ETV Bharat / sukhibhava

ಬೇಸಿಗೆಯ ಡಯಟ್​ನಲ್ಲಿ ಈ ಆಹಾರ ಸೇವಿಸಿ ತಂಪಾಗಿರಿ

ಬೇಸಿಗೆಯಲ್ಲಿ ಭಾರಿ ಆಹಾರ ಬದಲಾಗಿ ಹಗುರ, ಪೋಷಕಾಂಶ ಮತ್ತು ನೀರಿನಾಂಶ ಹೊಂದಿರುವ ಆಹಾರಗಳ ಆಯ್ಕೆ ಉತ್ತಮ

author img

By

Published : Apr 24, 2023, 11:37 AM IST

Stay cool with this summer diet
Stay cool with this summer diet

ಸಾಮಾನ್ಯ ಡಯಟ್​ಗೂ ಬೇಸಿಗೆ ಡಯಟ್​ಗೂ ಬಹಳ ವ್ಯತ್ಯಾಸವಿದೆ. ಕಾರಣ ಈ ಋತುಮಾನದಲ್ಲಿ ಬಿಸಿಲಿನ ಬೇಗೆ ಹೆಚ್ಚು ಊಟ ಸೇರುವುದಿಲ್ಲ. ಅಲ್ಲದೇ, ಹೊಟ್ಟೆ ಸಮಸ್ಯೆ, ಅಜೀರ್ಣ ಸಾಮಾನ್ಯವಾಗಿ ಕಾಡುತ್ತದೆ. ರುಚಿಕರ ಸಮೃದ್ಧ ಆಹಾರಗಳು ಇಷ್ಟವಾದರೂ ಅವರುಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಅಲ್ಲದೇ, ನಿರ್ಜಲೀಕರಣಕ್ಕೆ ಒಳಗಾಗದಂತೆ ಗಟ್ಟಿ ಆಹಾರ ಬದಲು ದ್ರವ ಆಹಾರ ಸೇವನೆ ಮಾಡುವುದು ಉತ್ತಮ. ಈ ಹಿನ್ನೆಲೆ ಈ ಬೇಸಿಗೆ ಡಯಟ್​​ನಲ್ಲಿ ತಾಪಮಾನಕ್ಕೆ ಅನುಗುಣವಾಗಿ ಆಹಾರ ಪದ್ಧತಿ ರೂಢಿಸಿಕೊಳ್ಳುವುದು ಅವಶ್ಯ. ಪ್ರೋಟಿನ್​ಗಿಂತ ಹೆಚ್ಚಾಗಿ, ನೀರಿನಾಂಶ ಸೇವನೆ ಅಗತ್ಯವಾಗುತ್ತದೆ. ಜೊತೆಗೆ ಜೀರ್ಣಕ್ರಿಯೆಗೆ ಸಹಾಯ ಮಾಡುವ ಆಹಾರ ಆಯ್ಕೆ ಉತ್ತಮ. ಇಲ್ಲದೇ ಹೋದಲ್ಲಿ ಕೆಲವು ವೈದ್ಯಕೀಯ ಸಮಸ್ಯೆಗಳು ಕೂಡ ಉದ್ಭವಿಸುತ್ತದೆ. ಈ ಹಿನ್ನೆಲೆ ಬೇಸಿಗೆಯಲ್ಲಿ ನಿಮ್ಮ ಆಹಾರ ಪದ್ಧತಿಯಲ್ಲಿ ಈ ವಸ್ತುಗಳನ್ನು ಬಳಸುವುದು ಅವಶ್ಯವಾಗುತ್ತದೆ.

ಈರುಳ್ಳಿ: ಈರುಳ್ಳಿಯಲ್ಲಿ ಆ್ಯಂಟಿ ಅಲರ್ಜಿನ್​ ಗುಣ ಇದ್ದು, ಇದು ಸನ್​ ಸ್ಟೋಕ್​ ಆಗದಂತೆ ತಡೆಯುತ್ತದೆ. ಅಲ್ಲದೇ ಅಜೀರ್ಣದಂತಹ ಸಮಸ್ಯೆ ನಿವಾರಣೆ ಮಾಡುತ್ತದೆ. ಈರುಳ್ಳಿಯಲ್ಲಿ ವಿಟಮಿನ್​ ಎ, ಬಿ6, ಸಿ ಸೇರಿದಂತೆ ಸಮೃದ್ಧಿ ಪೋಷಕಾಂಶ ಇರುವುದಿರಂದ ನಿಮ್ಮ ಆರೋಗ್ಯ ರಕ್ಷಣೆ ಮಾಡುತ್ತದೆ.

ಮೊಸರು: ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುವುದು ಅಗತ್ಯವಾಗಿದೆ. ಮೊಸರನ್ನು ಲಸ್ಸಿ ಅಥವಾ ಮಜ್ಜಿಗೆ ಮಾಡಿ ಕೂಡ ಸೇವಿಸಬಹುದು. ಇದು ತ್ವಚೆ ಸೇರಿದಂತೆ ಆರೋಗ್ಯಕ್ಕೆ ಪ್ರಯೋಜವಾಗಿದ್ದು, ಇದು ಕೂಡ ಜೀರ್ಣಕ್ರಿಯೆಯಲ್ಲಿ ನಿಮಗೆ ಸಹಾಯ ಮಾಡುತ್ತದೆ.

ಏಳನೀರು: ಬೇಸಿಗೆಯಲ್ಲಿ ದೇಹ ನಿರ್ಜಲೀಕರಣಗೊಳ್ಳದಂತೆ ಕಾಪಾಡಲು ಏಳನೀರು ಅತ್ಯವಶ್ಯಕವಾಗಿದೆ. ಅಲ್ಲದೇ ಇದರಲ್ಲಿ ಮಿನರಲ್ಸ್​, ವಿಟಮಿನ್​ ಮತ್ತು ಇನ್ನಿತರ ಪೋಷಕಾಂಶ ಇದ್ದು, ಶಾಖದ ವಿರುದ್ಧ ಹೋರಾಡುತ್ತದೆ. ಅಲ್ಲದೇ, ಗಂಭೀರ ರೋಗದ ವಿರುದ್ಧ ಹೋರಾಡಲು ಪ್ರಯೋಜನ ಮಾಡುತ್ತದೆ.

ನಿಂಬೆ ಮತ್ತು ಪುದಿನ: ಬೇಸಿಗೆಯಲ್ಲಿ ನೈಸರ್ಗಿಕವಾಗಿ ತಾಜಾತನ ಗೊಳಿಸುವ ಪಾನೀಯ ಇದಾಗಿದೆ. ನಿಂಬೆ ಹಣ್ಣು ಕೂಡ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಪುದಿನ ಪೋಷಕಾಂಶಗಳನ್ನು ನೀಡುತ್ತದೆ. ಇವರೆಡರ ಸೇವನೆ ಬಿಸಿಲಿನಿಂದ ದೇಹ ಬಳಲದಂತೆ ಕಾಪಾಡುತ್ತದೆ

ಕಲ್ಲಂಗಡಿ: ಬಿಸಿಲಿನ ವಿರುದ್ಧ ತಂಪು ನೀಡುವ ಹಣ್ಣು ಕಲ್ಲಂಗಡಿ, ಹೆಚ್ಚಿನ ನೀರಿನಾಂಶ ಹೊಂದಿರುವ ಈ ಹಣ್ಣು ದೇಹವನ್ನು ನಿರ್ಜಲೀಕರಣಕ್ಕೆ ಒಳಗಾದಂತೆ ತಡೆಯುತ್ತದೆ. ಕಲ್ಲಂಗಡಿಯಲ್ಲಿ ಶೇ 91.45ರಷ್ಟು ನೀರಿನಾಂಶ ಇದ್ದು, ದೇಹಕ್ಕೆ ಅಗತ್ಯವಾದ ನೀರನ್ನು ಒದಗಿಸುತ್ತದೆ. ಅಲ್ಲದೇ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್​ ಇದ್ದು, ಇದು ಕೂಡ ಸಹಾಯ ಮಾಡುತ್ತದೆ.

ಕಾಮ ಕಸ್ತೂರಿ ಬೀಜ: ಬೇಸಿಗೆಯಲ್ಲಿ ಆರೋಗ್ಯದ ಜೊತೆಗೆ ದೇಹಕ್ಕೆ ತಂಪು ನೀಡುವ ಮತ್ತೊಂದು ಆಹಾರ ಎಂದು ಕಾಮ ಕಸ್ತೂರಿ ಬೀಜ. ದೇಹದಲ್ಲಿ ಹೆಚ್ಚು ಶಾಖಕ್ಕೆ ಒಳಗಾಗದಂತೆ ನೋಡಿಕೊಳ್ಳುತ್ತದೆ. ನಾರಿನಂಶ, ಪ್ರೋಟಿನ್, ಕ್ಯಾಲ್ಸಿಯಂ ಹಾಗೂ ಆರೋಗ್ಯಕರ ಇತರ ಕೊಬ್ಬುಗಳನ್ನು ಈ ಬೀಜಗಳು ಹೊಂದಿವೆ. ಹೀಗಾಗಿ ಡಯಟ್​ನಲ್ಲಿ ಅಳವಡಿಸಿಕೊಳ್ಳಬಹುದು. ತೂಕ ನಿರ್ವಹಣೆಗೂ ಕೂಡ ಚಿಯಾ ಬೀಜಗಳು ಉಪಯುಕ್ತ.

ಇದನ್ನೂ ಓದಿ: ಬೇಸಿಗೆಯಲ್ಲಿ ಬೇಗ ಹಾಳಾಗುತ್ತದೆ ಆಹಾರ; ಈ ವಿಚಾರದಲ್ಲಿ ಬೇಡ ನಿರ್ಲಕ್ಷ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.