ಲಕ್ನೋ: ಮಳೆಗಾಲ ಆರಂಭವಾಗುತ್ತಿದ್ದಂತೆ ಹಲವು ರೀತಿಯ ರೋಗ-ರುಜಿನಗಳು ಹೆಚ್ಚಾಗುತ್ತಿವೆ. ಈ ಸಮಯದಲ್ಲಿ ಹೆಚ್ಚು ವಿಧದ ಸೋಂಕು ಮುನುಷ್ಯರನ್ನು ಕಾಡುತ್ತದೆ. ಅದರಲ್ಲೊಂದು ಗುಲಾಬಿ ಕಣ್ಣಿನ ಸಮಸ್ಯೆ. ಕಾಂಜೆಕ್ಟಿವಿಟಿ ಎಂದು ಕರೆಯುವ ಈ ಪ್ರಕರಣಗಳ ಸಂಖ್ಯೆ ಇದೀಗ ಉತ್ತರ ಪ್ರದೇಶದ ಲಕ್ನೋ ಆಸ್ಪತ್ರೆಯಲ್ಲಿ ಏರಿಕೆ ಕಾಣುತ್ತಿದೆ. ವೈದ್ಯರು ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಸಲಹೆ ನೀಡಿದ್ದಾರೆ.
ಕೆಜಿಎಂಯು ಅಧಿಕಾರಿಗಳ ಪ್ರಕಾರ, ಮಾನ್ಸೂನ್ಗೆ ಮುಂಚೆ ವೈದ್ಯರು ದಿನಕ್ಕೆ 35ರಿಂದ 40 ಇಂತಹ ಪ್ರಕರಣಗಳನ್ನು ನೋಡುತ್ತಿದ್ದರು. ಇದೀಗ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ದಿನಕ್ಕೆ 40 ರಿಂದ 46 ಪ್ರಕರಣಗಳು ವರದಿ ಆಗುತ್ತಿದೆ.
ಏನಿದು ಗುಲಾಬಿ ಕಣ್ಣು?: ಮಳೆಗಾಲದಲ್ಲಿ ರೋಗಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳು ಎದುರಾಗುತ್ತವೆ. ವೈರಸ್ ಅಥವಾ ಬ್ಯಾಕ್ಟೀರಿಯಾದಿಂದ ಕಣ್ಣಿನಲ್ಲಿ ಅಲರ್ಜಿ, ಕೆಂಪಾಗುವಿಕೆ, ಊತ, ಕೆಲವೊಮ್ಮೆ ಪಿಸುರು, ದೃಷ್ಟಿ ಮಂಜಾಗುವಿಕೆ, ಕಿರಿಕಿರಿ, ಬೆಳಕಿನ ಸೂಕ್ಷ್ಮತೆಯಂತಹ ಸಮಸ್ಯೆ ಜಾಸ್ತಿಯಾಗುತ್ತಿದೆ. ಕಾಂಜೆಕ್ಟಿವಿಟಿ ಪ್ರಕರಣಗಳು ಸುಲಭವಾಗಿ ಬೇರೆಯವರಿಗೆ ಹರಡುತ್ತದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಕಂಡು ಬಂದಾಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಕೆಜಿಎಂಯುನ ನೇತ್ರ ತಜ್ಞ ಡಾ. ಅರುಣ್ ಕುಮಾರ್ ಶರ್ಮಾ ಹೇಳುವಂತೆ, ರೋಗಿಗಳು ತಮ್ಮ ಕಣ್ಣಿನಲ್ಲಿ ನೀರು ಮತ್ತು ಮಸುಕಿನ ಲಕ್ಷಣ ಹೊಂದುತ್ತಾರೆ. ಕಣ್ಣು ಹೆಚ್ಚು ಕೆಂಪಾದಾಗ ಅವರು ವೈದ್ಯರನ್ನು ಭೇಟಿ ಮಾಡಬೇಕು. ಕೆಲವರು ಸ್ಥಳೀಯ ಮೆಡಿಕಲ್ ಸ್ಟೋರ್ನಲ್ಲಿ ಸ್ವಯಂ ಚಿಕಿತ್ಸೆಗೆ ಒಳಗಾಗಬೇಕು. ಇಲ್ಲದೇ ಇದ್ದರೆ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ ಎಂದಿದ್ದಾರೆ. ಅಲ್ಲದೇ, ಕಣ್ಣಿನ ಸುರಕ್ಷತೆ, ನೈರ್ಮಲ್ಯವನ್ನು ಅನುಸರಿಸುವ ಮೂಲಕ ಸಮಸ್ಯೆ ತಡೆಗಟ್ಟಬಹುದು ಎಂದಿದ್ದಾರೆ.
ಶುಚಿತ್ವಕ್ಕೆ ಆದ್ಯತೆ ನೀಡಿ: ಈ ಸಮಸ್ಯೆ ಸಂಬಂಧ ಬರುತ್ತಿರುವ ಬಹುತೇಕ ರೋಗಿಗಳು 10ರಿಂದ 30 ವರ್ಷ ವಯೋಮಾನದವರು. ಉಗುರುಗಳ ಶುಚಿ ಜೊತೆಗೆ ಕಣ್ಣಿನ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದಿದ್ದಾರೆ.
ಕೆಜಿಎಂಯುನ ಮತ್ತೊಬ್ಬ ನೇತ್ರತಜ್ಞ ಡಾ. ಸಿದ್ಧಾರ್ಥ್ ಅಗರ್ವಾಲ್, ಜನರು ವಿಶೇಷವಾಗಿ ಕಡಿಮೆ ರೋಗ ನಿರೋಧಕ ಶಕ್ತಿ ಇರುವವರಿಗೆ ಸೋಂಕು ಬೇಗ ತಗಲುತ್ತದೆ. ಇದು ಶಮನವಾಗಲು ಸಾಮಾನ್ಯವಾಗಿ ಐದರಿಂದ ಏಳು ದಿನಗಳು ಬೇಕು. ಸೋಂಕಿತರು ಜನರು ಕಣ್ಣು ಹೆಚ್ಚು ಉಜ್ಜುವುದರಿಂದ ಮತ್ತಷ್ಟು ಬಿಗಡಾಯಿಸುತ್ತದೆ ಎಂದು ತಿಳಿಸಿದರು.
ಕಣ್ಣನ್ನು ಶುದ್ದ ನೀರಿನಿಂದ ಸ್ವಚ್ಛಗೊಳಿಸಬೇಕು. ಕೈ ಬೆರಳನ್ನು ಕಣ್ಣಿನ ಬಳಿ ಅನೇಕ ಬಾರಿ ಬಳಕೆ ಮಾಡುವುದರಿಂದ ಕೈ ಶುಚಿತ್ವ ಮುಖ್ಯ. ಪದೇ ಪದೇ ಸೋಂಕಿತ ಕಣ್ಣನ್ನು ಮುಟ್ಟಬಾರದು. ಮುಟ್ಟಿದ ತಕ್ಷಣಕ್ಕೆ ಕೈ ಶುಚಿಗೊಳಿಸಬೇಕು. ಸೋಂಕಿತರು ಶುದ್ದ ಬಟ್ಟೆ, ಬೆಡ್ಶಿಟ್ ಬಳಕೆ ಮಾಡುವ ಮೂಲಕ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Dengue flu: ನೆರೆಪೀಡಿತ ದೆಹಲಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ