ಹೈದರಾಬಾದ್: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಲಕ್ಷ್ಮಿ ಮತ್ತು ಗಣೇಶನನ್ನು ಪೂಜಿಸಲಾಗುತ್ತದೆ. ಪಶ್ಚಿಮ ಬಂಗಾಳ, ಅಸ್ಸೋಂ, ತ್ರಿಪುರಾ, ಒಡಿಶಾ, ಬಿಹಾರದ ಮಿಥಿಲಾ, ಮಹಾರಾಷ್ಟ್ರದ ತಿತ್ವಾಲಾ ಮತ್ತು ಬಾಂಗ್ಲಾದೇಶದ ಅನೇಕ ಭಾಗಗಳಲ್ಲಿ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಕಾಳಿ ದೇವಿಯನ್ನು ಪೂಜಿಸಲಾಗುತ್ತದೆ.
ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಕಾರ್ತಿಕ ಅಮಾವಾಸ್ಯೆಯ ಮಂಗಳಕರವಾದ ದಿನದಂದು ಲಕ್ಷ್ಮಿಯನ್ನು ಪೂಜಿಸಿದ್ರೆ, ಆಕೆ ತೃಪ್ತಳಾಗುತ್ತಾಳೆ ಮತ್ತು ಜನರಿಗೆ ಸಮೃದ್ಧಿಯನ್ನು ಅನುಗ್ರಹಿಸುತ್ತಾಳೆ ಎಂಬುದು ನಂಬಿಕೆ. ದೀಪಾವಳಿ ಮುಂಚಿನ ಶರದ್ ಪೂರ್ಣಿಮೆ ಹಬ್ಬವನ್ನು ಲಕ್ಷ್ಮಿ ದೇವಿಯ ಜನ್ಮ ವಾರ್ಷಿಕೋತ್ಸವವಾಗಿ ಆಚರಿಸಲಾಗುತ್ತದೆ. ದೀಪಾವಳಿಯಂದು ದೇವಿಯನ್ನು ಪೂಜಿಸಿದ ನಂತರ ಭಕ್ತರಿಗೆ ಸಂಪತ್ತು ಮತ್ತು ವರಗಳನ್ನು ನೀಡುತ್ತಾಳೆ ಎಂದು ಹೇಳಲಾಗುತ್ತದೆ.
![ಸಂಪತ್ತಿನ ದೇವತೆ ಲಕ್ಷ್ಮಿ](https://etvbharatimages.akamaized.net/etvbharat/prod-images/16731827_lakshmi-puja.jpg)
ಶರದ್ ಪೂರ್ಣಿಮೆ ದಿನ ಲಕ್ಷ್ಮಿ ಪೂಜೆ ಉತ್ತಮ: ಧಾರ್ಮಿಕ ಪದ್ಧತಿಗಳ ಪ್ರಕಾರ, ಶರದ್ ಪೂರ್ಣಿಮೆಯಂದು ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ದೀಪಾವಳಿಯಂದು ಕಾಳಿ ದೇವಿಯನ್ನು ಪೂಜಿಸಬೇಕು. ಕಾರ್ತಿಕ್ ಅಮಾವಾಸ್ಯೆಯನ್ನು ದುರ್ಗಾ ದೇವಿಯ ರೂಪವಾದ ಕಾಳರಾತ್ರಿಯ ರಾತ್ರಿ ಎಂದು ಪರಿಗಣಿಸಲಾಗುತ್ತದೆ. ಸಮುದ್ರ ಮಂಥನ ಮಾಡುವ ಶರದ್ ಪೂರ್ಣಿಮೆಯ ದಿನದಂದು ಲಕ್ಷ್ಮಿ ದೇವಿಯೂ ಸಮುದ್ರದಿಂದ ಹೊರಹೊಮ್ಮಿದಳು ಎಂದು ನಂಬಲಾಗಿದೆ. ಹಾಗಾಗಿ ಆ ದಿನ ದೇವಿಯ ಪೂಜೆ ಮಾಡಬೇಕು ಎಂದು ಹೇಳಲಾಗುತ್ತದೆ.
ಲಕ್ಷ್ಮಿ ಪೂಜೆಗೆ ಹೆಚ್ಚಿನ ಆದ್ಯತೆ: ಅಮವಾಸ್ಯೆ ತಿಥಿಯು ದುರ್ಗಾ ದೇವಿಯ ಕಾಳರಾತ್ರಿ ರೂಪದೊಂದಿಗೆ ಸಂಬಂಧಿಸಿದೆ. ಶರದ್ ಪೂರ್ಣಿಮಾವು ಲಕ್ಷ್ಮಿ ದೇವಿಯ 'ಧವಲ್' ಅಥವಾ 'ಬ್ರೈಟ್' ರೂಪದೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ, ಕೆಲವು ನಂಬಿಕೆಗಳ ಪ್ರಕಾರ, ಶರದ್ ಪೂರ್ಣಿಮೆಯ ಸಮಯದಲ್ಲಿ ಲಕ್ಷ್ಮಿ ದೇವಿಯನ್ನು ಮತ್ತು ದೀಪಾವಳಿಯ ಸಮಯದಲ್ಲಿ ಕಾಳಿ ದೇವಿಯನ್ನು ಪೂಜಿಸಬೇಕು. ಆದರೆ ಅನಾದಿ ಕಾಲದ ಪದ್ಧತಿಗಳಲ್ಲಿನ ಆಧುನಿಕತೆ ಮತ್ತು ಮಾರುಕಟ್ಟೆಯ ಪ್ರಾಬಲ್ಯದಿಂದಾಗಿ, ದೀಪಾವಳಿ ಸಮಯದಲ್ಲಿ ಲಕ್ಷ್ಮಿ ಪೂಜೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಇದನ್ನೂ ಓದಿ: ನರಕ ಚತುರ್ದಶಿ ಆಚರಣೆ ಹಿಂದಿನ ಕಥೆ ಏನು.. ‘ಯಮ ಪ್ರದೀಪ’ದ ಬಗ್ಗೆ ನಿಮಗೆ ಎಷ್ಟು ಗೊತ್ತು?
ದೀಪಾವಳಿಯ ಸಮಯದಲ್ಲಿ ಲಕ್ಷ್ಮಿ ದೇವಿ ಮತ್ತು ಕಾಳರಾತ್ರಿ ದೇವಿಯ ಜೊತೆಗೆ, ಗಣೇಶ, ಬ್ರಹ್ಮ, ವಿಷ್ಣು ಮತ್ತು ಶಿವ ದೇವರನ್ನೂ ಪೂಜಿಸಬೇಕು. ಪೂಜೆಯ ಸಮಯದಲ್ಲಿ, ಬ್ರಹ್ಮನ ಎಡಭಾಗದಲ್ಲಿ ಸರಸ್ವತಿ ದೇವಿಯ ವಿಗ್ರಹವನ್ನು ಇಡಬೇಕು. ಎಡಭಾಗದಲ್ಲಿ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಹಾಗೂ ಬಲಭಾಗದಲ್ಲಿ ಶಿವ ಮತ್ತು ಪಾರ್ವತಿ ದೇವಿಯನ್ನು ಇಟ್ಟು ಪೂಜಿಸಬೇಕು.