ಲಂಡನ್: ಸೆಲ್ಫಿ ತೆಗೆದುಕೊಳ್ಳುವ ಪ್ರೀತಿ ಇಂದು ಯಾರಿಗೆ ಇಲ್ಲ ಹೇಳಿ. ಆದರೆ, ಈ ನಿಮ್ಮ ಅಭ್ಯಾಸ ನಿಮ್ಮ ಆಹಾರ, ಊಟದ ವ್ಯವಸ್ಥೆ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು ಅಧ್ಯಯನವೊಂದು ಎಚ್ಚರಿಸಿದೆ. ಸೆಲ್ಪಿ ಎಂಬುದು ಫೋಟೋದ ವಿಷಯವಾಗಿದೆ. ಈ ಸೆಲ್ಫಿ ತೆಗೆದುಕೊಳ್ಳುವಾಗ ಜನರು ಕ್ಯಾಮರಾದಿಂದ ದೂರ ನಿಂತು ಸೆಲ್ಫಿ ಪಡೆಯುತ್ತಾರೆ. ಈ ವೇಳೆ ಅವರ ದೇಹ ಸಣ್ಣಗೆ ಇರುವಂತೆ ವ್ಯಕ್ತವಾಗುತ್ತದೆ. ಸೆಲ್ಫಿ ಪಡೆಯುವ ಈ ಉದ್ದೇಶವೂ ಅನೇಕ ಬಾರಿ ಆಹಾರ ಕ್ರಮಗಳು ಅಥವಾ ಊಟದ ಅಸ್ವಸ್ಥತೆಗೆ ಕಾರಣವಾಗಬಹುದು ಎಂದು ಅಧ್ಯಯನವೊಂದು ತಿಳಿಸಿದೆ.
ಜನರು ತಮ್ಮ ಸೆಲ್ಫಿಗಳು ಚೆನ್ನಾಗಿ ಬರಲಿ, ತಮ್ಮ ದೇಹಕ್ಕೆ ಒಳ್ಳೆಯ ಕಾಮೆಂಟ್ಗಳು ಸಿಗಲಿ ಎಂಬ ಕಾರಣಕ್ಕಾಗಿ ಆಹಾರ ತೆಗೆದುಕೊಳ್ಳುವ ಅಂದರೆ ಆಹಾರದ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಆಹಾರ ಅಸ್ವಸ್ಥತೆಗೆ ಕಾರಣವಾಗಬಹುದು. ಈ ಲಕ್ಷಣಗಳು ಅಧ್ಯಯನದ ವೇಳೆ ಹೆಚ್ಚಾಗಿ ಕಂಡು ಬಂದಿದ್ದು, ಇದಕ್ಕೆ ಪುರಾವೆಗಳು ಸಹ ಸಿಕ್ಕಿವೆ. ಇತರ ಫೋಟೋಗಳಿಗಿಂತ ಸೆಲ್ಫಿಗಳನ್ನು ನೋಡುವುದು ಹೆಚ್ಚು ಹಾನಿಕಾರಕವಾಗಿದೆ. ಇದರಿಂದ ಜನರಲ್ಲಿ ಆಹಾರ ಕ್ರಮದದಲ್ಲಿ ಬದಲಾವಣೆಗಳು ಕಂಡು ಬರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ನಿತ್ಯ ನಾವೆಲ್ಲರು ಹಲವರು ಸೆಲ್ಫಿಯನ್ನು ನೋಡುತ್ತೇವೆ. ಸಾಮಾಜಿಕ ಮಾಧ್ಯಮಗಳ ಫ್ಲಾಟ್ಫಾರ್ಮ್ಗಳನ್ನು ಇದರ ಬೆಳವಣಿಗೆ ಕೂಡ ಕಾಣುತ್ತೇವೆ. ಫಿಲ್ಟರ್ಗಳು ದೇಹದ ಆಕೃತಿ ಕಾಣಿಸುವ ಬಗೆಯನ್ನು ಬದಲಾಯಿಸಬಹುದು ಎಂಬುದು ನಮಗೆ ತಿಳಿದಿದೆ ಎಂದು ಅಧ್ಯಯನದ ಲೇಖಕ ಯುಕೆಯ ಯುನಿವರ್ಸಿಟಿ ಆಫ್ ಯೊರ್ಕ್ನ ರುತ್ ನೈಟ್ ತಿಳಿಸಿದ್ದಾರೆ.
ಯಾವ ಕೋನದಲ್ಲಿ ನಮ್ಮ ಫೋಟೋವನ್ನು ತೆಗೆದುಕೊಂಡಿದ್ದಾರೆ ಎಂಬುದು ನಮ್ಮ ದೇಹದ ಆಕೃತಿ ಮೇಲಿನ ತೀರ್ಮಾನವನ್ನು ಬದಲಾಯಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತರ್ಜಾಲದಲ್ಲಿನ ಫೋಟೋಗಳನ್ನು ಅನ್ಫಿಲ್ಟರ್ ಸೆಲ್ಫಿ ಆಗಿದ್ದು, ನಾವು ನೋಡುತ್ತಿರುವುದು ನೈಜ ಜೀವನದ ಪ್ರತಿನಿಧಿಗಳನ್ನಲ್ಲ ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.
ಸೆಲ್ಫಿಗಳನ್ನು ನೋಡುವುದು ವೀಕ್ಷಕರ ತೀರ್ಮಾನವನ್ನು ಫೋಟೋಗಳ ವಿಷಯಗಳ ಬದಲಾಯಿಸುತ್ತದೆ. ಆದರೆ, ಸಂಶೋಧಕರು ಫೋಟೋಗಿಂತ ಹೆಚ್ಚಾಗಿ ದೇಹದ ಗ್ರಹಿಕೆ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ. ಇದಕ್ಕಾಗಿ 10 ಸ್ವಯಂ ಸೇವಕ ಮಹಿಳಾ ಮಾಡೆಲ್ಗಳನ್ನು ವ್ಯಾಯಾಮದ ಬಟ್ಟೆಯಲ್ಲಿ ವಿವಿಧ ಕೋನದಲ್ಲಿ ಫೋಟೋ ತೆಗೆಸಲಾಗಿದೆ. ಜೊತೆಗೆ ಭಾಗಿದಾರರು ತಿನ್ನುವಿಕೆ ಅಸ್ವಸ್ಥತೆಯ ನಡುವಳಿಕೆ ಚಿಂತನೆಗಳ ಸಂಬಂಧ ಪ್ರಶ್ನಾವಳಿಗಳನ್ನು ಹಾಕಿ, ಅವರ ಆಹಾರ ಕ್ರಮ, ದೈಹಿಕ ಸಂಬಂಧಿಸಿದಂತೆ ಮಾಪನ ಮಾಡಿ ನೋಡಿದ್ದಾರೆ.
ಫಲಿತಾಂಶವನ್ನು ವಿಶ್ಲೇಷಣೆ ಮಾಡಿದಾಗ, ಸಂಶೋಧಕರು ಹೊರಗಿನ ಗ್ರಹಿಕೆ ಫೋಟೋಗಳಿಗಿಂತ ಸೆಲ್ಫಿಗಳನ್ನು ಹೆಚ್ಚಾಗಿ ಸಣ್ಣಗೆ ಬಂದಿರುವುದನ್ನು ಪತ್ತೆ ಮಾಡಿದ್ದಾರೆ. ಆದಾಗ್ಯೂ ಇದರಲ್ಲಿ ಆಕರ್ಷಿಸುವ ದರದಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸ ಕಂಡು ಬಂದಿಲ್ಲ ಎಂದಿದ್ದಾರೆ.
ಈ ಅಧ್ಯಯನದ ಫಲಿತಾಂಶವೂ ಸಾಮಾಜಿಕ ಮಾಧ್ಯಮಗಳ ಬಳಕೆ ಮತ್ತು ದೇಹದ ತೃಪ್ತಿ ಸಾಮಾರ್ಥ್ಯವನ್ನು ಹೈಲೈಟ್ ಮಾಡಿದೆ. ಆದಾಗ್ಯೂ ಸಂಶೋಧಕರು ಅಧ್ಯಯನ ಅನೇಕ ಮಿತಿಗಳನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಮಿತಿ: ಈ ನಟಿಯ ಸಾವಿಗೆ ಕಾರಣವಾಯಿತಾ ಕ್ರಶ್ ಡಯಟ್?; ಮಾರಾಣಾಂತಿಕ ಆಹಾರ ಪದ್ದತಿ ಇದು!