ETV Bharat / sukhibhava

ತೊನ್ನು ಕುಷ್ಠರೋಗದ ಲಕ್ಷಣವೇ...? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ನೋಡಿ - श्वेत कुष्ठ

ದೇಹದ ಮೇಲಿನ ಚರ್ಮ ಹೀಗೆ ಬಿಳಿ ಆಗುವುದನ್ನು ವಿಟಿಲಿಗೋ ಅಥವಾ ತೊನ್ನು ರೋಗ ಎಂದು ಕರೆಯಲಾಗುತ್ತದೆ - ಇತ್ತೀಚಿಗೆ ನಟಿ ಮಮತಾ ಮೋಹನ್‌ದಾಸ್ ಗೂ ಇಂತಹದು ಲಕ್ಷಣಗಳು ಕಾಣಿಸಿಕೊಂಡಿವೆ - ಹಾಗಾದರೆ ಈ ರೋಗಕ್ಕೆ ಪರಿಹಾರ ಏನು?

skin-disease-vitiligo-is-a-skin-disorder-white-leprosy
ಚರ್ಮರೋಗ ಬಿಳಿ ಕುಷ್ಠರೋಗವೇ...? ಇದರ ಬಗ್ಗೆ ಸಂಪೂರ್ಣ ವಿವರ ಇಲ್ಲದೆ
author img

By

Published : Jan 23, 2023, 7:15 PM IST

ಸಾಮಾನ್ಯವಾಗಿ, ವ್ಯಕ್ತಿಯ ಚರ್ಮ ಅಥವಾ ದೇಹದಲ್ಲಿ ಬಿಳಿ ಚುಕ್ಕಿಗಳಿರುವುದನ್ನು ಜನರು ಗಮನಿಸಿದರೆ, ತಕ್ಷಣವೇ ಆ ವ್ಯಕ್ತಿಯಿಂದ ದೂರ ಸರಿಯುತ್ತಾರೆ, ಇದು ನಮ್ಮ ದೇಶದಲ್ಲಿ ಮಾತ್ರವಲ್ಲದೇ ಪ್ರಪಂಚದ ಬಹುತೇಕ ಎಲ್ಲ ಕಡೆಗಳಲ್ಲು ಬಿಳಿ ಚರ್ಮ ಕಾಯಿಲೆಯಿಂದ ಬಳಲುತ್ತಿರುವ ಜನರು ಇಂತಹ ಸಾಮಾಜಿಕ ತಾರತಮ್ಯ ಎದುರಿಸಬೇಕಾಗುತ್ತದೆ. ದೇಹದ ಮೇಲೆ ಕಾಣಿಸಿಕೊಳ್ಳುವ ಬಿಳಿ ಚುಕ್ಕೆಗಳ ಈ ಸಮಸ್ಯೆಯನ್ನು ವಿಟಿಲಿಗೋ ಅಥವಾ ತೊನ್ನು ರೋಗ ಎಂದು ಕರೆಯಲಾಗುತ್ತದೆ. ಈ ರೋಗಕ್ಕೆ ಸಂಬಂಧಿಸಿದಂತೆ ಜನರಲ್ಲಿ ಹಲವಾರು ರೀತಿಯ ಗೊಂದಲಗಳಿವೆ.

ಇತ್ತೀಚೆಗೆ, ಮಲಯಾಳಂ ನಟಿ ಮಮತಾ ಮೋಹನ್‌ದಾಸ್ ಅವರು ತಮ್ಮ ಇನ್​ಸ್ಟ್ರಾಗ್ರಾಂನಲ್ಲಿ ಪೋಸ್ಟ್​​ನಲ್ಲಿ ತನಗಿರುವ ತೊನ್ನು ರೋಗದ ಬಗ್ಗೆ ಮೌನ ಮುರಿದು ಬಹಿರಂಗವಾಗಿ ಹೇಳಿಕೊಂಡಿದ್ದರು. ಜೊತೆಗೆ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಮಮತಾ ಮಾತ್ರವಲ್ಲದೇ, ಪಾಪ್​ ಸ್ಟಾರ್​ ಮೈಕೆಲ್ ಜಾಕ್ಸನ್, ಅಮಿತಾಭ್ ಬಚ್ಚನ್, ಸೂಪರ್ ಮಾಡೆಲ್ ವಿನ್ನಿ ಹಾರ್ಲಾನ್, ನಟಿ ನಫೀಸಾ ಅಲಿ ಮತ್ತು ಪ್ರಸಿದ್ಧ ಟಿವಿ ನಿರೂಪಕಿ ಗ್ರಹಾಂ ನಾರ್ಟನ್ ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳು ಈ ಕಾಯಿಲೆಗೆ ತುತ್ತಾಗಿದ್ದಾರೆ ಮತ್ತು ಈ ರೋಗದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನವನ್ನು ಸಹ ಮಾಡಿದ್ದರು.

ವಿಟಲಿಗೋ ಅಥವಾ ತೊನ್ನು ರೋಗ ಎಂದರೇನು: ದೆಹಲಿಯ ಚರ್ಮರೋಗ ತಜ್ಞ ಡಾ. ಸೂರಜ್​ ಭಾರ್ತಿ ಅವರು, ತೊನ್ನು ರೋಗವು ವಾಸ್ತವವಾಗಿ ಇದು ಒಂದು ರೀತಿಯ ಚರ್ಮ ಕಾಯಿಲೆಯಾಗಿದ್ದು, ಇದರಲ್ಲಿ ದೇಹದ ಒಂದು ಅಥವಾ ದೇಹದ ಹೆಚ್ಚಿನ ಭಾಗಗಳಲ್ಲಿ ಚರ್ಮದ ಮೇಲೆ ಸಣ್ಣ ಅಥವಾ ದೊಡ್ಡ ಬಿಳಿ ತೇಪಗಳು ಕಾಣಿಸಿಕೊಳ್ಳುತ್ತವೆ. ಆರಂಭದಲ್ಲಿ ಈ ಬಿಳಿ ತೇಪಗಳು ರೋಗಿಯ ಚರ್ಮದ ಮೇಲೆ ಸಣ್ಣ ಬಿಳಿ ಚುಕ್ಕೆಗಳ ರೂಪದಲ್ಲಿ ಚರ್ಮದ ಮೇಲೆ ರೂಪುಗೊಳ್ಳಲು ಪ್ರಾರಂಭಿಸುತ್ತವೆ. ನಂತರ ಚುಕ್ಕೆಗಳು ದೇಹದ ತುಂಬೆಲ್ಲ ಹರಡಲು ಪ್ರಾರಂಭವಾಗುತ್ತದೆ. ಇದರಿಂದ ದೇಹದ ಚರ್ಮದ ಬಣ್ಣ ಬದಲಾಗುತ್ತ ಹೋಗುತ್ತದೆ. ಈ ಸಮಸ್ಯೆಯಿಂದಾಗಿ ಕೂದಲಿನ ಬಣ್ಣ, ಕೆಲವೊಮ್ಮೆ ಬಾಯಿಯೊಳಗಿನ ಚರ್ಮದ ಬಣ್ಣವು ಕೂಡ ಬದಲಾಗುತ್ತದೆ.

ಇದು 'ಬಿಳಿ ಕುಷ್ಠರೋಗ' ಅಲ್ಲ: ಅನೇಕ ಜನರು ತೊನ್ನು ರೋಗವನ್ನು ಬಿಳಿ ಕುಷ್ಠರೋಗವೆಂದು ಪರಿಗಣಿಸುವ ತಪ್ಪನ್ನು ಮಾಡುತ್ತಾರೆ. ಜೊತೆಗೆ ಈ ಕಾಯಿಲೆಯನ್ನು ಸಾಂಕ್ರಮಿಕ ರೋಗ ಎಂದು ನಂಬುತ್ತಾರೆ. ಈ ರೀತಿಯ ನಂಬಿಕೆಗಳಿಂದಾಗಿ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳ ಜೊತೆ ಮಾತನಾಡಲು ಅಥವಾ ಅವರ ಪಕ್ಕ ಕುಳಿತುಕೊಳ್ಳಲು ಹಿಂಜರಿಯುತ್ತಾರೆ. ಆದರೆ ಇದು ಸಾಂಕ್ರಮಿಕ ರೋಗವಲ್ಲ ಎಂದು ವೈದ್ಯ ಸೂರಜ್​ ಭಾರ್ತಿ ಸ್ಪಷ್ಟಪಡಿಸಿದ್ದಾರೆ.

ಸಾಮಾನ್ಯವಾಗಿ ದೇಹದ ಮೇಲೆ ಆಗುವ ಎಲ್ಲ ಬಿಳಿ ಚುಕ್ಕೆಗಳನ್ನು ವೈದ್ಯಕೀಯ ಪರಿಭಾಷೆಯಲ್ಲಿ ವಿಟಿಲಿಗೋ ಎಂದು ಕರೆಯಲಾಗುತ್ತದೆ, ಚರ್ಮಕ್ಕೆ ಬಣ್ಣವನ್ನು ನೀಡುವ ಮೆಲನಿನ್​ ಎಂಬ ಜೀವಕೋಶಗಳು ದೇಹದಲ್ಲಿ ನಾಶವಾಗಲು ಪ್ರಾರಂಭಿಸಿದಾಗ ಅಥವಾ ಮೆಲನಿನ್​ ಉತ್ಪಾದನೆ ಕುಟಿಂತವಾದಾಗ, ಚರ್ಮದ ಮೇಲೆ ಬಿಳಿ ಚುಕ್ಕೆಗಳು ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಡಾ. ಭಾರ್ತಿ ಅವರು ವಿವರಿಸಿದ್ದಾರೆ.

ತೊನ್ನು ರೋಗಕ್ಕೆ ಕಾರಣಗಳು: ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ದೇಹಕ್ಕೆ ಹಾನಿ ಮಾಡಲು ಪ್ರಾರಂಭಿಸುತ್ತದೆ. ಇದರಿಂದ ದೇಹದಲ್ಲಿರುವ ಮೆಲನೋಸೈಟ್​ (ಮೆಲನಿನ್​) ಕೋಶಗಳ ಉತ್ಪಾದನೆ ಕಡಿಮೆಯಾಗುತ್ತದೆ. ಪರಿಣಾಮ ಚರ್ಮದ ಮೇಲೆ ಬಿಳಿ ಬಣ್ಣದ ಚುಕ್ಕೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಅನುವಂಶಿಕ ಕಾರಣಗಳಿಂದ ಕೂಡ ಸಂಭವಿಸಬಹುದು ಮತ್ತು ದೇಹದಲ್ಲಿನ ಪೌಷ್ಠಿಕಾಂಶದ ಕೊರತೆ, ಆಹಾರದಲ್ಲಿನ ಅಜಾಗರೂಕತೆ, ಒತ್ತಡ ಮತ್ತು ಹಾನಿಕಾರಕ ರಸಯಾನಗಳು ದೇಹದಲ್ಲಿ ಸಂಗ್ರಹವಾಗುವುದರಿಂದ ತೊನ್ನು ರೋಗ (ವಿಟಿಲಿಗೋ)ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಕಾಡುವ ವಿವಿಧ ಚರ್ಮದ ಕಾಯಿಲೆಗಳು.. ಇಲ್ಲಿದೆ ಸಿಂಪಲ್ ಸಲ್ಯೂಷನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.