು ದಿನಕ್ಕೆ ಸುಮಾರು 25 ರಿಂದ 38 ಗ್ರಾಂ ಫೈಬರ್ ಯುಕ್ತ ಆಹಾರವನ್ನು ಸೇವಿಸುವಂತೆ ಶಿಫಾರಸು ಮಾಡುತ್ತಾರೆ. ಒಂದು ಅಧ್ಯಯನದಲ್ಲಿ ಸರಾಸರಿ ವಯಸ್ಕರು 16 ಗ್ರಾಂಗಿಂತ ಕಡಿಮೆ ಫೈಬರ್ ಯುಕ್ತ ಆಹಾರವನ್ನು ಸೇವಿಸುತ್ತಾರೆ ಎಂದು ತಿಳಿದು ಬಂದಿದೆ. ಒಂದು ಗ್ರಾಂ ಫೈಬರ್ ಯುಕ್ತ ಆಹಾರದ ಹೆಚ್ಚಳವು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ದಕ್ಷಿಣ ಕೆರೊಲಿನಾ ವಿಶ್ವವಿದ್ಯಾಲಯದ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ ನಿರ್ದೇಶಕ ಸಹ ಲೇಖಕ ಜೇಮ್ಸ್ ಹೆಬರ್ಟ್ ಹೇಳಿದ್ದಾರೆ.
ಕನಿಷ್ಠ 150 ನಿಮಿಷಗಳ ಕಾಲ ದೈಹಿಕ ಚಟುವಟಿಕೆ ಮಾಡುವಂತೆ ಶಿಫಾರಸು:ಈ ಸಂಶೋಧನೆಯಲ್ಲಿ ತೋಟಗಾರಿಕೆ ಗುಂಪು ತಮ್ಮ ದೈಹಿಕ ಚಟುವಟಿಕೆಯ ಮಟ್ಟವನ್ನು ವಾರಕ್ಕೆ ಸುಮಾರು 42 ನಿಮಿಷಗಳಷ್ಟು ಹೆಚ್ಚಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ದೈಹಿಕ ಚಟುವಟಿಕೆ ಮಾಡುವಂತೆ ಶಿಫಾರಸು ಮಾಡುತ್ತವೆ. ಈ ಶಿಫಾರಸ್ಸನ್ನು ಅಮೆರಿಕ ಜನಸಂಖ್ಯೆಯ ಕಾಲು ಭಾಗದಷ್ಟು ಜನರು ಮಾತ್ರ ಪಾಲಿಸುತ್ತಿದ್ದಾರೆ. ಸಮುದಾಯ ಕೈತೋಟಕ್ಕೆ ಎರಡರಿಂದ ಮೂರು ಬಾರಿ ಭೇಟಿ ನೀಡುವುದರೊಂದಿಗೆ, ಅಗತ್ಯದ 28 ಪ್ರತಿಶತದ ದೈಹಿಕ ಚಟುವಟಿಕೆ ಪೂರೈಸುತ್ತದೆ ಎಂದು ತಿಳಿದು ಬಂದಿದೆ. ಈ ಅಧ್ಯಯನದಲ್ಲಿ ಭಾಗವಹಿಸಿದವರು ತಮ್ಮ ಒತ್ತಡ ಮತ್ತು ಆತಂಕದ ಮಟ್ಟವು ಕಡಿಮೆಯಾಗುತ್ತಿರುವುದನ್ನು ಸಂಶೋಧಕರು ಗಮನಿಸಿದ್ದಾರೆ,
ಡೆನ್ವರ್ ಅರ್ಬನ್ ಗಾರ್ಡನ್ಸ್ (DUG):ಈ ಅಧ್ಯಯನದ ಫಲಿತಾಂಶಗಳು ಡೆನ್ವರ್ ಅರ್ಬನ್ ಗಾರ್ಡನ್ಸ್ (DUG) ನ ಕಾರ್ಯನಿರ್ವಾಹಕ ನಿರ್ದೇಶಕರಾದ ಲಿಂಡಾ ಅಪ್ಪೆಲ್ ಲಿಪ್ಸಿಯಸ್ ಅವರನ್ನು ಅಚ್ಚರಿಗೊಳಿಸಲಿಲ್ಲ, ಏಕೆಂದರೆ ಇದು 43 ವರ್ಷಗಳಿಂದ ಲಾಭರಹಿತವಾಗಿ ಸಮುದಾಯದ ಉದ್ಯಾನ ಪ್ಲಾಟ್‌ಗಳಲ್ಲಿ ಪ್ರತಿ ವರ್ಷ ಸುಮಾರು 18,000 ಜನರಿಗೆ ತಮ್ಮದೇ ಆದ ಆಹಾರ ಪದಾರ್ಥಗಳನ್ನು ಬೆಳೆಯಲು ಸಹಾಯ ಮಾಡುತ್ತಿದೆ. ಇದು ಅನೇಕ ಜನರಿಗೆ ಪ್ರೇರಣೆಯಾಗಿದೆ ಮತ್ತು ಜನರ ಜೀವವನ್ನು ಉಳಿಸುತ್ತದೆ ಎಂದು ಲಿಪ್ಸಿಯಸ್ ಹೇಳುತ್ತಾರೆ.
ಕೈಗೆಟುಕುವ ತಾಜಾ ಹಣ್ಣುಗಳು ಮತ್ತು ತರಕಾರಿಗಳ ಲಭ್ಯತೆಯು ಅತ್ಯಂತ ಸೀಮಿತವಾಗಿರುವ ಪ್ರದೇಶಗಳಲ್ಲಿ ಅನೇಕ ಡಿಯುಜಿನಲ್ಲಿ ಭಾಗವಹಿಸುವವರು ವಾಸಿಸುತ್ತಿದ್ದಾರೆ. ಕೆಲವರು ಕಡಿಮೆ ಆದಾಯದ ವಲಸಿಗರು ಈಗ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ಉದ್ಯಾನ ಇರುವ ಪ್ಲಾಟ್ನ್ನು ಹೊಂದಿರುವವರು ತಮ್ಮ ಪ್ರದೇಶದಲ್ಲಿ ಆಹಾರ ಪದಾರ್ಥಗಳನ್ನು ಬೆಳೆಯಲು ಹಾಗೂ ಅವರ ಕುಟುಂಬ ಮತ್ತು ನೆರೆಹೊರೆಯವರಿಗೆ ಸಾಂಪ್ರದಾಯಿಕ ಆಹಾರ ಪದಾರ್ಥವನ್ನು ರವಾನಿಸಲು ಅನುವು ಮಾಡಿಕೊಡುತ್ತದೆ.
ಸಾಮಾಜಿಕ ಸಂಪರ್ಕ ಬೆಳೆಯುತ್ತದೆ: ಅಧ್ಯಯನದಲ್ಲಿ ಆಹಾರವನ್ನು ಸ್ವಂತವಾಗಿ ಬೆಳೆಸಲು ನೀವು ತೋಟಕ್ಕೆ ಬಂದರೂ, ನೀವು ನಿಮ್ಮ ನೆರೆಹೊರೆಯವರ ಪ್ಲಾಟ್ ಅನ್ನು ನೋಡುತ್ತಿರಿ ಮತ್ತು ಬೆಳೆಯನ್ನು ಅಭಿವೃದ್ದಿಯ ತಂತ್ರಗಳು ಮತ್ತು ಆಹಾರ ಪದಾರ್ಥಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತೀರಿ. ಇದರಿಂದ ನೆರೆಹೊರೆಯವರ ನಡುವೆ ಸಂಬಂಧಗಳು ಅರಳುತ್ತವೆ ಎಂದು ಲಿಟ್ ಹೇಳಿದರು.
ಇದನ್ನೂ ಓದಿ:ಚಾಕೊಲೇಟ್ ಏಕೆ ತುಂಬಾ ಒಳ್ಳೆಯ ಸ್ವಾದ ನೀಡುತ್ತದೆ?: ಆರೋಗ್ಯಕರ ಚಾಕೊಲೇಟ್ ಅಭಿವೃದ್ದಿಗೆ ವಿಜ್ಞಾನಿಗಳ ಹೊಸ ಸಂಶೋಧನೆ