ETV Bharat / sukhibhava

Preventing Rabies: ಮಾರಣಾಂತಿಕ ರೇಬೀಸ್​ನಿಂದ ಜೀವ ಉಳಿಸುವ ಈ ಎಂಟು ವಿಧಾನ ತಿಳಿಯಿರಿ.. - ಜಾಗೃತಿ ಮತ್ತು ಶಿಕ್ಷಣ ಹಾಗೂ ಕಾರ್ಯತಂತ್ರ

ರೇಬೀಸ್​ ರೋಗಕ್ಕೆ ಲಸಿಕೆಯನ್ನು ಲೂಯಿ ಪಾಶ್ಚರ್​ ಕಂಡು ಹಿಡಿದಿದ್ದರೂ, ಈ ರೋಗ ಸಂಪೂರ್ಣ ನಿರ್ಮೂಲನೆಗೊಂಡಿಲ್ಲ.

Prevention of fatal rabies; Learn these eight ways to save a life

author img

By ETV Bharat Karnataka Team

Published : Sep 6, 2023, 12:16 PM IST

ಶತಮಾನಗಳ ಇತಿಹಾಸ ಹೊಂದಿರುವ ಮಾರಣಾಂತಿಕ ರೇಬೀಸ್​ ಸೋಂಕು ಮಾನವರಿಗೆ ಹೆಚ್ಚಿನ ಹಾನಿಯನ್ನು ಉಂಟು ಮಾಡುತ್ತದೆ. ಈ ಕುರಿತು ಪರಿಣಾಮಕಾರಿಯಾಗಿ ಜಾಗೃತಿ ಮತ್ತು ಶಿಕ್ಷಣ ಹಾಗೂ ಕಾರ್ಯತಂತ್ರ ಮಧ್ಯಸ್ಥಿಕೆಗಳನ್ನು ವಹಿಸುವ ಮೂಲಕ ತಡೆಯಬಹುದಾಗಿದೆ.

ಶಿಕ್ಷಣದ ಮೂಲಕ ಅರಿವು ಮೂಡಿಸುವ ಯತ್ನ: ರೇಬೀಸ್​ ತಡೆಗೆ ಇರುವ ಪ್ರಮುಖ ಮಾರ್ಗ ಎಂದರೆ, ಈ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮತ್ತು ಶಿಕ್ಷಣವನ್ನು ನೀಡುವುದಾಗಿದೆ. ಪ್ರತಿಯೊಬ್ಬರಿಗೂ ಪ್ರಾಣಿಗಳಲ್ಲಿನ ರೇಬೀಸ್​ ಕುರಿತು ಜಾಗೃತಿ ಮೂಡಿಸುವುದು. ಇದರ ಚಿಹ್ನೆಗಳನ್ನು ತಿಳಿಸುವುದು ಮತ್ತು ಪ್ರಾಣಿಗಳು ಕಚ್ಚಿದ ತಕ್ಷಣದ ಕಾರ್ಯವನ್ನು ಅರ್ಥೈಸಿಕೊಳ್ಳುವುದು ಪ್ರಮುಖವಾಗಿದೆ. ಇದು ಮಾರಣಾಂತಿಕ ರೋಗ ತಡೆಯುವಲ್ಲಿನ ಪ್ರಮುಖ ಅರಿವಿನ ಅಂಶವಾಗಿದೆ.

ಪ್ರೊಫಿಲ್ಯಾಕ್ಸಿಸ್​ನ ನಂತರದ ಪರಿಣಾಮ: ಪಿಇಪಿ ರೇಬೀಸ್​ ಲಸಿಕೆಯ ಸರಣಿಯನ್ನು ಹೊಂದಿದ್ದು, ಕೆಲವು ಪ್ರಕರಣದಲ್ಲಿ ರೇಬೀಸ್​ ಇಮ್ಯೂನೊಗ್ಲೋಬಿನ್​ (ಆರ್​ಐಜಿ) ರೇಬೀಸ್ ವಿರುದ್ಧ ಕಾರ್ಯ ನಿರ್ವಹಿಸುತ್ತದೆ. ಉತ್ತಮ ನಿರ್ವಹಣೆ ಮತ್ತು ಗುಣಮಟ್ಟದ ಪಿಇಪಿ ಭರವಸೆಯ ಮಧ್ಯಸ್ಥಿಕೆಯು ರೇಬೀಸ್​​ ಮಾರಣಾಂತಿಕತೆ ವಿರುದ್ಧ ಶೇ 100ರಷ್ಟು ಪ್ರತಿಶತ ಕಾರ್ಯ ನಿರ್ವಹಿಸುತ್ತದೆ.

ನಾಯಿಗಳಿಗೆ ಸಾಮೂಹಿಕ ಲಸಿಕೆ: ಮಾನವನಲ್ಲಿನ ರೇಬೀಸ್​ ಪ್ರಕರಣದಲ್ಲಿ ಶೇ 99ರಷ್ಟು ನಾಯಿಗಳಿಂದ ಆಗಿರುತ್ತದೆ. ಈ ರೇಬೀಸ್​ ನಿರ್ಮೂಲನೆ ಮಾಡಬೇಕು ಎಂದರೆ ಈ ರೋಗ ತಡೆಗೆ ಸಾಮೂಹಿಕವಾಗಿ ನಾಯಿಗಳಿಗೆ ಲಸಿಕೆ ಅಗತ್ಯವಾಗಿದೆ. ಇದು ವೆಚ್ಚ ಪರಿಣಾಮಕಾರಿ ಕಾರ್ಯತಂತ್ರವಾಗಿದ್ದು, ಇದು ಕೇವಲ ಮನುಷ್ಯನ ಜೀವನವನ್ನು ಉಳಿಸುವುದಿಲ್ಲ. ಆದರೆ ಇದು ರೇಬಿಸ್​ ವರ್ಗಾವಣೆಯ ಮೂಲವನ್ನು ತಡೆಯುತ್ತದೆ.

ಒಂದು ಆರೋಗ್ಯ ಸಹಯೋಗ: ಈ ಕುರಿತು ಜಾಗೃತಿ ಮೂಡಿಸುವುದು ಮತ್ತು ನಾಯಿಗಳಿಗೆ ಲಸಿಕೆ ಹಾಕಿಸುವುದು ಮನುಷ್ಯರು ಮತ್ತು ಪಶು ಆರೋಗ್ಯ ವಲಯದ ನಡುವಿನ ಸಹಯೋಗವಾಗಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕವಾಗಿ ನಿರ್ಮೂಲನೆ ಯೋಜನೆ, ಸಂಪನ್ಮೂಲ ಕ್ರೋಢೀಕರಣವನ್ನು ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಈ ಸಂಘಟಿತ ವಿಧಾನ ಸಮುದಾಯಕ್ಕೆ ಪ್ರಯೋಜನ ನೀಡುವ ಜೊತೆಗೆ ಮಾನವ ಆರೋಗ್ಯ ವ್ಯವಸ್ಥೆಯ ಮೇಲೆ ರೇಬೀಸ್​ ಕಣ್ಗಾವಲನ್ನು ಬಲಪಡಿಸುತ್ತದೆ.

ವರ್ತನೆ ಅರ್ಥೈಸಿಕೊಳ್ಳಿ: ನಿಷ್ಠೆಗೆ ಹೆಸರಾಗಿರುವ ನಾಯಿಗಳು ಕೆಲವೊಮ್ಮೆ ನಿರ್ದಿಷ್ಟ ಪರಿಸ್ಥಿತಿಯಲ್ಲಿ ಮಾನವನನ್ನು ಕಚ್ಚುತ್ತದೆ. ಮನುಷ್ಯ ಮತ್ತು ನಾಯಿಗಳ ನಡುವಿನ ನಡವಳಿಕೆಯಲ್ಲಿ ಉಂಟಾಗುವ ವ್ಯತ್ಯಾಸವನ್ನು ಇದು ಹೊಂದಿದೆ. ಈ ಹಿನ್ನೆಲೆ ನಾಯಿಗಳ ವರ್ತನೆಯನ್ನು ಅರಿಯುವುದು ಅವಶ್ಯವಾಗಿದ್ದು, ನಾಯಿ ಕಡಿತಕ್ಕೆ ಕಾರಣವಾಗು ಪರಿಸ್ಥಿತಿಗಳನ್ನು ತಪ್ಪಿಸುವುದು ಮುಖ್ಯವಾಗುತ್ತದೆ. ನಾಯಿಗಳು ಭಯ ನೋವು, ಹತಾಶೆ ಮತ್ತು ತಮ್ಮ ರಕ್ಷಣೆಗಾಗಿ ಕಚ್ಚುವಿಕೆಗೆ ಮುಂದಾಗುತ್ತದೆ.

ಪ್ರಾಣಿಗಳ ರೇಬೀಸ್​ ಹರಡುವಿಕೆ: ಸೋಂಕಿತ ಪ್ರಾಣಿಗಳ ಲಾಲಾರಸವು ದೇಹದ ಕಚ್ಚುವಿಕೆ ಗಾಯದಿಂದ ನೇರವಾಗಿ ದೇಹವನ್ನು ಸೇರುತ್ತದೆ. ಗಾಯದ ಮೂಲಕ ಸ್ನಾಯು ಕೋಶಗಳ ಪ್ರವೇಶಿಸಿದ ನಂತರ ವೈರಸ್​ ಬಾಹ್ಯ ನರಗಳ ಮೂಲ ನರ ಮಂಡಲವನ್ನು ಪ್ರವೇಶಿಸುತ್ತದೆ. ಈ ಸೋಂಕು ವಿಶೇಷವಾಗಿ ಲಾಲಾರಸ ಗ್ರಂಥಿಗಳಿಗೆ ಪ್ರಸರಣವನ್ನು ಹೊಂದಿರುತ್ತದೆ.

ವೆಚ್ಚ ಪರಿಣಾಮಕಾರಿ ರೇಬೀಸ್​ ತಡೆಗಟ್ಟುವಿಕೆ: ರೇಬೀಸ್​ ತಡೆಗಟ್ಟಲು ಮುನುಷ್ಯ ಮತ್ತು ವೆಚ್ಚ ಪರಿಣಾಮಕಾರಿ ಪ್ರಯತ್ನವನ್ನು ಹೊಂದಿದೆ. ಅಪಾಯದಲ್ಲಿರುವ ಪ್ರದೇಶಗಳಲ್ಲಿ ಕನಿಷ್ಠ 70% ನಾಯಿಗಳಿಗೆ ಲಸಿಕೆ ಹಾಕುವುದರಿಂದ ಮಾನವ ರೇಬೀಸ್​ ಸಾವು ತಡೆಯುವ ಪರಿಣಾಮಕಾರಿ ವಿಧಾನವಾಗಿದೆ. ಆದರೆ, ಏಷ್ಯಾ ಮತ್ತು ಆಫ್ರಿಕಾದಲ್ಲಿ ಈ ಲಸಿಕೆ ಅಸಮಪರ್ಕವಾಗಿ ಉಳಿದಿದೆ. ಈ ಭಯಾನಕ ಕಾಯಿಲೆ ಮರುಕಳಿಸುವಿಕೆಗೆ ಕಾರಣವಾಗುತ್ತದೆ.

ಇದನ್ನೂ ಓದಿ: ವಿಶ್ವದ ಬೇರೆ ದೇಶಗಳ ಜನರಿಗೆ ಹೋಲಿಸಿದಲ್ಲಿ ಕಡಿಮೆ ನಿದ್ದೆ ಮಾಡ್ತಾರೆ ಏಷ್ಯನ್ನರು; ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.