ETV Bharat / sukhibhava

ಸಸ್ಯಾಧಾರಿತ ಡಯಟ್ ಬಗ್ಗೆ ಇರುವ ತಪ್ಪು ಕಲ್ಪನೆಗಳಿವು!

author img

By

Published : Mar 28, 2023, 8:39 PM IST

ಸಸ್ಯದಲ್ಲಿ ದೊರೆಯುವ ಅಗಾಧ ಪ್ರಮಾಣದ ಪ್ರೋಟಿನ್​ ಸೇರಿದಂತೆ ಅಗತ್ಯ ಪೋಷಕಾಂಶಗಳು ಲಭ್ಯವಾಗುತ್ತದೆ.

Plant Based Diet: This is the cure for many health problems

ನವದೆಹಲಿ: ಆರೋಗ್ಯಕರ ಮತ್ತು ಸುಸ್ಥಿರ ತಿನ್ನುವ ಅಭ್ಯಾಸದ ಕುರಿತು ಅರಿವು ಹೆಚ್ಚುತ್ತಿದ್ದು, ಇದರ ಅಳವಡಿಕೆಗೆ ಕೂಡ ಜನರು ಮುಂದಾಗುತ್ತಿದ್ದಾರೆ. ಅದರಲ್ಲೂ ಸಸ್ಯಾಧಾರಿತ ಡಯಟ್​ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಮಾಂಸ ಉತ್ಪನ್ನಗಳ ಆಹಾರ ಸೇವನೆಯಿಂದ ಹೃದಯ ಸಮಸ್ಯೆ, ಡಯಾಬಿಟಿಸ್​, ಸ್ಥೂಲಕಾಯ ಮತ್ತು ಕ್ಯಾನ್ಸರ್​ ಸೇರಿದಂತೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತಿರುವ ಹಿನ್ನೆಲೆ ಸಸ್ಯಾಧಾರಿತ ಡಯಟ್​ಗೆ ಹೆಚ್ಚು ಒತ್ತು ನೀಡಲಾಗಿದೆ.

ಸಸ್ಯಾಧಾರಿತ ಡಯಟ್​​ನಲ್ಲಿ ತರಕಾರಿ, ಹಣ್ಣು, ನಟ್ಸ್​​, ಬೀಜಗಳು, ಧಾನ್ಯಗಳು ಮತ್ತು ಬೀನ್ಸ್​​ಗಳು ಪ್ರಮುಖವಾಗಿವೆ. ಅಲ್ಲದೇ, ಇದು ಪ್ರಾಣಿಗಳಿಗೆ ಹಾನಿ ಉಂಟುಮಾಡುವ ಪ್ರಾಣಿ ಮೂಲದ ಪದಾರ್ಥಗಳ ಬಳಕೆಯನ್ನು ತಪ್ಪಿಸುತ್ತದೆ. ಭವಿಷ್ಯದಲ್ಲಿ ಔಷಧ ಚಿಕಿತ್ಸೆಯನ್ನು ತಡೆಯುವಲ್ಲಿ ಈ ಸಸ್ಯಾಧಾರಿತ ಅಹಾರಗಳು ಹೆಚ್ಚಿನ ಪ್ರಯೋಜನ ನೀಡುತ್ತವೆ.

ಮಾಂಸ ಉತ್ಪನ್ನಗಳ ಮೇಲೆ ಸಸ್ಯ ಆಧಾರಿತ ಆಹಾರವನ್ನು ಆಯ್ಕೆ ಮಾಡುವುದು ಸುಸ್ಥಿರ ಜೀವನ ವಿಧಾನವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಪ್ರಪಂಚದಾದ್ಯಂತ ಈ ಸಸ್ಯಾಧಾರಿತ ಡಯಟ್​​ ಇನ್ನೂ ಆರಂಭಿಕ ಹಂತದಲ್ಲಿದೆ. ಈ ಸಂಬಂಧ ಇನ್ನೂ ಅನೇಕ ತಪ್ಪು ಕಲ್ಪನೆಗಳು ಇವೆ. ಈ ಬಗ್ಗೆ ಡಯಟಿಷಿಯನ್​ ಮತ್ತು ನ್ಯೂಟ್ರಿಷನಿಸ್ಟ್​​ ಶಿಖಾ ದ್ವಿವೇದಿ ತಿಳಿಸಿದ್ದಾರೆ.

ಸಸ್ಯಾಧಾರಿತ ಡಯಟ್​ನಲ್ಲಿ​ ಅಗತ್ಯ ಪ್ರೋಟಿನ್​ ಸಿಗುತ್ತದೆಯಾ? ಮಾನವನ ದೇಹಕ್ಕೆ ಪ್ರೋಟಿನ್​ ಅಗತ್ಯವಾಗಿದೆ. ಈ ಪ್ರೋಟಿನ್​ಗಳು ಶಕ್ತಿ ಮಾತ್ರವಲ್ಲದೇ, ದೇಹದ ಎಲ್ಲಾ ರೀತಿಯ ಟಿಶ್ಯೂಗಳ ಅಭಿವೃದ್ಧಿಗೆ ಕೂಡ ಕಾರಣವಾಗುತ್ತದೆ. ಸಸ್ಯಾಧಾರಿತ ಡಯಟ್​​ ಸೇವನೆ ಮಾಡುವುದರಿಂದ ದೇಹಕ್ಕೆ ಅಗತ್ಯ ಪ್ರಮಾಣದ ಪ್ರೋಟಿನ್​ ಲಭ್ಯವಾಗುವುದಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಆದರೆ ಇದು ಸುಳ್ಳು. ವರದಿ ಅನುಸಾರ, ದೇಹಕ್ಕೆ ದಿನಕ್ಕೆ ಕೆಜಿಗೆ 0.8 ಗ್ರಾಂ ಪ್ರೋಟಿನ್​ ಬೇಕು. ಬೀನ್ಸ್​, ಧಾನ್ಯಗಳು, ನಟ್ಸ್​, ಅನ್ನ ಮತ್ತು ಬೀಜಗಳಲ್ಲಿ ಯಥೇಚ್ಛ ಪ್ರೋಟಿನ್​ ಲಭ್ಯವಿದೆ. ದೇಹಕ್ಕೆ ಅಗತ್ಯವಾದ ಪ್ರೋಟಿನ್​ ಪೂರೈಕೆಗೆ ಇದು ಸಾಕಾಗುತ್ತದೆ.

ಸ್ನಾಯುಗಳ ನಷ್ಟಕ್ಕೆ ಕಾರಣ: ಸಸ್ಯಾಧಾರಿತ ಡಯಟ್​ನಿಂದಾಗಿ ಸ್ನಾಯುಗಳ ನಷ್ಟವಾಗುತ್ತದೆ ಎಂಬ ಕಲ್ಪನೆ ತಪ್ಪು. ಸ್ನಾಯುಗಳ ಬೆಳವಣಿಗೆ ನಾವು ತೆಗೆದುಕೊಳ್ಳುವ ಪ್ರೋಟಿನ್​ ಮತ್ತು ವ್ಯಾಯಾಮದ ಮಟ್ಟದ ಆಧಾರವಾಗಿದೆ. ಸ್ನಾಯುಗಳ ಪರಿಣಾಮಕಾರಿ ವೃದ್ಧಿಗೆ ಬೇಕಾಗುವ ಪ್ರಾಣಿಗಳು ಉತ್ಪನ್ನದಷ್ಟೇ ಸಾಮರ್ಥ್ಯ ಹೊಂದಿರುವ ಸಸ್ಯಾಧಾರಿತ ಪದಾರ್ಥಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಪರಿಣಾಮಕಾರಿಯಾಗಿದೆ.

ಅಗತ್ಯವಾದ ಪೋಷಕಾಂಶ ಸಿಗುವುದಿಲ್ಲ: ಸಸ್ಯಾಧಾರಿತ ಡಯಟ್​ನ ಬಗ್ಗೆ ಇರುವ ಮತ್ತೊಂದು ತಪ್ಪು ಕಲ್ಪನೆ ಎಂದರೆ ಇದು ದೇಹಕ್ಕೆ ಅಗತ್ಯವಾದ ಪೋಷಕಾಂಸ ನೀಡುವುದಿಲ್ಲ ಎನ್ನುವುದು. ಹಸಿರು ಎಲೆಗಳಲ್ಲಿ ಸಮೃದ್ಧವಾದ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಜಿಂಕ್​ ಲಭ್ಯವಿದೆ. ಮತ್ತೆ ಕೆಲವಲ್ಲಿ ವಿಟಮಿನ್​ ಕೆ ಇದ್ದರೆ, ಮಾವಿನ ಹಣ್ಣು, ಅನಾನಸ್​ ನಂತಹ ಹಣ್ಣುಗಳಲ್ಲಿ ವಿಟಮಿನ್​ ಸಿ ಸಿಗುತ್ತದೆ. ಧಾನ್ಯಗಳಲ್ಲಿ ಫೈಬರ್​ನ ಅಗರವನ್ನು ಪಡೆಯಬಹುದಾಗಿದೆ.

ಪರ್ಯಾಯ ಆಹಾರ ಆಯ್ಕೆ ಇರುವುದಿಲ್ಲ: ಸಸ್ಯಾಧಾರಿತ ಆಹಾರದಲ್ಲಿ ಕೇವಲ ಸೀಮಿತ ಆಯ್ಕೆ ಇದೆ ಎಂಬುದು ಸುಳ್ಖು, ಬಹುತೇಕರು ಇದನ್ನು ಸಲಾಡ್​​ಗೆ ಸೀಮಿತ ಮಾಡುತ್ತಾರೆ. ಆದರೆ, ತರಕಾರಿ, ಹಣ್ಣು, ಧಾನ್ಯ, ಕಾಳುಗಳು ಮತ್ತು ಬೀಜಗಳನ್ನು ಡಯಟ್​ನಲ್ಲಿ ಅಳವಡಿಸಿಕೊಳ್ಳಬಹುದು. ಇದರ ಜೊತೆಗೆ ಅವುಗಳನ್ನು ನಟ್​ ಮತ್ತು ಚೀಸ್​, ಮಸಾಲೆಗಳೊಂದಿಗೆ ಸೇವಿಸುವ ಮೂಲಕ ಸ್ವಾದ ಹೆಚ್ಚಿಸಬಹುದು. ವಿಭಿನ್ನ ರೀರಿಯ ಹಣ್ಣು, ಕಾಳು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ನಿಮ್ಮ ಡಯಟ್​​ ಆರೋಗ್ಯಕರವಾಗಿರುತ್ತದೆ.

ಸಸ್ಯಾಧಾರಿತ ಆಹಾರಗಳು ದುಬಾರಿ: ಸರಿಯಾದ ರೀತಿಯ ಯೋಜನೆಯ ಸಸ್ಯಾಧಾರಿತ ಡಯಟ್​​ಗೆ ಹೆಚ್ಚಿನ ಹಣ ವ್ಯಯ ಆಗುತ್ತದೆ ಎಂಬ ನಂಬಿಕೆ ಇದೆ. ಋತುಮಾನದ ಹಣ್ಣು ಮತ್ತು ತರಕಾರಿಗಳು ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಯಲ್ಲಿ ಸಿಗುವುದರಿಂದ ಇದು ದುಬಾರಿಯಲ್ಲ. ಧಾನ್ಯಗಳು ಮತ್ತು ಕಾಳುಗಳನ್ನು ಮಾರುಕಟ್ಟೆಯಲ್ಲಿ ಒಟ್ಟಿಗೆ ಕೊಳ್ಳುವ ಮೂಲದ ದೀರ್ಘಕಾಲದವರೆಗೆ ಅದನ್ನು ಶೇಖರಣೆ ಮಾಡಬಹುದು. ಜೊತೆಗೆ ತಂತ್ರಜ್ಞಾನದ ಅಭಿವೃದ್ಧಿಯುಂದ ಸಸ್ಯಧಾರಿತ ಪ್ರಕರಣ ಸಮಂಜಸವಾದ ಬೆಲೆಯಲ್ಲಿ ಕೊಳ್ಳಬಹುದು. ಈ ಹಿಂದೆ ಈ ರೀತಿ ವ್ಯವಸ್ಥೆ ಇರಲಿಲ್ಲ.

ಆರೋಗ್ಯಕ್ಕೆ ಸಹಾಯ: ಪೋಷಕಾಂಶಗಳ ಅಂತರವನ್ನು ಪೂರೈಸಲು ಪೂರಕಗಳು ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಸಸ್ಯ ಆಧಾರಿತ ಮಲ್ಟಿವಿಟಮಿನ್ ಮತ್ತು ಪ್ರೋಟೀನ್ ಪೂರಕಗಳು ಸಮಗ್ರ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಜೊತೆಗೆ ಮೆದುಳು ಮತ್ತು ಹೃದಯದಂತಹ ಪ್ರಮುಖ ಅಂಗಗಳನ್ನು ರಕ್ಷಿಸುತ್ತದೆ ಮತ್ತು ಹೆಚ್ಚು ಅಗತ್ಯವಿರುವ ತ್ರಾಣ, ಶಕ್ತಿ ಮತ್ತು ಸುಧಾರಿತ ಚಯಾಪಚಯ ಕ್ರಿಯೆಗೆ ಪೂರಕವಾಗಿದೆ. ಆರೋಗ್ಯ ಸಮಸ್ಯೆ ತಪ್ಪಿಸಲು ಫೈಬರ್ ಮತ್ತು ಪ್ರೋಟೀನ್-ಭರಿತ ಆಹಾರಗಳು ಮತ್ತು ಪೂರಕಗಳು ಒಳಗೊಂಡಿದೆ. ಸಸ್ಯ-ಆಧಾರಿತ ಆಹಾರ ಸೇನವನೆಯಿಂದ ಉತ್ತಮ ನಿದ್ರೆ ಜೊತೆಗೆ ದೈನಂದಿನ ದೈಹಿಕ ಚಟುವಟಿಕೆಯಂತಹ ಸರಳ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯಕರವಾಗಿರಲು ಸಹಾಯಕವಾಗುತ್ತದೆ.

ಇದನ್ನೂ ಓದಿ: ಖರ್ಜೂರ ಪ್ರೋಟಿನ್​ಗಳ ಆಗರ.. ತಿಂದ್ರೆ ಆರೋಗ್ಯಕ್ಕೆ ಹಲವು ಲಾಭ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.