ನವದೆಹಲಿ: ರಾಷ್ಟ್ರ ರಾಜಧಾನಿ ಸೇರಿದಂತೆ ದೇಶದ ಬಹುತೇಕ ಪ್ರದೇಶದಲ್ಲಿ ತಾಪಮಾನ ಕುಸಿದಿದ್ದು, ಹೃದಯರೋಗ ತಜ್ಞರು ಜನರಿಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ. ಅದರಲ್ಲೂ ಈಗಾಗಲೇ ಹೃದಯರೋಗ ಸಮಸ್ಯೆ ಹೊಂದಿರುವವರು ಚಳಿಗಾಲದಲ್ಲಿ ಸಾಕಷ್ಟ ಮುನ್ನೆಚ್ಚರಿಕೆ ವಹಿಸಬೇಕು. ಕಾರಣ ಈ ಅವಧಿಯಲ್ಲಿ ಹೃದಯಾಘಾತಗಳ ಸಂಭವ ಹೆಚ್ಚಿದೆ ಎಂದಿದ್ದಾರೆ.
ಚಳಿಗಾಲದ ತೀವ್ರವಾದಂತೆ ಆಸ್ಪತ್ರೆಗೆ ಆಗಮಿಸುತ್ತಿರುವ ಹೃದಯ ಸಮಸ್ಯೆ ಹೊಂದಿರುವ ರೋಗಿಗಳು ಸಂಖ್ಯೆ ಹೆಚ್ಚಿದೆ. ವಾರದಲ್ಲಿ 12 ರಿಂದ 14 ಪ್ರಕರಣಗಳು ಏರಿಕೆ ಕಂಡಿದೆ. ಚಳಿ ತಾಪಮಾನವೂ ಹೃದಯ ಸಮಸ್ಯೆಯನ್ನು ಹೆಚ್ಚಿಸಿ, ಅಪಾಯದ ಸಮಸ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಅದರಲ್ಲೂ ಈಗಾಗಲೇ ಹೃದಯ ಸಮಸ್ಯೆ ಹೊಂದಿರುವ ರೋಗಿಗಳು ವಿಶೇಷ ಕಾಳಜಿವಹಿಸಬೇಕು ಎಂದು ಪ್ರಿಮಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ಹೃದ್ರೋಗತಜ್ಞ ಡಾ ವಿಕಾಸ್ ಚೋಪ್ರಾ ತಿಳಿಸಿದ್ದಾರೆ.
ಈ ಕುರಿತು ವಿವರಣೆ ನೀಡಿರುವ ಅವರು, ತಾಪಮಾನದಲ್ಲಿ ಇಳಿಕೆ ಆಗುತ್ತಿದ್ದಂತೆ ಸೈಕಾಲಾಜಿಕಲ್ ಬದಲಾವಣೆಗೆ ಉತ್ತೇಜಿಸುತ್ತದೆ. ಇದು ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.
ಈಗಾಗಲೇ ಹೃದಯ ರೋಗ ಸಮಸ್ಯೆ ಹೊಂದಿರುವವರು ಸೇರಿದಂತೆ ಪ್ರತಿಯೊಬ್ಬರು ಚಳಿಗಾಲದಲ್ಲಿ ರಕ್ಷಣಾತ್ಮಕ ಮಾದರಿಗಳನ್ನು ಅನುಸರಿಸುವಂತೆ ನಾನು ಒತ್ತಾಯಿಸುತ್ತೇನೆ. ವೈದ್ಯರು ಶಿಫಾರಸು ಮಾಡಿದ ಔಷಧಗಳ ಪಾಲನೆ, ನಿಯಮಿತವಾಗಿ ವೈದ್ಯಕೀಯ ಸೇವೆ ಪಡೆಯುವುದು. ದೈಹಿಕ ಚಟುವಟಿಕೆಗಳ ಅಭ್ಯಾಸ ಮಾಡುವ ಮೂಲಕ ಜೀವನಶೈಲಿ ಹೊಂದಾಣಿಕೆ ಮಾಡುವುದು, ಒತ್ತಡ ನಿರ್ವಹಣೆ, ಹೃದಯ ಆರೋಗ್ಯ ಡಯಟ್ ಪಾಲನೆ ಮಾಡುವುದು ಅವಶ್ಯ ಎಂದಿದ್ದಾರೆ.
ಅಧ್ಯಯನಗಳ ವರದಿ: ಅನೇಕ ದೇಶದಲ್ಲಿನ ಅಧ್ಯಯನಗಳು ಚಳಿಗಾಲದಲ್ಲಿ ಹೃದಯ ರೋಗಿಗಳ ಸಂಖ್ಯೆ ಏರಿಕೆ ಬಗ್ಗೆ ತಿಳಿಸಿದೆ. 2021ರಲ್ಲಿ ಜರ್ನಲ್ ಮೆಡಿಸಿನ್ನಲ್ಲಿ ಬಂದ ಅಧ್ಯಯನ ಅನುಸಾರ ಡಿಸೆಂಬರ್ ಮತ್ತು ಜನವರಿಯಲ್ಲಿ ಹೃದಯಘಾತ ಸಂಖ್ಯೆ ಗರಿಷ್ಠವಾಗುತ್ತದೆ ಎಂದು ತಿಳಿಸಿದೆ. ಬಿಎಂಜೆ ಜರ್ನಲ್ ಮತ್ತೊಂದು ಅಧ್ಯಯನದಲ್ಲಿ ಫಿನ್ಲ್ಯಾಂಡ್ನಲ್ಲಿ ದೈನಂದಿನ ತಾಪಮಾನ ಇಳಿಕೆಯುವ ಶೇ 19ರಷ್ಟು ಹೃದಯ ಸಂಬಂಧಿ ಸಾವಿಗೆ ಕಾರಣವಾಗಿದೆ ಎಂದು ತಿಳಿಸಿದೆ.
ಚಳಿ ತಾಪಮಾನ ರಕ್ತವನ್ನು ಗಟ್ಟಿ ಮಾಡುತ್ತದೆ. ಇದು ಕ್ಲಾಟ್ ರೀತಿ ಮಾಡುತ್ತದೆ ಎಂದ ಸಿಕೆ ಬಿರ್ಲಾ ಆಸ್ಪತ್ರೆಯ ಹೃದಯತಜ್ಞ ಡಾ ಸಂಜೀವ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.
ಜೊತೆಗೆ ನಿದ್ರೆಯ ಅಡೆತಡೆ ಮತ್ತು ಹಾರ್ಮೋನ್ ಅಸಮತೋಲನ ಕೂಡ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ಕ್ರೀಡೆ ಅಥವಾ ಇನ್ನಿತರ ಸಾಮಾನ್ಯ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಹೃದಯದ ಮೇಲೆ ಒತ್ತಡ ಹೆಚ್ಚಿಸಬಹುದು ಎಂದಿದ್ದಾರೆ.
ವೈದ್ಯರ ಸಲಹೆ: ಈ ಅವಧಿಯಲ್ಲಿ ದಿನದ ಅವಧಿ ಕಡಿಮೆ ಇದ್ದು, ಸೂರ್ಯನ ಬೆಳಕಿನ ಕೊರತೆ ಎದುರಾಗುತ್ತದೆ ಅಥವಾ ಯುವಿ ಬೆಳಕು ಈ ಅವಧಿಯಲ್ಲಿ ಕಡಿಮೆಯಾಗುತ್ತದೆ. ವಿಟಮಿನ್ ಡಿ3 ಕೊರತೆಯಿಂದ ಅಸ್ಥಿಸಂಧಿವಾತ ಅಥವಾ ಊರಿಯೂತಗಳು ಕಾಡಬಹುದು. ಇದು ಕೂಡ ಸಾವಿನ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಈ ಅವಧಿಯಲ್ಲಿ ಒಳಾಂಗಣ ಚಟುವಟಿಕೆ ಅಥವಾ ಕಡಿಮೆ ತೀವ್ರತೆಯ ಹೊರಾಂಗಣ ಚಟುವಟಿಕೆಯಲ್ಲಿ ಭಾಗಿಯಾಗುವುದು, ಬೆಚ್ಚಗಿನ ಉಡುಪು ಧರಿಸುವುದು, ಬೇಳೆ ಕಾಳು ಮತ್ತು ತರಕಾರಿ ಹಣ್ಣುಗಳಿಂದ ಕೂಡ ಸಮತೋಲಿತ ಆಹಾರಗಳ ಸೇವನೆಗೆ ಒತ್ತು ನೀಡಬೇಕು.
ಹೃದಯರಕ್ತನಾಳದ ಅಪಾಯವನ್ನು ತಪ್ಪಿಸಲು ಜನರು ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬೇಕು. ಜೊತೆಗೆ ಜೀವನಶೈಲಿಗೆ ಬದಲಾವಣೆ ಅಂದರೆ ಈ ಅವಧಿಯಲ್ಲಿ ಆಗರ್ನಿಕ್ ಸಲ್ಫೆಟ್ ಸಮೃದ್ಧ ಮತ್ತು ವಿಟಮಿನ್ ಡಿ 3 ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: 2022ರಲ್ಲಿ ಹೃದಯಾಘಾತದಿಂದ ಸಾವಿನ ಪ್ರಕರಣಗಳು ಶೇ 12.5ರಷ್ಟು ಹೆಚ್ಚಳ: ಎನ್‌ಸಿಆರ್‌ಬಿ ವರದಿ