ETV Bharat / sukhibhava

ಸಾಮಾಜಿಕ ಮಾಧ್ಯಮ ಬಹಳ ಉಪಯುಕ್ತ; ಬಳಸುವ ಮಾರ್ಗ ಗೊತ್ತಿರಬೇಕು ಅಷ್ಟೇ - ಸಾಮಾಜಿಕ ಮಾಧ್ಯಮ ಬಹಳ ಉಪಯುಕ್ತ

ಸಾಮಾಜಿಕ ಜಾಲತಾಣಗಳು ಬಳಕೆ ಮಾರ್ಗವನ್ನು ಅರಿತರೆ ಅದರಿಂದ ಹೆಚ್ಚಿನ ಪ್ರಯೋಜನವಿದೆ. ಆದರೆ, ಈ ಮಾರ್ಗವನ್ನು ಹುಡುಕುವಲ್ಲಿ ಅನೇಕರು ಎಡವುತ್ತಾರೆ.

Social media is very useful; You just need to know how to use it

author img

By

Published : Mar 25, 2023, 11:01 AM IST

Updated : Mar 25, 2023, 11:09 AM IST

ನವದೆಹಲಿ: ಇಂದು ಬಹುತೇಕ ಜನರು ಸಾಮಾಜಿಕ ಜಾಲತಾಣದಲ್ಲೇ ತಮ್ಮ ಸಮಯವನ್ನು ಕಳೆಯುತ್ತಿದ್ದು, ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂಬ ಮಾತನ್ನು ಕೇಳಿರುತ್ತೇವೆ. ಆದರೆ, ಈ ಸಾಮಾಜಿಕ ಮಾಧ್ಯಮಗಳನ್ನು ಸೃಜನಶೀಲತೆಯಿಂದ ಬಳಸಿದರೆ ಉತ್ತಮ ಅವಕಾಶಗಳನ್ನು ಪಡೆಯಬಹುದು. ಈ ಸಂಬಂಧ ಮೊಜ್​- ಭಾರತದ ಶಾರ್ಟ್​ ವಿಡಿಯೋ ಆ್ಯಪ್​ ಹೇಗೆ ಸಮಾಜಿಕ ಮಾಧ್ಯವನ್ನು ಕ್ರಿಯಾತ್ಮಕವಾಗಿ ಬಳಸಬಹುದು ಎಂಬುದು ಐಎಎನ್​ಎಸ್​ ವರದಿ ಮಾಡಿದೆ.

ಸ್ಪೂರ್ತಿ ಹುಡುಕಿ: ಇಂದು ಲಕ್ಷಾಂತರ ಮಂದಿ ತಮ್ಮ ಜೀವನದ ಅನೇಕ ಘಟನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ವಿಭಿನ್ನ ಸಂಸ್ಕೃತಿಗಳು, ಆಸಕ್ತಿಗಳು ಮತ್ತು ಕಥೆಗಳ ಬಗೆಗಿನ ವೈವಿಧ್ಯಮಯ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಅನೇಕ ಜನರು ಸಕಾರಾತ್ಮಕ ಸ್ಪೂರ್ತಿಯಾಗಿ ಪಡೆಯಬಹುದಾಗಿದೆ.

ಯಾವುದಾದರೂ ಕ್ಷೇತ್ರದಲ್ಲಿ ಆಸಕ್ತಿ ಇದ್ದವರು, ಉದಾಹರಣೆಗೆ ಫ್ಯಾಷನ್​ ಡಿಸೈನರ್​ ಆಗಬೇಕು ಎಂಬ ಕನಸು ನಿಮಗಿದ್ದರೆ, ಇಂತಹ ವೀಡಿಯೊಗಳನ್ನು ಹುಡುಕುವ ಮೂಲಕ ಬೇರೆ ಬೇರೆ ವಿನ್ಯಾಸಕರು ಏನನ್ನು ವಿನ್ಯಾಸ ಮಾಡುತ್ತಿದ್ದಾರೆ. ಈಗಿನ ಟ್ರೆಂಡ್​ ಹೇಗಿದೆ ಎಂಬ ಮೂಲಕ ಯಾವುದೋ ಮೂಲೆಯಿಂದ ಸ್ಪೂರ್ತಿದಾಯಕ ಮಾಹಿತಿ ಪಡೆಯಬಹುದಾಗಿದೆ.

ಹೊಸ ದೃಷ್ಟಿಕೋನ: ಯಾವುದೇ ವಿಷಯದ ಕುರಿತು ಒಳ-ಹೊರ ನೋಟಗಳ ದೃಷ್ಟಿಕೋನಕ್ಕೆ ಕ್ರಿಯಾಶೀಲತೆ ಅಗತ್ಯವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ನಿಮ್ಮ ಕಲ್ಪನೆಯ ವಿರುದ್ಧ ದಿಕ್ಕುಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಇಂತಹ ಹೊಸ ಹೊಸ ದೃಷ್ಟಿಕೋನವನ್ನು ಕೂಡ ಪಡೆಯಬಹುದು

ಸಹಕಾರ: ಅಂತರ್ಜಾಲಗಳು ಜಾಗತಿಕ ಹಳ್ಳಿ ಪರಿಕಲ್ಪನೆ ಹೊಂದಿದ್ದು, ಯಾವುದೋ ಮೂಲೆಯಲ್ಲಿ ಕುಳಿತು ಇಡೀ ಜಗತ್ತಿನ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತದೆ. ಇದರ ಅನುಸರವಾಗಿ ನೀವು ಹೊಸ ಯೋಜನೆಯನ್ನು ನಿರ್ಮಿಸಲು ಕೆಲಸ ಮಾಡಬಹುದು.

ಹೊಸ ಟ್ರೆಂಡ್​ ಅರಿಯಬಹುದು: ಸೃಜನಾತ್ಮಕವಾಗಿ ಚಿಂತನೆ ಮಾಡುವುದು ಸದಾ ಮುಖ್ಯವಾಗಿದೆ. ಸಾಮಾಜಿಕ ಜಾಲತಾಣದ ಕೆಲವು ವಿಚಾರಗಳು ಸೃಜನಶೀಲ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲು ನೀವು ಬಳಸಬಹುದಾದ . ಅದರಲ್ಲೂ ಇತ್ತೀಚಿನ ಟ್ರೆಂಡ್​ ಮತ್ತು ಸ್ಟೈಲ್​ಗಳು ನಿಮ್ಮ ಅಭಿರುಚಿ ಹೆಚ್ಚಿಸಲು ಸಹಾಯ ಮಾಡುತ್ತದೆ.

ಹೊಸ ಕಲಿಕಾ ಪ್ರಕ್ರಿಯೆ: ಸಾಮಾಜಿಕ ಮಾಧ್ಯಮಗಳು ಬಂದ ಬಳಿಕ ಕಲಿಕೆ ಎಂಬುದು ಸುಲಭವಾಗಿದೆ. ಜನರ ಅಭಿರುಚಿಗೆ ಅನುಗುಣವಾದ ವಿಷಯಗಳ ಕುರಿತು ಮಾಹಿತಿ, ಉದ್ಯೋಗ ಪಡೆಯುವುದಲ್ಲಿ ಇದು ಹೆಚ್ಚಿನ ಪ್ರಯೋಜನ ನೀಡುತ್ತಿದೆ.

ತಕ್ಷಣಕ್ಕೆ ಪ್ರತಿಕ್ರಿಯೆ: ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಯೋಜನೆಗಳು ಪ್ರಸ್ತಾಪಿಸುತ್ತಿದ್ದಂತೆ ಈ ಕುರಿತು ತಕ್ಷಣಕ್ಕೆ ಪ್ರತಿಕ್ರಿಯೆಗಳನ್ನು ಕಾಣಬಹುದು. ಇದರಿಂದ ನಿಮಗೆ ಸರಿಯಾದ ನಿರ್ದೇಶನ ಸಿಗುವುದು ಸುಳ್ಳಲ್ಲ. ಯಾವುದಾದರೂ ಒಂದು ವಿಚಾರದಲ್ಲಿಯೇ ನಿಂದರೆ ಮುನ್ನಡೆಯಲು ಅನೇಕ ಮಂದಿ ಸಹಕಾರ ನೀಡುವುದು ಕಾಣಬಹುದು

ಹೊಸ ಅಭಿವ್ಯಕ್ತಿ ವಿಧಾನ: ಯಾವುದೇ ಪ್ರಮುಖ ವಿಚಾರದ ಕುರಿತು ನಿಮ್ಮ ಧ್ವನಿ ಎತ್ತಲು ಕೂಡ ಸಾಮಾಜಿಕ ಮಾಧ್ಯಗಳು ವೇದಿಕೆಯಾಗಿದೆ. ಸಾಮಾಜಿಕ ಮಾಧ್ಯಮ ಒದಗಿಸುವ ಹೊಸ ವಿಧಾನಗಳ ಅಭಿವ್ಯಕ್ತಿ ಸ್ವರೂಪಗಳನ್ನು ಅನ್ವೇಷಿಸಲು ಸಾಧ್ಯ.

ತಜ್ಞರಿಂದ ಕಲಿಕೆ: ಎಲ್ಲಾ ಉದ್ಯಮಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಅಸ್ತಿತ್ವ ಹೊಂದಿದೆ. ಇದರಿಂದ ಉತ್ತಮ ಮಾರ್ಗದರ್ಶಕರ ಸಹಾಯಕದಿಂದ ಹಲವು ವಿಚಾರ ಹಂಚಿಕೆಗಳಿಗೆ ಸಹಾಯಕವಾಗುತ್ತದೆ.

ಬ್ರೇಕ್​ಗೆ ಸಹಾಯ: ನಿಮ್ಮ ಕೆಲಸದ ನಡುವೆ ರಿಫ್ರೆಶ್​ಮೆಂಟ್​ ಅನ್ನು ಕೂಡ ಈ ಸಾಮಾಜಿಕ ಮಾಧ್ಯಮಗಳು ನೀಡುತ್ತದೆ. ನಿಮ್ಮ ಮನಸಿಗೆ ಖುಷಿ ನೀಡುವ ವಿಡಿಯೋಗಳನ್ನು ನೋಡಿ ಬಳಿಕ ಕೆಲಸ ಆರಂಭಿಸುವುದರಿಂದ ಹೊಸ ಆಲೋಚನೆಗಳನ್ನು ಹೊಂದಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಆ್ಯಂಡ್ರಾಯ್ಡ್​ ಬೆಟಾಗಾಗಿ ಹೊಸ ವೈಶಿಷ್ಟ್ಯ ಪರಿಚಯಿಸಿದ ವಾಟ್ಸ್​​ಆ್ಯಪ್​ ​

Last Updated : Mar 25, 2023, 11:09 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.