ETV Bharat / sukhibhava

International Yoga Day 2023: ಉತ್ತಮ ಆರೋಗ್ಯಕ್ಕೆ ಯೋಗವೇ ಮದ್ದು.. ವಾತ, ಪಿತ್ತ ಮತ್ತು ಕಫ ನಿಯಂತ್ರಣಕ್ಕೆ ಪ್ರಾಣಾಯಾಮ ಸಹಕಾರಿ - International Yoga Day 2023

9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಜೂನ್ 21 ರಂದು ಆಚರಿಸಲಾಗುವುದು. ಯೋಗದ ಹಲವು ವಿಧಗಳಲ್ಲಿ ಪ್ರಾಣಾಯಾಮವೂ ಒಂದು. ಇದರ ಪ್ರಯೋಜನಗಳನ್ನು ತಿಳಿದುಕೊಳ್ಳೋಣ..

pranayama
ಪ್ರಾಣಾಯಾಮ
author img

By

Published : Jun 17, 2023, 7:33 PM IST

ಯೋಗದಲ್ಲಿ ಪ್ರಾಣಾಯಾಮವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಪ್ರಾಣಾಯಾಮದ ಪ್ರಯೋಜನಗಳು ಮತ್ತು ವೈದ್ಯಕೀಯ ಪ್ರಯೋಜನಗಳನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಆಯುರ್ವೇದದಲ್ಲಿ ಹೇಳಿರುವಂತೆ ನಿಯಮಿತವಾಗಿ ಕೆಲವು ಪ್ರಾಣಾಯಾಮಗಳನ್ನು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡುವುದರಿಂದ ದೇಹದಲ್ಲಿನ ವಾತ, ಪಿತ್ತ ಮತ್ತು ಕಫ ದೋಷಗಳನ್ನು ನಿಯಂತ್ರಿಸಬಹುದಾಗಿದೆ. ಜೊತೆಗೆ ದೇಹವನ್ನು ಸಮತೋಲನದಲ್ಲಿರಿಸಿಕೊಳ್ಳಲು ಇದು ಸಹಕಾರಿಯಾಗಿದೆ.

ಪ್ರಾಣಾಯಾಮವು ಯೋಗಾಸನಗಳ ವಿಧಗಳಲ್ಲಿ ಪ್ರಮುಖವಾದದ್ದು. ದೈಹಿಕ ಮತ್ತು ಮಾನಸಿಕವಾಗಿ ಇದು ಪರಿಣಾಮಕಾರಿಯಾಗಿರುವುದರಿಂದ ಎಲ್ಲಾ ವಯಸ್ಸಿನ ಜನರು ಪ್ರಾಣಾಯಾಮ ಮಾಡುವ ಪ್ರವೃತ್ತಿಯನ್ನು ಹೆಚ್ಚಿಸಿಕೊಂಡಿದ್ದಾರೆ. ಪ್ರಾಣಾಯಾಮದ ನಿಯಮಿತ ಅಭ್ಯಾಸವು ಉಸಿರಾಟದ ಸಮಸ್ಯೆಗೆ ಪರಿಹಾರವಾಗಿದೆ. ಪ್ರಾಣಾಯಾಮದ ಪ್ರಯೋಜನಗಳ ಬಗ್ಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿದ ಅನೇಕ ಸಂಶೋಧನೆಗಳು ಮತ್ತು ಪ್ರಯೋಗಗಳಲ್ಲಿ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಾಣಾಯಾಮ ಕೊಂಚ ಹೆಚ್ಚೇ ಪರಿಣಾಮಕಾರಿಯಾಗಿದೆ ಎಂದು ದೃಢಪಟ್ಟಿದೆ.

ಯೋಗ ಪಿತಾಮಹ ಪತಂಜಲಿ ಮಹರ್ಷಿ ನೀಡಿದ ವ್ಯಾಖ್ಯಾನದ ಪ್ರಕಾರ, ಪ್ರಾಣಾಯಾಮವು ಉಸಿರಾಟಕ್ಕೆ ಸಂಬಂಧಿಸಿದ ಯೋಗವಾಗಿದೆ. ಇದು ಉಸಿರಾಟದ ವ್ಯವಸ್ಥೆಗೆ ಸಂಬಂಧಿಸಿದ ಅಂಗಗಳನ್ನು ತೀವ್ರತೆ ಮತ್ತು ಲಯದೊಂದಿಗೆ ಹೆಚ್ಚು ಸಕ್ರಿಯವಾಗಿ ಮಾಡುತ್ತದೆ. ಮತ್ತೊಂದೆಡೆ, ನಾವು ಆಯುರ್ವೇದದ ಬಗ್ಗೆ ಮಾತನಾಡಿದರೆ, ಈ ವೈದ್ಯಕೀಯ ವ್ಯವಸ್ಥೆಯಲ್ಲಿ ಪ್ರಾಣಾಯಾಮವನ್ನು ಚಿಕಿತ್ಸೆಯೆಂದೇ ಪರಿಗಣಿಸಲಾಗಿದೆ. ಇದು ಶ್ವಾಸಕೋಶ ಮತ್ತು ಉಸಿರಾಟದ ವ್ಯವಸ್ಥೆಯಲ್ಲಿನ ಶುದ್ಧೀಕರಣ ಪ್ರಕ್ರಿಯೆಯ ಜೊತೆಗೆ ಒಟ್ಟಾರೆಯಾಗಿ ಮಾನಸಿಕ, ದೈಹಿಕ, ಭಾವನಾತ್ಮಕ ಆರೋಗ್ಯಕ್ಕೂ ಹೆಚ್ಚು ಪ್ರಯೋಜನವನ್ನು ನೀಡುತ್ತದೆ. ವಿಶೇಷವಾಗಿ ಆಯುರ್ವೇದದಲ್ಲಿ, ಪ್ರಾಣಾಯಾಮದ ನಿಯಮಿತ ಅಭ್ಯಾಸವು ವಾತ, ಪಿತ್ತ ಮತ್ತು ಕಫ ದೋಷಗಳನ್ನು ನಿಯಂತ್ರಿಸುತ್ತದೆ ಎಂದು ನಂಬಲಾಗಿದೆ.

ಪ್ರಾಣಾಯಾಮ ಮತ್ತು ಅದರ ಪ್ರಕಾರಗಳು: ಯೋಗ ಶಾಸ್ತ್ರಗಳ ಪ್ರಕಾರವಾಗಿ ಬೆಂಗಳೂರಿನ ಯೋಗ ಗುರು ಮೀನು ವರ್ಮಾ ಅವರು ಪ್ರಾಣಾಯಾಮ ಮತ್ತು ಅದರ ಪ್ರಕಾರಗಳನ್ನು ವಿವರಿಸಿದ್ದಾರೆ. ಪ್ರಾಣಾಯಾಮವು ಪ್ರಾಣ ಮತ್ತು ಯಮ ಎಂಬ ಎರಡು ಸಂಸ್ಕೃತ ಪದಗಳಿಂದ ಮಾಡಲ್ಪಟ್ಟಿದೆ. 'ಪ್ರಾಣ' ಎಂದರೆ ಜೀವ ಶಕ್ತಿ ಮತ್ತು 'ಯಾಮ' ಎಂದರೆ ಅದರ ಮೇಲೆ ನಿಯಂತ್ರಣ ಸಾಧಿಸುವುದು. ಯೋಗದಲ್ಲಿ ಉಸಿರಾಟದ ನಿಯಂತ್ರಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.

ಪ್ರಾಣಾಯಾಮ ಇದು ಒಂದು ಸೂಕ್ಷ್ಮ ಪ್ರಕ್ರಿಯೆಯಾಗಿದ್ದು, ಇದರ ಮೂಲಕ ಒಬ್ಬರು ತಮ್ಮ ಆಂತರಿಕ ಶಕ್ತಿಗಳ ಮೇಲೆ ನಿಯಂತ್ರಣ ಸಾಧಿಸಿಕೊಳ್ಳಬಹುದು. ಇದು ಉಸಿರಾಟದ ಮಾರ್ಗವನ್ನು ಆರೋಗ್ಯಕರವಾಗಿಸುವ ಜೊತೆಗೆ ಒಟ್ಟಾರೆ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ಪ್ರಾಣಾಯಾಮದಲ್ಲಿ ಉಸಿರಾಡುವ ಮತ್ತು ಬಿಡುವ ಮೂರು ಕ್ರಿಯೆಗಳಿವೆ. ಅಂದರೆ, ಸರಿಯಾದ ವೇಗ ಮತ್ತು ರೀತಿಯಲ್ಲಿ ಉಸಿರನ್ನು ತೆಗೆದುಕೊಳ್ಳುವುದು, ನಿಲ್ಲಿಸುವುದು ಮತ್ತು ಉಸಿರನ್ನು ಬಿಡುವುದು.

ಅನೇಕ ರೀತಿಯ ಪ್ರಾಣಾಯಾಮಗಳನ್ನು ಪರಿಗಣಿಸಲಾಗಿದ್ದರೂ, ಕಪಾಲಭಾತಿ, ಅನುಲೋಮ-ವಿಲೋಮ, ನಾಡಿ ಶೋಧನ, ಭಸ್ತ್ರಿಕಾ, ಭ್ರಮರಿ, ಉಜ್ಜಾಯಿ, ಶೀತಲಿ, ಕೆಯೋಲಿ, ಕುಂಭಕ್, ಸೂರ್ಯಭೇದನ್, ಚಂದ್ರಭೇದನ್, ಪ್ರಣವ್, ಅಗ್ನಿಸರ್, ನಾಸಾಗ್ರ ಮತ್ತು ಶಿತಾಯು ಅತ್ಯಂತ ಜನಪ್ರಿಯ ವಿಧಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ಇವುಗಳಲ್ಲಿ ಅನುಲೋಮ-ವಿಲೋಮ, ಕಪಾಲಭಾತಿ ಮತ್ತು ಭ್ರಮರಿ ಪ್ರಾಣಾಯಾಮದ ಅಭ್ಯಾಸವು ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು, ವಿಶೇಷವಾಗಿ ಗ್ಯಾಸ್ಟ್ರಿಕ್ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು, ನಿದ್ರಾಹೀನತೆ ಸಮಸ್ಯೆ ಹೋಗಲಾಡಿಸಲು, ದೈಹಿಕ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಮತ್ತು ಒತ್ತಡ ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೊತೆಗೆ ಮೆದುಳು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಹಾಗೂ ರಕ್ತದೊತ್ತಡದಂತಹ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

ಇವುಗಳಲ್ಲದೆ, ಪ್ರಾಣಾಯಾಮದ ಅಭ್ಯಾಸವು ಶ್ವಾಸಕೋಶಕ್ಕೆ ಸಂಬಂಧಿಸಿದ, ಹೆಚ್ಚು ಕಡಿಮೆ ಗಂಭೀರ ಕಾಯಿಲೆಗಳಾದ ಅಸ್ತಮಾ, ಉಸಿರಾಟಕ್ಕೆ ಸಂಬಂಧಿಸಿದ ಅಲರ್ಜಿಗಳು, ಅಲರ್ಜಿಕ್ ಬ್ರಾಂಕೈಟಿಸ್, ನ್ಯುಮೋನಿಯಾ ಮತ್ತು ಟಿಬಿಯಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದಲ್ಲದೇ ಪ್ರಾಣಾಯಾಮದ ಅಭ್ಯಾಸವು ದೇಹ ಮತ್ತು ಮನಸ್ಸಿನ ನಡುವಿನ ಸಂಪರ್ಕವನ್ನು ಬಲಪಡಿಸುತ್ತದೆ. ನಮ್ಮ ಆಲೋಚನೆಗಳಲ್ಲಿ ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ. ದೇಹದ ಬಹುತೇಕ ಎಲ್ಲಾ ಅಂಗಗಳ ಕ್ರಿಯಾಶೀಲತೆ ಮತ್ತು ಕಾರ್ಯನಿರ್ವಹಣೆಯನ್ನು ಹೆಚ್ಚಿಸುತ್ತದೆ.

ಯೋಗ ಯಾವುದೇ ಆಗಿರಲಿ, ಆದರೆ ಅಷ್ಟೇ ಎಚ್ಚರಕೆಯಿಂದ ಮಾಡುವುದು ಅತ್ಯಗತ್ಯ ಎಂದು ಅವರು ಹೇಳುತ್ತಾರೆ. ಆದ್ದರಿಂದ, ಪ್ರಾಣಾಯಾಮದ ಎಲ್ಲಾ ಪ್ರಯೋಜನಗಳನ್ನು ಪಡೆಯಲು, ಆಹಾರ ಕ್ರಮದಲ್ಲೂ ಕಾಳಜಿ ವಹಿಸುವುದು ಬಹಳ ಮುಖ್ಯ. ಪ್ರಾಣಾಯಾಮದ ಯಾವುದೇ ಪ್ರಕಾರವನ್ನು ಅಭ್ಯಾಸ ಮಾಡುವುದಿದ್ದರೂ ಅದನ್ನು ತರಬೇತಿ ಪಡೆದ ವ್ಯಕ್ತಿ ಅಥವಾ ತರಬೇತುದಾರರಿಂದ ಕಲಿತ ನಂತರವೇ ಅಭ್ಯಾಸ ಮಾಡಬೇಕು. ಅಲ್ಲದೇ, ತರಬೇತುದಾರರು ಸೂಚಿಸಿದ ವೇಗ, ಅವಧಿ ಮತ್ತು ಎಚ್ಚರಿಕೆಯ ಪ್ರಕಾರ ಪ್ರಾಣಾಯಾಮವನ್ನು ಅಭ್ಯಾಸ ಮಾಡುವುದು ಬಹಳ ಮುಖ್ಯ.

ಇದನ್ನೂ ಓದಿ: 61 ಅಪಾಯಕಾರಿ ರೋಗಗಳಿಗೆ ಮದ್ಯವೇ ಮೂಲ ಕಾರಣ! ಅಂತಾರಾಷ್ಟ್ರೀಯ ಸಂಶೋಧನೆಯಿಂದ ಆಘಾತಕಾರಿ ಸಂಗತಿ ಬಹಿರಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.