ETV Bharat / sukhibhava

ಮನೆಯಲ್ಲೇ ಕಾಂತಿಯುತ ಮುಖ ಪಡೆಯುವುದು ಹೇಗೆ..? ಇಲ್ಲಿದೆ ಟಿಪ್ಸ್​ - Benefits of a face massage

ಆರೋಗ್ಯಕರ ಹೊಳೆಯುವ ಚರ್ಮಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ. ಆರೋಗ್ಯಕರ ಚರ್ಮದ ಮೇಲೆ ಮೇಕಪ್ ಉತ್ತಮವಾಗಿ ಕಾಣುತ್ತದೆ. ಮುಖದ ಕಾಂತಿ ಉಳಿಸಿಕೊಳ್ಳಲು ಮಸಾಜ್ ಅಷ್ಟೇ ಮುಖ್ಯ ಹಾಗಾಗಿ ಮನೆಯಲ್ಲಿಯೆ ನಿಮ್ಮ ತ್ವಚೆಯ ಕಾಳಜಿ ವಹಿಸಿ ಮಸಾಜ್ ಮಾಡಿಕೊಳ್ಳಬಹುದು..

rejuvenate-your-skin-with-a-face-massage
ಮನೆಯಲ್ಲೇ ಕಾಂತಿಯುತ ಮುಖ ಪಡೆಯುವುದು ಹೇಗೆ
author img

By

Published : Dec 1, 2021, 4:46 PM IST

ಮುಖಕ್ಕೆ ಮಸಾಜ್ ಮಾಡುವುದರಿಂದ ರಕ್ತ ಪರಿಚಲನೆ ಹೆಚ್ಚುತ್ತದೆ ಮತ್ತು ಚರ್ಮವನ್ನು ಸಡಿಲಗೊಳಿಸುತ್ತದೆ. ಒತ್ತಡ ಮತ್ತು ಆಯಾಸವನ್ನು ತೆಗೆದು ಹಾಕಲು ಇದೂ ಸಹ ಒಂದು ಮಾರ್ಗವಾಗಿದೆ. ಮುಖದ ಮಸಾಜ್‌ಗಳು ತ್ವಚೆಯ ಹೊಳಪು ಮತ್ತು ಮುಖದ ಮೇಲಿನ ರೇಖೆಗಳನ್ನ ಮೃಧುಗೊಳಿಸಲಿದೆ. ವಾರಕ್ಕೆ 2ರಿಂದ 3 ಬಾರಿ ಈ ರೀತಿಯ ಮಸಾಜ್ ಮಾಡುವುದರಿಂದ ಮುಖದ ಕಾಂತಿ ಕಾಪಾಡಿಕೊಳ್ಳಬಹುದಾಗಿದೆ.

ಪ್ರಮುಖ ಕಾಸ್ಮೆಟಿಕ್ಸ್ ಬ್ರಾಂಡ್ ನಿರ್ದೇಶಕ ರಚಿತ್ ಗುಪ್ತಾ ಅವರು ಹಂಚಿಕೊಂಡಂತೆ, ಮುಖದ ಚರ್ಮವು ದೇಹದ ಉಳಿದ ಭಾಗದ ಚರ್ಮಕ್ಕಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ ಮತ್ತು ಹೆಚ್ಚಿನ ಗಮನ ಮತ್ತು ಕಾಳಜಿಯ ಅಗತ್ಯವಿರುತ್ತದೆ.

ಒತ್ತಡದ ಜೀವನಶೈಲಿಯು ಮುಖದ ಹೊಳಪು ಮತ್ತು ನೈಸರ್ಗಿಕ ಹೊಳಪನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಸಾಮಾನ್ಯ ಸಮಸ್ಯೆಗಳಾದ ಕಪ್ಪು ಕಲೆಗಳು, ಮೊಡವೆಗಳು, ಡಾಟ್​​​ ಸ್ಪಾಟ್ಸ್​, ವಯಸ್ಸಾದಂತೆ ಕಾಣುವುದು ಸೇರಿ ಹಲವು ಸಮಸ್ಯೆಗಳಿಗೆ ಮುಖದ ಮಸಾಜ್ ಪರಿಹಾರ ನೀಡಲಿದೆ.

ವಿವಿಧ ಚರ್ಮದ ಪ್ರಕಾರಗಳಿಗೆ ಸರಿ ಹೊಂದುವಂತೆ ಮತ್ತು ಚರ್ಮಕ್ಕೆ ಹಾನಿಯಾಗದಂತೆ ಜೆಲ್​​​​ಗಳನ್ನು ವಿಶೇಷವಾಗಿ ಶಿಫಾರಸು ಮಾಡಲಾಗುತ್ತದೆ. ಈ ದ್ರವ್ಯಗಳು ಮುಖವನ್ನು ತೇವವಾಗಿಟ್ಟು ಹೊಳಪನ್ನು ಮರಳಿ ತರುತ್ತವೆ. ಕೇವಲ 5 ನಿಮಿಷಗಳ ಆರೈಕೆಯು ಆರೋಗ್ಯಕರ ತ್ವಚೆಯ ದೃಷ್ಟಿಯಿಂದ ಮಾತ್ರವಲ್ಲದೆ ಉತ್ತಮ ಒತ್ತಡ ಬಸ್ಟರ್ ಆಗಿ ಅದ್ಭುತ ಫಲಿತಾಂಶಗಳನ್ನು ನೀಡುತ್ತದೆ.

5 ನಿಮಿಷ ಮಸಾಜ್​ನಿಂದಾಗುವ ಪ್ರಯೋಜನಗಳು

  • ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಮುಖಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ
  • ಮುಖದ ಮೇಲಿನ ಕೆಟ್ಟ ಕಲೆಗಳು ಹೋಗಲಾಡಿಸುತ್ತದೆ
  • ನಿಯಮಿತ ಮಸಾಜ್‌ಗಳು ಸೂಕ್ಷ್ಮ ರೇಖೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸುಕ್ಕುಗಳನ್ನು ತಡೆಯಬಹುದು
  • ಮುಖ ಚರ್ಮಕ್ಕೆ ಹೊಳಪು ಬರುವುದರಿಂದ ಹೆಚ್ಚು ಯೌವನಯುಕ್ತರಾಗಿ ಕಾಣಬಹುದು
  • ಕಾಂತಿಯುತ ಚರ್ಮದ ಟೋನ್ ಮತ್ತು ಮೊಡವೆಯುಕ್ತ ಮುಖಲಕ್ಷಣ ಕಡಿಮೆಯಾಗುತ್ತದೆ
  • ಸ್ನಾಯುಗಳಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಾನಸಿಕವಾಗಿ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.

ಮುಖದ ಮಸಾಜ್ ಮಾಡುವ ಸರಿಯಾದ ಮಾರ್ಗ ಯಾವುದು..?

  • ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯಿರಿ
  • ನಿಮ್ಮ ಮುಖವನ್ನು ನೀರಿನಿಂದ ಅಥವಾ ಮೃದುವಾದ ಫೇಸ್ ವಾಶ್‌ನಿಂದ ತೊಳೆಯಿರಿ ಮತ್ತು ಒರೆಸಿ
  • ಮುಖದ ಮೇಲೆ ನೈಸರ್ಗಿಕ ಫೇಸ್ ಮಸಾಜ್ ಜೆಲ್ ಅನ್ನು ನಿಯಮಿತವಾಗಿ ಹಾಕಿಕೊಳ್ಳಿ
  • ಮುಖದ ಮೇಲಿನ ಸಣ್ಣ ರಂಧ್ರಗಳು ತೆರೆಯಲು ಸಣ್ಣದಾಗಿ ಸ್ಟೀಮ್ ಮಾಡಿ
  • ಮೃದುವಾದ ಒತ್ತಡದಿಂದ ಮಾತ್ರ ಚರ್ಮವನ್ನು ಮಸಾಜ್ ಮಾಡಲು ನಿಮ್ಮ ಬೆರಳುಗಳನ್ನು ಬಳಸಿ.
  • ವೃತ್ತಾಕಾರದ ಚಲನೆಯಲ್ಲಿ ಮಸಾಜ್ ಮಾಡಿ
  • ಮಸಾಜ್​​​​ಗಾಗಿ ರೋಲರ್ ಅನ್ನು ಸಹ ಬಳಸಬಹುದು

ನೆನೆಪಿನಲ್ಲಿಡಬೇಕಾದ ಅಂಶಗಳು

  • ಮಸಾಜ್ ಮಾಡುವಾಗ ಹೆಚ್ಚಿನ ಒತ್ತಡವನ್ನು ಬಳಸಬೇಡಿ.
  • ಚರ್ಮವು ತುಂಬಾ ಸೂಕ್ಷ್ಮವಾಗಿರುವುದರಿಂದ ಕಣ್ಣುಗಳ ಸುತ್ತಲೂ ಜಾಗರೂಕರಾಗಿರಿ ಮತ್ತು ಮೃಧುವಾಗಿ ಮಸಾಜ್ ಮಾಡಿ
  • ನಿಮ್ಮ ಮುಖವನ್ನು ಮಸಾಜ್ ಮಾಡಲು ನಿಧಾನ ಮತ್ತು ಬಾಹ್ಯ ಚಲನೆಯನ್ನು ಬಳಸಿ.
  • ಹಣೆಯಿಂದ ಕುತ್ತಿಗೆಗೆ ಎಲ್ಲಾ ಪ್ರದೇಶಗಳನ್ನು ನಿಧಾನವಾಗಿ ಮಸಾಜ್ ಮಾಡಿ
  • ಮಸಾಜ್‌ಗಾಗಿ ಅಲೋವೆರಾ ಮತ್ತು/ಅಥವಾ ಗಿಡಮೂಲಿಕೆಗಳು ಅಥವಾ ಪುದೀನ ಅಥವಾ ಗುಲಾಬಿ ಅಂಶ ಹೊಂದಿರುವ ನೈಸರ್ಗಿಕ ಜೆಲ್‌ಗಳನ್ನು ಆಯ್ಕೆಮಾಡಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.