ETV Bharat / sukhibhava

ಮೂರ್ಛೆ ರೋಗ ಜಾಗೃತಿ ದಿನ: ಅಪಸ್ಮಾರ ಅಪಾಯಕಾರಿಯಲ್ಲ, ಮುನ್ನೆಚ್ಚರಿಕೆ ಇರಲಿ - ಅಪಸ್ಮಾರ

ಪ್ರತಿ ವರ್ಷ ಮಾ.26ರಂದು ವಿಶ್ವದಾದ್ಯಂತ ಮೂರ್ಛೆರೋಗ ಜಾಗೃತಿ ದಿನ ಅಥವಾ ನೇರಳೆ ದಿನವನ್ನು ಆಚರಿಸಲಾಗುತ್ತದೆ. ಪ್ರಪಂಚದಲ್ಲಿ 50 ದಶಲಕ್ಷಕ್ಕೂ ಹೆಚ್ಚು ಮಂದಿ ಅಪಸ್ಮಾರದಿಂದ ಬಳಲುತ್ತಿದ್ದಾರೆ. ಈ ಮೆದುಳು ದೋಷದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಫಿಟ್ಸ್ ಬಗ್ಗೆ ಇರುವ ಭಯ, ಆತಂಕ ಮತ್ತು ಅಪನಂಬಿಕೆಗಳನ್ನು ಹೋಗಲಾಡಿಸುವುದು ಈ ದಿನದ ಉದ್ದೇಶ.

Epilepsy
ಸಾಂದರ್ಭಿಕ ಚಿತ್ರ
author img

By

Published : Mar 26, 2022, 3:27 PM IST

ಪ್ರತಿ ವರ್ಷ ವಿಶ್ವದಾದ್ಯಂತ ಮಾ.26ರಂದು 'ಅಂತಾರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ' ಅಥವಾ 'ನೇರಳೆ ದಿನ' ಆಚರಿಸುತ್ತಾರೆ ಮತ್ತು ಅಪಸ್ಮಾರ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತದೆ. ಜಗತ್ತಿನಾದ್ಯಂತ ಸುಮಾರು 50 ದಶಲಕ್ಷಕ್ಕೂ ಅಧಿಕ ಮಂದಿ ಈ ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆ ಯಾವುದೇ ಜಾತಿ, ಧರ್ಮ, ಭಾಷೆಯ ಜನರಿಗೆ ಸೀಮಿತವಾಗದೆ ಎಲ್ಲರನ್ನು ಕಾಡುತ್ತಿದ್ದು, ಒಂದು ಜಾಗತಿಕ ಆರೋಗ್ಯ ಸಮಸ್ಯೆ ಎಂದರೂ ತಪ್ಪಲ್ಲ.

ಫಿಟ್ಸ್, ಎಪಿಲೆಪ್ಸಿ, ಅಪಸ್ಮಾರ ಅಥವಾ ಮೂರ್ಛೆ ಮೆದುಳಿನ ರೋಗದ ಲಕ್ಷಣ. ಇದು ಯಾವ ವಯಸ್ಸಿನವರಿಗಾದರೂ ಬರಬಹುದು. ಅಚ್ಚರಿ ಎಂದರೆ ಶೇ.95ರಷ್ಟು ಪ್ರಕರಣಗಳಲ್ಲಿ ಮೆದುಳಿನಲ್ಲಿ ಮೇಲ್ನೋಟಕ್ಕೆ ಯಾವ ರೋಗ ಅಥವಾ ಬದಲಾವಣೆಯೂ ಕಂಡು ಬರುವುದಿಲ್ಲ. ಎಕ್ಸ್‌ರೇ, ಸ್ಕ್ಯಾನಿಂಗ್‌ಗಳಲ್ಲೂ ಇವು ಗೋಚರಿಸುವುದಿಲ್ಲ. ಉಳಿದ ಶೇ.5ರಷ್ಟು ಪ್ರಕರಣಗಳಲ್ಲಿ ರೋಗಿಯ ಮೆದುಳಿನಲ್ಲಿ ಗುರುತಿಸಬಹುದಾದ ಕಾಯಿಲೆ ಅಥವಾ ಬದಲಾವಣೆ ಇರಬಹುದು. ಉದಾಹರಣೆಗೆ ಸೋಂಕು, ರಕ್ತಸ್ರಾವ, ಹೆಪ್ಪುಗಟ್ಟುವಿಕೆ, ಮೆದುಳಿನ ಹಾನಿ, ಗೆಡ್ಡೆ ಇತ್ಯಾದಿ.

ಹಲವು ವಿಧಗಳ ಫಿಟ್ಸ್:

  • ಸಾಮಾನ್ಯ ಅಥವಾ ತೀವ್ರವಾದ ವಿಧ (ಗ್ರಾಂಡ್‌ಮಾಲ್ ಫಿಟ್ಸ್): ರೋಗಿ ಪ್ರಜ್ಞೆ ತಪ್ಪಿ, ಎಲ್ಲೆಂದರಲ್ಲಿ ಬೀಳುವುದು, ಬಿದ್ದು ಗಾಯವಾಗುವುದು, ಕೈ ಕಾಲುಗಳು ಕ್ರಮವಾಗಿ ಅದುರುವುದು, ಆ ಸಮಯಲ್ಲಿ ಬಾಯಿಯಲ್ಲಿ ಬುರುಗು, ತುಟಿ, ನಾಲಿಗೆ ಕಚ್ಚಿಕೊಂಡು ರಕ್ತ ಬರುವುದು, ಮಲಮೂತ್ರ ಅನಿಯಂತ್ರಿತ ವಿಸರ್ಜನೆ, ನಂತರ ರೋಗಿಯ ನಿಷ್ಕ್ರಿಯತೆ. ಆ ದಿನವೆಲ್ಲಾ ರೋಗಿ ಮಲಗಿರುವುದು-ಇವು ಸಾಮಾನ್ಯ ಲಕ್ಷಣ. ಎರಡು ಮೂರು ನಿಮಿಷಗಳ ಕಾಲ ಮೈಕೈ ನೋವು, ತಲೆ ನೋವು, ವಾಕರಿಕೆ, ನಿಶ್ಯಕ್ತಿ, ಸುಸ್ತಿನಿಂದ ರೋಗಿಗಳು ಬಳಲುತ್ತಾರೆ. ಫಿಟ್ಸ್ ದಿನವೂ ಬರಬಹುದು. ಅವಧಿಗೊಮ್ಮೆ ಬರಬಹುದು ಅಥವಾ ಆರು ತಿಂಗಳಿಗೋ, ವರ್ಷಕ್ಕೋ, ಅಪರೂಪವಾಗಿ ಬರಬಹುದು.
  • ಶರೀರದ ಒಂದು ಭಾಗಕ್ಕೆ ಮಾತ್ರ ಬರುವ ಫಿಟ್ಸ್ (ಫೋಕಲ್ ಫಿಟ್ಸ್): ಸ್ನಾಯುಗಳು ಸಂಕುಚನಗೊಳ್ಳುವ ವಿಧ (ಮೈಯೊಕ್ಲೋನಸ್), ಪ್ರಜ್ಞಾಸ್ಥಿತಿಯಲ್ಲಿ ಅಲ್ಪಕಾಲದ ವ್ಯತ್ಯಾಸದ ಫಿಟ್ಸ್ (ಅಬ್ಸೆನ್ಸ್-ಪೆಟಿಟ್‌ಮಾಲ್) ಹಾಗೂ ಸಂವೇದನೆಯಲ್ಲಿ ವ್ಯತ್ಯಾಸ, ವಿಚಿತ್ರ ಅನುಭವದ ಫಿಟ್ಸ್ (ಟೆಂಪೊರಲ್ ಲೋಬ್ ಅಥವಾ ಸೆನ್ಸರಿ ಎಪಿಲೆಪ್ಸಿ)-ಇತರ ವಿಧಗಳ ಮೂರ್ಛೆರೋಗಗಳಾಗಿವೆ.

ನರರೋಗ ತಜ್ಞೆ ಡಾ.ಸೀತಾ ಜಯಲಕ್ಷ್ಮಿ ಹೇಳುವುದೇನು?: ಅಪಸ್ಮಾರದಿಂದ ಬಳಲುತ್ತಿರುವ ಜನರು ಸಾಮಾನ್ಯ ಜೀವನವನ್ನು ನಡೆಸಬಹುದು. ಆದರೆ ಜೀವನದ ಗುಣಮಟ್ಟದ ಮೇಲೆ ಸಮಾಜದ ವರ್ತನೆ ಪರಿಣಾಮ ಬೀರುತ್ತದೆ. "ರೋಗಗ್ರಸ್ತವಾಗುವಿಕೆಗಳನ್ನು ನಿಯಂತ್ರಿಸಲು ಮತ್ತು ಅಪಸ್ಮಾರಕ್ಕೆ ಚಿಕಿತ್ಸೆ ನೀಡಲು ಔಷಧಿಗಳ ಅಗತ್ಯವಿದೆ ಮತ್ತು ಮೂರ್ಛೆ ರೋಗ ಹೊಂದಿರುವ ಪ್ರತಿ 10 ವ್ಯಕ್ತಿಗಳಲ್ಲಿ ಸುಮಾರು ಏಳು ಜನರಲ್ಲಿ ರೋಗಗ್ರಸ್ತವಾಗುವಿಕೆಗಳನ್ನು ನಿಯಂತ್ರಿಸಲು ಆ್ಯಂಟಿ-ಸೆಜರ್ ಔಷಧಿಗಳು ಸಹಾಯ ಮಾಡುತ್ತವೆ ಎಂದು ಕಿಮ್ಸ್ ಆಸ್ಪತ್ರೆಯ ಹಿರಿಯ ಸಲಹೆಗಾರ ನರರೋಗ ತಜ್ಞೆ ಡಾ.ಸೀತಾ ಜಯಲಕ್ಷ್ಮಿ ಹೇಳಿದರು.

ಡಾ. ಅಮಿತ್ ಭಟ್ಟಿ ಪ್ರಕಾರ: ಅಪಸ್ಮಾರಕ್ಕೆ ಕಾರಣವಾಗುವ ಹೆಚ್ಚುವರಿ ಕಾರಣಗಳ ಕುರಿತು, ವೊಕ್ಹಾರ್ಡ್ ಆಸ್ಪತ್ರೆ (ನಾಗ್ಪುರ) ಕನ್ಸಲ್ಟೆಂಟ್ - ನ್ಯೂರಾಲಜಿ ಡಾ. ಅಮಿತ್ ಭಟ್ಟಿ, ಒತ್ತಡವು ಕೆಲವೊಮ್ಮೆ ದುರ್ಬಲ ನರಮಂಡಲದ ಜನರಲ್ಲಿ ಅಪಸ್ಮಾರವನ್ನು ಉಂಟುಮಾಡಬಹುದು ಮತ್ತು ಹೆಚ್ಚಿನ ಒತ್ತಡವು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಬಹುದು ಎಂದು ವಿವರಿಸಿದ್ದಾರೆ.

ಡಾ.ಅಭಿನಯ್ ಎಂ.ಹುಚ್ಚೆ ಹೇಳಿರುವಂತೆ: "ಮೂರ್ಛೆ ರೋಗಕ್ಕೆ ಚಿಕಿತ್ಸೆ ನೀಡಬಹುದು ಮತ್ತು ಶಸ್ತ್ರಚಿಕಿತ್ಸೆಯ ಮಾರ್ಗವೂ ಇದೆ. ಮೂರ್ಛೆಗೆ ಯಾವುದೇ ಚಿಕಿತ್ಸೆ ಇಲ್ಲ ಎಂಬುದು ಎಲ್ಲೆಡೆ ಹರಡಿರುವ ಮಿಥ್ಯವಾಗಿದೆ.

ನ್ಯೂರೋ ಸರ್ಜನ್ ಡಾ. ಕಾರ್ತಿಕ್ ವೈ ಪ್ರಕಾರ, ಅಪಸ್ಮಾರ ರೋಗಿಗಳು ಎದುರಿಸುವ ಪ್ರಮುಖ ಸವಾಲುಗಳೆಂದರೆ ಕಡಿಮೆ ಆತ್ಮವಿಶ್ವಾಸ ಮತ್ತು ಭಯ. "ಅಪಸ್ಮಾರ ರೋಗಿಗಳ ಕುಟುಂಬಗಳು, ವಿಶೇಷವಾಗಿ ಮಕ್ಕಳಲ್ಲಿ ರೋಗಗ್ರಸ್ತವಾಗುವಿಕೆಗಳೊಂದಿಗೆ ವ್ಯವಹರಿಸುವ ಹಿರಿಯರು ಮತ್ತು ಪೋಷಕರು, ರೋಗವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ವೈದ್ಯರಿಂದ ಹೆಚ್ಚಿನದನ್ನು ತಿಳಿದುಕೊಳ್ಳಬೇಕು. ಸಾಮಾನ್ಯವಾಗಿ ರೋಗಗ್ರಸ್ತವಾಗುವಿಕೆಗಳ ಮೂಲ ಕಾರಣವನ್ನು ಕಂಡುಹಿಡಿಯುವುದು ಮತ್ತು ಅದಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡುವುದು ಮುಖ್ಯವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ವೈದ್ಯಕೀಯ ಚಿಕಿತ್ಸೆಯು ಸಾಕಾಗುತ್ತದೆ.

ಚಿಕಿತ್ಸೆ: ಹಲವು ಔಷಧಿಗಳು ಮೂರ್ಛೆ ರೋಗಕ್ಕೆ ಲಭ್ಯವಿದೆಯಾದರೂ, ಪ್ರತಿ ರೋಗಿಗೆ ಎಷ್ಟು ಪ್ರಮಾಣದಲ್ಲಿ ಔಷಧ ನೀಡಿದರೆ ಫಿಟ್ಸ್ ನಿಲ್ಲುತ್ತದೆ ಎಂದು ವೈದ್ಯರೇ ನಿರ್ಧರಿಸಬಲ್ಲರು. ವೈದ್ಯರು ಸೂಚಿಸಿದ ಪ್ರಮಾಣದ ಔಷಧವನ್ನು ಒಂದು ದಿನವೂ ತಪ್ಪದೇ ಕ್ರಮವಾಗಿ ಸೇವಿಸಬೇಕು. ರೋಗಿ ಯಾವುದೇ ಕಾರಣದಿಂದ ಉಪವಾಸ ಇರಬಾರದು, ನಿದ್ರೆಗೆಡಬಾರದು. ಮದ್ಯಪಾನ ಮಾಡಬಾರದು.

ಕ್ರಮಬದ್ಧವಾದ ಔಷಧಿ ಸೇವನೆಯಿಂದ ಫಿಟ್ಸ್ ಹತೋಟಿಗೆ ಬಂದು, ಐದು ವರ್ಷಗಳ ಕಾಲ ನಿರಂತರವಾಗಿ ಬರದೇ ಹೋದರೆ, ಅದು ಗುಣವಾಯಿತೆಂದು ಹೇಳಬಹುದು. ಅಂದರೆ ರೋಗಿ ಕನಿಷ್ಠ ಐದು ವರ್ಷಗಳ ಕಾಲ ನಿರಂತರವಾಗಿ ಔಷಧಿ ಸೇವಿಸಬೇಕು. ಅನಂತರವೂ ಕೂಡ ಹಠಾತ್ ಔಷಧ ಸೇವನೆಯನ್ನು ನಿಲ್ಲಿಸುವಂತಿಲ್ಲ. ವೈದ್ಯರ ಅನುಮತಿ ಪಡೆದು ಅವರ ಮಾರ್ಗದರ್ಶನದಲ್ಲಿ ಸ್ವಲ್ಪ ಸ್ವಲ್ಪವಾಗಿ ಮಾತ್ರೆಯ ಪ್ರಮಾಣವನ್ನು ತಗ್ಗಿಸಿ ಕ್ರಮೇಣ ನಿಲ್ಲಿಸಬೇಕು.

ಮುನ್ನೆಚ್ಚರಿಕೆ ಕ್ರಮಗಳು: ಒಂಟಿಯಾಗಿ ನೀರು, ಬೆಂಕಿ, ಚಲಿಸುವ ವಾಹನ ಯಂತ್ರಗಳು, ಎತ್ತರದ ಸ್ಥಳಗಳಲ್ಲಿ, ಅಪಾಯಕಾರಿ ಪ್ರದೇಶಗಳಲ್ಲಿ ಕೆಲಸ ಮಾಡಬಾರದು. ತಾನೇ ವಾಹನ ಚಾಲನೆ ಮಾಡಬಾರದು. ತನಗೆ ಮತ್ತು ಇತರರಿಗೆ ಅಪಾಯವಾಗಬಲ್ಲ ಉದ್ಯೋಗ ಮಾಡಬಾರದು (ಉದಾಹರಣೆಗೆ ವಾಹನ ಚಾಲನೆ). ಇವುಗಳನ್ನು ಹೊರತುಪಡಿಸಿದರೆ ಮೂರ್ಛೆ ರೋಗಿ ಎಲ್ಲರಂತೆ ಜೀವನ ಮಾಡಲು ಅಡ್ಡಿಯೂ ಇಲ್ಲ.

ನೆನೆಪಿಡಿ: ಮೂರ್ಛೆ ರೋಗ, ಫಿಟ್ಸ್ ವಾಸಿಯಾಗುವಂಥ ಮೆದುಳಿನ ರೋಗ ಲಕ್ಷಣ. ಮೂರ್ಛೆ ರೋಗಿಗಳಿಗೆ ಎಲ್ಲರಂತೆ ಬದುಕುವ ಹಕ್ಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.