ETV Bharat / sukhibhava

ಇದು ಗರ್ಭಧಾರಣೆ ಮತ್ತು ಶಿಶುಗಳ ನಷ್ಟದ ಬಗ್ಗೆ ಜಾಗೃತಿ ಮೂಡಿಸುವ ತಿಂಗಳು..! ಏನಿದರ ಅಗತ್ಯತೆ?

author img

By

Published : Oct 1, 2022, 5:11 PM IST

ಜನನದ ಮೊದಲು ಅಥವಾ ಹುಟ್ಟಿದ ತಕ್ಷಣ ತಾಯಿಯ ಹೊಟ್ಟೆಯಲ್ಲಿ ಮರಣ ಹೊಂದಿದ ನವಜಾತ ಶಿಶುಗಳನ್ನು ನೆನಪಿಟ್ಟುಕೊಳ್ಳುವ ಉದ್ದೇಶದಿಂದ ಅಕ್ಟೋಬರ್ ತಿಂಗಳನ್ನು ಗರ್ಭಧಾರಣೆ ಮತ್ತು ಶಿಶುಗಳ ನಷ್ಟದ ನೆನಪಿನ ಹಾಗೂ ಜಾಗೃತಿ ತಿಂಗಳು ಎಂದು ಆಚರಿಸಲಾಗುತ್ತದೆ.

Pregnancy and Infant Loss Remembrance Month October
ಶಿಶುಗಳ ನಷ್ಟದ ನೆನಪಿನ ತಿಂಗಳು ಅಕ್ಟೋಬರ್​

ಹೈದರಾಬಾದ್: ಭ್ರೂಣದ ಸಾವು, ಸತ್ತ ಮಗುವಿನ ಜನನ, ಅಥವಾ ಹುಟ್ಟಿದ ತಕ್ಷಣ ನವಜಾತ ಶಿಶು ಸಾವನ್ನಪ್ಪುವ ಸಂಗತಿ ಯಾವುದೇ ಕುಟುಂಬವಾಗಿದ್ದರೂ ಅದು ಅವರಿಗೆ ನೋವಿನ ಸಂಗತಿಯೇ ಆಗಿರುತ್ತದೆ. ಜನನದ ಮೊದಲು ಅಥವಾ ಹುಟ್ಟಿದ ತಕ್ಷಣ ತಾಯಿಯ ಹೊಟ್ಟೆಯಲ್ಲಿ ಮರಣ ಹೊಂದಿದ ನವಜಾತ ಶಿಶುಗಳನ್ನು ನೆನಪಿಸಿಕೊಳ್ಳುವ ಉದ್ದೇಶದಿಂದ ಅಕ್ಟೋಬರ್ ಅನ್ನು 'ಗರ್ಭಧಾರಣೆ ಮತ್ತು ಶಿಶುಗಳ ನಷ್ಟದ ನೆನಪು ಹಾಗೂ ಜಾಗೃತಿ ತಿಂಗಳು' ಎಂದು ಆಚರಿಸಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವಸಂಸ್ಥೆಯ ಪ್ರಕಾರ, ಪ್ರತಿ ವರ್ಷ ಎರಡು ದಶಲಕ್ಷಕ್ಕೂ ಹೆಚ್ಚು ಸತ್ತ ಮಗುವಿನ ಜನನ ಪ್ರಕರಣಗಳು ವರದಿಯಾಗುತ್ತವೆ. ಮತ್ತೊಂದೆಡೆ, ನಾವು ವರ್ಷವಾರು ಅಂಕಿ- ಅಂಶಗಳನ್ನು ಗಮನಿಸಿದೆ 2015 ರಲ್ಲಿ, ಸುಮಾರು 2.6 ಮಿಲಿಯನ್ ಸತ್ತ ಮಗುವಿನ ಜನನ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಒಂದು ದಿನಕ್ಕೆ ಸತ್ತ ಮಗುವಿನ ಜನನಗಳ ಸಂಖ್ಯೆ ಸುಮಾರು 7,178 ಆಗಿತ್ತು. ಸೋಜಿಗ ಎಂಬಂತೆ ಈ ಪ್ರಕರಣಗಳಲ್ಲಿ ಹೆಚ್ಚಿನವು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವರದಿಯಾಗಿವೆ.

ಅಮೆರಿಕದಲ್ಲಿ ಆಚರಿಸಲ್ಪಡುತ್ತಿದ್ದ ದಿನ: 'ಗರ್ಭಧಾರಣೆ ಮತ್ತು ಶಿಶುಗಳ ನಷ್ಟದ ನೆನಪಿನ ಮಾಸ'ವನ್ನು ಪ್ರತಿ ವರ್ಷ ಅಕ್ಟೋಬರ್‌ನಲ್ಲಿ ವಿಶ್ವಾದ್ಯಂತ ಆಚರಿಸಲಾಗುತ್ತದೆ. ಇದು ಕೇವಲ ಸತ್ತ ಜನನಗಳನ್ನು ಮಾತ್ರವಲ್ಲದೇ ಗರ್ಭಪಾತಕ್ಕೆ ಒಳಗಾದ ಭ್ರೂಣಗಳನ್ನು ಮತ್ತು ಹುಟ್ಟಿದ ತಕ್ಷಣ ತಮ್ಮ ಜೀವವನ್ನು ಕಳೆದುಕೊಳ್ಳುವ ನವಜಾತ ಶಿಶುಗಳನ್ನು ನೆನಪಿಟ್ಟುಕೊಳ್ಳುವ ಕಾರಣಕ್ಕಾಗಿ ಆಚರಿಸಲ್ಪುಡುತ್ತದೆ. ಈ ಘಟನೆಯನ್ನು ಮೊದಲು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಗರ್ಭಧಾರಣೆ ಮತ್ತು ಶಿಶುಗಳ ನಷ್ಟದ ನೆನಪಿನ ದಿನ ಎಂದು ಪರಿಚಯಿಸಲಾಯಿತು.

ವಿಶ್ವಸಂಸ್ಥೆಯ ಅಧ್ಯಕ್ಷ ರೊನಾಲ್ಡ್ ರೇಗನ್ ಅವರು ಅಕ್ಟೋಬರ್ 25, 1988 ರಂದು ಗರ್ಭಧಾರಣೆ ಮತ್ತು ಮಕ್ಕಳ ನಷ್ಟದ ನೆನಪಿನ ದಿನವನ್ನು ಆಚರಿಸುವುದಾಗಿ ಮೊದಲು ಘೋಷಿಸಿದ್ದರು. 2000 ರಲ್ಲಿ, ರಾಬಿನ್ ಬೇರ್, ಲಿಸಾ ಬ್ರೌನ್ ಮತ್ತು ಟಮ್ಮಿ ನೊವಾಕ್ ಅವರು ಅಕ್ಟೋಬರ್ 15 ಅನ್ನು ಗರ್ಭಾವಸ್ಥೆ ಮತ್ತು ಶಿಶು ನಷ್ಟದ ಸ್ಮರಣಾರ್ಥ ದಿನ ಎಂದು ಗುರುತಿಸಲು ಫೆಡರಲ್ ಸರ್ಕಾರಕ್ಕೆ ಮನವಿ ಮಾಡಿದರು. ಅಂದಿನಿಂದ, ಪ್ರತಿ ವರ್ಷ ಪ್ರಪಂಚದಾದ್ಯಂತ ಅಕ್ಟೋಬರ್ 15 ರಂದು ಮತ್ತು ಅಕ್ಟೋಬರ್ ತಿಂಗಳನ್ನು ಗರ್ಭಧಾರಣೆ ಮತ್ತು ಶಿಶುಗಳ ನಷ್ಟದ ನೆನಪಿನ ತಿಂಗಳು ಎಂದು ಆಚರಿಸಲಾಗುತ್ತದೆ.

ಗರ್ಭಾವಸ್ಥೆಯಲ್ಲಿ, ಜನನದ ಸಮಯದಲ್ಲಿ ಅಥವಾ ಹುಟ್ಟಿದ ಸ್ವಲ್ಪ ಸಮಯದಲ್ಲೇ ಮರಣ ಹೊಂದಿದ ಮಕ್ಕಳನ್ನು ನೆನಪಿಸಿಕೊಳ್ಳುವುದು ಮಾತ್ರವಲ್ಲದೆ ಗರ್ಭಪಾತ, ಹೆರಿಗೆ ಮತ್ತು ನವಜಾತ ಶಿಶುವಿನ ಸಾವಿಗೆ ಕಾರಣಗಳು ಮತ್ತು ತಡೆಗಟ್ಟುವಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಗರ್ಭಾವಸ್ಥೆ ಮತ್ತು ಮಕ್ಕಳ ನಷ್ಟ ಸ್ಮರಣಾರ್ಥ ಮಾಸವನ್ನು ಆಚರಿಸುವ ಉದ್ದೇಶವಾಗಿದೆ.

ಈ ಒಂದು ತಿಂಗಳ ಅವಧಿಯಲ್ಲಿ, ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಅಲ್ಲಿ ಗರ್ಭಾವಸ್ಥೆಯಲ್ಲಿ, ಹುಟ್ಟಿದಾಗ ಅಥವಾ ಯಾವುದೇ ಕಾರಣದಿಂದ ಮರಣ ಹೊಂದಿದ ಮಕ್ಕಳನ್ನು ನೆನಪಿಸಿಕೊಳ್ಳಲಾಗುತ್ತದೆ. ಮುಖ್ಯವಾಗಿ ಅಕ್ಟೋಬರ್ 15 ರಂದು, ಗರ್ಭಧಾರಣೆ ಮತ್ತು ಶಿಶುಗಳ ನಷ್ಟದ ಸ್ಮರಣಾರ್ಥ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.

ಸಾಮಾನ್ಯವಾಗಿ, ತಾಯಿಯ ಗರ್ಭದಲ್ಲೇ ಶಿಶು ಸಾವನ್ನಪ್ಪುವುದನ್ನು ಪ್ರತೀ ಸಲ ಗರ್ಭಪಾತ ಎಂದು ಕರೆಯಲಾಗುವುದಿಲ್ಲ ಎಂದು ಜನರು ಅರ್ಥಮಾಡಿಕೊಳ್ಳುವುದಿಲ್ಲ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ಭ್ರೂಣವು ತಾಯಿಯ ಗರ್ಭದಲ್ಲಿ 20 ವಾರಗಳ ಮೊದಲು ಸತ್ತರೆ ಅದನ್ನು ಗರ್ಭಪಾತ ಎಂದು ಕರೆಯಲಾಗುತ್ತದೆ. ಇಪ್ಪತ್ತನೇ ವಾರದ ನಂತರ ತಾಯಿಯ ಗರ್ಭದಲ್ಲಿ ಮಗು ಮರಣ ಹೊಂದಿದರೆ ಅದನ್ನು ಸತ್ತ ಮಗುವಿನ ಜನನ ಎಂದು ಕರೆಯಲಾಗುತ್ತದೆ. ಈ ಎರಡೂ ಪರಿಸ್ಥಿತಿಗಳು ಅನೇಕ ಕಾರಣಗಳಿಂದ ಉಂಟಾಗಬಹುದು. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ:

ಸತ್ತ ಮಗುವಿನ ಹೆರಿಗೆಗೆ ಕಾರಣಗಳು:

  • ಭ್ರೂಣವು ಸರಿಯಾಗಿ ಬೆಳವಣಿಗೆಯಾಗದಿರುವುದು.
  • ಮಗುವಿನ ಜನನದ ಸಮಯದಲ್ಲಿ ಜನ್ಮಜಾತ ಅಸಹಜತೆ.
  • 9 ತಿಂಗಳ ನಂತರವೂ ಶಿಶು ಜನಿಸದೇ ಇರುವುದು.
  • ಗರ್ಭಾವಸ್ಥೆಯಲ್ಲಿ ತಾಯಿ ಅನಾರೋಗ್ಯಕ್ಕೆ ಒಳಗಾಗುವುದು.
  • ತಾಯಿಯಲ್ಲಿ ಅಧಿಕ ರಕ್ತದೊತ್ತಡ, ಬೊಜ್ಜು ಅಥವಾ ಮಧುಮೇಹದಂತಹ ಅಸ್ವಸ್ಥತೆ.

ಗರ್ಭಪಾತಕ್ಕೆ ಕಾರಣಗಳು:

  • ವಂಶವಾಹಿಗಳಲ್ಲಿ ಅಸಹಜತೆ.
  • ಹಾರ್ಮೋನ್ ಸಂಬಂಧಿತ ಸಮಸ್ಯೆಗಳು.
  • ಗರ್ಭಾವಸ್ಥೆಯಲ್ಲಿ ಸೋಂಕುಗಳು
  • ಥೈರಾಯ್ಡ್, ಮಧುಮೇಹದ ತೊಂದರೆಗಳು.
  • ಅತಿಯಾದ ಧೂಮಪಾನ, ಮದ್ಯಪಾನ ಅಥವಾ ಮಾದಕ ದ್ರವ್ಯ ಸೇವನೆ.
  • ಅಪಘಾತಗಳು.

ಪ್ರಪಂಚದಾದ್ಯಂತ ವೈದ್ಯರು ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಆಹಾರ - ಸಂಬಂಧಿತ, ಕುಳಿತುಕೊಳ್ಳುವ ಮತ್ತು ಕೆಲಸಕ್ಕೆ ಸಂಬಂಧಿಸಿದ ಸಲಹೆಗಳನ್ನು ನೀಡುತ್ತಾರೆ. ವೈದ್ಯರ ಸಲಹೆಗಳನ್ನು ಪಾಲಿಸುವುದರೊಂದಗೆ ನಿಯಮಿತ ವೈದ್ಯಕೀಯ ತಪಾಸಣೆ ಮತ್ತು ಜಾಗೃತಿ ಬಹಳ ಮುಖ್ಯ. ವಿಶೇಷವಾಗಿ ಈಗಾಗಲೇ ಹಾರ್ಮೋನ್ ಅಥವಾ ಇತರ ಯಾವುದೇ ರೀತಿಯ ಸಮಸ್ಯೆಗಳು ಅಥವಾ ರೋಗಗಳಿರುವ, ದುರ್ಬಲ ಭ್ರೂಣವನ್ನು ಹೊಂದಿರುವ ಗರ್ಭಿಣಿ ಮಹಿಳೆಯರು ತಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ.

ವೈದ್ಯರು ಸೂಚಿಸಿದ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರೊಂದಿಗೆ, ಗರ್ಭಿಣಿ ಮಹಿಳೆಯು ಹುಟ್ಟಲಿರುವ ಮಗುವಿನ ಚಟುವಟಿಕೆಯ ಬಗ್ಗೆಯೂ ಕಾಳಜಿ ವಹಿಸಬೇಕು. ಅಂದರೆ ದೇಹದಲ್ಲಿ ಅದರ ಚಲನೆಯ ಪ್ರಕ್ರಿಯೆ ಬಗ್ಗೆ ಗಮನ ಹರಿಸಬೇಕು. ಇದಲ್ಲದೇ ಗರ್ಭಾವಸ್ಥೆಯ ಯಾವುದೇ ಹಂತದಲ್ಲಿ ರಕ್ತಸ್ರಾವವಾಗುತ್ತಿದ್ದರೆ, ಹೊಟ್ಟೆ ಅಥವಾ ಸೊಂಟದಲ್ಲಿ ತೀವ್ರವಾದ ನೋವು ಕಾಣಿಸಿಕೊಂಡರೆ ಮತ್ತು ಮಗು ಹೆಚ್ಚು ಸಮಯ ಚಲಿಸದಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ.

ಈ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ ನಂತರವೂ ಹೊಟ್ಟೆಯಲ್ಲಿರುವ ಭ್ರೂಣ ಅಥವಾ ಮಗುವಿನ ಜೀವವನ್ನು ಕಾಪಾಡಿಕೊಳ್ಳಲಾಗದಿದ್ದರೆ, ಹೆಚ್ಚಿನ ಸಂದರ್ಭಗಳಲ್ಲಿ ತಾಯಿಯ ದೈಹಿಕ ಮತ್ತು ಮಾನಸಿಕ ಆರೋಗ್ಯವು ಹೆಚ್ಚು ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ, ಅಂತಹ ಸಂದರ್ಭಗಳಲ್ಲಿ, ಮಹಿಳೆಯರಲ್ಲಿ ಖಿನ್ನತೆಯ ಲಕ್ಷಣಗಳು ಕಂಡುಬರುತ್ತವೆ. ಹಾಗಾಗಿ ಯಾವುದೇ ಪರಿಸ್ಥಿತಿಯಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಲು ಸಾಧ್ಯವಾಗದೇ ಇದ್ದರೆ, ಅವಳನ್ನು ದೂಷಿಸಬಾರದು. ಬದಲಾಗಿ ಅವಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು.

ಇದನ್ನೂ ಓದಿ: ಇಷ್ಟವಿಲ್ಲದ ಆಹಾರ ಹೊಟ್ಟೆಯಲ್ಲೇ ತಿರಸ್ಕರಿಸುವ ಭ್ರೂಣ..ಅಮ್ಮ ತಿನ್ನಬೇಕು ಕಂದ ಮೆಚ್ಚುವ ಊಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.