ಲಾಸ್ ಏಂಜಲೀಸ್(ಅಮೆರಿಕ): ಗರ್ಭಿಣಿಯರ ಆರೋಗ್ಯಕ್ಕೆ ನೇರವಾಗಿ ಅಲ್ಲದಿದ್ದರೂ ಗರ್ಭದಾರಣೆಯು ಅವರ ಆರೋಗ್ಯಕ್ಕೆ ಒಳ್ಳೆಯದು ಎಂದು ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳ ಅಧ್ಯಯನದಲ್ಲಿ ತಿಳಿಸಿದೆ, ಗರ್ಭದಾರಣೆಯ ಸಮಯದಲ್ಲಿ ರಕ್ತದೊತ್ತಡ ಕಡಿಮೆಯಾಗಿರುತ್ತದೆ ಮತ್ತು ಅವರ ಮಾನಸಿಕ, ದೈಹಿಕ ಆರೋಗ್ಯವು ಸುಧಾರಿಸುತ್ತದೆ ಎಂದು ಅವರು ವಿವರಿಸಿದರು.
ಉದ್ಯಾನದಂತಹ ಸನ್ನಿವೇಶವನ್ನು ನೋಡಿದಾಗ ಗರ್ಭಿಣಿಯರಲ್ಲಿ ಸಕಾರಾತ್ಮಕ ಭಾವನೆ: ಸಂಶೋಧನೆಯ ಭಾಗವಾಗಿ, ನಗರ ಪ್ರದೇಶಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಮಹಿಳೆಯರಿಗೆ ತೋರಿಸಲಾಯಿತು. ಇದರಲ್ಲಿ ಉದ್ಯಾನದಂತಹ ಸನ್ನಿವೇಶವನ್ನು ನೋಡಿದಾಗ ಗರ್ಭಿಣಿಯರಲ್ಲಿ ಸಕಾರಾತ್ಮಕ ಭಾವನೆ ಹೊರಹೊಮ್ಮಿದವು. ಅಲ್ಪಾವಧಿಯವರೆಗೆ ಹಸಿರು ಪರಿಸರವನ್ನು ನೋಡುವುದು ಸಹ ಅವರಿಗೆ ಪ್ರಯೋಜನಕಾರಿಯಾಗಿದೆ ಎಂದು ವಿಜ್ಞಾನಿಗಳು ಇದೇ ವೇಳೆ ಸಂಶೋಧನೆ ವೇಳೆ ಅರಿತುಕೊಂಡಿದ್ದಾರೆ.
ಸಿಸ್ಟೋಲಿಕ್ ರಕ್ತದೊತ್ತಡ ಮತ್ತು ಲಾಲಾರಸದ ಆಲ್ಫಾ-ಅಮೈಲೇಸ್ (ಒತ್ತಡದ ಸೂಚಕ) ಕಡಿಮೆಯಾಗಿರುವುದು ಮತ್ತು ಸಕಾರಾತ್ಮಕ ಭಾವನೆಗಳಲ್ಲಿ ಸುಧಾರಣೆ ಜೊತೆಗೆ ನಕಾರಾತ್ಮಕ ಭಾವನೆಗಳಲ್ಲಿ ಇಳಿಕೆ ಕಂಡು ಬಂದಿದೆ ಎಂದು ವಿಜ್ಞಾನಿಗಳು ತಮ್ಮ ಅಧ್ಯಯನದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಜನರಲ್ಲಿ 'ವಿಟಮಿನ್ ಡಿ' ಕೊರತೆ ಹೆಚ್ಚಳ.. ನಿಷ್ಕಾಳಜಿ ತೋರಿದರೆ ಅಪಾಯ ಕಟ್ಟಿಟ್ಟಬುತ್ತಿ