ETV Bharat / sukhibhava

ಊಟ ಮಾಡಿದರೂ ಮಧ್ಯರಾತ್ರಿ ಹಸಿವಾಗುತ್ತಾ? ಇದಕ್ಕೆ ಇದೆ ಅತ್ಯುತ್ತಮ ಪರಿಹಾರ! - ಹಸಿವಿನಿಂದಾಗಿ ನಿದ್ರೆ ಕೂಡ ದೂರಾ

ಊಟ ಮಾಡಿದರೂ ಮಧ್ಯ ರಾತ್ರಿ ಕಾಡುವ ಈ ಹಸಿವೆಗೆ ಕಾರಣ ನಿಮ್ಮ ಆಹಾರದ ಕ್ರಮ ಸರಿಯಿಲ್ಲದಿರುವುದು.

solution-for-midnight-hungry-issue
solution-for-midnight-hungry-issue
author img

By ETV Bharat Karnataka Team

Published : Nov 3, 2023, 4:40 PM IST

ಊಟ ಮಾಡಿ ಮಲಗಿದ ಬಳಿಕ ಅನೇಕ ಮಂದಿಗೆ ಮಧ್ಯರಾತ್ರಿ ಎಚ್ಚರವಾಗಿ ಹೊಟ್ಟೆ ಚುರ್​ಗುಡಲಾರಂಭಿಸುತ್ತದೆ. ಈ ಹಸಿವಿನಿಂದಾಗಿ ನಿದ್ರೆ ಕೂಡ ದೂರಾಗುತ್ತದೆ. ಈ ವೇಳೆ ಸಿಕ್ಕಿದ್ದನ್ನು ತಿಂದು ಮಲಗುವ ಎಂದು ಅನೇಕ ಮಂದಿ ನಿರ್ಧರಿಸುತ್ತಾರೆ. ಇದರಿಂದ ಗ್ಯಾಸ್​, ಅಜೀರ್ಣ ಮತ್ತು ನಿದ್ರೆ ಭಂಗದಂತಹ ಮತ್ತೊಂದು ಸಮಸ್ಯೆ ಕಾಡುವುದು ಸುಳ್ಳಲ್ಲ. ಇನ್ನು ಊಟ ಮಾಡಿದರೂ ಮಧ್ಯ ರಾತ್ರಿ ಕಾಡುವ ಈ ಹಸಿವೆಗೆ ಕಾರಣ ನಿಮ್ಮ ಆಹಾರದ ಕ್ರಮ ಸರಿಯಿಲ್ಲದಿರುವುದು. ದೇಹಕ್ಕೆ ಅಗತ್ಯವಾದ ಪೋಷಕಾಂಶ ಮತ್ತು ಪ್ರೋಟಿನ್​ಗಳು ಸೇವಿಸದಾಗ ಮಾತ್ರ ಅದು ನಿಮ್ಮ ನಿದ್ದೆಗೆ ಸಹಾಯ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಇದಕ್ಕಾಗಿ ಉತ್ತಮ ಆಹಾರ ಸೇವಿಸುವುದು ಅವಶ್ಯ ಎನ್ನುತ್ತಾರೆ ತಜ್ಞರು

  • ತಡರಾತ್ರಿ ಸಮಯದಲ್ಲಿ ಸಂಪೂರ್ಣ ಧಾನ್ಯಗಳಿಂದ ಕೂಡಿದ ಬಿಸ್ಕೆಟ್​ ಅನ್ನು ಸೇವಿಸುವುದು ಉತ್ತಮ ಆಯ್ಕೆ. ಇದರಲ್ಲಿ ಅಗತ್ಯವಾದ ಕಾರ್ಬೋಹೈಡ್ರೇಟ್ಸ್​​ ಮತ್ತು ಪ್ರೋಟಿನ್​ ಲಭ್ಯವಾಗುತ್ತದೆ. ಇದು ಉತ್ತಮ ನಿದ್ರೆಗೂ ಸಹಾಯವಾಗುತ್ತದೆ.
  • ಪಿಸ್ತಾಗಳು ಹೆಚ್ಚಿನ ಮೆಟಟೋನಿನ್​ ಅಂಶವನ್ನು ಹೊಂದಿದ್ದು, ಇದು ನಿದ್ರೆಗೆ ಸಹಾಯ ಮಾಡುತ್ತದೆ. ಜೊತೆಗೆ ಇದರಲ್ಲಿನ ಪ್ರೋಟಿನ್​ ಅಂಶವೂ ಆರಾಮದಾಯಕ ನಿದ್ದೆಗೆ ಸಹಾಯ ಮಾಡುತ್ತದೆ. ಕುಂಬಳಕಾಯಿ ಬೀಜಗಳು ಕೂಡ ಉತ್ತಮ ನಿದ್ದೆಗೆ ಉತ್ತೇಜನ ನೀಡುತ್ತದೆ. ಇದಕ್ಕೆ ಸ್ವಲ್ಪ ಉಪ್ಪು ಮತ್ತು ಚಕ್ಕೆ ಪುಡಿಯನ್ನು ಹಾಕಿದರೆ ಇದರ ರುಚಿಯೂ ಅದ್ಭುತವಾಗುತ್ತದೆ. ಈ ಬೀಜಗಳನ್ನು ಅಧಿಕ ಪ್ರಮಾಣದಲ್ಲಿ ಸೇವನೆ ಮಾಡಬಾರದು ಎಂಬುದನ್ನು ಮರೆಯಬಾರದು.
  • ಬ್ರೆಡ್​ ಸ್ಯಾಂಡ್​ವಿಚ್​​ ಕೂಡ ಮಧ್ಯರಾತ್ರಿ ಹೊಟ್ಟೆ ಹಸಿವು ಆಗದಂತೆ ತಡೆಯುತ್ತದೆ. ಎರಡು ಬ್ರೆಡ್​ ತುಂಡಿಗೆ ಟೊಮೆಟೊ ಮತ್ತು ಸ್ವಲ್ಪ ಚೀಸ್​ ಹಾಕಿ ತಿನ್ನುವುದರಿಂದ ರಾತ್ರಿ ಎಚ್ಚರವಾಗುವುದನ್ನು ತಪ್ಪಿಸಬಹುದು. ಟೊಮೆಟೊದಲ್ಲಿನ ಮೆಲಟೊನಿನ್​ ನಿದ್ರೆಗೆ ಸಹಾಯ ಮಾಡುತ್ತದೆ. ಒಂದು ವೇಳೆ ಮನೆಯಲ್ಲಿ ಸಿಹಿ ಗೆಣಸು ಇದ್ದರೆ, ಅದನ್ನು ಬೇಯಿಸಿ ಸೇವಿಸುವುದರಿಂದ ಹೊಟ್ಟೆ ತುಂಬಿದ ಅನುಭವ ಆಗುತ್ತದೆ. ಇದರಲ್ಲಿನ ಫೈನರ್​ ಮತ್ತು ಪ್ರೋಟಿನ್​ಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶವನ್ನು ನೀಡಿ ನಿದ್ರೆ ಭಂಗ ಬರದಂತೆ ತಡೆಯುತ್ತದೆ.
  • ಮಲಗುವ ಮುನ್ನ ನೆನಸಿದ ಬಾದಾಮಿಯನ್ನು ಸೇವಿಸುವುದರಿಂದ ಕೂಡ ಉತ್ತಮ ನಿದ್ರೆ ಬರುತ್ತದೆ. ಇದರಲ್ಲಿ ಅಧಿಕ ಫೈಬರ್​, ಪ್ರೋಟಿನ್​ ಮತ್ತು ಕ್ಯಾಲ್ಸಿಯಂ ಇದ್ದು, ಇವು ದೇಹಕ್ಕೆ ಉತ್ತಮವಾಗಿದೆ. ಜೊತೆಗೆ ಸಣ್ಣ ಸಣ್ಣ ಡಾರ್ಕ್​ ಚಾಕೋಲೇಟ್​ನಲ್ಲಿ ಆ್ಯಂಟಿ ಆಕ್ಸಿಡೆಂಟ್​​ ಇದ್ದು ಇದು ಉತ್ತಮವಾಗಿದೆ. ಓಟ್ಸ್​​ ಅನ್ನು ಮೊಸರಿನೊಂದಿಗೆ ನೆನಸಿ ಅದಕ್ಕೆ ಹಣ್ಣು, ಒಣ ಹಣ್ಣುಗಳೊಂದಿಗೆ ಸೇವಿಸುವುದರಿಂದ ಅದು ಕೂಡ ಉತ್ತಮ ನಿದ್ರೆ ತರುತ್ತದೆ.

ಇದನ್ನೂ ಓದಿ: ಬ್ರೊಕೊಲಿಯಲ್ಲಿರುವ ಈ ಅಂಶಗಳು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.