ETV Bharat / sukhibhava

ಹಸುಳೆಗಳು, ಟಿವಿ, ಫೋನ್​ಗಳ ಸ್ಕ್ರೀನ್​ ಅತಿ ಹೆಚ್ಚು ವೀಕ್ಷಣೆ ಮಾಡುವುದು ಒಳ್ಳೆಯದಲ್ಲ.. ಏಕೆಂದರೆ? - ಮಕ್ಕಳ ಆರೈಕೆ ಮಾಹಿತಿ

ಇಂದು 9 ತಿಂಗಳ ಮಕ್ಕಳು ಇಂದು ಸ್ಕ್ರೀನ್​ ಟೈಂಗೆ ಒಳಗಾಗುತ್ತಿದ್ದು, ಇದು ಅವರ ಸಂವೇದನಾ ಪ್ರಕ್ರಿಯೆ ಮೇಲೆ ಹೆಚ್ಚಿನ ಪರಿಣಾಮ ಬೀರುವಂತಾಗಿದೆ.

screen exposure may be harmful for babies heath

author img

By ETV Bharat Karnataka Team

Published : Jan 9, 2024, 4:12 PM IST

ನ್ಯೂಯಾರ್ಕ್​( ಅಮೆರಿಕ): ಹಸುಗೂಸು ಮತ್ತು ಐದು ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ಟಿವಿ ಅಥವಾ ವಿಡಿಯೋ ಗಳನ್ನು ಹೆಚ್ಚು ಹೆಚ್ಚು ನೋಡುವುದರಿಂದ ಅವರಲ್ಲಿ ನಿರಾಸಕ್ತಿ, ತಲ್ಲೀನತೆ ಇಲ್ಲದಿರುವಂತಹ ವಿಲಕ್ಷಣಾ ಸಂವೇದಾನ ನಡಾವಳಿಯನ್ನು ಕಾಣಬಹುದು. ಅಲ್ಲದೇ ತಮ್ಮ ಸುತ್ತಮುತ್ತಲಿನ ಪ್ರದೇಶ ಪ್ರಖರ ಬೆಳಕು, ಶಬ್ಧಗಳಿಂದ ಕೂಡಿರಬೇಕು. ಪ್ರಚೋದನೆಯಿಂದ ಕೂಡಿರಬೇಕು ಎಂದು ಬಯಸುತ್ತಾರೆ.

ಡ್ರೆಕ್ಸೆಲ್​ ಯುನಿವರ್ಸಿಟಿ ಸಂಶೋಧಕರ ಪ್ರಕಾರ, ಮಕ್ಕಳು ಅತಿ ಹೆಚ್ಚು ಟಿವಿ ವೀಕ್ಷಣೆಗೆ ಒಳಗಾಗುವುದರಿಂದ ತಮ್ಮ ಎರಡನೇ ವರ್ಷದ ಹುಟ್ಟು ಹಬ್ಬದ ವೇಳೆಗೆ ಅವರಲ್ಲಿ ವಿಲಕ್ಷಣಾ ಸಂವೇದನಾ ನಡುವಳಿಕೆ ಅಭಿವೃದ್ಧಿ ಆಗುತ್ತದೆ. ಇವರಲ್ಲಿ ಕಡಿಮೆ ಸೂಕ್ಷ್ಮತೆ ಅಥವಾ ನಿಧಾನವಾಗಿ ಪ್ರತಿಕ್ರಿಯೆ ಕಾಣಬಹುದಾಗಿದೆ. ಇದರಿಂದ ಮಾತಿನ ಆರಂಭ ಕೂಡ ನಿಧಾನವಾಗಿ ಆಗಬಹುದಾಗಿದೆ.

ಸಂವೇದನಾ ಪ್ರಕ್ರಿಯೆಯ ಕೌಶಲ್ಯದಿಂದಾಗಿ ಯಾವುದೇ ಶಬ್ಧ ಕೇಳಿದಾಗ, ನೋಡಿದಾಗ ಅಥವಾ ಸ್ಪರ್ಶಿಸಿದಾಗ, ರುಚಿ ಮಾಡಿದಾಗ ಸಂವೇದನಾ ವ್ಯವಸ್ಥೆ ಮೂಲಕ ಪ್ರಚೋದನೆ ಪಡೆದಾಗ ಈ ಕುರಿತು ದೇಹ ಸಮರ್ಥವಾಗಿ ಪ್ರತಿಕ್ರಿಯೆ ತೋರುವುದಾಗಿದೆ. ಅತಿ ಹೆಚ್ಚು ಸ್ಕ್ರೀನ್​ ಟೈಂಗೆ ಒಳಗಾಗುವ ಮಗವಿನಲ್ಲಿ ಆರೋಗ್ಯ ಮತ್ತು ಅಭಿವೃದ್ಧಿ ವಿಚಾರದಲ್ಲಿ ಅನೇಕ ಅಂಶಗಳ ಕುರಿತು ಕಾಳಜಿದಾಯಕವಾಗಿದೆ. ಇವರಲ್ಲಿ ಭಾಷಾ ವಿಳಂಬ, ಆಟಿಸಂ ಸ್ಪೆಕ್ಟ್ರಂ ಸಮಸ್ಯೆ, ನಡವಳಿಕೆ ಸಮಸ್ಯೆ, ನಿದ್ರಾ ಹೀನತೆ, ಏಕಾಗ್ರತೆ ಸಮಸ್ಯೆಗಳು ಕಂಡು ಬರುತ್ತವೆ.

ಗಮನ ನೀಡುವ ಕೊರತೆಯು ಎಡಿಎಚ್​ಡಿ ಮತ್ತು ಆಟಿಸಂನಂತಹ ಪರಿಣಾಮ ಹೊಂದಿರಬಹುದು. ಈ ವಿಲಕ್ಷಣ ಸಂವೇದನಾ ಪ್ರಕ್ರಿಯೆಯು ಹೆಚ್ಚು ಪ್ರಚಲಿತವಾಗಿದೆ ಎಂದು ಅಧ್ಯಯನದ ಪ್ರಮುಖ ಲೇಖಕ ಕರೆನ್​ ಹೆಫ್ಲರ್​ ತಿಳಿಸಿದ್ದಾರೆ. ಪುನರಾವರ್ತಿತ ನಡುವಳಿಕೆಗಳು ಅಂದರೆ ಆಟಿಸಂ ಸ್ಪೆಕ್ಟ್ರಂ ರೋಘ ಎಂಬುದು ವಿಲಕ್ಷಣ ಸಂವೇದನಾ ಪ್ರಕ್ರಿಯೆಯೊಂದಿಗೆ ಸಂಬಂಧ ಹೊಂದಿದೆ. ಭವಿಷ್ಯದ ಕಾರ್ಯದಲ್ಲಿ ಆಟಿಸಂ ಸ್ಪೆಕ್ಟ್ರಂ ರೋಗ ಹೊಂದಿರುವವರಲ್ಲಿ ಆರಂಭಿಕ ಜೀವನ ಸ್ಕ್ರೀನ್​ ಸಮಯವೂ ಮಕ್ಕಳಲ್ಲಿ ಸಂವೇದನಾ ಮಿದುಳಿನೊಂದಿಗೆ ಸಂಪರ್ಕಗೊಂಡಿದೆಯಾ ಎಂಬುದನ್ನು ನೋಡಲು ಇದು ಕಾರಣವಾಗಿದೆ.

ಈ ಅಧ್ಯಯನವನ್ನು ಜಾಮಾ ಪಿಡಿಯಾಟ್ರಿಕ್ಸ್​ನಲ್ಲಿ ಪ್ರಕಟಿಸಲಾಗಿದೆ. 2022ರಿಂದ 2014ರ ನಡುವೆ 12, 18, 24 ತಿಂಗಳ ಮಕ್ಕಳು ಟಿವಿಗೆ ಅಥವಾ ಡಿವಿಡಿಗೆ ಒಳಗಾಗುವ ದತ್ತಾಂಶವನ್ನು ವಿಶ್ಲೇಷಣೆ ಮಾಡಲಾಗಿದೆ. ಅಧ್ಯಯನದ ಫಲಿತಾಂಶದಲ್ಲಿ 12 ತಿಂಗಳ ಮಗುವು ಅತಿ ಹೆಚ್ಚು ಟಿವಿ ವೀಕ್ಷಣೆಗೆ ಒಳಗಾಗುವುದರಿಂದ ಟಿವಿ ನೋಡದ ಮಗುವಿಗಿಂತ ಶೇ 105ರಷ್ಟು ಸಂವೇದನಾ ನಡುವಳಿಕೆಯನ್ನು ಹೊಂದಿದೆ. 18 ತಿಂಗಳ ಮಗುವಿನಲ್ಲಿ ಇದು ಹೆಚ್ಚಿನ ಸಂವೇದನಾ ನಡುವಳಿಕೆ ಕಂಡಿದ್ದು, ಇದು ಶೇ 23ರಷ್ಟು ಹೆಚ್ಚಿದೆ. ಇನ್ನು 24 ತಿಂಗಳ ಮಗುವಲ್ಲೂ ಇದರ ಪ್ರಮಾಣ ಹೆಚ್ಚಿದೆ.

ಈ ಅಧಿಕ ಸ್ಕ್ರೀನ್​ ಸಮಯ ಮತ್ತು ಅಭಿವೃದ್ಧಿ ಬೆಳವಣಿಗೆಯ ಪಟ್ಟಿ ಮತ್ತು ನಡುವಳಿಕೆ ಸಮಸ್ಯೆಯೊಂದಿಗೆ ಸಂಬಂಧವನ್ನು ಗಮನಿಸಲಾಗಿದೆ. ಮಕ್ಕಳು ಟಿವಿ ವೀಕ್ಷಣೆ ಅವಧಿಯ ಕಡಿಮೆ ಇದ್ದಷ್ಟು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಅಧ್ಯಯನವು ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಯಲ್ಲಿ ಎಡಿಎಚ್​ಡಿ ಅಪಾಯದ ಅಂಶಗಳು; ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.