ನ್ಯೂಯಾರ್ಕ್: ಕಡಿಮೆ ಕೊಲೆಸ್ಟ್ರಾಲ್ ಮಟ್ಟ ನಿರ್ವಹಣೆಗೆ ಬಳಕೆ ಮಾಡುವ ಸ್ಟ್ಯಾಟಿನ್‌ಗಳು ದೀರ್ಘ ಕಾಲದಲ್ಲಿ ಪ್ರತಿಕೂಲ ಆರೋಗ್ಯ ಸ್ಥಿತಿಗೆ ಕಾರಣವಾಗಲಿದ್ದು, ಸ್ನಾಯು ದುರ್ಬಲತೆಗೆ ಕಾರಣವಾಗಬಹುದು ಎಂದು ಇಂಗ್ಲೆಂಡ್ನ ಮೆಡಿಸಿನ್ಸ್ ಅಂಡ್ ಹೆಲ್ತ್ಕೇರ್ ಪ್ರೊಡಕ್ಟ್ಸ್ ರೆಗ್ಯೂಲೆಟರಿ ಏಜೆನ್ಸಿ (ಎಂಎಚ್ಆರ್ಎ) ವರದಿ ನೀಡಿದೆ.
ಸ್ಟ್ಯಾಟಿನ್‌ಗಳು ಅಟೋರ್ವಾಸ್ಟಾಟಿನ್, ಪ್ರವಾಸ್ಟಾಟಿನ್, ಲೊವಾಸ್ಟಾಟಿನ್, ಫ್ಲೂವಾಸ್ಟಾಟಿನ್, ಸಿಮ್ವಾಸ್ಟಾಟಿನ್, ರೋಸುವಾಸ್ಟಾಟಿನ್ ಮತ್ತು ಪಿಟವಾಸ್ಟಾಟಿನ್ ಏಕ ಪದಾರ್ಥ ಮತ್ತು ಸ್ಥಿರ - ಡೋಸ್ ಸಂಯೋಜನೆಯ ಉತ್ಪನ್ನಗಳಾಗಿದೆ. ಇದು ಆಂಜಿನಾ, ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಹೃದಯರಕ್ತನಾಳದ ಸಮಸ್ಯೆ ಹೊಂದಿರುವ ವ್ಯಕ್ತಿಗಳಲ್ಲಿ ಅಪಾಯವನ್ನು ಕಡಿಮೆ ಮಾಡುವಲ್ಲಿ ಪ್ರಮುಖವಾಗಿ ಬಳಕೆ ಮಾಡಲಾಗುವುದು.
ಈ ಔಷದವು ಸುರಕ್ಷಿತಾರ್ಹ ಮತ್ತು ಎಲ್ಡಿಎಲ್ ರಕ್ತದಲ್ಲಿನ ಕೊಲೆಸ್ಟ್ರಾಲ್ ಹೊಂದಿರುವ ಗುಂಪುಗಳಿಗೆ ಪರಿಣಾಮಕಾರಿಯಾಗಿದೆ. ಸ್ಟ್ಯಾಟಿನ್‌ಗಳು ಅಪಧಮನಿಕಾಠಿಣ್ಯದ ಹೃದಯರಕ್ತನಾಳದ ಕಾಯಿಲೆಯ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ, ಕೆಲವು ಸಂಶಯ ವರದಿಯಲ್ಲಿ ಇದರ ಬಳಕೆಯು ಮೈಸ್ತೇನಿಯಾ ಗ್ರ್ಯಾವಿಸ್ ಅಥವಾ ಆಕ್ಯುಲರ್ ಮೈಸ್ತೇನಿಯಾದ ಹೆಚ್ಚಳಕ್ಕೆ ಕಾರಣವಾಗುತ್ತದೆ.
ನರ ಸಮಸ್ಯೆ: ಮೈಸ್ತೇನಿಯಾ ಗ್ರ್ಯಾವಿಸ್ ಸ್ವಯಂ ನಿರೋಧಕ ನರಸ್ನಾಯು ಸಮಸ್ಯೆಯಾಗಿದ್ದು, ಇದು ಸ್ವಯಂಪ್ರೇರಿತ ಸ್ನಾಯುಗಳ ಏರಿಳಿತದ ದೌರ್ಬಲ್ಯದಿಂದ ಆಗಿದೆ. ಇದು ಕಣ್ಣಿನ ಚಲನೆಗಳು, ಮುಖದ ಅಭಿವ್ಯಕ್ತಿ, ಮಾತನಾಡುವುದು, ನುಂಗುವಿಕೆ, ಅಂಗ ಚಲನೆ ಮತ್ತು ಉಸಿರಾಟವನ್ನು ನಿಯಂತ್ರಿಸುತ್ತದೆ.
ಮೈಸ್ತೇನಿಕ್ ಗ್ರ್ಯಾವಿಸ್‌ನ ಸಾಮಾನ್ಯ ಲಕ್ಷಣಗಳೆಂದರೆ ಕಣ್ಣು ರೆಪ್ಪೆ ಬೀಳುವುದು, ಎರಡು ದೃಷ್ಟಿ ಗೋಚರತೆ, ಅಗೆಯುವಾಗ ಅಥವಾ ನುಂಗುವಾಗ ಸಮಸ್ಯೆಗಳು, ಮಾತಿನ ಅಡಚಣೆ, ಅಂಗ ದೌರ್ಬಲ್ಯ ಮತ್ತು ಉಸಿರಾಟದ ತೊಂದರೆ ಆಗಿದೆ.
ವೈದ್ಯರ ಸಲಹೆ ಅಗತ್ಯ: ಸ್ಟ್ಯಾಟಿನ್ಗಳ ಬಳಕೆ ಮಾಡುತ್ತಿರುವ ಅನೇಕ ಮಂದಿ ಅಡ್ಡ ಪರಿಣಾಮಗಳ ಅನುಭವ ಹೊಂದಿಲ್ಲ. ಈ ಲಕ್ಷಣಗಳು ಅವರಿಗೆ ಆಗಿಲ್ಲ. ಇದು ಸೌಮ್ಯವಾಗಿರುತ್ತದೆ. ಈ ಸಮಸ್ಯೆಗಳ ಅನುಭವ ಆದವರು ವೈದ್ಯರ ಜೊತೆಗೆ ಸಂಪರ್ಕಕ್ಕೆ ಒಳಗಾಗದೇ ಈ ಸ್ಟ್ಯಾಟಿನ್ಗಳ ಬಳಕೆಯನ್ನು ನಿಲ್ಲಿಸಬಾರದು ಎಂದು ಎಂಎಚ್ಆರ್ಎ ತಿಳಿಸಿದೆ.
ಯುನೈಟೆಡ್ ಕಿಂಗ್ಡಂನಲ್ಲಿ ರೋಗಿಗಳು ಸ್ಟ್ಯಾಟಿನ್ ಚಿಕಿತ್ಸೆ ನಿಲ್ಲಿಸಿದ ಬಳಿಕ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಸಂಸ್ಥೆ ಹೇಳಿದೆ. ಆದರೆ, ಕೆಲವು ಮಂದಿ ಈ ಲಕ್ಷಣಗಳನ್ನು ಅನುಭವಿಸಿದ್ದಾರೆ. ಅಲ್ಲದೇ ರೋಗಿಗಳು ಅದೇ ಅಥವಾ ಬೇರೆ ಸ್ಟ್ಯಾಟಿನ್ ಅನ್ನು ಮರುಪ್ರಾರಂಭಿಸಿದಾಗ ರೋಗಲಕ್ಷಣಗಳ ಮತ್ತೆ ಕಾಣಿಸಿಕೊಂಡಿದೆ ಎಂದು ವರದಿ ಆಗಿದೆ.
ಈ ಮಾತ್ರೆಗಳನ್ನು ತೆಗೆದುಕೊಳ್ಳುವ ರೋಗಿಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಮೈಸ್ತೇನಿಯಾ ಗ್ರ್ಯಾವಿಸ್‌ನ ಹದಗೆಡುತ್ತಿರುವುದು ಕಂಡು ಬಂದಿದೆ. ಮತ್ತೆ ಕೆಲವರಲ್ಲಿ ಹೊಸ ಮೈಸ್ತೇನಿಯಾ ಗ್ರ್ಯಾವಿಸ್ ರೋಗ ಕಂಡು ಬರುತ್ತಿದೆ. ಈ ಹಿನ್ನೆಲೆ ವೈದ್ಯರ ಸಲಹೆಯನ್ನು ಪಡೆಯುವಂತೆ ಎಂಎಚ್ಆರ್ಎ ಸಲಹೆ ನೀಡಿದೆ. (ಐಎಎನ್ಎಸ್)
ಇದನ್ನೂ ಓದಿ: 2050ರ ಹೊತ್ತಿಗೆ ಪಾರ್ಶ್ವವಾಯುವಿನಿಂದ 10 ಮಿಲಿಯನ್ ಸಾವು ಸಾಧ್ಯತೆ: ವರದಿ