ETV Bharat / sukhibhava

Covid: ಸೋಂಕು ಗುಣವಾದ ತಿಂಗಳ ಬಳಿಕ ದೀರ್ಘ ಕೋವಿಡ್​ ಲಕ್ಷಣ ಆರಂಭ!

Long Covid symptoms: ಸೋಂಕಿನಿಂದ ಚೇತರಿಕೆ ಕಂಡ ಬಳಿಕವೂ ಕಾಡುವ ಈ ದೀರ್ಘ ಕೋವಿಡ್​ ಲಕ್ಷಣಗಳು ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.

Prolonged exacerbation of covid symptoms months after infection has cleared

author img

By

Published : Aug 11, 2023, 4:26 PM IST

ನ್ಯೂಯಾರ್ಕ್​​​: ಕೊರೊನಾ ವೈರಸ್​​ ಸೋಂಕಿನ ಅನಾರೋಗ್ಯದಿಂದ ಚೇತರಿಕೆ ಕಂಡ ವರ್ಷದ ಬಳಿಕವೂ ದೀರ್ಘ ಕೋವಿಡ್​ ಲಕ್ಷಣ ಕಾಡಬಹುದು ಅಥವಾ ಒಂದು ತಿಂಗಳ ಬಳಿಕ ದೀರ್ಘ ಕೋವಿಡ್​ ಲಕ್ಷಣ ಆರಂಭವಾಗಲೂಬಹುದು ಎಂದು ತಿಳಿಸಲಾಗಿದೆ. ವರ್ಷಗಳ ಬಳಿಕ ಕೋವಿಡ್​ ಲಕ್ಷಣಗಳ ಆರಂಭದ ಕುರಿತು ಹೊಸ ಅಧ್ಯಯನದಲ್ಲಿ ವಿವರಿಸಲಾಗಿದೆ.

ದೀರ್ಘ ಕೋವಿಡ್​​ ಸೋಂಕು ಆರಂಭವಾದ ಒಂದು ತಿಂಗಳ ಬಳಿಕ ಅದು ಅಭಿವೃದ್ಧಿ ಹೊಂದುತ್ತದೆ. ಇದು ಅನೇಕ ವಿವಿಧ ಲಕ್ಷಣಗಳನ್ನು ಹೊಂದಿರುತ್ತವೆ. ಈ ಲಕ್ಷಣಗಳು ರೋಗಗ್ರಸ್ಥತೆ ಮತ್ತು ಜೀವನ ಮಟ್ಟ ಕುಗ್ಗಿಸುವುದರೊಂದಿಗೆ ಗಮನಾರ್ಹ ಸಂಬಂಧ ಹೊಂದಿದೆ.

ಶೇ 16ರಷ್ಟು ಕೋವಿಡ್​ ಸೋಂಕಿತ ವ್ಯಕ್ತಿಗಳಿಗೆ ಸೋಂಕು ತಗುಲಿ ವರ್ಷಗಳ ನಂತರ ಈ ದೀರ್ಘ ಕೋವಿಡ್​ ಸೋಂಕು ಕಾಣಿಸಿಕೊಂಡಿದೆ. ಈ ಕುರಿತು ಅಧ್ಯಯನ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯಲ್ಲಿ (ಸಿಡಿಸಿ) ಕಂಡುಬಂದಿದ್ದು, ಇತ್ತೀಚಿಗೆ ಇದು ವಾರದಲ್ಲಿ ಸಂಭವಿಸಿದ ಸಾವು ಮತ್ತು ರೋಗಗ್ರಸ್ಥತೆ ಕುರಿತು ವರದಿ ಬಿಡುಗಡೆ ಮಾಡಿದೆ.

ಹಿಂದಿನ ಅನೇಕ ಸಂಶೋಧನೆಗಳಲ್ಲಿ ಆ ಸಮಯದಲ್ಲಿ ಒಂದು/ ಎರಡು ಲಕ್ಷಣಗಳನ್ನು ಗುರಿಯಾಗಿಸಿ ಸಂಶೋಧನೆ ನಡೆಸಲಾಗಿತ್ತು. ಆದರೆ, ನಾವು ಹೆಚ್ಚಿನ ರೋಗಲಕ್ಷಣ ಮತ್ತು ಸೂಕ್ಷ್ಮತೆಯೊಂದಿಗೆ ಸ್ಪಷ್ಟವಾಗಿ ವಿವರಿಸಲು ಸಾಧ್ಯವಿಲ್ಲ. ಈ ಅಧ್ಯಯನವು ದೀರ್ಘ ಕೋವಿಡ್​ ಲಕ್ಷಣವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಮೌಲ್ಯಮಾಪನ ನಡೆಸಿದೆ. ಇದರ ಜೊತೆಗೆ, ಆರಂಭಿಕ ಸೋಂಕಿನ ಹಂತದಲ್ಲಿರುವ ಲಕ್ಷಣವನ್ನು ದೀರ್ಘ ಕೋವಿಡ್​ ಅಭಿವೃದ್ಧಿಯಾಗಿರುವ ಕೋವಿಡ್​ ಲಕ್ಷಣದೊಂದಿಗಿನ ವ್ಯತ್ಯಾಸ ಗಮನಿಸಿದೆ.

ಅಧ್ಯಯನದಲ್ಲಿ 1,741 ಭಾಗಿದಾರರು ಭಾಗಿಯಾಗಿದ್ದು, ಇವರಲ್ಲಿ ಮೂರನೇ ಎರಡರಷ್ಟು ಮಹಿಳೆಯರಿದ್ದರು. ಮೂರು ತ್ರೈಮಾಸಿಕದಲ್ಲಿ ಕೋವಿಡ್​ ಸಕಾರಾತ್ಮಕತೆ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಕೋವಿಡ್​ ನೆಗೆಟಿವ್​ ಬಂದವರಲ್ಲಿಯೂ ಕೂಡ ಕೆಲಕಾಲಗಳ ಬಳಿಕ ಸೋಂಕಿನ ಕೆಲವು ಲಕ್ಷಣ ಅನುಭವಿಸಿದ್ದಾರೆ. ಇದರಲ್ಲಿ ತಲೆ ಸುತ್ತುವಿಕೆ, ಮೂಗು ಸೋರುವುದು, ತಲೆ ನೋವು, ಗಂಟಲು ಕೆರೆ, ಎದೆ ನೋವು, ಅತಿಸಾರ, ಮರೆವು, ಏಕಾಗ್ರತೆ ಕೊರತೆಯ ಲಕ್ಷಣ ಕಾಣಬಹುದು.

ಕೋವಿಡ್​ ಪಾಸಿಟಿವ್​ ಭಾಗಿದಾರರಲ್ಲಿ ಈ ಲಕ್ಷಣಗಳು ಬೇಸ್​ಲೈನ್​ ವರ್ಗದಲ್ಲಿ ಕಂಡುಬಂದಿದೆ. ಅದು ವರ್ಷದ ಬಳಿಕ. ಇನ್ನು ಕೋವಿಡ್​ ಪಾಸಿಟಿವ್​ ಮತ್ತು ನೆಗಟಿವ್​ ರೋಗಿಗಳಲ್ಲಿ ಸೋಂಕಿನ ಲಕ್ಷಣ ಪತ್ತೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಕೋವಿಡ್​ ಪಾಸಿಟಿವ್​ ಮತ್ತು ಕೋವಿಡ್​ ನೆಗೆಟಿವ್​ ಗುಂಪಿನ ನಡುವೆ ಸಾಮಾನ್ಯ ಮಾದರಿ ಹೇಗಿದೆ ಎಂಬುದನ್ನು ನೋಡಿ ನಮಗೆ ಅಚ್ಚರಿಯಾಯಿತು ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಕೋವಿಡ್​​ ರೂಪಾಂತರ EG.5.1 ಸೋಂಕಿನ ಬಗ್ಗೆ ಆತಂಕ ಬೇಡ ಎಂದ ವೈದ್ಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.