ETV Bharat / sukhibhava

ಕಡಿಮೆ ನಿದ್ದೆ ಅವಧಿಯಿಂದ ಹೃದಯದ ನಾಳಗಳಿಗೆ ಅಪಾಯ: ಸಂಶೋಧನೆಗಳಿಂದ ಬಹಿರಂಗ

ರಾತ್ರಿ ಕನಿಷ್ಠ ಏಳರಿಂದ ಎಂಟು ಗಂಟೆಗಳ ಕಾಲ ನಿದ್ದೆ ಮಾಡದೇ ಹೋದಲ್ಲಿ ಪಿಎಡಿ ಸಮಸ್ಯೆ ಅಪಾಯ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Short sleep duration doubles heart risk; Research

author img

By

Published : Mar 16, 2023, 3:52 PM IST

ವಾಷಿಂಗ್ಟನ್​( ಅಮೆರಿಕ): ರಾತ್ರಿ ಸಮಯದಲ್ಲಿ ಎಂಟು ಗಂಟೆ ಬದಲಾಗಿ ಐದು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದರಿಂದ ಶೇ 74ರಷ್ಟು ಬಾಹ್ಯ ಅಪಧಮನಿಯ ಕಾಯಿಲೆ (ಪೆರಿಫೆರಲ್​ ಅರ್ಟರಿ ಡೀಸಿಸ್​- ಪಿಎಡಿ) ಅಪಾಯ ಅಭಿವೃದ್ಧಿ ಹೊಂದುವ ಸಾಧ್ಯತೆ ಇದೆ ಎಂದು ಸಂಶೋಧನೆ ತಿಳಿಸಿದೆ. ಯುರೋಪಿಯನ್​ ಹಾರ್ಟ್​ ಜರ್ನಲ್​ ಈ ಸಂಬಂಧ ಸಂಶೋಧನೆ ನಡೆಸಿದ್ದು, ಇಎಸ್​ಇ ಇದನ್ನು ಪ್ರಕಟಿಸಿದೆ. ಪಿಎಡಿ ಅಪಾಯ ಕಡಿಮೆ ಮಾಡಲು ರಾತ್ರಿ ಸಮಯ ಏಳರಿಂದ ಎಂಟು ಗಂಟೆಗಳ ಕಾಲ ನಿದ್ದೆ ಮಾಡುವುದು ಅವಶ್ಯಕವಾಗಿದೆ ಎಂಬುದು ನಮ್ಮ ಅಧ್ಯಯನ ತಿಳಿಸಿದೆ ಎಂದು ಡಾ ಶುಹೈ ಯೂನ್​ ತಿಳಿಸಿದ್ದಾರೆ.

ಜಗತ್ತಿನಲ್ಲಿ 200 ಮಿಲಿಯನ್​ ಜನರು ಪಿಎಡಿ ಸಮಸ್ಯೆಯಿಂದ ಬಳಲುತ್ತಿದ್ದು, ಕಾಲಿನಲ್ಲಿರುವ ನಾಳಗಳು ಮುಚ್ಚುವುದರಿಂದ ರಕ್ತದ ಚಲನೆ ನಿಯಂತ್ರಣಗೊಳಿಸಿ, ಪಾರ್ಶ್ವವಾಯು ಮತ್ತು ಹೃದಯಾಘಾತದ ಸಮಸ್ಯೆ ಹೆಚ್ಚಿದೆ. ರಾತ್ರಿ ಸರಿಯಾದ ನಿದ್ದೆ ಇಲ್ಲದಿರುವುದರಿಂದ, ಬೆಳಗಿನ ಹೊತ್ತಿನ ತೂಕಡಿಕೆ ಪಿಎಡಿ ರೀತಿಯಲ್ಲಿಯೇ ಪರಿಧಮನಿಯ ಕಾಯಿಲೆ ಹೊಂದಿದ್ದು, ಇದರಿಂದ ನಾಳಗಳು ಅದನ್ನು ಮುಚ್ಚಲಿದೆ. ಪಿಎಡಿ ರೋಗಿಗಳಲ್ಲಿ ನಿದ್ರೆ ಸಮಸ್ಯೆ ಪ್ರಮುಖವಾಗಿದೆ. ಪಿಎಡಿ ಮತ್ತು ನಿದ್ರಾ ಅಭ್ಯಾಸದ ಮೇಲಿನ ಪ್ರಭಾವದ ಕುರಿತು ಸೀಮಿತ ದತ್ತಾಂಶ ಸಂಗ್ರಹಿಸಲಾಗಿದೆ. ಈ ಗ್ಯಾಪ್​ ಅನ್ನು ತುಂಬುವುದು ನಮ್ಮ ಅಧ್ಯಯನದ ಗುರಿಯಾಗಿದೆ ಎಂದರು.

ಈ ಅಧ್ಯಯನಕ್ಕಾಗಿ 6,50,000 ಭಾಗಿದಾರರನ್ನು ಎರಡು ಭಾಗದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಮೊದಲಿಗೆ ಅವರ ನಿದ್ದೆಯ ಸಮಯ, ಬೆಳಗ್ಗಿನ ಹೊತ್ತಿನ ನಿದ್ದೆ ಪಿಎಡಿ ಜೊತೆಗೆ ಸಂಬಂಧ ಹೊಂದಿದ್ಯ ಎಂಬುದು, ಎರಡನೇಯದು ವಂಶಾವಳಿ ದತ್ತಾಂಶಗಳ ಮೂಲಕ ಮೆಂಡೆಲಿಯನ್ ರಂಡೊಮಿಸೇಷನ್​​​ ನಿಯಂತ್ರಣ ಮಾಡುವುದು.

ನಿದ್ರೆಯ ಅಭ್ಯಾಸಗಳು ಮತ್ತು ಪಿಎಡಿ ನಡುವಿನ ಸಂಬಂಧವು ಕಂಡು ಬಂದರೆ, ನಿದ್ರೆಯ ಅಭ್ಯಾಸದಿಂದ ಪಿಎಡಿ ಬಂದಿದ್ಯಾ ಅಥವಾ ಪಿಎಡಿಯಿಂದ ನಿದ್ದೆಗೆ ಭಂಗ ಉಂಟಾಗಿದ್ಯಾ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಮೆಂಡೆಲಿಯನ್ ಯಾದೃಚ್ಛಿಕೀಕರಣವು ಕಾರಣವನ್ನು ಮೌಲ್ಯಮಾಪನ ಮಾಡುವ ದೃಢವಾದ ವಿಧಾನವಾಗಿದೆ. ಇದು ಫಲಿತಾಂಶಗಳ ಬಗ್ಗೆ ಹೆಚ್ಚು ಖಚಿತತೆ ನೀಡುತ್ತದೆ ಎಂದು ಯೂನ್​ ತಿಳಿಸಿದ್ದಾರೆ.

ಇವೆರಡನ್ನು ಗಮನಿಸಿದರೆ, ಕಡಿಮೆ ನಿದ್ದೆ ಅವಧಿ ಪಿಎಡಿಯಲ್ಲಿ ಸಂಬಂಧ ಹೊಂದಿದೆ. ಅಧ್ಯಯನಕ್ಕೆ ಒಳಪಟ್ಟ ಎಂಟು ಗಂಟೆ ನಿದ್ದೆ ಅವಧಿ ಹೊಂದಿರುವವರಿಗೆ ಹೋಲಿಕೆ ಮಾಡಿದರೆ, ಐದು ಗಂಟೆಗಳಿಗಿಂತ ಕಡಿಮೆ ನಿದ್ದೆ ಅವಧಿ ಹೊಂದಿರುವ 53,416 ಮಂದಿ ಪಿಎಡಿಯ ದುಪ್ಪಟ್ಟು ಅಪಾಯ ಹೊಂದಿರುವುದು ಪತ್ತೆಯಾಗಿದೆ

ಕಡಿಮೆ ನಿದ್ದೆ ಅವಧಿಕ ಪಿಎಡಿ ಅಪಾಯದೊಂದಿಗೆ ಸಂಬಂಧ ಹೊಂದಿದೆ. ಜೊತೆಗೆ ಪಿಎಡಿ ಕೂಡ ಕಡಿಮೆ ನಿದ್ದೆ ಅವಧಿ ಹೊಂದಲು ಕಾರಣವಾಗಿದೆ. ನಿದ್ದೆ ಸಮಯ ಕಡಿಮೆಯಾದರೆ, ಈ ಅಪಾಯ ಹೆಚ್ಚಿದೆ ಎಂದು ಅಧ್ಯಯನದ ಫಲಿತಾಂಶ ತಿಳಿಸಿದೆ ಎಂದು ಯೂನ್​ ತಿಳಿಸಿದ್ದಾರೆ.

ಈ ಸಂಬಂಧ ಹೆಚ್ಚಿನ ಅಧ್ಯಯನ ಅವಶ್ಯವಿದ್ದು, ಕಡಿಮೆ ನಿದ್ದೆ ಅವಧಿ ಮತ್ತು ಪಿಎಡಿ ದ್ವಿಮುಖವಾಗಿ ಹೇಗೆ ಅಭಿವೃದ್ಧಿ ಪಡಿಸುತ್ತದೆ ಎಂಬುದರ ಕುರಿತು ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ. ಜೀವನಶೈಲಿಯಲ್ಲಿನ ಬದಲಾವಣೆ, ದೈಹಿಕ ಚಟುವಟಿಕೆಗಳು ಪಿಎಡಿ ಅಪಾಯವನ್ನು ಕಡಿಮೆ ಮಾಡುತ್ತದೆ. ಇನ್ನು ಪಿಎಡಿ ರೋಗಿಗಳು ಕೂಡ ನೋವಿ ನಿವಾರಣೆಗೆ ಉತ್ತಮ ನಿದ್ದೆ ಹೊಂದುವುದು ಅತ್ಯವಶ್ಯಕವಾಗಿದೆ.

ಇದನ್ನೂ ಓದಿ: ಮಾನಸಿಕ ಮತ್ತು ದೈಹಿಕ ತೊಂದರೆಗಳಿಗೆ ಕಾರಣವಾಗುತ್ತಿರುವ ಆಟಿಸಂ ಮಕ್ಕಳ ಆರೈಕೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.