ETV Bharat / sukhibhava

ಕೋವಿಡ್​ ನಿರ್ಬಂಧ ತೆರವಿನ ಬಳಿಕ ಅಸ್ತಮಾ ಹೆಚ್ಚಳ: ವರದಿ - ಕಡಿಮೆ ಸಂಖ್ಯೆಯ ಜನ ಮಾಸ್ಕ್

ಇತರ ಉಸಿರಾಟದ ಸೋಂಕುಗಳಿಗಿಂತ ಕೋವಿಡ್ -19 ಅಸ್ತಮಾ ದಾಳಿಯನ್ನು ಉತ್ತೇಜಿಸುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆ ಕಂಡುಹಿಡಿದಿದೆ. ಕೋವಿಡ್​-19 ನಿರ್ಬಂಧಗಳ ಸಡಿಲಿಕೆ ಮತ್ತು ತೀವ್ರವಾದ ಅಸ್ತಮಾ ದಾಳಿ ಎರಡೂ ಒಂದಕ್ಕೊಂದು ಸಂಬಂಧ ಹೊಂದಿವೆ ಎಂಬುದನ್ನು ಇದು ತೋರಿಸುತ್ತದೆ ಎಂದು ಪ್ರೊಫೆಸರ್ ಆಡ್ರಿಯನ್ ಮಾರ್ಟಿನೌ ಹೇಳಿದರು.

ಕೋವಿಡ್​ ನಿರ್ಬಂಧ ತೆರವಿನ ನಂತರ ಅಸ್ತಮಾ ಹೆಚ್ಚಳ: ವರದಿ
severe-asthma-attacks-doubled-after-covid-restrictions-lifted
author img

By

Published : Nov 25, 2022, 3:29 PM IST

ನವದೆಹಲಿ: ಕೋವಿಡ್​-19 ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ವಯಸ್ಕರಲ್ಲಿ ಅಸ್ತಮಾ ತೀವ್ರತೆ ಬಹುತೇಕ ದ್ವಿಗುಣಗೊಂಡಿದೆ ಎಂದು ವರದಿಯೊಂದು ತಿಳಿಸಿದೆ. ಥೋರಾಕ್ಸ್ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನವು ಸಾಂಕ್ರಾಮಿಕ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಅಸ್ತಮಾ ದಾಳಿಯ ಅಪಾಯ ಹೆಚ್ಚಾಗಿದೆ ಎಂದು ಹೇಳಿದೆ. ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಕಡಿಮೆ ಸಂಖ್ಯೆಯ ಜನ ಮಾಸ್ಕ್ ಬಳಸುತ್ತಿದ್ದಾರೆ ಮತ್ತು ಸಾಮಾಜಿಕವಾಗಿ ಹೆಚ್ಚು ಬೆರೆಯುತ್ತಿದ್ದಾರೆ. ಅದಕ್ಕೆ ಪೂರಕವೆಂಬಂತೆ ಕೋವಿಡ್ -19 ಮತ್ತು ಇತರ ತೀವ್ರವಾದ ಉಸಿರಾಟದ ಸೋಂಕುಗಳ ಅಪಾಯ ಹೆಚ್ಚಾಗಿದೆ.

ಇತರ ಉಸಿರಾಟದ ಸೋಂಕುಗಳಿಗಿಂತ ಕೋವಿಡ್ -19 ಅಸ್ತಮಾ ದಾಳಿ ಉತ್ತೇಜಿಸುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆ ಕಂಡುಹಿಡಿದಿದೆ. ಕೋವಿಡ್​-19 ನಿರ್ಬಂಧಗಳ ಸಡಿಲಿಕೆ ಮತ್ತು ತೀವ್ರವಾದ ಅಸ್ತಮಾ ದಾಳಿ ಎರಡೂ ಒಂದಕ್ಕೊಂದು ಸಂಬಂಧ ಹೊಂದಿವೆ ಎಂಬುದನ್ನು ಇದು ತೋರಿಸುತ್ತದೆ ಎಂದು ಪ್ರೊಫೆಸರ್ ಆಡ್ರಿಯನ್ ಮಾರ್ಟಿನೌ ಹೇಳಿದರು.

ಕೋವಿಡ್ ಸಮಯದಲ್ಲಿ ಪರಿಚಯಿಸಲಾದ ಸಾರ್ವಜನಿಕ ಆರೋಗ್ಯ ಕ್ರಮಗಳ ಕೆಲ ಅಂಶಗಳಾದ ಮಾಸ್ಕ್ ಧರಿಸುವುದು ಹಾಗೂ ಇನ್ನೂ ಕೆಲ ಕ್ರಮಗಳು ಉಸಿರಾಟದ ಕಾಯಿಲೆ ಉಲ್ಬಣಿಸದಂತೆ ತಡೆಯುತ್ತವೆ ಎಂದು ಸಂಶೋಧನೆಯ ಪ್ರಮುಖ ಲೇಖಕ ಮತ್ತು ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ರೆಸ್ಪಿರೇಟರಿ ಇನ್ಫೆಕ್ಷನ್ ಆ್ಯಂಡ್ ಇಮ್ಯುನಿಟಿ ಕ್ಲಿನಿಕಲ್ ಪ್ರೊಫೆಸರ್ ಮಾರ್ಟಿನೌ ತಿಳಿಸಿದ್ದಾರೆ.

ಏಪ್ರಿಲ್ 2021 ರಲ್ಲಿ ಸಾಮಾಜಿಕ ಅಂತರದ ನಿರ್ಬಂಧಗಳು ಮತ್ತು ಮಾಸ್ಕ್ ಕಡ್ಡಾಯ ನಿಯಮಗಳನ್ನು ಸಡಿಲಿಸಲು ಪ್ರಾರಂಭಿಸಿದಾಗ, ಸಂಶೋಧನೆಯಲ್ಲಿ ಭಾಗವಹಿಸಿದ ಶೇ 1.7 ರಷ್ಟು ಜನರು ಹಿಂದಿನ ತಿಂಗಳಲ್ಲಿ ತೀವ್ರವಾದ ಅಸ್ತಮಾ ಸೋಂಕು ಹೊಂದಿದ್ದಾರೆಂದು ತಿಳಿಸಿದ್ದಾರೆ. ಜನವರಿ 2022 ರಲ್ಲಿ, ಈ ಪ್ರಮಾಣವು ದುಪ್ಪಟ್ಟಾಗಿದ್ದು, ಶೇ 3.7 ಕ್ಕೆ ಏರಿದೆ. ಅಧ್ಯಯನವು ನವೆಂಬರ್ 2020 ಮತ್ತು ಏಪ್ರಿಲ್ 2022 ರ ನಡುವೆ ಕ್ವೀನ್ ಮೇರಿಯ COVIDENCE UK ಅಧ್ಯಯನದಲ್ಲಿ ಭಾಗವಹಿಸಿದ 2,312 UK ವಯಸ್ಕರ ಅಸ್ತಮಾ ಡೇಟಾ ವಿಶ್ಲೇಷಿಸಿದೆ.

ಮಾಸಿಕ ಆನ್‌ಲೈನ್ ಪ್ರಶ್ನಾವಳಿಗಳ ಮೂಲಕ ಮಾಸ್ಕ್ ಬಳಕೆ, ಸಾಮಾಜಿಕ ಅಂತರ ಮತ್ತು ಅಸ್ತಮಾ ರೋಗಲಕ್ಷಣಗಳ ವಿವರಗಳನ್ನು ಸಂಗ್ರಹಿಸಲಾಗಿದೆ. ನಮ್ಮ ಅಧ್ಯಯನದಲ್ಲಿ ಭಾಗವಹಿಸಿದವರಿಗೆ ಇತರ ಉಸಿರಾಟದ ಸೋಂಕುಗಳಿಗಿಂತ ಕೋವಿಡ್ -19 ಹೆಚ್ಚಿನ ಅಸ್ತಮಾ ಉಂಟು ಮಾಡುವ ಸಾಧ್ಯತೆಯಿಲ್ಲ ಎಂದು ತಿಳಿಯುವುದು ಭರವಸೆದಾಯಕವಾಗಿದೆ ಎಂದು ಸಂಶೋಧನಾ ಅಧ್ಯಯನದ ಮೊದಲ ಲೇಖಕ ಡಾ. ಫ್ಲಾರೆನ್ಸ್ ಟೈಡೆಮನ್ ಹೇಳಿದರು.

ಇದನ್ನೂ ಓದಿ: ಚಳಿಗಾಲದಲ್ಲಿ ಸ್ಟೀಮ್ ತೆಗೆದುಕೊಳ್ಳುವುದು ಹೇಗೆ ಪ್ರಯೋಜನಕಾರಿ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.